ಬಾಲಿವುಡ್ ಸಿನಿ ಇಂಡಸ್ಟ್ರಿಗೆ ಮತ್ತೊಂದು ಆಘಾತ ಎದುರಾಗಿದೆ. 2023ರಲ್ಲಿ ತೆರೆಕಂಡ ಟ್ರಯಲ್ ಸೀರಿಸ್‌ನಲ್ಲಿ ಕಾಜೋಲ್ ಜೊತೆ ಕಾಣಿಸಿಕೊಂಡ ನಟಿ ನೂರ್ ಮಾಲಾಬಿಕಾ ದಾಸ್ ಶವವಾಗಿ ಪತ್ತೆಯಾಗಿದ್ದಾರೆ.
ಮುಂಬೈ(ಜೂ.10) ಬಾಲಿವುಡ್ ಮತ್ತೆ ಭಾರತದಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನೀಡುವ ಮೂಲಕ ಅಬ್ಬರಿಸುತ್ತಿದೆ. ಇದರ ನಡುವೆ ಕೆಲ ಆಘಾತಗಳು ಎದುರಾಗಿದೆ. ಇದೀಗ ಕಾಜೋಲ್ ಜೊತೆ ನಟಿಸಿದ ನಟಿ ನೂರ್ ಮಾಲಾಬಿಕಾ ದಾಸ್ ಶವವಾಗಿ ಪತ್ತೆಯಾಗಿದ್ದಾರೆ. ಲೋಖಂಡವಾಲ ಫ್ಲ್ಯಾಟ್‌ನಲ್ಲಿ ನಟಿ ದಾಸ್ ಶವ ಪತ್ತೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಗಗನಸಖಿಯಾಗಿದ್ದ ನೂರ್ ಮಾಲಾಬಿಕಾ ದಾಸ್ ಕಳೆದ ಕೆಲ ದಿನಗಳಿಂದ ಯಾರೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ. ಅಸ್ಸಾಂ ಮೂಲದವರಾಗಿರುವ ಮಾಲಾಬಿಕಾ ದಾಸ್ ನೇಣು ಬಿಗಿದು ಬದಕು ಅಂತ್ಯಗೊಳಿಸಿದ್ದಾರೆ. ಬೆಡ್ ರೂಂನಲ್ಲಿ ನಟಿ ಬದುಕು ಅಂತ್ಯಗೊಂಡಿದೆ.ನಟಿ ಮೃತಪಟ್ಟಿರುವ ಮಾಹಿತಿ ಯಾರಿಗೂ ತಿಳಿದಿಲ್ಲ. ಆದರೆ ಅದೇ ಫ್ಲ್ಯಾಟ್‌ನಲ್ಲಿದ್ದ ಇತರ ಮನೆಯವರಿಗೆ, ಪಕ್ಕದ ಮನೆಯವರಿಗೆ ನಟಿಯ ಮನೆಯಿಂದ ಕೆಟ್ಟ ವಾಸನೆ ಬರಲು ಆರಂಭಿಸಿದೆ. ಹೀಗಾಗಿ ಅಪಾರ್ಟ್‌ಮೆಂಟ್ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದಾರೆ.
ಚಿಕಿತ್ಸೆ ಫಲಕಾರಿಯಾಗದೆ ಖ್ಯಾತ ಯುವ ನಟಿ ರಿಷ್ತಾ ನಿಧನ, ಆಘಾತದಲ್ಲಿ ಫ್ಯಾನ್ಸ್!
ಅಪಾರ್ಟ್‌ಮೆಂಟ್ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದ್ದಾರೆ. ಈ ವೇಳೆ ನಟಿಯ ಕೊಳತೆ ಶವ ಪತ್ತೆಯಾಗಿದೆ. ನಟಿ ದಾಸ್ ಮೃತ ಪಟ್ಟು ಕೆಲದಿನಗಳೇ ಉರುಳಿದೆ. ಆದರೆ ಯಾರಿಗೂ ಸುಳಿವೇ ಸಿಕ್ಕಿರಲಿಲ್ಲ. ಮೃತದೇಹ ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೊಬೈಲ್ ಫೋನ್ ಸೇರಿದಂತೆ ಇತರ ವಸ್ತುಗಳನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ದಾಸ್ ಬೆಡ್ ರೂಂನಲ್ಲಿ ಡೈರಿಯೊಂದು ಪತ್ತೆಯಾಗಿದೆ. ಇತ್ತ ನಟಿ ಕೋಣೆಯಲ್ಲಿ ಪತ್ತೆಯಾದ ಮಾತ್ರೆಗಳು, ಔಷಧಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 37 ವರ್ಷದ ನಟಿ ದಾಸ್ 2023ರಲ್ಲಿ ತೆರೆಕಂಡ ಟ್ರಯಲ್ ವೆಬ್ ಸೀರಿಸ್‌ನಲ್ಲಿ ಕಾಜೋಲ್ ಜೊತೆ ಕಾಣಿಸಿಕೊಂಡಿದ್ದರು. ಕುಟುಂಬದಿಂದ ದೂರ ಉಳಿದಿದ್ದ ದಾಸ್ ಯಾರ ಜೊತೆಗೂ ಸಂಪರ್ಕ ಇರಲಿಲ್ಲ.
ಮೃತದೇಹ ವಶಕ್ಕೆ ಪಡೆದ ಪೊಲೀಸರು ನಟಿ ಕುಟುಂಬಸ್ಥರ ಸಂಪರ್ಕಿಸುವ ಪ್ರಯತ್ನ ಮಾಡಿದ್ದಾರೆ. ಬಹುತೇಕರು ಸಂಪರ್ಕಕ್ಕೆ ಸಿಕ್ಕಿಲ್ಲ. ಇನ್ನು ಕೆಲವೇ ಮಂದಿ ಸಂಪರ್ಕಕ್ಕೆ ಸಿಕ್ಕವರು ಶವ ಸ್ವೀಕರಿಸಲು ತಯಾರಾಗಿಲ್ಲ. ಹೀಗಾಗಿ ಪೊಲೀಸರು ಎನ್‌ಜಿಒ ಸಹಾಯದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಡ್ರಗ್ಸ್ ಸೇವಿಸಿ ಹೊಸ ಭಂಗಿಯಲ್ಲಿ ಸೆಕ್ಸ್, 26ರ ಹರೆಯದ ಡ್ಯಾನ್ಸರ್ ದಾರುಣ ಸಾವು!