ಮನೆ ಹೆಸರು ರಾಮಾಯಾಣ, ಸೋದರರು ಲವ ಕುಶ- ಸೋನಾಕ್ಷಿ ಮದುವೆ ಆಗ್ತಿರೋ ಯುವಕ ಮುಸ್ಲಿಂ

Published : Jun 10, 2024, 02:05 PM ISTUpdated : Jun 10, 2024, 02:43 PM IST
ಮನೆ ಹೆಸರು ರಾಮಾಯಾಣ, ಸೋದರರು ಲವ ಕುಶ- ಸೋನಾಕ್ಷಿ ಮದುವೆ ಆಗ್ತಿರೋ ಯುವಕ ಮುಸ್ಲಿಂ

ಸಾರಾಂಶ

Sonakshi Sinha Wedding: ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಮದುವೆ ಫೋಟೋ ಹಾಗೂ ವಿಡಿಯೋ ಲೀಕ್ ಆಗದಂತೆ ನೋಡಿಕೊಳ್ಳಲು ಇವರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ನಡುವೆ ಹಿಂದೂ ನಟಿಯರು ಮುಸ್ಲಿಮರನ್ನೇ ಮದುವೆ ಆಗೋದೇಕೆ ಎಂಬ ಚರ್ಚೆಗಳು ಮುನ್ನಲೆಗೆ ಬರುತ್ತಿವೆ. 

ಬೆಂಗಳೂರು: ಬಾಲಿವುಡ್‌ ನಟಿ, ದಬಾಂಗ್ ಗರ್ಲ್ ಸೋನಾಕ್ಷಿ ಸಿನ್ಹಾ (Bollywood Actress Sonakshi Sinha) ಹೊಸ ಜೀವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ (Zahir Iqbal) ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ ಸುದ್ದಿ ಬೆನ್ನಲ್ಲೇ ಲವ್ ಜಿಹಾದ್ (Love Jihad) ಕುರಿತ ಚರ್ಚೆಗಳು ಶುರುವಾಗಿವೆ. ಮುಂಬೈನ ಬಾಸ್ಟಿಯನ್​ನಲ್ಲಿ ಈ ವಿವಾಹ ನಡೆಯಲಿದೆ. ಅತಿಥಿಗಳು ಸಾಂಪ್ರದಾಯಿಕ ಉಡುಗೆ ಧರಿಸಿ ಬರಲು ಸೂಚಿಸಲಾಗಿದೆ. ಮದುವೆಯಲ್ಲಿ ಮೊಬೈಲ್ ಬಳಕೆ ನಿಷೇಧಿಸುವ ಆಲೋಚನೆಯಲ್ಲಿ ಈ ಜೋಡಿ ಇದೆ. ಈ ಮೂಲಕ ಮದುವೆ ಫೋಟೋ ಹಾಗೂ ವಿಡಿಯೋ ಲೀಕ್ ಆಗದಂತೆ ನೋಡಿಕೊಳ್ಳಲು ಇವರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ನಡುವೆ ಹಿಂದೂ ನಟಿಯರು ಮುಸ್ಲಿಮರನ್ನೇ ಮದುವೆ ಆಗೋದೇಕೆ ಎಂಬ ಚರ್ಚೆಗಳು ಮುನ್ನಲೆಗೆ ಬರುತ್ತಿವೆ. 

ಸಲ್ಮಾನ್‌ ಖಾನ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುವ ಮೂಲಕ ಬಾಲಿವುಡ್‌ ಅಂಗಳಕ್ಕೆ ಸೋನಾಕ್ಷಿ ಸಿನಿಮಾ ಪ್ರವೇಶಿಸಿದ್ದರು. ಹಾಗಾಗಿಯೇ ಸಲ್ಮಾನ್ ಖಾನ್ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಸೋನಾಕ್ಷಿ ಮದುವೆ ಆಗುತ್ತಿರೋ ಜಹೀರ್ ಮತ್ತು ಸಲ್ಮಾನ್ ಖಾನ್ ಒಳ್ಳೆಯ ಗೆಳೆಯರು. ಸಲ್ಮಾನ್ ಖಾನ್ ಮೂಲಕ ಜಹೀರ್ ಪರಿಚಯ ಸೋನಾಕ್ಷಿಗೆ ಆಗಿತ್ತು. ಇದಾದ ಬಳಿಕ 2019ರಲ್ಲಿ ಬಿಡುಗಡೆಯಾದ ಡಬಲ್ ಎಕ್ಸ್‌ ಎಲ್‌ ಸಿನಿಮಾದಲ್ಲಿಯೂ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಜೊತೆಯಾಗಿ ನಟಿಸಿದ್ದರು. ನಂತರ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಇದೀಗ ಇವರಿಬ್ಬರ ಪ್ರೀತಿಗೆ ಮದುವೆಯ ಮುದ್ರೆ ಬೀಳಲಿದೆ.

ಮೃಣಾಲ್ ಠಾಕೂರ್ ಮೇಲೆ ಮುನಿಸಿಕೊಂಡ್ರು ಅಭಿಮಾನಿಗಳು; ಫ್ಯಾನ್ಸ್ ಬೇಸರಕ್ಕೆ ಕಾರಣವಾಯ್ತು ಆ ಪೋಸ್ಟ್!

ಮನೆಯ ಹೆಸರು ರಾಮಾಯಾಣ

ಸೋನಾಕ್ಷಿ ಸಿನ್ಹಾ ಹಿರಿಯ ಕಲಾವಿದರಾದ ಶತ್ರುಘ್ನ ಸಿನ್ಹಾ ಮತ್ತು ಪೂನಮ್ ಸಿನ್ಹಾ ದಂಪತಿಯ ಪುತ್ರಿ. ಸೋನಾಕ್ಷಿ ಸಿನ್ಹಾ ಅವರ ಮುಂಬೈನ ಜುಹುನಲ್ಲಿರೋ ಮನೆ ಹೆಸರನ್ನು ರಾಮಾಯಣ ಎಂದು ಇರಿಸಿದ್ದಾರೆ. ಮನೆ ಮುಂಭಾಗದ ಗೇಟ್ ಬಳಿ ದೊಡ್ಡ ಅಕ್ಷರದಲ್ಲಿ ರಾಮಾಯಣ ಎಂದು ಬರೆಸಲಾಗಿದೆ. ಇಷ್ಟು ಮಾತ್ರವಲ್ಲ ಶತ್ರುಘ್ನ ಸಿನ್ಹಾ ಅವರಿಗೆ ರಾಮ್, ಭರತ್ ಮತ್ತು ಲಕ್ಷ್ಮಣ ಹೆಸರಿನ ಮೂವರು ಸೋದರರಿದ್ದಾರೆ. ಅದೇ ರೀತಿ ಶತ್ರುಘ್ನಾ ಸಿನ್ಹಾ ತಮ್ಮ ಇಬ್ಬರು ಮಕ್ಕಳಿಗೆ ಲವ ಮತ್ತು ಕುಶ ಎಂದು ಹೆಸರಿಟಿದ್ದಾರೆ. 

ಯಾಕೆ ಲವ್ ಜಿಹಾದ್ ಚರ್ಚೆ?

ಕೆಲ ವರ್ಷಗಳ ಹಿಂದೆ ಸೋನಾಕ್ಷಿ ಸಿನ್ಹಾ ಮತ್ತು ಝಕೀರ್ ಇಕ್ಬಾಲ್ ಜೊತೆ ಕಾಣಿಸಿಕೊಳ್ಳುತ್ತಿದ್ದಂತೆ ಲವ್ ಜಿಹಾದ್ ಚರ್ಚೆಗಳು ಮುನ್ನೆಲೆಗೆ ಬಂದಿದ್ದವು. ಶತ್ರುಘ್ನ ಸಿನ್ಹಾ ಅವರೇ  ಮನೆಗೆ ರಾಮಾಯಣ ಮತ್ತು ಮಕ್ಕಳಿಗೆ ಲವ ಮತ್ತು ಕುಶ ಅಂತ ಹೆಸರಿಟ್ಟರೆ ಸಾಲದು ಮುಸ್ಲಿಂ ವ್ಯಕ್ತಿ ಜೊತೆ ಸುತ್ತಾಡುತ್ತಿರೋ ನಿಮ್ಮ ಮಗಳನ್ನು ರಕ್ಷಿಸಿಕೊಳ್ಳಿ ಎಂದು ಕೆಲ ಯುಟ್ಯೂಬರ್‌ಗಳು ವಿಡಿಯೋ ಮಾಡಿದ್ದರು. ಅಂದು ಶತ್ರುಘ್ನ ಸಿನ್ಹಾ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರಿಂದ ಈ ವಿಷಯ ಹೆಚ್ಚು ಚರ್ಚಗೆ ಗ್ರಾಸವಾಗಿತ್ತು. ಇದರ ಜೊತೆಗೆ ಸೋನಾಕ್ಷಿ ಸಿನ್ಹಾ ಮತ್ತು ಝಕೀರ್ ಇಕ್ಬಾಲ್ ಜೊತೆಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಟ್ರೋಲ್ ಮಾಡಲಾಗುತ್ತಿತ್ತು.

ಜೂ. 23ಕ್ಕೆ ಬಾಯ್‌ಫ್ರೆಂಡ್ ಜಹೀರ್ ಜೊತೆ ಸೋನಾಕ್ಷಿ ಸಿನ್ಹಾ ಮದುವೆ, ಮುಸ್ಲಿಂ ಜೊತೆ ಮದ್ವೆ ಅಂತ ಟ್ರೋಲ್!

ಚುನಾವಣೆಯಲ್ಲಿ ಗೆಲುವು 

ಈ ಬಾರಿ ಶತ್ರುಘ್ನ ಸಿನ್ಹಾ ಟಿಎಂಸಿಯಿಂದ ಅನಸೋಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆಲುವು ದಾಖಲಿಸಿದ್ದಾರೆ. ಶತ್ರುಘ್ನ ಸಿನ್ಹಾ 6,05,645 ಮತಗಳನ್ನು ಪಡೆದುಕೊಂಡಿದ್ದಾರೆ. ಸಮೀಪದ ಬಿಜೆಪಿ ಸ್ಪರ್ಧಿ ಸುರಿಂದರ್ಜಿತ್ ಸಿಂಗ್ ಅಹ್ಲುವಾಲಿಯಾ 5,46,081 ಮತಗಳನ್ನು ಪಡೆದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ಪ್ರೀಮಿಯರ್ ಶೋಗಳು ರದ್ದು, ನಿರ್ಮಾಪಕರಿಗೆ ಸಂಕಷ್ಟ.. ಬಾಲಯ್ಯ ಸಿನಿಮಾ ರಿಲೀಸ್ ಕಥೆಯೇನು?
ಮೋಹನ್ ಬಾಬು ಮಾಡಿದ ಸಣ್ಣ ತಪ್ಪಿನಿಂದ ಸೌಂದರ್ಯ ಪ್ರಾಣ ಕಳೆದುಕೊಂಡ್ರಾ? ನಿರ್ದೇಶಕರು ಹೇಳಿದ ಸತ್ಯವೇನು?