ನಟ ಧನುಶ್ ಸಿನಿಮಾ ಕಾರ್ಯಕ್ರಮದಲ್ಲಿ ನಿರೂಪಕಿಗೆ ಕಿರುಕುಳ, ಕಾಮುಕನಿಗೆ ಬಿತ್ತು ಗೂಸಾ!

By Suvarna News  |  First Published Jan 4, 2024, 7:44 PM IST

ನಟ ಧನುಶ್ ಅಭಿನಯದ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದ ಭಾರಿ ಜನಸ್ತೋಮದ ನಡುವೆ ಮಹಿಳಾ ನಿರೂಪಕಿಗೆ ಕಿರುಕಳ ನೀಡಿದ ಘಟನೆ ವರದಿಯಾಗಿದೆ. ಆದರೆ ಆಕ್ರೋಶಗೊಂಡ ನಿರೂಪಕಿ ಸರಿಯಾಗಿ ಗೂಸಾ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
 


ಚೆನ್ನೈ(ಜ.04) ಬಹುನಿರೀಕ್ಷೆಯ ನಟ ಧನುಶ್ ಅಭಿನಯದ ಕ್ಯಾಪ್ಟನ್ ಮಿಲ್ಲರ್ ಚಿತ್ರ ಜನವರಿ 12ರಂದು ಬಿಡುಗಡೆಯಾಗುತ್ತಿದೆ. ಇದಕ್ಕೂ ಮುನ್ನ ಜನವರಿ 3 ರಂದು ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಚೆನ್ನೈ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿತ್ತು. ಇದೇ ವೇಳೆ ಜನಸ್ತೋಮದ ನಡುವೆ ಕಾಮುಕನೊಬ್ಬ ಮಹಿಳಾ ನಿರೂಪಕಿಗೆ ಕಿರುಕುಳ ನೀಡಿದ್ದಾನೆ. ನಿರೂಪಕಿ ಮೈಮೇಲೆ ಕೈಹಾಕುವ ಪ್ರಯತ್ನ ಮಾಡಿದ್ದಾನೆ. ಆಕ್ರೋಶಗೊಂಡ ನಿರೂಪಕಿ ಕಾಮುಕನ ಹಿಡಿದು ಸರಿಯಾಗಿ ಗೂಸಾ ನೀಡಿದ್ದಾರೆ. ಈ ಘಟನೆ ವಿಡಿಯೋ ವೈರಲ್ ಆಗಿದೆ.

ಕ್ಯಾಪ್ಟನ್ ಮಿಲ್ಲರ್ ಸಿನಿಮಾ  2024ರ ಬಹುನಿರೀಕ್ಷಿತ ಚಿತ್ರವಾಗಿದೆ. ಈಗಾಗಲೇ ಧನುಷ್ ಅಭಿಮಾನಿಗಳು, ಸಿನಿ ರಸಿಕರು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಹೀಗಾಗಿ ಪ್ರಿ ರಿಲೀಸ್ ಕಾರ್ಯಕ್ರಮ ಜನರಿಂದ ತುಂಬಿ ಹೋಗಿದೆ. ಈ ಕಾರ್ಯಕ್ರಮ ನಿರೂಪಕಿಗಳ ಪೈಕಿ ಓರ್ವ ನಿರೂಪಕಿಗೆ ಕಾಮುಕನೊಬ್ಬ ಕಿರುಕಳ ನೀಡಿದ್ದಾನೆ.  ನಿರೂಪಕಿ ಮೈಮೇಲೆ ಕೈಹಾಕಿ ಅಸಭ್ಯವಾಗಿ ವರ್ತಿಸಲು ಯತ್ನಿಸಿದ್ದಾನೆ.

Tap to resize

Latest Videos

ಮ್ಯಾಕ್‌ಡೊನಾಲ್ಡ್ ಮಹಿಳಾ ಉದ್ಯೋಗಿಯ ಕೆಣಕಿ ಕಂಗಾಲಾದ ಗ್ರಾಹಕ: ಸರಿಯಾಗಿ ಬಾರಿಸಿದ ಅಕ್ಕಬಾಂಡ್

ಕಾಮುಕನ ಕಿರುಕುಳಕ್ಕೆ ನಿರೂಪಕಿ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದಾರೆ. ಕಾಮುಕ ಹಿಡಿದು ಗೂಸಾ ನೀಡಿದ್ದಾರೆ. ಇಷ್ಟೇ ಕಾಲಿಗೆ ಬಿದ್ದು ಕ್ಷಮೇ ಕೇಳಲು ಆಗ್ರಹಿಸಿದ್ದಾಳೆ. ಎಲ್ಲರ ಸಮ್ಮುಖದಲ್ಲಿ ಕಪಾಳಕ್ಕೆ ಬಾರಿಸಿದ್ದಾರೆ. ಸುಂದರ ಕಾರ್ಯಕ್ರಮದಲ್ಲಿ ನಡೆದ ಈ ಘಟನೆ ಸಿನಿಮಾ ಪ್ರಿ ರಿಲೀಸ್ ಸಂಭ್ರಮವನ್ನು ಮರೆಮಾಚಿದೆ.  ಘಟನೆ ಕುರಿತು ಪ್ರತಿಕ್ರಿಯಿಸಿರುವ ನಿರೂಪಕಿ, ಮಹಿಳೆಯರ ಮೈಮುಟ್ಟಿ ಕಿರುಕುಳ ನೀಡುವ ಪ್ರತಿಯೊಬ್ಬರಿಗೂ ಇದು ಎಚ್ಚರಿಕೆ ಎಂದು ನಿರೂಪಕಿ ಹೇಳಿದ್ದಾಳೆ. ಜನಸ್ತೋಮದ ನಡುವೆ ಮಹಿಳೆಯ ಮೈಮುಟ್ಟಿ ಕಿರುಕುಳ ನೀಡಲು ಯತ್ನಿಸುವ ಕಾಮುಕರಿಗೆ ಸ್ಥಳದಲ್ಲೇ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾಳೆ. 

 

Dear team,
Before organizing event in big stages.. please ensure fan passes..
If you have less fans, don't conduct AL in big stages.

Giving free passes will lead to this kind of shit things...

Good that girl shouted out 👏 pic.twitter.com/FrGgjVdgQK

— X-Tweep (@relatablebru_)

 

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇಂತಹ ಕಾರ್ಯಕ್ರಮಗಳಲ್ಲಿ ಮಹಿಳೆಯರಿಗೆ ಅಗುವ ಸಮಸ್ಯೆಗಳ ಕುರಿತು ಭಾರಿ ಚರ್ಚೆಯಾಗುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಹೆಣ್ಣುಮಕ್ಕಳ ಸುರಕ್ಷತೆ ಕುರಿತು ಗಮನಹರಿಸಬೇಕು. ಎಲ್ಲರಿಗೂ ಉಚಿತ ಪಾಸ್ ನೀಡಿ ಹೆಚ್ಚಿನ ಜನ ಸೇರಿಸುವತ್ತ ಮಾತ್ರ ಗಮನಹರಿಸಬಾರದು. ಸುರಕ್ಷತೆ ಹಾಗೂ ಕಾರ್ಯಕ್ರಮ ಸುಗಮವಾಗಿ ಸಾಗಲು ಎಲ್ಲಾ ಕೆಲಸಗಳು, ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜನರು ಪ್ರತಿಕ್ರಿಯಿಸಿದ್ದಾರೆ.

ನನ್ನ ಜೊತೆ ಮಲಗು, ಪೈಪ್ ಮೂಲಕ 4ನೇ ಮಹಡಿ ಹತ್ತಿದ ಕಾಮುಕನಿಂದ ಮಹಿಳೆಗೆ ಕಿರುಕುಳ!

click me!