
ಬೆಂಗಳೂರು (ಏ. 14): ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಮುಂದಿನ ಸಿನಿಮಾ 'ಇನ್ಶಾಲ್ಲಾ’ ಭಾರೀ ಕುತೂಹಲ ಮೂಡಿಸಿದೆ. 20 ವರ್ಷಗಳ ನಂತರ ಸಂಜಯ್ ಲೀಲ ಬನ್ಸಾಲಿ ಹಾಗೂ ಸಲ್ಮಾನ್ ಒಂದಾಗುತ್ತಿದ್ದಾರೆ. ಆದರೆ ವಿಚಾರ ಅದಲ್ಲ. ಇದೇ ಮೊದಲ ಬಾರಿಗೆ ಸಲ್ಮಾನ್ ಹಾಗೂ ಅಲಿಯಾ ಭಟ್ ಒಟ್ಟಿಗೆ ತೆರೆಯನ್ನು ಹಂಚಿಕೊಳ್ಳಲಿದ್ದಾರೆ.
‘ಈಗಲೇ ತಾಯಿಯಾಗಲು ಒತ್ತಾಯಿಸಬೇಡಿ, ಮದುವೆಯಾಗುವುದು ಇದೊಂದಕ್ಕೆ ಅಲ್ಲ’!
ಅಲಿಯಾ ಭಟ್-ಸಲ್ಮಾನ್ ನಡುವೆ ಸಾಕಷ್ಟು ವಯಸ್ಸಿನ ಅಂತರವಿದ್ದು ಇವರಿಬ್ಬರು ಜೋಡಿ ಅಭಾಸ ಎನಿಸಬಹುದು ಎಂದು ಸೋಷಿಯಲ್ ಮೀಡಿಯಾದಲ್ಲಿ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಅಲಿಯಾ, ಬನ್ಸಾಲಿಯವರು, ಮುಂದಾಲೋಚನೆ ಇರುವವರು. ಸದ್ಯಕ್ಕೆ ಇಂತದ್ದೊಂದು ಪ್ಲಾನ್ ಮಾಡುತ್ತಿದ್ದೇವೆ. ಇಂತಹ ಅಸಹಜವಾದ ಕಾಂಬಿನೇಶನ್ ಹಿಂದೆ ಒಂದು ಕಾರಣವಿದೆ ಎಂದು ಅಲಿಯಾ ಹೇಳಿದ್ದಾರೆ.
ಅಮ್ಮನ ಅಳಲಿಗೆ ತಿರುಗೇಟು ನೀಡಿದ ನಟಿ ಸಂಗೀತಾ!
ಸಲ್ಮಾನ್ ಜೊತೆ ಕೆಲಸ ಮಾಡಲು ನಾನು ಥ್ರಿಲ್ ಆಗಿದ್ದೇನೆ. ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಸಿನಿಮಾ ಮಾಡಬಹುದೆಂದು ನಾನು ಯೋಚಿಸಿರಲಿಲ್ಲ ಎಂದು ಅಲಿಯಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.