ತಂದೆಯ ನೆರಳಲ್ಲಿ ಬದುಕಲು ಇಷ್ಟವಿಲ್ಲ; ನಟ ಮಾಧವನ್ ಪುತ್ರ ವೇದಾಂತ್ ಮಾತು!

By Vaishnavi ChandrashekarFirst Published Apr 25, 2022, 12:55 PM IST
Highlights

ಮೊದಲ ಬಾರಿ ಸಂದರ್ಶನದಲ್ಲಿ ತಮ್ಮ ಯಶಸ್ಸಿನ ಬಗ್ಗೆ ಮಾತನಾಡಿದ ವೇದಾಂತ್ ಮಾಧವನ್. ಕುಟುಂಬದ ತ್ಯಾಗಕ್ಕೆ ಮೆಚ್ಚುಗೆ....

ಬಹುಭಾಷ ನಟ ಆರ್‌ ಮಾಧವನ್ (R Madhavan) ಪುತ್ರ ಸ್ವಿಮ್ಮಿಂಗ್ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಒಂದೊಂದೆ ಸಾಧನೆ ಮಾಡಿ ಗೋಲ್ಡ್‌ ಮತ್ತು ಸಿಲ್ವರ್ ಮೆಡಲ್ ಗೆದ್ದು ಬರ್ತಿದ್ದಾನೆ. ವೇದಾಂತ್ (Vedaant) ಯಶಸ್ಸಿಗೆ ಇಡೀ ಭಾರತವೇ ಭೇಷ್‌ ಎನ್ನುತ್ತಿದೆ, ಮಗನ ಬಗ್ಗೆ ಹಮ್ಮೆಯಿಂದ ಮಾಧವನ್ ಸೋಷಿಯಲ್ ಮೀಡಿಯಾದಲ್ಲಿ(Social Media) ಪೋಸ್ಟ್‌ ಹಾಕುತ್ತಿದ್ದಾರೆ.  

ಕೆಲವು ದಿನಗಳ ಕೋಪನ್‌ಹ್ಯಾಗನ್ ಹಿಂದೆ 800 ಮೀಟರ್ ಮೆನ್‌ ಫ್ರೀಸ್ಟೈಲ್‌ (Men freestyle swimming) ಡ್ಯಾನಿಶ್ ಓಪನ್ ಸ್ವಿಮಿಂಗ್‌ ಸ್ಪರ್ಧೆ ಭಾಗವಹಿಸಿ ಚಿನ್ನದ ಪದಕ ಗೆದಿದ್ದಾರೆ. ದೂರದರ್ಶನ್‌ಗೆ ನೀಡಿದ ಸಂದರ್ಶನದಲ್ಲಿ ವೇದಾಂತ್ ನಾನು ತಂದೆಯ ನೆರಳಿನಲ್ಲಿ ಬದುಕಲು ಇಷ್ಟ ಪಡುವುದಿಲ್ಲ, ನನ್ನ ಸ್ವಂತ ಶ್ರಮದಿಂದ ಹೆಸರು ಮಾಡಬೇಕು ಎಂದು ಹೇಳಿದ್ದಾರೆ. ಅಲ್ಲದೆ ತಮ್ಮ ಸಾಧನೆ ಹಿಂದಿರುವ ಪೋಷಕರ ಬಗ್ಗೆ ಮಾತನಾಡಿದ್ದಾರೆ. 

ನಟ ಆರ್‌ ಮಾಧವನ್ ಇಡೀ ಕುಟುಂಬ ಪುತ್ರ ವೇದಾಂತ್ ಸ್ವಿಮ್ಮಿಂಗ್ ತರಬೇತಿಗೆ ಸುಲಭವಾಗಬೇಕು ಎಂದು ದುಬೈಗೆ (Dubai) ಶಿಫ್ಟ್‌ ಆಗಿದ್ದಾರೆ. ಮಾರ್ಚ್‌ನಲ್ಲಿ ನಡೆದ 2021 Latvia open ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ, ಜ್ಯೂನಿಯರ್ ನ್ಯಾಷನಲ್ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಕಳೆದ ವರ್ಷ ನಾಲ್ಕು ಸಿಲ್ವರ್ ಮತ್ತು ಮೂರು ಬ್ರಾನ್ಜ್‌ ಮೆಡಲ್ ಗೆದ್ದಿದ್ದಾರೆ. 

ವೇದಾಂತ್ ಮಾತು:

'ತಂದೆಯ ನೆರಳಿನಲ್ಲಿ ಬದುಕಲು ನಾನು ಇಷ್ಟ ಪಡುವುದಿಲ್ಲ. ನನಗೆ ನಾನೆ ಹಸರು ಮಾಡಬೇಕು.  ನಾನು ಆರ್‌ ಮಾಧವನ್ ಪುತ್ರನಾಗಿ ಗುರುತಿಸಿಕೊಳ್ಳುವುದಕ್ಕೆ ಇಷ್ಟವಿಲ್ಲ. ಅವರು ಸದಾ ನನ್ನ ಬಗ್ಗೆ ಕೇರ್ ಮಾಡುತ್ತಾರೆ ಅವರ ಶ್ರಮವೇ ಹೆಚ್ಚಿದೆ. ಅವರು ಮಾಡಿರುವ ದೊಡ್ಡ ತ್ಯಾಗವೇ ಇಡೀ ಕುಟುಂಬ ದುಬೈಗೆ ಶಿಫ್ಟ್ ಆಗಿರುವುದು' ಎಂದು ವೇದಾಂತ್ ಹೇಳಿದ್ದಾರೆ. 

ವೇದಾಂತ್ ದುಬೈನಲ್ಲಿ ಟ್ರೈನಿಂಗ್ ಪಡೆದುಕೊಂಡರೆ ಓಲಿಂಪಿಕ್ಸ್‌ನಲ್ಲಿ (Olympic) ಸ್ಪರ್ಧಿಸಲು ಸುಲಭವಾಗುತ್ತಂತೆ. 

'ಭಾರತದಲ್ಲಿರುವ ಅತಿ ದೊಡ್ಡ ಸ್ವಿಮ್ಮಿಂಗ್ ಪೂಲ್ ಇರುವುದು ಮುಂಬೈನಲ್ಲಿ (Mumbai Swimming pool) ಆದರೆ ಕೊರೋನಾದಿಂದ ಅದೆಲ್ಲಾ ಈಗ ಮುಚ್ಚಿದೆ ಅಥವಾ ಸರಿಯಾಗಿ ಟ್ರೈನಿಂಗ್ ನೀಡುವವರು ಇಲ್ಲ. ನಾವು ವೇದಾಂತ್‌ ಜೊತೆ ದುಬೈಗೆ ಬಂದಿರುವ ಕಾರಣ ಅವನಿಗೆ ದೊಡ್ಡ ಸ್ವಿಮ್ಮಿಂಗ್ ಪೂಲ್‌ನಲ್ಲಿ ಟ್ರೈನಿಂಗ್‌ ಸಿಗಲಿದೆ ಎಂದು. ಕೆಲವು ತಿಂಗಳುಗಳಿಂದ ವೇದಾಂತ್ ಓಲಿಂಪಿಕ್ಸ್‌ ಟ್ರೈನಿಂಗ್ ಶುರು ಮಾಡಿದ್ದಾನೆ ನನ್ನ ಪತ್ನಿ ಸಿತಾರ (Sithara Madhavan) ಮತ್ತು ನಾನು ಫುಲ್ ಸಪೋರ್ಟ್ ಕೊಡ್ತಿದ್ದೀವಿ' ಎಂದು ಮಾದವನ್ ಬಾಲಿವುಡ್ ಹಂಗಾಮ ಸಂದರ್ಶನದಲ್ಲಿ ಹೇಳಿದ್ದಾರೆ. 

ಮಾಧವನ್ ಸಲಹೆ:

'ನಿಮ್ಮ ಮಕ್ಕಳು ಫ್ರೀ ಆಗಿ ಹಾರಾಡಲು ಬಿಡಿ. ಅವರಿಗೆ ಬೇಕಾದ ವೃತ್ತಿ ಜೀವನ ಆಯ್ಕೆ ಮಾಡಿಕೊಳ್ಳಲು ಬಿಡಿ. ವೇದಾಂತ್ ನಟನೆ ಬಿಟ್ಟು ಸ್ವಿಮ್ಮಿಂಗ್‌ನ ಆಯ್ಕೆ ಮಾಡಿಕೊಂಡಿರುವ ವೃತ್ತಿ ಜೀವನದ ಬಗ್ಗೆ ನನಗೆ ಬೇಸರವಿಲ್ಲ. ನಾನು ಹೀಗೆ ಮಾಡು ಎಂದು ಆಯ್ಕೆ ಮಾಡುವುದಕ್ಕಿಂತ ವೇದಾಂತ್ ಆಯ್ಕೆ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಆತ ಸಾಧನೆ ಮಾಡಲು ಏನು ಬೇಕು ಅದನೆಲ್ಲಾ ನೋಡಲು ನಾನು ಸಜ್ಜಾಗಿರುವೆ' ಎಂದು ಮಾಧವನ್ ಹೇಳಿದ್ದರು. 

'ನನ್ನ ತಂದೆಯಿಂದ ನನಗೆ ಹೆಚ್ಚಿಗೆ ಗಮನ ಸಿಗುತ್ತಿದೆ ಆದರೆ ಬೇರೆ ಸ್ವಿಮರ್‌ಗಳ ರೀತಿಯಲ್ಲಿ ನಾನು ಜೀವನ ನೋಡುತ್ತೀನಿ. ತುಂಬಾ ಸ್ವಿಮರ್‌ಗಳು ಕಷ್ಟ ಪಡುತ್ತಿದ್ದಾರೆ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ ಅವರಿಗೆ ನನ್ನ ರೀತಿಯೇ ಜನಪ್ರಿಯತೆ ಸಿಗಬೇಕು' ಎಂದು ವೇದಾಂತ್ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಮಾತನಾಡಿದ್ದಾರೆ.

click me!