Deepika Padukone ಬ್ಯಾಗೊಳಗೆ ಮ್ಯಾಜಿಕ್ ಪೆನ್ಸಿಲ್! ಅದನ್ಯಾಕೆ ಡಿಪ್ಪಿ ಬಾಯಲ್ಲಿಟ್ಟು ಕೊಳ್ತಾರೆ?

Published : May 31, 2022, 03:38 PM IST
Deepika Padukone ಬ್ಯಾಗೊಳಗೆ ಮ್ಯಾಜಿಕ್ ಪೆನ್ಸಿಲ್! ಅದನ್ಯಾಕೆ ಡಿಪ್ಪಿ ಬಾಯಲ್ಲಿಟ್ಟು ಕೊಳ್ತಾರೆ?

ಸಾರಾಂಶ

ಸುಂದರಿ, ಆಕ್ಟಿಂಗ್‌ನಲ್ಲೂ ಮುಂದಿರುವ ನಟಿ ದೀಪಿಕಾ ಪಡುಕೋಣೆ ಬ್ಯಾಗ್‌ನಲ್ಲೇನಿರಬಹುದು ಅನ್ನೋ ಕುತೂಹಲ ತಣಿಸೋ ಪ್ರಯತ್ನ ಇಲ್ಲಿದೆ. ಜೊತೆಗೆ ಅವರ ಬ್ಯಾಗಿನಲ್ಲಿರುವ ಮ್ಯಾಜಿಕ್ ಪೆನ್ಸಿಲ್ ಬಗ್ಗೆ ಹೇಳಲೇ ಬೇಕು. ಅದಿಲ್ಲಾಂದ್ರೆ ಶೂಟಿಂಗ್‌ನಲ್ಲಿ ದೀಪಿಕಾ ಪರದಾಡಿಬಿಡ್ತಾರೆ.

ದೀಪಿಕಾ ಪಡುಕೋಣೆ(Deepika Padukone) ಕನ್ನಡದ ಹುಡುಗಿ ಅನ್ನೋದು ನಮ್ಮ ಹೆಮ್ಮೆ. ಇದೀಗ ಅವರ ಲೆವೆಲ್‌ ಬಾಲಿವುಡನ್ನೂ(Bollywood) ಮೀರಿ ಹಾಲಿವುಡ್(Hollywood) ಲೆವೆಲ್‌ಗೆ ಏರಿದೆ. ರಣವೀರ್ ಸಿಂಗ್‌(Ranveer Singh) ನ ಮುದ್ದಿನ ಹೆಂಡತಿಯ ಬ್ಯಾಗಲ್ಲೇನಿರುತ್ತೆ ಅನ್ನೋದು ಹಲವರ ಕುತೂಹಲ. ಬ್ಯಾಗಿನೊಳಗಿರುವ ವಸ್ತುಗಳ ಜೊತೆಗೆ ಅಲ್ಲಿರುವ ಮ್ಯಾಜಿಕ್ ಪೆನ್ಸಿಲ್(Magic Pencil) ಬಗ್ಗೆಯೂ ನಿಮಗೆ ಹೇಳ್ತೀವಿ. ಅದನ್ನು ದೀಪಿಕಾ ಬಳಸೋ ರೀತಿ ನೋಡಿದ್ರೆ ಮೂಗಿನ ಮೇಲೆ ಬೆರಳಿಡೋದು ಗ್ಯಾರಂಟಿ.

ಸೆಲೆಬ್ರಿಟಿಗಳ ಬ್ಯಾಗ್‌ ಓಪನ್ ಮಾಡಿಸಿ ಅದರಲ್ಲೇನಿದೆ ಅಂತ ತೋರಿಸೋದು ಸದ್ಯದ ಟ್ರೆಂಡ್(Trend). ಫ್ಯಾಶನ್ ಮ್ಯಾಗಜಿನ್ ವೋಗ್ ಆಗಾಗ ಬಾಲಿವುಡ್ ಸೆಲೆಬ್ರಿಟಿಗಳ ಬ್ಯಾಗೊಳಗೆ ಕ್ಯಾಮರಾ(Camera) ಲೈಟ್ ಬಿಡುತ್ತಲೇ ಇರುತ್ತದೆ. ಹಾಗೆ ಈ ಸಲ ಸಿಕ್ಕಾಕ್ಕೊಂಡವರು ದೀಪಿಕಾ ಪಡುಕೋಣೆ. ಅವರದು ಸ್ಟೈಲಿಶ್(Stylish) ಆಗಿರುವ ನೀಲಿ ಬಣ್ಣದ ಬ್ಯಾಗ್. ಅದಕ್ಕೆ ಬಂಗಾರದ ಬಣ್ಣದ ಬಟನ್ಸ್ ಇವೆ. ದೀಪಿಕಾ ಶೂಟಿಂಗ್‌(Shooting) ಹೋಗ್ತಿದ್ರೆ, ಔಟಿಂಗ್ ಹೋಗ್ತಿದ್ರೆ, ಫಾರಿನ್ ಟೂರ್ ಹೊರಟರೆ ಅವರ ಚೆಂದದ ಕೈಯಿಂದ ಈ ಬ್ಯಾಗ್ ಮಿಸ್ ಆಗಲ್ಲ. ಆ ಬ್ಯಾಗೊಳಗೆ ಏನಿದೆ ಅಂತ ಈಗ ನೋಡೋಣ.

ದೀಪಿಕಾ ಬ್ಯಾಗ್‌ ಒಳಗೆ ಕೈ ಹಾಕಿದ ತಕ್ಷಣ ಕೈಗೆ ಸಿಗೋದು ಸನ್‌ ಗ್ಲಾಸ್(Sun glass). 'ನಂಗೆ ಸುಸ್ತಾದಾಗ, ಶೂಟಿಂಗ್‌ ವೇಳೆ ದಣಿದಾಗ ಈ ಕೂಲಿಂಗ್ ಗ್ಲಾಸ್ ಧರಿಸ್ತೀನಿ. ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಳ್ಳಬೇಕು ಅಂದುಕೊಂಡಾಗಲೂ ಈ ಕನ್ನಡಕ ನನ್ನ ನೆರವಿಗೆ ಬರುತ್ತೆ' ಅಂತಾರೆ ದೀಪಿಕಾ. ಆಮೇಲೆ ಅವರು ಬ್ಯಾಗಿಂದ ತೆಗೆದಿದ್ದು ಕೀಯನ್ನು. ಮನೆಯ ಮುಂಭಾಗದ, ಹಿಂಭಾಗದ, ವಾರ್ಡ್ ರೋಬ್‌, ಬೆಡ್ ರೂಮ್, ಗೆಸ್ಟ್ ಬೆಡ್ ರೂಮ್, ಬಾತ್ ರೂಮ್ ಕೀಗಳೆಲ್ಲ ಈ ಗೊಂಚಲಲ್ಲಿವೆ. ಅಂದರೆ ಪ್ರತೀ ದಿನ ದೀಪಿಕಾ ಬಾತ್‌ರೂಮನ್ನೂ ಲಾಕ್ ಮಾಡಿ ಹೋಗ್ತಾರ ಅಂತ ಕೇಳ್ಬೇಡಿ. ಕೀ ಇದೆ ಅಂದ ಮಾತ್ರಕ್ಕೆ ಲಾಕ್ ಮಾಡ್ಲೇ ಬೇಕು ಅನ್ನೋದೆಲ್ಲ ಫೂಲಿಶ್‌ನೆಸ್(Foolishness). ಅದರ ತುದಿಯಲ್ಲಿರುವ ಗೊಂಬೆಯನ್ನು ದೀಪಿಕಾ ಪ್ಯಾರಿಸ್‌ನಿಂದ ತಗೊಂಡಿದ್ದು. ಮನಸ್ಸಿಗೆ ಬೇಜಾರಾದಾಗ ಆ ಗೊಂಬೆ ನೋಡಿದ್ರೆ ಒಂಥರ ಖುಷಿ ಆಗುತ್ತಂತೆ.

ನಾನು ಪ್ರೈವೇಟ್‌ ವ್ಯಕ್ತಿ ಆಕೆ ಏನ್ ಬೇಕಿದ್ದರೂ ಮಾಡುತ್ತಾಳೆ; ಸೆಕ್ಸ್‌ ಬುಕ್‌ ಬರೆದ ಆಯುಷ್ಮಾನ್ ಖುರಾನಾ ಪತ್ನಿ!

ಇದಾಗಿ ಹೊರಬಂದಿದ್ದು ಪರ್ಫ್ಯೂಮ್. ಯಾವ ಕಂಪೆನಿದು ಅಂತೆಲ್ಲ ಗುಟ್ಟು ಬಿಟ್ಟು ಕೊಟ್ಟಿಲ್ಲ. ಆದರೆ ಬ್ಯಾಗ್‌ನಲ್ಲಿರುವ ಕಾರಣ ಆಗಾಗ ಸ್ಪ್ರೇ ಮಾಡಿಕೊಳ್ಳೋದು ಅಭ್ಯಾಸ. ಪ್ರೆಶ್‌ಅಪ್ ಆಗೋದಕ್ಕೆ ಆರೆಂಜ್ ಬ್ಲಾಸಂ ಇರುತ್ತೆ.

ದೀಪಿಕಾ ಅಮ್ಮ ಟ್ರಾವೆಲ್ ಏಜೆಂಟ್ ಆಗಿದ್ದವರು. ಅವರು ದೀಪಿಕಾ 18 ವರ್ಷದಲ್ಲಿದ್ದಾಗಲೇ ಟ್ರಾವೆಲ್ ಕಾರ್ಡ್ ಗಳನ್ನು ಎಚ್ಚರಿಕೆಯಿಂದ ತೆಗೆದಿಟ್ಟುಕೊಳ್ಳಬೇಕು ಎಂದು ಅಮ್ಮ ಹೇಳ್ಕೊಟ್ಟಿದ್ದಾರೆ. ಒಳ್ಳೆ ಹುಡುಗಿ ದೀಪಿಕಾ ಈಗಲೂ ಅಮ್ಮನ ಮಾತು ಪಾಲಿಸ್ತಾರೆ. ಅವರ ಬಳಿ ಏರ್‌ ಲೈನ್ ಕಾರ್ಡ್ಸ್ ಇಟ್ಟುಕೊಳ್ಳೋಕೆ ಒಂದು ಕ್ಯೂಟ್ ಪೌಚ್ ಇದೆ.

ನೇಣು ಬಿಗಿದ ಸ್ಥಿತಿಯಲ್ಲಿ ಮತ್ತೋರ್ವ ರೂಪದರ್ಶಿ ಶವ ಪತ್ತೆ; 15 ದಿನದಲ್ಲಿ 4 ಮಾಡೆಲ್‌ಗಳ ನಿಗೂಢ ಸಾವು

ದೀಪಿಕಾ ಪ್ರಕಾರ ನಟಿ ಅಥವಾ ನಟ ಮೆಮೊರಿಗಾಗಿ ಏನನ್ನಾದರೂ ಜೊತೆಗಿಟ್ಟುಕೊಳ್ಳಬೇಕು. ಅದು ಅಮ್ಮ, ಅಪ್ಪ ಅಥವಾ ಸಂಗಾತಿಯ ಫೋಟೋ ಆಗಿರಬಹುದು. ಪೆಟ್‌ಗೆ ಸಂಬಂಧಿಸಿದ ಏನಾದರೂ ವಸ್ತುಗಳಾಗಿರಬಹುದು, ಶೂಟಿಂಗ್‌ಗಾಗಿ ಊರೂರು ಸುತ್ತುವಾಗ ಇದು ನಿಮಗೊಂದು ಪ್ಲೆಶರ್ ಕೊಡುತ್ತೆ ಅಂತಾರೆ ದೀಪಿಕಾ.

ಇನ್ನೊಂದ ವಿಷ್ಯ ಅಂದರೆ ದೀಪಿಕಾ ಬ್ಯಾಗೊಳಗೆ ಒಂದು ನೋಟ್‌ ಬುಕ್ ಇದೆ. ಅರೆ, ಫೋನಲ್ಲೇ ಎಲ್ಲವೂ ಇರುವಾಗ ಇದರ ಅಗತ್ಯ ಇದೆಯಾ ಅಂತ ಕೇಳ್ಬೇಡಿ. ದೀಪಿಕಾ ಹೇಳೋ ಪ್ರಾಕಾರ. 'ನಾನೊಂದು ಸ್ವಲ್ಪ ಓಲ್ಡ್‌ ಸ್ಕೂಲ್ ಫಾಲೋ ಮಾಡೋಳು. ನಂಗೆ ಟೆಕ್ನಾಲಜಿ ಇಷ್ಟನೇ. ಆದರೆ ನೋಟ್‌ಬುಕ್ ಜೊತೆಗಿರಬೇಕು ಅಂತ ಅಪ್ಪ ಯಾವಾಗ್ಲೂ ಹೇಳ್ತಿದ್ರು. ನಾನು ಏನನ್ನಾದ್ರೂ ಬರೆಯೋಕೆ ಇದನ್ನು ಬಳಸ್ತೀನಿ.' ಹೀಗೆನ್ನೋ ದೀಪಿಕಾ ಮರುಕ್ಷಣದಲ್ಲೇ ಬ್ಯಾಗಿಂದ ಒಂದು ಪೆನ್ಸಿಲ್ ತೆಗೆದು ಬಾಯಲ್ಲಿ ಹಾಕಿ ಹಲ್ಲಿನ ನಡುವೆ ಕಚ್ಚಿಟ್ಟುಕೊಳ್ತಾರೆ. ಈ ಪೆನ್ಸಿಲ್‌ಅನ್ನು ಅವರು ಆಗಾಗ ಶಾರ್ಪ್(sharp) ಮಾಡ್ತಾ ಇರ್ತಾರೆ. ಮತ್ತೊಂದು ವಿಶೇಷ ಅಂದರೆ ಶೂಟಿಂಗ್‌ನಲ್ಲಿದ್ದಾಗ ಇದು ಅವರಿಗೆ ಮ್ಯಾಜಿಕ್(Magic) ಪೆನ್ಸಿಲ್‌ನಂತೆ ಕೆಲಸ ಮಾಡುತ್ತೆ.

#BoycottLaalSinghChaddha; ಆಮೀರ್ ಸಿನಿಮಾ ಬಹಿಷ್ಕಾರಕ್ಕೆ ನೆಟ್ಟಿಗರು ಒತ್ತಾಯಿಸುತ್ತಿರುವುದೇಕೆ?

ಯಾಕೋ ಡೈಲಾಗ್(Dialogue) ಹೇಳುವಾಗ ನಾಲಿಗೆ ತೊದಲಿದ ಹಾಗಾಗುತ್ತೆ, ಡೈಲಾಗ್ ಸರೀ ಹೇಳೋಕ್ಕಾಗ್ತಿಲ್ಲ ಅಂದಾಗಲೆಲ್ಲ ಅವರು ಈ ಪೆನ್ಸಿಲ್ ಅನ್ನು ಹಲ್ಲಿನಲ್ಲಿ ಕಚ್ಚಿ ಹಿಡೀತಾರೆ. ಪೆನ್ಸಿಲ್ ಕಚ್ಚಿಕೊಂಡೇ ಡೈಲಾಗ್ ಹೇಳ್ತಾರೆ. ಆಗ ಫಂಬಲ್ ಆಗೋದು, ಸ್ಟಕ್ ಆದ ಹಾಗಾಗೋದೆಲ್ಲ ನಿಂತುಹೋಗಿ ಮ್ಯಾಜಿಕ್ ಥರ ಡೈಲಾಗ್ ಲೀಲಾಜಾಲವಾಗಿ ಹೊರಬರುತ್ತೆ. ಹೀಗಾಗಿ ಇದು ದೀಪಿಕಾ ಪಾಲಿನ ಮ್ಯಾಜಿಕ್ ಪೆನ್ಸಿಲ್. ಅವರು ನಟನೆ ಶುರು ಮಾಡಿದ ದಿನದಿಂದ ಇವತ್ತಿನವರೆಗೂ ಅವರ ಬಳಿ ಇಂಥದ್ದೊಂದು ಪೆನ್ಸಿಲ್ ಸದಾ ಇರುತ್ತೆ. ಯಾಕೋ ಡೈಲಾಗ್ ಸರಿ ಬರ್ತಾ ಇಲ್ಲ ಅನಿಸಿದಾಗಲೆಲ್ಲ ಅವರು ಅದ್ಭುತವಾಗಿ ಡೈಲಾಗ್ ಹೊಡಿಯೋ ಹಾಗೆ ಮಾಡುತ್ತೆ ಈ ಪೆನ್ಸಿಲ್.

 

ಮೌತ್ ಫ್ರೆಶ್ನರ್, ಫ್ರೆಶ್ ಅಪ್ ಮಿಸ್ಟ್, ಝೂಮ್ ಕಾಲ್‌ಗಾಗಿ ಫೋನ್ ಸ್ಟಾಂಡ್ ಇತ್ಯಾದಿಗಳಿವೆ. ದೀಪಿಕಾ ಬ್ಯಾಗಲಲ್ಲಿ ಮೇಕಪ್ ಗೆ ಸಂಬಂಧಿಸಿದ್ದೇನೂ ಇಲ್ಲ. ಆದರೆ ಸಖತ್ ಕ್ರಿಯೇಟಿವ್(creative) ಆಗಿರುವ ಇಂಥಾ ವಸ್ತುಗಳೆಲ್ಲ ಇವೆ. ಸೋ ಬೇರೆ ನಟಿಯರಿಗಿಂತ, ಅವರ ಲೈಫಿಗಿಂತ ದೀಪಿಕಾ ಲೈಫು ಕಂಪ್ಲೀಟ್ಲೀ ಡಿಫರೆಂಟ್(different) ಅನ್ನೋದು ಇದರಿಂದಲೇ ಗೊತ್ತಾಗುತ್ತೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?