
ಪಶ್ಚಿಮ ಬಂಗಾಳದಲ್ಲಿ ಮಾಡೆಲ್‌ಗಳ ಸರಣಿ ಸಾವು ಮುಂದುವರೆದಿದೆ. ಇತ್ತೀಚಿಗಷ್ಟೆ ಕೋಲ್ಕತ್ತಾದಲ್ಲಿ ಮೂವರು ಮಾಡೆಲ್‌ಗಳು ನಿಗೂಢವಾಗಿ ಸಾವನ್ನಪ್ಪಿ್ದರು. ಮೇ 15ರಂದು ಖ್ಯಾತ ಮಾಡೆಲ್ ಪಲ್ಲವಿ ಡೇ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳು. ಈ ಘಟನೆ ಮಾಸುವ ಮುನ್ನವೇ ಮತ್ತೋರ್ವ ಮಾಡೆಲ್ ಶವವಾಗಿ ಪತ್ತೆಯಾಗಿದ್ದಾರೆ. ಕಳೆದ 15 ದಿನಗಳಲ್ಲಿ ಮಾಡೆಲಿಂಗ್ ಲೋಕದಲ್ಲಿ ಸಾಪನ್ನಪ್ಪಿದವರ ಸಂಖ್ಯೆ ನಾಲ್ಕಕ್ಕೆ ಏರಿದೆ ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದ್ದಾರೆ.
ಶನಿವಾರ ರಾತ್ರಿ (ಮೇ. 28) 18 ವರ್ಷದ ಬೆಂಗಾಲಿ ಮಾಡೆಲ್ ಮತ್ತು ಮೇಕಪ್ ಕಲಾವಿದೆಯೂ ಆಗಿದ್ದ ಸರಸ್ವತಿ ದಾಸ್ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸರಸ್ವತಿ ಶವ ಕಸ್ಬಾ ಪ್ರದೇಶದ ಬೆಡಿಯಾದಂಗದಲ್ಲಿರುವ ನಿವಾಸದ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾಡೆಲ್ ಆಗಿ ಅನೇಕ ಆಫರ್ಸ್ ಹೊಂದಿದ್ದ ಸರಸ್ವತಿ ನಿಧನ ಮಾಡೆಲಿಂಗ್ ಲೋಕಕ್ಕೆ ಆಘಾತ ತಂದಿದೆ. ಶನಿವಾರ ರಾತ್ರಿ ಈ ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಈ ಮಾಹಿತಿ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ತಿಳಿಸಿದ್ದಾರೆ.
ಈ ಘಟನೆ ಮಾಹಿತಿ ನೀಡಿದ ಪೊಲೀಸರು, 'ಇದು ಆತ್ಮಹತ್ಯೆ ಎಂದು ತೋರುತ್ತದೆ. ಆದರೆ ನಾವು ಬೇರೆ ಬೇರೆ ಕೋನಗಳಿಂದ ತನಿಖೆ ಮಾಡುತ್ತಿದ್ದೇವೆ. ಸರಸ್ವತಿ ಅಜ್ಜಿ ಮೊದಲು ಆಕೆಯನ್ನು ನೋಡಿದರು. ಬಳಿಕ ಹತ್ತರಿದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮರಣೋತ್ತರ ವರದಿಗಾಗಿ ನಾವು ಕಾಯುತ್ತಿದ್ದೇವೆ' ಎಂದು ಹೇಳಿದ್ದಾರೆ.
ಇನ್ನು ಇತ್ತೀಚಿಗಷ್ಟೆ ಸಾವನ್ನಪ್ಪಿದ ಮಾಡೆಲ್‌ಗಳಾದ ಮಂಜಷಾ ನಿಯೋಗಿ, ಬಿದಿಶಾ ಡಿ ಮಜುಂದಾರ್ ಮತ್ತು ನಟಿ ಪಲ್ಲವಿ ಡೇ ಅವರೊಂದಿಗೆ ಸಂಪರ್ಕ ಹೊಂದಿದ್ದಾರಾ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಮೂವರು ಮಾಡೆಲ್‌ಗಳ ಸಾವು ಸಹ ನಿಗೂಢವಾಗಿದೆ.
ಗೆಳತಿ ಸಾವಿನಿಂದ ಖಿನ್ನತೆಗೆ ಜಾರಿದ ಮಾಡೆಲ್ ಆತ್ಮಹತ್ಯೆ : ಅಪಾರ್ಟ್‌ಮೆಂಟ್‌ನಲ್ಲಿ ಶವ ಪತ್ತೆ
'ಸರಸ್ವತಿ, ತಾಯಿ ಮತ್ತು ಚಿಕ್ಕಮ್ಮ ಕೆಲಸಕ್ಕೆ ಹೋದ ಬಳಿಕ ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿದ್ದಾರೆ ಎಂದು ತೋರುತ್ತದೆ. ಆಕೆಯ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಆಕೆಯ ಚಟುವಟಿಕೆಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ' ಎಂದು ಹೇಳಿದ್ದಾರೆ.
ಸರಸ್ವತಿ ತಂದೆ ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ಕುಟುಂಬವನ್ನು ಬಿಟ್ಟುಹೋಗಿದ್ದರು. ಹಾಗಾಗಿ ಆಕೆಯ ತಾಯಿ ಮತ್ತು ಚಿಕ್ಕಮ್ಮ ಸರಸ್ವತಿಯನ್ನು ಬೆಳೆಸಿದ್ದರು. ಆದರೀಗ ಮಗಳನ್ನು ಕಳೆದುಕೊಂಡು ಒಂಟಿಯಾಗಿರುವುದು ದುರಂತವಾಗಿದೆ.
ಶವವಾಗಿ ಪತ್ತೆಯಾದ ಕೇರಳದ ಯುವ ರೂಪದರ್ಶಿ: ಪತಿ ಪೊಲೀಸ್ ಕಸ್ಟಡಿಗೆ
ಇತ್ತೀಚಿಗಷ್ಟೆ 26 ವರ್ಷದ ಮಂಜುಷಾ ಎಂಬ ರೂಪದರ್ಶಿ ತನ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೋರ್ವ ಮಾಡೆಲ್ ಮಂಜುಷಾ ಸ್ನೇಹಿತೆ ಹಾಗೂ ಸಹೋದ್ಯೋಗಿ ಬಿದಿಶಾ ಬುಧವಾರ ಆತ್ಮಹತ್ಯೆ ಮಾಡಿದ್ದರು. ಬಳಿಕ ಮೇ 15ರಂದು ಖ್ಯಾತ ಮಾಡೆಲ್ ಮತ್ತು ನಟಿ ಪಲ್ಲವಿ ಡೇ ಹೆಣವಾಗಿ ಪತ್ತೆಯಾಗಿದ್ದರು. ಮೂವರು ಮಾಡೆಲ್ ಗಳ ಸರಣಿ ಸಾವಿನಿಂದ ಬೆಚ್ಚಿದ್ದರುವ ಕೊಲ್ಕತ್ತಾ ಮಂದಿಗೆ ಇದೀಗ ಮತ್ತೊಂದು ಸಾವು ಆಘಾತತಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.