Deepika Padukone Kannada: ಕಿಚ್ಚನ ಬಾಡಿಗಾರ್ಡ್ ಟ್ಯಾಟೂ ನೋಡಿ ಪತ್ನಿಗೆ ಕರೆಮಾಡಿದ ರಣ್‌ವೀರ್, ಕನ್ನಡದಲ್ಲೇ ದೀಪಿಕಾ ಮಾತು!

Published : Dec 20, 2021, 03:06 PM ISTUpdated : Dec 20, 2021, 03:09 PM IST
Deepika Padukone Kannada:  ಕಿಚ್ಚನ ಬಾಡಿಗಾರ್ಡ್ ಟ್ಯಾಟೂ ನೋಡಿ ಪತ್ನಿಗೆ ಕರೆಮಾಡಿದ ರಣ್‌ವೀರ್, ಕನ್ನಡದಲ್ಲೇ ದೀಪಿಕಾ ಮಾತು!

ಸಾರಾಂಶ

*  ಕನ್ನಡದಲ್ಲಿ ಮಾತನಾಡಿದ ದೀಪಿಕಾ ಪಡುಕೋಣೆ * ಸೋಶೀಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ * ದೀಪಿಕಾ ಪಡುಕೋಣೆ ಕಾರಣಕ್ಕೆ ರಶ್ಮಿಕಾ ಕಾಲೆಳೆದರು * 83 Movie ಪ್ರಮೋಶನ್ ವೇಳೆ ವಿಡಿಯೋ ಕಾಲ್

ಬೆಂಗಳೂರು(ಡಿ. 20)  ಕನ್ನಡದ (Sandalwood) ಐಶ್ವರ್ಯ ಚಿತ್ರದ  ಬೆಳ್ಳಿತೆರೆಗೆ ಪ್ರವೇಶ  ಮಾಡಿ ನಂತರ ಬಾಲಿವುಡ್ ನಲ್ಲಿ(Bollywood) ದೊಡ್ಡ ಹೆಸರು ಸಂಪಾದನೆ ಮಾಡಿಕೊಂಡ ದೀಪಿಕಾ ಪಡುಕೋಣೆ ((Deepika Padukone) ಕನ್ನಡ ಮರೆತಿಲ್ಲ.  ದೀಪಿಕಾ ಪಡುಕೋಣೆ ಅಪ್ಪಟ ಅಭಿಮಾನಿಯಾಗಿರುವ ಕಿಚ್ಚ ಸುದೀಪ್ (Sudeep) ಬಾಡಿ ಗಾರ್ಡ್ ಜತೆ ದೀಪಿಕಾ ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಈ ಮಾತುಕತೆಗೆ ವೇದಿಕೆ ಮಾಡಿಕೊಟ್ಟಿದ್ದು ದೀಪಿಕಾ ಪತಿ, ನಟ (Ranveer Singh) ರಣ್ ವೀರ್ ಸಿಂಗ್.

ಭಾರತ ತಂಡ ಮೊದಲ ಸಾರಿ ವಿಶ್ವಕಪ್ (ICC World Cup) ಗೆದ್ದ ಘಟನಾವಳಿಗಳ ಆಧರಿಸಿರುವ  ‘83’ (83 Movie) ಪ್ರಚಾರಕ್ಕೆ ತಂಡ ಬೆಂಗಳೂರಿಗೆ ಆಗಮಿಸಿತ್ತು. ರಣ್ ವೀರ್ ಮತ್ತು ದೀಪಿಕಾ ಮುಖ್ಯ  ಭೂಮಿಕೆಯಲ್ಲಿದ್ದಾರೆ. ರಣ್ ವೀರ್  ದಿಗ್ಗಜ ಕಪಿಲ್ ದೇವ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

Kiccha Sudeep with Ranveer, Kapil Dev: ನಾನು ಬಾಲಕನಾಗಿದ್ದಾಗ ಕಪಿಲ್‌ ನನ್ನ ಎತ್ತಿಕೊಂಡಿದ್ದರೆಂದ ಕಿಚ್ಚ!

ರಣವೀರ್​ ಸಿಂಗ್​ ನಟನೆಯ ಈ ಚಿತ್ರ  ಡಿ.24ರಂದು ತೆರೆ ಕಾಣಲಿದೆ.  ಪ್ರಮೋಶನ್ ಕಾರ್ಯಕ್ರಮ ಮುಗಿದಮೇಲೆ ಕಿಚ್ಚ ಸುದೀಪ್ ಬಾಡಿಗಾರ್ಡ್ (Bodyguard) ಕಿರಣ್​ ಜೊತೆ ದೀಪಿಕಾ ಪಡುಕೋಣೆ ವಿಡಿಯೋ ಕಾಲ್ ​(Video Cal) ನಲ್ಲಿ ಮಾತನಾಡಿದ್ದಾರೆ. ಕನ್ನಡದಲ್ಲಿಯೇ ಸಂಭಾಷಣೆ ನಡೆದಿದೆ. 

ಕಿಚ್ಚ ಸುದೀಪ್​ ಅವರ ಬಾಡಿ ಗಾರ್ಡ್ ಕಿರಣ್​ ಅವರಿಗೆ ದೀಪಿಕಾ ಪಡುಕೋಣೆ ಅಚ್ಚು ಮೆಚ್ಚು. ಅಭಿಮಾನದ ಪ್ರತೀಕವಾಗಿ ಕಿರಣ್ ತಮ್ಮ ಕೈ ಮೇಲೆ ದೀಪಿಕಾ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅದನ್ನು ಕಂಡು ರಣವೀರ್​ ಸಿಂಗ್​ ಅಚ್ಚರಿಪಟ್ಟರು. ಅಲ್ಲದೇ ದೀಪಿಕಾಗೆ ವಿಡಿಯೋ ಕಾಲ್​ ಮಾಡಿ ಅವರ ಟ್ಯಾಟೂಗಳನ್ನು ತೋರಿಸಿ ಸಂಭ್ರಮಿಸಿದರು. ಈ ವೇಳೆ ಕಿಚ್ಚ ಸುದೀಪ್ ಸಹ ಅಲ್ಲಿಯೇ ಇದ್ದರು.

ನನ್ನ ಹೆಸರು  ಕಿರಣ್ ಎಂದು ದೀಪಿಕಾಗೆ ಪರಿಚಯ ಮಾಡಿಕೊಂಡಿದ್ದಾರೆ. ಕಿರಣ್ ಅಂದರೆ  ಅಂಥ ದೀಪಿಕಾ ಕೇಳಿದಾಗ.. ಮೇಡಂ ಕಿಚ್ಚ ಕಿರಣ್ ಎಂದು ನನ್ನನ್ನು ಕರೆಯುತ್ತಾರೆ. . ನಿಮ್ಮನ್ನು ಭೇಟಿ ಮಾಡಬೇಕು ಎಂದು ಆಸೆ ಮುಂದಿಟ್ಟಿದ್ದಾರೆ. ಅದಕ್ಕೆ ದೀಪಿಕಾ ಖಂಡಿತ ... ಮುಂದಿನ ಸಾರಿ ಭೇಟಿಯಾಗೋಣ ಎಂದಿದ್ದಾರೆ. ರಣ್ ವೀರ್ ಸಿಂಗ್ ಇವರ ಮಾತುಕತೆಯನ್ನು ಅಚ್ಚರಿಯಿಂದ ನೋಡುತ್ತ ನಿಂತಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ದೀಪಿಕಾ ಪಡುಕೋಣೆ ಕನ್ನಡದಲ್ಲಿ ಮಾತನಾಡಿದ್ದು ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾ ರಶ್ಮಿಕಾ ಮಂದಣ್ಣ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಕನ್ನಡ ಗೊತ್ತಿದ್ದರೂ ಕನ್ನಡ ಮಾತನಾಡುತ್ತಿಲ್ಲ ಎಂದು ತರೇವಾರಿ ಕಮೆಂಟ್ ಮಾಡಿದ್ದಾರೆ. ರಶ್ಮಿಕಾ ತಮ್ಮ ಪುಷ್ಪ ಚಿತ್ರದ ಪ್ರಚಾರಕ್ಕೆ ಬಂದವರು ಕನ್ನಡ ಮರೆತುಹೋಗಿದೆ.. ಕನ್ನಡದಲ್ಲಿ ಡಬ್ಬಿಂಗ್ ಮಾಡಲು ಸಮಯ ಸಿಗಲಿಲ್ಲ ಎಂಬ  ಕಾರಣ ಕೊಟ್ಟಿದ್ದರು.

ದಂತಕತೆ: ಭಾರತೀಯ ಕ್ರಿಕೆಟ್ ಇತಿಹಾಸ ಎಂದು ಮರೆಯಲಾದಂತ 1983ರ ವಲ್ಡ್ ಕಪ್ (1983 World Cup) ವಿಜೇತ ತಂಡದ ಕ್ರಿಕೆಟ್ ಸ್ಟೋರಿಯೇ 83 ಸಿನಿಮಾ. ಕಬೀರ್ ಖಾನ್ ನಿರ್ದೇಶನದಲ್ಲಿ ರಣ್ವೀರ್ ಸಿಂಗ್ (Ranveer Singh) ದೀಪಿಕಾ ಪಡುಕೋಣೆ (Deepika Padukone) ಮುಖ್ಯಭೂಮಿಕೆಯಲ್ಲಿ ಮೂಡಿಬಂದಿರುವ ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ.

ಡಿಸೆಂಬರ್ 24 ರಂದು ಐದು ಭಾಷೆಯಲ್ಲಿ 83 ರಿಲೀಸ್ ಆಗುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಒಬ್ಬ ಕ್ರಿಕೇಟ್ ಪ್ರೇಮಿಯಾಗಿ ಈ ಸಿನಿಮಾವನ್ನ ಕರ್ನಾಟಕದಾದ್ಯಂತ  ಪ್ರಸ್ತುತಪಡಿಸುತ್ತಿದ್ದಾರೆ. 

ಕಿಚ್ಚ ಸುದೀಪ್ ಮಾಜಿ ಕ್ರಿಕೆಟಿಗ, ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರ ಬಯೋಪಿಕ್ ಮಾಡಬೇಕು ಅನ್ನುವ ಆಸೆ ಕನ್ನಡಿಗರಿಗಿದೆ. ಇದಕ್ಕೆ ‘83’ ನಿರ್ದೇಶಕ ಕಬೀರ್ ಖಾನ್ ಒಪ್ಪಿಗೆ ನೀಡಿದ್ದಾರೆ. ದ್ರಾವಿಡ್ ಸಿನಿಮಾ ಮಾಡೋ ಹಕ್ಕನ್ನು ತಂದರೆ ಬಯೋಪಿಕ್ ಮಾಡ್ತೀನಿ ಎಂದಿದ್ದಾರೆ ಎಂದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!
ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!