
ಪೂಜಾ ಹೆಗ್ಡೆಗೆ(Pooja Hegde) ತನ್ನ ಅತ್ಯಾಕರ್ಷಕ ಫೋಟೋಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ನಟಿ ಲೇಟೆಸ್ಟ್ ಆಗಿ ಕಪ್ಪು-ಬಿಳುಪು ಬಿಕಿನಿಯಲ್ಲಿ(Bikini) ಹೊಸ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ನಟಿ ತನ್ನ ಕೂದಲನ್ನು ಪೋನಿಟೇಲ್‌ನಲ್ಲಿ ಕಟ್ಟುತ್ತಿರುವುದನ್ನು ಸಹ ಕಾಣಬಹುದು. ಮಾಲ್ಡೀವ್ಸ್‌ನಲ್ಲಿ(Maldives) ರಜಾದಿನಗಳಲ್ಲಿ ತೆಗೆದ ಫೋಟೋ ವೈರಲ್ ಆಗಿದೆ. ನಟಿ ತಮ್ಮ ಮುಂಬರುವ ಸಿನಿಮಾಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.ಬಹುಶಃ ನಟಿ ತಮ್ಮ ವೆಕೇಷನ್ ಮಿಸ್ ಮಾಡುತ್ತಿರುವಂತಿದೆ.
ಪೂಜಾ ಹೆಗ್ಡೆ ಇತ್ತೀಚೆಗಷ್ಟೇ ತಮ್ಮ ತಮಿಳಿನ ಸಿನಿಮಾ ಬೀಸ್ಟ್‌ನ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಬೀಸ್ಟ್ ಚಿತ್ರದಲ್ಲಿ ದಳಪತಿ ವಿಜಯ್, ನಿರ್ದೇಶಕ ಸೆಲ್ವರಾಘವನ್ ಮತ್ತು ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ನಟಿ ಈಗ ತಮ್ಮ ಮುಂಬರುವ ಚಿತ್ರಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಡಿಸೆಂಬರ್ 15 ರಂದು, ಪೂಜಾ ತನ್ನ ಮಾಲ್ಡೀವ್ಸ್ ಪ್ರವಾಸದಿಂದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋದಲ್ಲಿ, ಅವರು ಕಪ್ಪು-ಬಿಳುಪು ಬಿಕಿನಿಯಲ್ಲಿ ಚಿಲ್ ಮಾಡುವುದನ್ನು ಕಾಣಬಹುದು. ಅವರು ಪೋಸ್ಟ್‌ಗೆ ಮೆಸ್ಸಿ ಪೋನಿಟೇಲ್‌ಗಳು ಶಾಶ್ವತ. ಈಜುವ ಸಮಯ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ಸಂಚಾರಿ ಹಾಡಿನಲ್ಲಿ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡ ವಿಕ್ರಮಾದಿತ್ಯ
ಜೀವಾ ಅಭಿನಯದ ನಿರ್ದೇಶಕ ಮಿಸ್ಕಿನ್ ಅವರ ಮುಗಮೂಡಿ ಚಿತ್ರದ ಮೂಲಕ ಪೂಜಾ ಹೆಗ್ಡೆ ತಮಿಳಿನಲ್ಲಿ ಪಾದಾರ್ಪಣೆ ಮಾಡಿದರು. ಹಲವಾರು ವರ್ಷಗಳ ನಂತರ, ಅವರು ವಿಜಯ್ ಅವರ ಬೀಸ್ಟ್ ಮೂಲಕ ತಮ್ಮ ಪುನರಾಗಮನವನ್ನು ಮಾಡುತ್ತಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರವು 2022 ರ ಬೇಸಿಗೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಚಿತ್ರೀಕರಣವನ್ನು ಮುಗಿಸಿದ ನಂತರ, ಪೂಜಾ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಬೀಸ್ಟ್‌ಗಾಗಿ ಕೆಲಸ ಮಾಡುವುದು ಉತ್ತಮ ಅನುಭವವಾಗಿತ್ತು. ಸೆಟ್‌ನಲ್ಲಿರುವುದಕ್ಕೆ ಸಂಪೂರ್ಣ ಸಂತೋಷವಾಗಿದೆ. ನಾವು ಸಿನಿಮಾ ಮಾಡುವಾಗ ತುಂಬಾ ನಕ್ಕಿದ್ದೇವೆ. ನೀವು ಕೂಡ ನಗುತ್ತೀರಿ ಎಂದು ನಾನು ಭಾವಿಸುತ್ತೇನೆ. ಇದು ವಿಶಿಷ್ಟವಾದ ನೆಲ್ಸನ್ ಆಗಿರುತ್ತದೆ- ಸ್ಟೈಲ್ ಮತ್ತು ವಿಜಯ್ ಸರ್ ಶೈಲಿಯ ಎಂಟರ್‌ಟೈನರ್. ಸೆಟ್‌ನಲ್ಲಿ ಇದ್ದದ್ದು ತುಂಬಾ ಚೆನ್ನಾಗಿತ್ತು. ಏಕೆಂದರೆ ಎಲ್ಲರೂ ಲವಲವಿಕೆಯಿಂದ ಇದ್ದರು. ಚಿತ್ರದ ಶೂಟಿಂಗ್‌ನಲ್ಲಿ ಇದು ರಜೆಯಂತಿತ್ತು. ದುಃಖಕರವೆಂದರೆ ಇಂದು ಬೀಸ್ಟ್‌ನಲ್ಲಿ ನನ್ನ ಕೊನೆಯ ದಿನ. ಇದು ನನ್ನ ಪೋರ್ಷನ್‌ಗೆ ಚಿತ್ರೀಕರಣದ ಸುತ್ತು. ಹಾಗಾಗಿ ಥಿಯೇಟರ್‌ನಲ್ಲಿ ನೋಡೋಣ ಎಂದು ಬರೆದಿದ್ದರು ನಟಿ.
ರಾಧೆ ಶ್ಯಾಮ್ ಸಾಂಗ್ ಹಿಟ್
'ಪ್ಯಾನ್ ಇಂಡಿಯಾ ಸ್ಟಾರ್' ಪ್ರಭಾಸ್ ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಹಾಗೂ ಪೂಜಾ ಹೆಗ್ಡೆ (Pooja Hegde) ನಟಿಸಿರುವ ಔಟ್ ಅ್ಯಂಡ್ ಔಟ್ ಲವ್ ಕಮ್ ರೊಮ್ಯಾಂಟಿಕ್ 'ರಾಧೆ ಶ್ಯಾಮ್' (Radhe Shyam) ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ. 'ಸೋಚ್ಲಿಯಾ' (Soch Liya) ಎಂಬ ಹೃದಯ ಸ್ಪರ್ಶಿಸುವ ಹಿಂದಿ ಸಾಂಗ್ ಟಿ-ಸಿರೀಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಮನೋಜ್ ಮುಂತಶಿರ್ (Manoj Muntashir) ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಮಿಥೂನ್ (Mithoon) ಸಂಗೀತ ಸಂಯೋಜನೆಯ ಜೊತೆಗೆ ಅರ್ಜಿತ್ ಸಿಂಗ್ (Arijit Singh) ಅವರೊಂದಿಗೆ ಹಾಡನ್ನು ಕೂಡ ಹಾಡಿದ್ದಾರೆ.
ರೆಟ್ರೋ ಕಾಲದ ಲವ್ ಸ್ಟೋರಿಯನ್ನು ಹೊಂದಿರುವ 'ರಾಧೆ ಶ್ಯಾಮ್'ನ ಈ ಹಾಡಿನ ವಿಡಿಯೋ ಸಹ ಬಹಳ ಸುಂದರವಾಗಿದ್ದು, ಯೂರೋಪಿನ ಅಂದವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರೀಕರಣ ಮಾಡಲಾಗಿದೆ. ಇತ್ತೀಚೆಗೆ ಚಿತ್ರದ ರೊಮ್ಯಾಂಟಿಕ್ ಸಾಂಗ್ 'ಆಶಿಕಿ ಆ ಗಯಿ' (Ashiqui aa gayi) ಎಂಬ ಹಾಡು ಬಿಡುಗಡೆಯಾಗಿದ್ದು, ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಂತೂ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸಿನಿಪ್ರಿಯರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ. ನಾನು ಪ್ರೀತಿಗಾಗಿ ಸಾಯುವವನಲ್ಲ, ನಾನು ಫ್ಲರ್ಟ್ ಮಾಡಲು ಬಯಸುತ್ತೇನೆ ಎಂದು ಪ್ರಭಾಸ್ ಹೇಳುವುದನ್ನು ಹಾಡಿನಲ್ಲಿ ಕೇಳಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.