Panama Papers Leak: ಬಚ್ಚನ್ ಸೊಸೆ ನಟಿ ಐಶ್ವರ್ಯಾ ರೈಗೆ ಸಂಕಷ್ಟ, ED ಸಮನ್ಸ್!

Published : Dec 20, 2021, 11:51 AM IST
Panama Papers Leak: ಬಚ್ಚನ್ ಸೊಸೆ ನಟಿ ಐಶ್ವರ್ಯಾ ರೈಗೆ ಸಂಕಷ್ಟ, ED ಸಮನ್ಸ್!

ಸಾರಾಂಶ

* ಬಾಲಿವುಡ್‌ ನಟಿ ಐಶ್ವರ್ಯಾ ರೈಗೆ ಸಂಕಷ್ಟ * ಬಚ್ಚನ್ ಕುಟುಂಬದ ಸೊಸೆಗೆ ಸಮನ್ಸ್ ಜಾರಿಗೊಳಿಸಿದ ಇಡಿ * ಪನಾಮಾ ಪೇಪರ್‌ ಲೀಕ್ಸ್ ವಿಚಾರವಾಗಿ ಸಮನ್ಸ್ ಜಾರಿ

ನವದೆಹಲಿ(ಡಿ.20): ಪನಾಮಾ ಪೇಪರ್ಸ್ ಲೀಕ್ ಪ್ರಕರಣದಲ್ಲಿ ಬಚ್ಚನ್ ಕುಟುಂಬದ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಸದ್ಯ ಬಾಲಿವುಡ್ ನಟಿ ಐಶ್ವರ್ಯಾ ರೈಗೆ ಇಡಿ ಸಮನ್ಸ್ ಕಳುಹಿಸಿ ದೆಹಲಿಗೆ ಬರುವಂತೆ ಆದೇಶಿಸಲಾಗಿದೆ. ಇನ್ನು ಐಶ್ವರ್ಯಾ ರೈ ಬಚ್ಚನ್ ಇಂದು ಇಡಿ ವಿಚಾರಣೆಗೆ ಹಾಜರಾಗುವುದಿಲ್ಲ. ಹೀಗಾಗಿ ಸಂಸ್ಥೆಯು ಶೀಘ್ರದಲ್ಲೇ ಐಶ್ವರ್ಯಾ ರೈ ಬಚ್ಚನ್‌ಗೆ ಹೊಸ ಸಮನ್ಸ್ ಅನ್ನು ಜಾರಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ

ಇಮೇಲ್ ಮೂಲಕ ಉತ್ತರ

ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣದಲ್ಲಿ ED ಈ ಹಿಂದೆ 9/11 2021 ರಂದು ಐಶ್ವರ್ಯಾ ರೈ ಬಚ್ಚನ್‌ಗೆ ಸೆಕ್ಷನ್ 37 ಫೆಮಾ ಅಡಿಯಲ್ಲಿ ಸಮನ್ಸ್ ನೀಡಿತ್ತು. ಮುಂಬೈನಲ್ಲಿರುವ ಪ್ರತೀಕ್ಷಾ ಬಚ್ಚನ್ ಕುಟುಂಬದ ನಿವಾಸಕ್ಕೆ ಈ ಸಮನ್ಸ್ ಕಳುಹಿಸಲಾಗಿದೆ. ಇದರಲ್ಲಿ 15 ದಿನಗಳೊಳಗೆ ಉತ್ತರಿಸುವಂತೆ ತಿಳಿಸಲಾಗಿದೆ. ಮೂಲಗಳ ಪ್ರಕಾರ, ಐಶ್ವರ್ಯಾ ರೈ ಬಚ್ಚನ್ ಇಮೇಲ್ ಮೂಲಕ ಇಡಿಗೆ ಈ ಉತ್ತರವನ್ನು ನೀಡಿದ್ದಾರೆ..

ಇಡಿಯಿಂದ ಪ್ರಕರಂದ ತನಿಖೆ

ಪನಾಮಾ ಪೇಪರ್ಸ್ ಲೀಕ್‌ ಪ್ರಕರಣದಲ್ಲಿ ಬಚ್ಚನ್ ಕುಟುಂಬದ ಹೆಸರೂ ಬಂದಿತ್ತು ಎಂಬುವುದು ಉಲ್ಲೇಖನೀಯ. ಆಗ ಜಾರಿ ನಿರ್ದೇಶನಾಲಯ (ಇಡಿ) ಕೂಡ ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು. ಜಾರಿ ನಿರ್ದೇಶನಾಲಯದ ಎಚ್‌ಐಯು ಈ ಕುರಿತು ತನಿಖೆ ನಡೆಸುತ್ತಿದೆ.

ಏನಿದು ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣ?

2016ರಲ್ಲಿ ಯುಕೆಯಲ್ಲಿ ಪನಾಮಾ ಕಾನೂನು ಸಂಸ್ಥೆಯೊಂದರ 11.5 ಕೋಟಿ ತೆರಿಗೆ ದಾಖಲೆಗಳು ಸೋರಿಕೆಯಾಗಿದ್ದವು. ಇದರಲ್ಲಿ ಪ್ರಪಂಚದಾದ್ಯಂತದ ದೊಡ್ಡ ನಾಯಕರು, ಉದ್ಯಮಿಗಳು ಮತ್ತು ದೊಡ್ಡ ವ್ಯಕ್ತಿಗಳ ಹೆಸರುಗಳನ್ನು ಬಹಿರಂಗಪಡಿಸಲಾಯಿತು. ಈ ಸಂದರ್ಭದಲ್ಲಿ ಭಾರತದ ಸುಮಾರು 500 ಜನರ ಹೆಸರುಗಳು ಈ ಪಟ್ಟಿಯಲ್ಲಿ ಇರುವುದು ಬಹಿರಂಗವಾಗಿದೆ. ಇದರಲ್ಲಿ ಬಚ್ಚನ್ ಕುಟುಂಬದ ಹೆಸರೂ ಸೇರಿತ್ತು.

ವರದಿಯೊಂದರ ಪ್ರಕಾರ, ಪನಾಮಾ ಲೀಕ್ಸ್‌ ಪಟ್ಟಿಯಲ್ಲಿ ಹೆಸರಿರುವ ವ್ಯಕ್ತಿಗಳು ತೆರಿಗೆ ವಂಚನೆ ಆರೋಪ ಎದುರಿಸುತ್ತಿದ್ದಾರೆ. ಇದಕ್ಕಾಗಿ ತೆರಿಗೆ ಅಧಿಕಾರಿಗಳು ತನಿಖೆಯಲ್ಲಿ ತೊಡಗಿದ್ದಾರೆ. ಈ ವೇಳೆ ಐಶ್ವರ್ಯಾ ರೈ ಅವರನ್ನು ಮೊದಲು ಕಂಪನಿಯೊಂದರ ನಿರ್ದೇಶಕಿಯನ್ನಾಗಿ ಮಾಡಲಾಗಿತ್ತು. ನಂತರ ಅವರನ್ನು ಕಂಪನಿಯ ಷೇರುದಾರ ಎಂದು ಘೋಷಿಸಲಾಯಿತು.

ಗಮನಾರ್ಹವೆಂದರೆ, ಈ ವಿಷಯ ಬಹಿರಂಗಗೊಂಡ ನಂತರ, ಇಡೀ ದೇಶದಲ್ಲಿ ಸಂಚಲನ ಉಂಟಾಗಿದೆ. ಪ್ರಭಾವಿಗಳ ಹೆಸರು ಹೊರಬಿದ್ದ ಮೇಲೆ ಜನ ನಾನಾ ರೀತಿಯ ಊಹಾಪೋಹಗಳನ್ನು ಮಾಡುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?