ಹೆರಿಗೆ ನಂತ್ರ ದೀಪಿಗೆ ಕಾಡ್ತಿದ್ಯಾ ಒಂಟಿತನ..? ರಣವೀರ್ ಬಗ್ಗೆ ಇಂಥ ಸ್ಟೋರಿ ಹಾಕಿದ ಬೆಡಗಿ

By Roopa Hegde  |  First Published Sep 30, 2024, 3:20 PM IST

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದಾರೆ. ಇನ್ನೂ ಹಸಿಮೈ ಆಗಿರೋ ಕಾರಣ ರೆಸ್ಟ್ ನಲ್ಲಿರುವ ಬೆಡಗಿಗೆ ಬೋರ್ ಆದಂತಿದೆ. ಈ ಮೊದಲೇ ತಮ್ಮ ಇನ್ಸ್ಟಾ ಬಯೋ ಬದಲಿಸಿದ್ದ ದೀಪಿಕಾ ಈಗ ರಣವೀರ್ ಬಗ್ಗೆ ಸ್ಟೋರಿ ಒಂದನ್ನು ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. 
 


ಬಾಲಿವುಡ್ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ (Bollywood Dimple Queen Deepika Padukone) ಈಗ ತಾಯ್ತನವನ್ನು ಆನಂದಿಸುತ್ತಿದ್ದಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿದ ಅವರು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನೂ ರಣವೀರ್ ಸಿಂಗ್ (Ranveer Singh) ಆಗ್ಲಿ ಇಲ್ಲ ದೀಪಿಕಾ ಪಡುಕೋಣೆಯಾಗ್ಲಿ ಮಗುವಿನ ಮುಖವನ್ನು ಫ್ಯಾನ್ಸ್ ಗೆ ತೋರಿಸಿಲ್ಲ. ಆಲಿಯಾ ಭಟ್ – ರಣಬೀರ್ ಕಪೂರ್ (Alia Bhatt – Ranbir Kapoor) ಮತ್ತು ಅನುಷ್ಕಾ ಶರ್ಮಾ – ವಿರಾಟ್ ಕೊಹ್ಲಿ (Anushka Sharma – Virat Kohli) ಪಾಲಿಸಿಯನ್ನು ದೀಪಿ – ರಣವೀರ್ ಫಾಲೋ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಗುವಿನ ಫೋಟೋ ಹಾಕದಿರಲು ನಿರ್ಧರಿಸಿದಂತಿದೆ. 

ದೀಪಿಕಾ ಪಡುಕೋಣೆ  ಮುಂಬೈನ ಗಿರ್ಗಾಂವ್ ಪ್ರದೇಶದ ಹೆಚ್ ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿ ಡೇಟ್ ಗಿಂತ 20 ದಿನ ಮೊದಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸೆಪ್ಟೆಂಬರ್ 8ರಂದು ದೀಪಿಕಾ ಹೆಣ್ಣು ಮಗುವನ್ನು ಸ್ವಾಗತಿಸಿದ್ದು, ಈ ಖುಷಿಯನ್ನು ರಣವೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ವೆಲ್ ಕಂ ಬೇಬಿ ಗರ್ಲ್ ಎನ್ನುವ ಫೋಟೋವನ್ನು ದೀಪಿಕಾ ಪೋಸ್ಟ್ ಮಾಡಿದ್ದರು. ದೀಪಿಗೆ ಹೆರಿಗೆಯಾಗಿ 22 ದಿನ ಕಳೆದಿದೆ. ಚೊಚ್ಚಲ ಬಾಣಂತಿ ದೀಪಿಕಾ, ಆಸ್ಪತ್ರೆಯಿಂದ ಮನೆಗೆ ಹೋಗುವಾಗ ಕ್ಯಾಮರಾ ಕಣ್ಣಿಗೆ ಅಲ್ಪಸ್ವಲ್ಪ ಸೆರೆಯಾಗಿದ್ದು ಬಿಟ್ರೆ ಮತ್ತೆ ಮಾಧ್ಯಮದ ಮುಂದೆ ಕಾಣಿಸಿಕೊಂಡಿಲ್ಲ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ದೀಪಿಕಾ ಸಕ್ರಿಯವಾಗಿದ್ದಾರೆ. ಈಗ ಸ್ಟೋರಿ ಒಂದನ್ನು ದೀಪಿಕಾ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ.

Tap to resize

Latest Videos

ಆರಾಧ್ಯ ನನ್ನ ಮಗಳು ಆಕೆ ಯಾವತ್ತಿದ್ದರೂ ಬೆಸ್ಟ್‌; ಕನ್ನಡ ನಟಿಯ ಟೀಕೆಗೆ ಟಾಂಗ್ ಕೊಟ್ಟ ಐಶ್ವರ್ಯ ರೈ

ದೀಪಿಕಾ ಒಂದು ಮಗುವಿನ ವಿಡಿಯೋವನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಓಡಿ ಬರುವ ಮಗು, ಬೈನಾಕ್ಯೂಲರ್ ಹಿಡಿದು ಕಿಟಕಿ ಕಡೆ ನೋಡ್ತಾನೆ. ಈ ವಿಡಿಯೋ ಮೇಲ್ಗಡೆ @ ರಣವೀರ್ ಸಿಂಗ್ ಅಂತ ಬರೆದಿದ್ದಾರೆ. ಅದ್ರ ಕೆಳಗೆ, ಇದು ನಾನು. ನನ್ನ ಗಂಡ ರಣವೀರ್ ಸಿಂಗ್ 5 ಗಂಟೆಗೆ ಬರ್ತೇನೆ ಎಂದಿದ್ದ. ಈಗ ಐದು ಗಂಟೆ ಒಂದು ನಿಮಿಷವಾಯ್ತು ಎಂದು ಬರೆದಿದ್ದಾರೆ 

ದೀಪಿಕಾ ಇನ್ಸ್ಟಾಗ್ರಾಮ್ ಬಯೋ ಕೂಡ ಬದಲಿಸಿದ್ದಾರೆ. ಮಗು ಹುಟ್ಟಿದ ಮೇಲೆ, feed,burp,sleep,repeat ಎಂದು ಬರೆದಿದ್ದಾರೆ. ಗರ್ಭಿಣಿಯಾಗಿದ್ದಾಗ ಅತಿ ಹೆಚ್ಚು ಟ್ರೋಲ್ ಆದ ನಟಿ ಬೆಂಗಳೂರಿನ ಬೆಡಗಿ ದೀಪಿಕಾ ಪಡುಕೋಣೆ. ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್, ತಾವು ಪಾಲಕರಾಗ್ತಿದ್ದೇವೆ ಎಂಬ ಸುದ್ದಿ ನೀಡ್ತಿದ್ದಂತೆ ನೆಟ್ಟಿಗರು ಇರುವೆ ಮೈಮೇಲೆ ಹತ್ತಿಕೊಂಡಂತೆ ಆಡೋಕೆ ಶುರು ಮಾಡಿದ್ದರು. ದೀಪಿಕಾ ಹೊಟ್ಟೆ ಮೇಲೆ ಎಲ್ಲರ ಕಣ್ಣಿತ್ತು. ಕಲ್ಕಿ ಶೂಟಿಂಗ್ ನಂತ್ರ ಪ್ರಚಾರದಲ್ಲಿ ಬ್ಯೂಸಿಯಾಗಿದ್ದ ದೀಪಿಕಾ, ಅಲ್ಲಿ ಇಲ್ಲಿ ಅಂತ ಎಲ್ಲ ಕಡೆ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದರು. ಕಲ್ಕಿ ಪ್ರಮೋಷನ್ ವೇಳೆ ದೀಪಿಕಾ ಧರಿಸಿದ್ದ ಹೈಹೀಲ್ಡ್ ನಿಂದ ಹಿಡಿದು ಅವರು ಮಾಡಿಸಿದ್ದ ಫೋಟೋಶೂಟ್ ವರೆಗೆ ಎಲ್ಲವೂ ಟ್ರೋಲ್ ಆಗಿದೆ. ದೀಪಿಕಾ ಫೇಕ್ ಗರ್ಭಿಣಿಯಾಗಿದ್ರು ಎಂಬುದು ಬಹುತೇಕರ ವಾದವಾಗಿತ್ತು. ಇದಕ್ಕೆ ಉತ್ತರ ನೀಡಲು ದೀಪಿಕಾ ತಮ್ಮ ಬೇಬಿಬಂಪ್ ಫೋಟೋವನ್ನು ಹಂಚಿಕೊಂಡಿದ್ದರು. ಆದ್ರೆ ಇದನ್ನೂ ಟ್ರೋಲರ್ಸ್ ಒಪ್ಪಿಕೊಂಡಿರಲಿಲ್ಲ. 

ನಟ ಬಾಲಚಂದ್ರ ಗುಂಪು ರತಿಕ್ರೀಡೆ ನಡೆಸ್ತಿಸ್ತು, ಆ ಕೋಣೆಯಲ್ಲಿ ನನ್ನನ್ನು... ಮೀನು ಭಯಂಕರ ಆರೋಪ!

ಈಗ ದೀಪಿಕಾ ಮಗುವನ್ನು ನೋಡಲು ಫ್ಯಾನ್ಸ್ ಕಾತುರರಾಗಿದ್ದಾರೆ. ರಣವೀರ್ ಸಿಂಗ್ ಯಾವಾಗ ತನ್ನ ಮಗುವಿನ ಮುಖ ತೋರಿಸ್ತಾರೆ ಎಂಬುದು ಎಲ್ಲರ ಪ್ರಶ್ನೆ. ಈ ಮಧ್ಯೆ ದೀಪಿಕಾ ಪಡುಕೋಣೆ ತಾಯಿ ಹಾಗೂ ಅವರ ಸಹೋದರಿ ಮಾತನಾಡಿಸಿದ್ದ ಪಾಪರಾಜಿಗಳಿಗೆ, ದೀಪಿಕಾ ಹಾಗೂ ಮಗು ಆರೋಗ್ಯವಾಗಿದ್ದಾರೆ ಎನ್ನವು ಉತ್ತರ ಸಿಕ್ಕಿದೆ. ಸದ್ಯ ರೆಸ್ಟ್ ನಲ್ಲಿದ್ರೂ ದೀಪಿಕಾ ಬೇಗ ಬಣ್ಣ ಹಚ್ಚಲಿದ್ದಾರೆ. ಈಗಾಗಲೇ ಸಿಂಗಮ್ ಎಗೇನ್ ಸಿನಿಮಾಕ್ಕೆ ಅವರು ಸಹಿಹಾಕಿಯಾಗಿದೆ.

click me!