ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ

Published : Sep 08, 2024, 01:05 PM ISTUpdated : Sep 08, 2024, 01:33 PM IST
ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ

ಸಾರಾಂಶ

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ  ಹಾಗೂ ನಟ ರಣ್ವೀರ್ ಸಿಂಗ್ ಪೋಷಕರಾಗಿದ್ದಾರೆ.  ದೀಪಿಕಾ ಇಂದು  ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ  ಹಾಗೂ ನಟ ರಣ್ವೀರ್ ಸಿಂಗ್ ಪೋಷಕರಾಗಿದ್ದಾರೆ.  ದೀಪಿಕಾ ಇಂದು  ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.  ನಿನ್ನೆಯಷ್ಟೇ ದೀಪಿಕಾ ಪಡುಕೋಣೆ  ಮುಂಬೈನ ಅಂಬಾನಿ ಮಾಲೀಕತ್ವದ ಹೆಚ್‌ಎನ್‌ ರಿಲಯನ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು.  ಸೆಪ್ಟೆಂಬರ್ 28ರಂದು ದೀಪಿಕಾಗೆ ಡೆಲಿವರಿ ಡೇಟ್ ಇತ್ತು. ಆದರೆ ನಿಗದಿಗಿಂತ 20 ದಿನ ಮೊದಲೇ ದೀಪಿಕಾ ರಣ್ವೀರ್ ಮನೆಗೆ ಗೌರಿಯ ಆಗಮನವಾಗಿದೆ. ಒಂದು ದಿನದ ಹಿಂದಷ್ಟೇ ದೀಪಿಕಾ ಪಡುಕೋಣೆ ತಮ್ಮ ಪತಿ ರಣ್ವೀರ್ ಸಿಂಗ್ ಹಾಗೂ ಕುಟುಂಬದವರ ಜೊತೆಗೆ ಬರಿಗಾಲಿನಲ್ಲಿ ಮುಂಬೈನ ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. 

ಆದರೆ ಈ ಖುಷಿಯ ವಿಚಾರವನ್ನು ಇವರಿಬ್ಬರೂ ಕೂಡ ಸಾಮಾಜಿಕ ಜಾಲತಾಣದಲ್ಲಿ  ಎಲ್ಲಿಯೂ ಪೋಸ್ಟ್ ಮಾಡಿಲ್ಲ, ಕೆಲ ದಿನಗಳ ಹಿಂದಷ್ಟೇ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಅವರು ಜೊತೆಯಾಗಿ ಪ್ರಗ್ನೆನ್ಸಿ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ದೀಪಿಕಾ ಪಡುಕೋಣೆ ಗರ್ಭಿಣಿಯಾದಾಗಿನಿಂದಲೂ ವ್ಯಾಪಕ ಟೀಕೆಗೆ ಗುರಿಯಾದವರು, ಅವರು ಹೋದಲೆಲ್ಲಾ ಹಿಂಬಾಲಿಸುತ್ತಿದ್ದ ಪಪಾರಾಜಿಗಳು ಅವರ ಫೋಟೋ ವಿಡಿಯೋಗಳನ್ನು ಮಾಮೂಲಿ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದರು. ಇದನ್ನು ನೋಡಿದ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಕೆ ಗರ್ಭಿಣಿ ಅಲ್ಲ ಆಕೆ ಒಂದೊಂದು ಫೋಟೋದಲ್ಲಿ ಒಂದೊಂದು ರೀತಿ ಕಾಣಿಸುತ್ತಿದ್ದಾಳೆ. ಬಹುಶಃ ಬಾಡಿಗೆ ತಾಯ್ತನದಿಂದ ಮಗು ಪಡಿತಿರಬಹುದು. ಸುಮ್ಮನೇ ಶೋಆಫ್ ಮಾಡುತ್ತಿದ್ದಾರೆ ಎಂದೆಲ್ಲಾ ಟೀಕೆಗಳ ಸುರಿಮಳೆಗೈಯುತ್ತಿದ್ದರು. ಆದರೆ ಪ್ರಗ್ನೆನ್ಸಿ ಫೋಟೋ ಶೂಟ್ ಮೂಲಕ ಅವರು ಎಲ್ಲಾ ಟೀಕೆಗಳಿಗೆ ಉತ್ತರ ನೀಡಿದ್ದರು. 

ಗಣೇಶ ಹಬ್ಬದಂದೇ ನಟಿ ದೀಪಿಕಾ ಪಡುಕೋಣೆ ಆಸ್ಪತ್ರೆಗೆ ದಾಖಲು: ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಡ್ತಾರಾ?

ಅಲ್ಲದೇ ನಟಿ ಆಲಿಯಾ ಭಟ್ ಸೇರಿದಂತೆ ಅನೇಕರು ದೀಪಿಕಾ ಅವರನ್ನು ಬೆಂಬಲಿಸಿ ಫೋಸ್ಟ್ ಮಾಡಿದ್ದರು. ಅಲ್ಲದೇ ಗರ್ಭಿಣಿ ದೀಪಿಕಾರನ್ನು ಹೀಗೆ ಹಿಂಬಾಲಿಸುತ್ತಿರುವುದಕ್ಕೆ ಪಾಪಾರಾಜಿಗಳ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದ್ದರು. ಈ ಮೊದಲು ದೀಪಿಕಾ ಪಡುಕೋಣೆಗೆ ವೈದ್ಯರು  ಸೆಪ್ಟೆಂಬರ್ 28ರಂದು ಹೆರಿಗೆ ದಿನಾಂಕ ನೀಡಿದ್ದರು. ಆದರೆ ಅದೇ ದಿನ ಬಾಲಿವುಡ್ ಮತ್ತೊಬ್ಬ ನಟ ದೀಪಿಕಾ ಮಾಜಿ ಗೆಳೆಯ ರಣ್‌ಬೀರ್ ಕಪೂರ್ ಬರ್ತ್‌ಡೇ ಇತ್ತು. ಇದೇ ದಿನ ದೀಪಿಕಾ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬುದು ಸಾಕಷ್ಟು ಸುದ್ದಿಯಾಗಿತ್ತು. ಆದರೆ ದೀಪಿಕಾ ಅವರು 20 ದಿನಗಳಿಗೂ ಮೊದಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 

ಹೊಟ್ಟೆ ಬಿಟ್ಟ ಬಿಕಿನಿಯಲ್ಲಿ ನೋಡಿದಾಗ್ಲೂ ಫೇಕ್​ ಅಂದ್ರು! ಸೀರೆಯಲ್ಲಿ ನೋಡಿದಾಗ ಅವಳಿ-ಜವಳಿ ಅಂತಿದ್ದಾರಲ್ಲಪ್ಪಾ...  

ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಫೆಬ್ರವರಿಯಲ್ಲಿ ಪ್ರಗ್ನೆನ್ಸಿ ವಿಚಾರವನ್ನು ಘೋಷಣೆ ಮಾಡಿದ್ದರು. 2018ರಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಅವರು ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಈಗ ದಂಪತಿ ಹೆಣ್ಣು ಮಗುವಿಗೆ ಪೋಷಕರಾಗಿದ್ದು, ಚೊಚ್ಚಲ ಬಾರಿ ಅಪ್ಪ ಅಮ್ಮ ಆದ ದೀಪಿಕಾ ಹಾಗೂ ರಣ್ವೀರ್ ಅವರ ಜೀವನದ ಹೊಸ ಅಧ್ಯಯವೊಂದು ಈಗ ಆರಂಭವಾಗಿದೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?