India vs Australia: ರಜನೀಕಾಂತ್​ ನುಡಿದ್ರು ವರ್ಲ್ಡ್​ ಕಪ್​ ಭವಿಷ್ಯ- ಫ್ಯಾನ್ಸ್​ ಏನೆಂದ್ರು?

By Suvarna News  |  First Published Nov 17, 2023, 3:42 PM IST

ಇದೇ 19ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಕ್ರಿಕೆಟ್​ ಪಂದ್ಯ ನಡೆಯಲಿದ್ದು, ಈ ಕುರಿತು ನಟ ರಜನೀಕಾಂತ್​ ನುಡಿದ ಭವಿಷ್ಯವೇನು?
 


ಈ ಸಮಯದಲ್ಲಿ ಎಲ್ಲರೂ ಕುತೂಹಲದಿಂದ ನವೆಂಬರ್ 19ಗಾಗಿ ಕಾಯುತ್ತಿದ್ದಾರೆ.  ಏಕೆಂದರೆ  ಅಂದು ಮಧ್ಯಾಹ್ನ 2 ಗಂಟೆಗೆ ಗುಜರಾತಿನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್ 2023 ರ ಫೈನಲ್ ಪಂದ್ಯ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್ ಪಂದ್ಯ ನವೆಂಬರ್ 15 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಿತು. ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿತು.  ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 4 ವಿಕೆಟ್‌ ನಷ್ಟಕ್ಕೆ 50 ಓವರ್‌ಗಳಲ್ಲಿ 397 ರನ್‌ ಕಲೆಹಾಕಿತ್ತು. 398 ರನ್‌ಗಳ ಗುರಿ ಬೆನ್ನತ್ತಿದ್ದ ಕಿವೀಸ್‌ 48.5 ಓವರ್‌ಗಳಲ್ಲೇ 327 ರನ್‌ ಗಳಿಗೆ ಸರ್ವಪತನ ಕಂಡಿತು. ಇದರಿಂದ ಟೀಂ ಇಂಡಿಯಾ ಸತತ 10ನೇ ಜಯದೊಂದಿಗೆ ಫೈನಲ್‌ ಪ್ರವೇಶಿಸಿತು. ಅಂದು ವಾಂಖೆಡೆಯಲ್ಲಿ ಸಿನಿಮಾ ತಾರೆಯರ ಸಮಾವೇಶವಿತ್ತು. ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ, ಶಾಹಿದ್ ಕಪೂರ್, ರಣಬೀರ್ ಕಪೂರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಸ್ಟೇಡಿಯಂಗೆ ಆಗಮಿಸಿ ಟೀಂ ಇಂಡಿಯಾಗೆ ಪ್ರೋತ್ಸಾಹ ನೀಡಿದ್ದರು. ಈ ಪಟ್ಟಿಯಲ್ಲಿ ರಜನಿಕಾಂತ್ ಹೆಸರೂ ಸೇರಿದೆ. ಇದೀಗ ಫೈನಲ್ ಪಂದ್ಯದ ವಿಜೇತರ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ.

ಮೊಹಮ್ಮದ್‌ ಶಮಿ  ಬೌಲಿಂಗ್‌ ದಾಳಿ ಹಾಗೂ ಸಂಘಟಿತ ಬ್ಯಾಟಿಂಗ್‌ ನೆರವಿನಿಂದ ಟೀಂ ಇಂಡಿಯಾ (Team India) ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ 70 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ 4ನೇ ಬಾರಿಗೆ ಫೈನಲ್‌ ಪ್ರವೇಶಿಸಿದೆ. ಅಷ್ಟೇ ಅಲ್ಲದೇ 2019ರ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿದೆ. 

Latest Videos

undefined

ಭಾರತ ವಿಶ್ವಕಪ್​ ಗೆದ್ರೆ ಈ ನಟಿ ಬೆತ್ತಲಾಗ್ತಾರಂತೆ! ಮುಂದೇನು ಮಾಡ್ತಾರೆಂದು ಹೇಳಿದ್ದಾರೆ ಕೇಳಿ...

ಪಂದ್ಯ ವೀಕ್ಷಿಸಿದ ಬಳಿಕ,  ರಜನೀಕಾಂತ್, 'ಮೊದಲು ನಾನು ನರ್ವಸ್ ಆಗಿದ್ದೆ. ನಂತರ ಸತತವಾಗಿ ವಿಕೆಟ್‌ಗಳು ಬಿದ್ದಾಗ ಎಲ್ಲವೂ ಸುಸೂತ್ರವಾಯಿತು. ಆ ಒಂದೂವರೆ ಗಂಟೆಯಲ್ಲಿ ನಾನು ತುಂಬಾ ಆತಂಕಗೊಂಡಿದ್ದೆ, ಆದರೆ (ವಿಶ್ವ) ಕಪ್ ನಮ್ಮದೇ ಎಂದು ನನಗೆ 100% ಖಚಿತವಾಗಿದೆ ಎಂದಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ 2023 ರ ಮೊದಲ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಲು ಸೂಪರ್ ಸ್ಟಾರ್ ರಜನಿಕಾಂತ್ ಎರಡು ದಿನಗಳ ಹಿಂದೆ ತಮ್ಮ ಪತ್ನಿ ಲತಾ ಅವರೊಂದಿಗೆ ಮುಂಬೈಗೆ ಬಂದಿದ್ದರು. ಪಂದ್ಯ ವೀಕ್ಷಿಸಿದ ಬಳಿಕ ಚೆನ್ನೈ ತಲುಪಿದ ಸೂಪರ್ ಸ್ಟಾರ್ ಭಾರತ ಈ ವರ್ಷ ವಿಶ್ವಕಪ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ವರ್ಲ್ಡ್​ ಕಪ್​ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 


ಭಾರತದ ಟೀಮ್​ ನಿಜಕ್ಕೂ ಪ್ರಬಲವಾಗಿದೆ. ಬ್ಯಾಟಿಂಗ್​, ಬೌಲಿಂಗ್​, ಫೀಲ್ಡಿಂಗ್​ ಎಲ್ಲ ವಿಭಾಗದಲ್ಲೂ ಸರಿಸಾಟಿಯಿಲ್ಲದ ಪರ್ಫಾರ್ಮೆನ್ಸ್​ ನೀಡುತ್ತಿದ್ದಾರೆ. ಇದರಿಂದ ಕ್ರಿಕೆಟ್​ ಪ್ರೇಮಿಗಳಿಗೆ ಟೀಮ್​ ಇಂಡಿಯಾ ಮೇಲೆ ನೂರಕ್ಕೆ ನೂರರಷ್ಟು ಭರವಸೆ ಮೂಡಿದೆ. ಆಸ್ಟ್ರೇಲಿಯಾ ಕೂಡ ಪ್ರಬಲ ತಂಡವೇ ಆಗಿದ್ದರೂ ಇಂಡಿಯಾಗೆ ಜಯ ಖಚಿತ ಎಂದು ನಿರೀಕ್ಷೆ ಇಡಲಾಗಿದೆ. ನವೆಂಬರ್​ 19ರಂದು ನಡೆಯಲಿರುವ ಪಂದ್ಯ ನೋಡಲು ಅನೇಕ ಸೆಲೆಬ್ರಿಟಿಗಳು ಕೂಡ ಅಹಮದಾಬಾದ್​ಗೆ ಆಗಮಿಸಲಿದ್ದಾರೆ. ಇದರ ನಡುವೆಯೇ ಭಾರತ ಗೆಲ್ಲುವ ವಿಶ್ವಾಸವನ್ನು ತಲೈವಾ ವ್ಯಕ್ತಪಡಿಸಿದ್ದು, ರಜನೀಕಾಂತ್​ ಹಾಗೂ ಕ್ರಿಕೆಟ್​ ಪ್ರೇಮಿಗಳು ಇದು ನಿಜ ಎನ್ನುತ್ತಿದ್ದಾರೆ. 

ಇಂದು ಆರಾಧ್ಯ ಬಚ್ಚನ್​ ಹುಟ್ಟುಹಬ್ಬ: ಐಶ್​ ಪುತ್ರಿಯ ಬಗ್ಗೆ ಜನರು ಗೂಗಲ್​ನಲ್ಲಿ ಹೆಚ್ಚು ಹುಡುಕಿದ್ದೇನು?
 

click me!