Latest Videos

ಗಂಗಾರತಿ ವಿಡಿಯೋ ಶೇರ್​ ಮಾಡಿದ ನಟಿ ಸನ್ನಿ ಲಿಯೋನ್​: ಪುಳಕಗೊಂಡ ಭಕ್ತರು

By Suvarna NewsFirst Published Nov 17, 2023, 4:20 PM IST
Highlights

ನಟಿ ಸನ್ನಿ ಲಿಯೋನ್​ ಅವರು ಗಂಗಾ ಆರತಿಯಲ್ಲಿ ಭಾಗಿಯಾಗಿದ್ದು, ಅದರ ವಿಡಿಯೋ ಶೇರ್​ ಮಾಡಿದ್ದಾರೆ. 
 

ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿ, ಐಟಂ ಸಾಂಗ್‌ಗಳಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ ಸನ್ನಿ ಲಿಯೋನ್, ಸದ್ಯ ವಾರಣಾಸಿಗೆ ತೆರಳಿದ್ದು ಅದರ ವಿಡಿಯೋ ಸಕತ್​ ವೈರಲ್​ ಆಗಿದೆ.  ವಾರಣಾಸಿಗೆ ತೆರಳಿದ್ದ ಅವರು, ರಾತ್ರಿವರೆಗೂ ಅಲ್ಲೇ ಇದ್ದು, ಪ್ರಸಿದ್ಧ ಗಂಗಾ ಆರತಿಯಲ್ಲಿ ಭಾಗಿಯಾಗಿದ್ದರು.  ಸದ್ಯ ಸನ್ನಿ ಲಿಯೋನ್ ತಮ್ಮ ಮುಂದಿನ ಮ್ಯೂಸಿಕ್ ವಿಡಿಯೋ 'ಥರ್ಡ್ ಪಾರ್ಟಿ' ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಇದರ ನಡುವೆಯೇ ನಟಿ ಹಿಂದೂಗಳ ಪವಿತ್ರ ತಾಣ ವಾರಣಾಸಿಗೆ ಭೇಟಿ ನೀಡಿದ್ದಾರೆ. ಪ್ರಸಿದ್ಧ ಗಂಗಾ ಆರತಿಯಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿದ್ದಾರೆ. ಇದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಪೂಜಾ ಕೈಂಕರ್ಯಗಳನ್ನು ನೋಡಬಹುದಾಗಿದ್ದು, ಇದನ್ನು ನೋಡಿ ಅಭಿಮಾನಿಗಳು ಧನ್ಯೋಸ್ಮಿ ಎಂದಿದ್ದಾರೆ. ಖುದ್ದು ಗಂಗಾ ಆರತಿಯಲ್ಲಿಯೇ ಪಾಲ್ಗೊಂಡಿರುವಷ್ಟು ಸಂತೋಷವಾಗಿದೆ ಎಂದು ಕಮೆಂಟ್​ ಮೂಲಕ ತಿಳಿಸುತ್ತಿದ್ದಾರೆ. 

ಗಂಗಾ ಆರತಿಯಲ್ಲಿ ಪಾಲ್ಗೊಂಡಿದ್ದ ಅವರು ಪಿಂಕ್ ಸಲ್ವಾರ್ ಸೂಟ್‌ನಲ್ಲಿ ಕಣ್ಮನ ಸೆಳೆದಿದ್ದಾರೆ. ಸನ್ನಿ ಲಿಯೋನ್ ಜೊತೆಗೆ ಮಾಜಿ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ಕೂಡ ಇದ್ದರು. ನಟಿ, ನಟ, ಅರ್ಚಕರು ಮತ್ತು ಇತರರೊಂದಿಗೆ ಗಂಗಾ ಆರತಿಯಲ್ಲಿ ಪಾಲ್ಗೊಂಡಿರುವ ವಿಡಿಯೋ ವೈರಲ್​ ಆಗಿದೆ. ಕಾಶಿ ಪ್ರವಾಸದ ಬಗ್ಗೆ ಸನ್ನಿ ತುಂಬಾ ಉತ್ಸುಕರಾಗಿದ್ದರು. ಗಂಗಾದಲ್ಲಿ ದೋಣಿ ವಿಹಾರದ ಜೊತೆಗೆ ಚಹಾ ಕುಡಿದೆ, ಬನಾರಸಿ ಪಾನ್ ತಿಂದೆ ಎಂದು ನಟಿ ಹೇಳಿದ್ದಾರೆ.  ಇದೇ ವೇಳೆ  ಕ್ರಿಕೆಟ್‌ ಕುರಿತು ಮಾತನಾಡಿರುವ ನಟಿ,  ಭಾರತದ ಗೆಲುವಿಗೆ ಶುಭಾಶಯಗಳನ್ನು ತಿಳಿಸಿದರು. 

ಇಂದು ಆರಾಧ್ಯ ಬಚ್ಚನ್​ ಹುಟ್ಟುಹಬ್ಬ: ಐಶ್​ ಪುತ್ರಿಯ ಬಗ್ಗೆ ಜನರು ಗೂಗಲ್​ನಲ್ಲಿ ಹೆಚ್ಚು ಹುಡುಕಿದ್ದೇನು?

ಮ್ಯೂಸಿಕ್ ವಿಡಿಯೋ 'ಥರ್ಡ್ ಪಾರ್ಟಿ' ಬಗ್ಗೆ ಮಾತನಾಡಿದ ಸನ್ನಿ ಅವರು, ಅಭಿಷೇಕ್ ಸಿಂಗ್ ಚಿತ್ರವನ್ನು ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಹಾಡುಗಳನ್ನು ಚಿತ್ರೀಕರಿಸಿದ್ದಾರೆ. ಅವರೇ ಬರೆದು, ಸಂಗೀತ ಸಂಯೋಜನೆ ಮಾಡಿ ರಂಜನೀಯ ಹಾಡುಗಳನ್ನು ಹಾಡಿದ್ದಾರೆ ಎಂದರು. ತಮ್ಮ ಪ್ರವಾಸದ ವಿಡಿಯೋ ಅನ್ನು  ಸನ್ನಿ ಲಿಯೋನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗಂಗಾ ಆರತಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಜೊತೆಗೆ "ವಾರಣಾಸಿಯಲ್ಲಿ ಗಂಗಾ ಆರತಿಯನ್ನು ನೋಡುವುದು ಅತ್ಯಂತ ಅದ್ಭುತ ಅನುಭವ. ಅಭಿಷೇಕ್ ಸಿಂಗ್ ಮತ್ತು ಟಿ ಸೀರಿಸ್‌ಗೆ ಧನ್ಯವಾದಗಳು" ಎಂದು ಶೀರ್ಷಿಕೆ ನೀಡಿದ್ದಾರೆ.


 
ಇನ್ನು 'ಥರ್ಡ್ ಪಾರ್ಟಿ' ಬಗ್ಗೆ ಹೇಳುವುದಾದರೆ, ಇದು ಇದೇ 15ರಂದು ಬಿಡುಗಡೆಯಾಗಿದೆ. ಇದರಲ್ಲಿ  ಮಾಜಿ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ಮತ್ತು ಸನ್ನಿ ಲಿಯೋನ್ ಇಬ್ಬರೂ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ಸಿಂಗ್ ಹೊಸ ಹಾಡನ್ನು ಹಾಡಿದ್ದಾರೆ. ಹಾಡನ್ನು ಸಂಯೋಜನೆ ಮಾಡಿದ್ದಾರೆ ಮತ್ತು ಅವರೇ ಬರೆದಿದ್ದಾರೆ.  ನಟಿಯೇ  ಹೇಳಿರುವಂತೆ, ಅಭಿಷೇಕ್ ಸಿಂಗ್ ಚಿತ್ರವನ್ನು ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಹಾಡುಗಳನ್ನು ಚಿತ್ರೀಕರಿಸಿದ್ದಾರೆ. 

India vs Australia: ರಜನೀಕಾಂತ್​ ನುಡಿದ್ರು ವರ್ಲ್ಡ್​ ಕಪ್​ ಭವಿಷ್ಯ- ಫ್ಯಾನ್ಸ್​ ಏನೆಂದ್ರು?

 
 
 
 
 
 
 
 
 
 
 
 
 
 
 

A post shared by Sunny Leone (@sunnyleone)

click me!