
ಹೈದರಾಬಾದ್(ಡಿ.26): ಲಾಕ್‌ಡೌನ್ ಸಮಯದಲ್ಲಿ ಮುಂಬೈನಲ್ಲಿ ಸೇರಿದಂತೆ ಹಲವೆಡೆ ಸಿಲುಕಿದ ವಲಸೆ ಕಾರ್ಮಿಕರ ಸೇರಿದಂತೆ ಹಲವರನ್ನು ಬಾಲಿವುಡ್ ನಟ ಸೋನು ಸೂದ್ ಅವರವರ ಊರಿಗೆ ಕಳುಹಿಸಿ ಮಾನವೀಯತೆ ಮರೆದಿದ್ದರು. ಹೀಗಿ ಸೋನು ಸೂದ್ ನೆರವಿನಿಂದ ತವರು ತಲುಪಿದ ಕಾರ್ಮಿಕ ಬೀದಿ ಬದಿಯಲ್ಲಿ ಸಣ್ಣ ಫುಡ್ ಸ್ಟಾಲ್ ಹಾಕಿದ್ದಾನೆ. ಇದೀಗ ಈ ಫುಡ್ ಸ್ಟಾಲ್‌ಗೆ ಸ್ವತಃ ಸೋನು ಸೂದ್ ಭೇಟಿ ನೀಡಿ ಅಚ್ಚರಿ ನೀಡಿದ್ದಾರೆ.
ಕಾರ್ಮಿಕರ, ನಿರುದ್ಯೋಗಿಗಳ, ಅನಾಥರ ಬಂಧುವಾದ ಸೋನು ಸೂದ್ಗಾಗಿ ದೇವಾಲಯ!
ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಹೈದರಾಬಾದ್ ಮೂಲಕ ಕಾರ್ಮಿಕ ಅನಿಲ್ ಲಾಕ್‌ಡೌನ್ ಕಾರಣ ಮುಂಬೈನಲ್ಲಿ ಪರದಾಡಿದ್ದ. ತವರಿಗೆ ತೆರಳಲು ಸಾಧ್ಯವಾಗದೆ, ಮುಂಬೈನಲ್ಲಿ ಆಹಾರವಿಲ್ಲದೆ ತೀವ್ರ ಸಂಕಷ್ಟ ಅನುಭವಿಸಿದ್ದ. ಇದೇ ವೇಳೆ ಸೋನು ಸೂದ್ ಮುಂಬೈ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಸಿಲುಕಿದ್ದ ವಲಕೆ ಕಾರ್ಮಿಕರನ್ನು ತಮ್ಮ ಸ್ವಂತ ಖರ್ಚಿನಲ್ಲಿ ತವರಿಗೆ ಕಳುಹಿಸಿಕೊಟ್ಟಿದ್ದರು.
ಸಾವಿರಾರು ಮಂದಿಗೆ ಸೋನು ಸೋದ್ ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು. ಹೀಗೆ ನೆರವು ಪಡೆದು ಹೈದರಾಬಾದ್ ಆಗಮಿಸಿದ ಕಾರ್ಮಿಕ ಅನಿಲ್ ಸೊನು ಸೋದ್ ಹೆಸರಲ್ಲಿ ಸಣ್ಣ ಫುಡ್ ಸ್ಟಾಲ್ ಆರಂಭಿಸಿದ್ದಾನೆ. ಲಕ್ಷ್ಮಿ ಸೋನು ಸೂದ್ ಫುಡ್ ಸ್ಟಾಲ್ ಅನ್ನೋ ಹೆಸರಲ್ಲಿ ಹೊಟೆಲ್ ಆರಂಭಿಸಿದ್ದಾನೆ.
ವಿಲನ್ ಪಾತ್ರಗಳನ್ನು ಮಾಡ್ತಿದ್ದ ಸೋನು ಸೂದ್‌ಗೆ ಲಾಕ್‌ಡೌನ್ ನಂತ್ರ ಹೀರೋ ಪಾತ್ರ
ಈ ಮಾಹಿತಿ ತಿಳಿದ ಸೋನು ಸೂದ್ ಹೈದರಾಬಾದ್‌ಗೆ ಆಗಮಿಸಿ, ಲಕ್ಷ್ಮಿ ಫುಡ್ ಸ್ಟಾಲ್ ಸೆಂಟರ್‌ಗೆ ಸರ್ಪ್ರೈಸ್ ಬೇಟಿ ನೀಡಿದ್ದಾರೆ. ಇಷ್ಟೇ ಅಲ್ಲ ಎಗ್ ಫ್ರೈಡ್ ಸೇವಿಸಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಫುಡ್ ಸ್ಟಾಲ್ ಕುರಿತು ಮಾಹಿತಿ ನೋಡಿದ್ದೆ. ಈಗ ಭೇಟಿ ನೀಡಲು ಸಾಧ್ಯವಾಗಿದೆ ಎಂದರು. ಸೋನು ಸೂದ್ ನೆರವಿಗೆ ಈಗಾಗಲೇ ಅಭಿಮಾನಿಗಳು ದೇವಾಲಯ ಕಟ್ಟಿ ಪೂಜೆ ಸಲ್ಲಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.