ಅಕ್ಷಯ್ ಕುಮಾರ್, ಪ್ರಿಯಾಂಕ ಚೋಪ್ರಾ ಆಮೇಲೆ ಜೊತೆಗೇಕೆ ನಟಿಸಲಿಲ್ಲ?

Suvarna News   | Asianet News
Published : Dec 26, 2020, 05:06 PM ISTUpdated : Dec 26, 2020, 05:17 PM IST
ಅಕ್ಷಯ್ ಕುಮಾರ್, ಪ್ರಿಯಾಂಕ ಚೋಪ್ರಾ ಆಮೇಲೆ ಜೊತೆಗೇಕೆ ನಟಿಸಲಿಲ್ಲ?

ಸಾರಾಂಶ

ಸಕತ್ ಕೆಮಿಸ್ಟ್ರಿ ಹೊಂದಿದ್ದ ಜೋಡಿ ಅಕ್ಷಯ್ ಕುಮಾರ್ - ಪ್ರಿಯಾಂಕ ಚೋಪ್ರಾ. ಆದರೆ ಒಂದು ಹಂತದ ನಂತರ ಅವರಿಬ್ಬರೂ ಜೊತೆಯಾಗಿ ನಟಿಸುವುದು ನಿಲ್ಲಿಸಿದರು. ಯಾಕೆ ಗೊತ್ತೆ?

ಅಕ್ಷಯ್ ಕುಮಾರ್ ಹಾಗೂ ಟ್ವಿಂಕಲ್ ಖನ್ನಾ ದಾಂಪತ್ಯದ ಬಗ್ಗೆ ಹಲವು ಕತೆಗಳಿವೆ. ಟ್ವಿಂಕಲ್ ಖನ್ನಾ ಹಾಗೂ ಅಕ್ಷಯ್ ಕುಮಾರ್‌ ನಡುವೆ ಒಮ್ಮೆ ದೊಡ್ಡ ಜಗಳ ಎದ್ದು ಡೈವೋರ್ಸ್ ಕೊಡೋ ಲೆವೆಲ್‌ಗೆ ಹೋಗಿತ್ತು ಎಂಬುದು ಕೂಡ ಅಂಥ ಒಂದು ಸುದ್ದಿ.

ನಾಲ್ಕಾರು ಫಿಲಂಗಳಲ್ಲಿ ಅಕ್ಷಯ್ ಮತ್ತು ಪ್ರಿಯಾಂಕ ಚೋಪ್ರಾ ಒಟ್ಟಿಗೆ ನಟಿಸಿದ್ದುಂಟು. ಐತ್‌ರಾಜ್‌, ಮುಝ್‌ಸೆ ಶಾದಿ ಕರೋಗೆ, ವಖ್ತ್, ಅಂದಾಜ್ ಮೊದಲಾದ ಫಿಲಂಗಳಲ್ಲಿ ಇವರು ಜೊತೆಯಾಗಿ ನಟಿಸಿದ್ದರು. ನಿಜಕ್ಕೂ ಅದೊಂದು ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದಾದಂಥ ಜೋಡಿಯೇ ಆಗಿತ್ತು. ಇಬ್ಬರ ನಡುವೆ ಸಕತ್ ಕೆಮಿಸ್ಟ್ರಿಯೂ ಇತ್ತು. ಅವರ ಫಿಲಂಗಳು ಅವರೇಜ್ ಹಿಟ್ ಆಗಿದ್ದವು. ಹಣ ಹಾಕಿದವರಿಗೆ ಪೈಸಾ ವಸೂಲ್ ಮಾಡಿಕೊಡುತ್ತಿತ್ತು ಈ ಜೋಡಿ. ಹೀಗಾಗಿ ಇವರನ್ನು ಹಾಕಿಕೊಂಡು ಫಿಲಂ ಮಾಡಲು ಸುಮಾರು ನಿರ್ದೇಶಕರು ನಿರ್ಮಾಪಕರು ರೆಡಯಾಗಿರುತ್ತಿದ್ದರು.

ಆದರೆ ಹಾಗಾಗಲಿಲ್ಲ. ಗೋವಾದಲ್ಲಿ ಒಂದು ಫಿಲಂ ಶೂಟಿಂಗ್ ನಡೆಯುತ್ತಿದ್ದಾಗ ಅಕ್ಷಯ್ ಮತ್ತು ಪ್ರಿಯಾಂಕ ನಡುವೆ ಸಕತ್ ಲವಿ ಡವಿ ನಡೆದಿತ್ತು. ಇಬ್ಬರೂ ಒಂದೇ ಹೋಟೆಲ್‌ನಲ್ಲಿ ತಂಗಿದ್ದರು ಹಾಗೂ ರಾತ್ರಿ ಇಬ್ಬರೂ ಒಂದೇ ರೂಮಿನಲ್ಲಿ ತಂಗುತ್ತಿದ್ದರು ಎಂಬುದು ಬರೀ ರೂಮರ್ ಆಗಿರಲಿಲ್ಲ. ಇದೆಲ್ಲ ಅಕ್ಷಯ್ ಪತ್ನಿ ಟ್ವಿಂಕಲ್ ಖನ್ನಾಗೆ ಗೊತ್ತಾಯಿತು. ಆಕೆ ನೇರವಾಗಿ ಚಿತ್ರೀಕರಣದ ಸೆಟ್‌ಗೆ ಆಗಮಿಸಿದಳು. ಇವರಿಬ್ಬರ ನಡುವಿನ ಕುಚ್ ಕುಚ್‌ ನೋಡಿ ಕೆಂಡಾಮಂಡಲ ಆದಳು ಟ್ವಿಂಕಲ್‌. ಅಲ್ಲೇ ಇಬ್ಬರಿಗೂ ಉಗಿದು ಉಪ್ಪು ಹಾಕಿದಳು. ಶೂಟಿಂಗ್ ಸೆಟ್‌ನಲ್ಲಿ ಅವರ ಅವತಾರ ನೋಡಿ ಇಡೀ ಇಂಡಸ್ಟ್ರಿ ಥಂಡಾ ಆಗಿಹೋಯ್ತು.

ಅಂದಿನಿಂದಲೇ ಪ್ರಿಯಾಂಕ ಜೊತೆಗೆ ನಟಿಸಲು ಅಕ್ಷಯ್‌ಗೆ ಟ್ವಿಂಕಲ್ ಅವಕಾಶವನ್ನೇ ಕೊಡಲಿಲ್ಲ. ಇನ್ನು ಮುಂದೆ ಪ್ರಿಯಾಂಕ ಇರುವ ಯಾವ ಫಿಲಂ ಪ್ರಾಜೆಕ್ಟನ್ನೂ ಒಪ್ಪಿಕೊಳ್ಳಬೇಡ. ಒಪ್ಪಿಕೊಂಡರೆ ನಿನ್ನ ಮನೆಯಲ್ಲಿ ನಿನ್ನ ಜೊತೆ ನಾನಿರೋಲ್ಲ ಎಂದು ಟ್ವಿಂಕಲ್ ಖಡಕ್ಕಾಗಿ ಹೇಳಿಬಿಟ್ಟಳು. ಅಕ್ಷಯ್ ಅಷ್ಟೆಲ್ಲಾ ಮುಂದುವರಿಯಲು ಸಿದ್ಧನಿರಲಿಲ್ಲ. ಹೀಗಾಗಿ ಆತ ತಣ್ಣಗಾದ. ಅಂದಿನಿಂದ ಮುಂದೆ ಅಕ್ಷಯ್- ಟ್ವಿಂಕಲ್ ಜೊತೆಯಾಗಿ ನಟಿಸಲಿಲ್ಲ.

ಮೆಗಾ ಸ್ಟಾರ್ ಚಿರಂಜೀವಿ ಹಿರಿಯ ಪುತ್ರಿ ಸುಶ್ಮಿತಾ ಬಗ್ಗೆ ಈ ಸತ್ಯ ನಿಮಗೆ ಗೊತ್ತಾ? ...

2009ರಲ್ಲಿ ಒಂದು ಮಜಾ ಘಟನೆ ನಡೆಯಿತು. ಮುಂಬಯಿಯಲ್ಲಿ ನಡೆದ ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ಡೆನಿಮ್ ಜೀನ್ಸ್ ಧರಿಸಿದ್ದ ಅಕ್ಷಯ್ ಕುಮಾರ್. ಆತನ ಜೀನ್ಸ್‌ನ ಜಿಪ್‌ ಬಿಚ್ಚಲು ಡೆನಿಮ್‌ನವರು ಟ್ವಿಂಕಲ್ ಖನ್ನಾಗೆ ಸೂಚಿಸಿದರು. ಅದೊಂದು ಪಬ್ಲಿಸಿಟಿ ಸ್ಟಂಟ್‌ ಆಗಿತ್ತು. ಇದಕ್ಕೆ ಹಣವನ್ನೇನೋ ಅವರು ಪಡೆದಿರಬಹುದು. ಆದರೆ ಇದು ಸಾರ್ವಜನಿಕವಾಗಿ ಅಸಭ್ಯ ಕೃತ್ಯ ಎನಿಸಿಕೊಂಡಿತು. ಮುಂಬಯಿ ಪೊಲೀಸರು ಟ್ವಿಂಕಲ್ ಮೇಲೆ ಕೇಸ್ ಬುಕ್ ಮಾಡಿದರು. ನಂತರ ಟ್ವಿಂಕ್‌ ಖನ್ನಾ 950 ರೂ ದಂಡ ಕಟ್ಟಿ ಈ ಕೇಸ್‌ನಿಂಧ ಮುಕ್ತಳಾದಳು.

'ಬಟ್ಟೆ ಬಿಚ್ಚಲು ನಾ ಓಲ್ಲೆ.. ಎಂತೆಂಥ ಅವಕಾಶ ಕೈ ಬಿಟ್ಟೆ!' ...

ಅಕ್ಷಯ್ ಹಾಗೂ ಟ್ವಿಂಕಲ್‌ ಇಬ್ಬರೂ ಮದುವೆಗೆ ಮೊದಲು ಸಾಕಷ್ಟು ಅಫೇರ್ ಇಟ್ಟುಕೊಂಡವರೇ. ಅಕ್ಷಯ್ ಕುಮಾರ್‌ನ ಹೆಸರು ಹತ್ತಾರು ಹೀರೋಯಿನ್‌ಗಳ ಜೊತೆ ಕೇಳಿಬಂದರೆ, ಟ್ವಿಂಕಲ್ ಕೂಡಾ ಕಮ್ಮಿ ಏನಲ್ಲ. ಆಕೆಗೂ ಅಭಿಷೇಕ್ ಕಪೂರ್, ಬಾಬ್ಬಿ ಡಿಯೋಲ್ ಮೊದಲಾದವರ ಜೊತೆ ಲವಿ ಡವಿ ಇತ್ತು. ಬರ್‌ಸಾತ್ ಫಿಲಂನಲ್ಲಿ ಟ್ವಿಂಕಲ್ ಹಾಗೂ ಬಾಬ್ಬಿ ಜೊತೆಯಾಗಿ ನಟಿಸಿದ್ದರು. ನಂತರ ಅಜ್‌ನಬೀ ಫಿಲಂನಲ್ಲಿ ಅಕ್ಷಯ್ ಕುಮಾರ್, ಬಾಬ್ಬಿ ಡಿಯೋಲ್ ಹಾಗೂ ಟ್ವಿಂಕಲ್ ಮೂವರೂ ನಟಿಸಿದ್ದರು. ಈ ಸಂದರ್ಭದಲ್ಲಿ ಟ್ವಿಂಕಲ್, ಬಾಬ್ಬಿಯಿಂದ ಅಕ್ಷಯ್ ಕಡೆಗೆ ಆಕರ್ಷಿತಳಾದಳು. ಆದರೂ ಅಕ್ಷಯ್‌ಗೆ ಈ ಬಗ್ಗೆ ಒಂದು ಕೀಳರಿಮೆ ಒಳಗೊಳಗೇ ಇತ್ತು. ಇದರಿಂದಾಗಿ ಬಾಬಿಗೂ ಅಕ್ಷಯ್‌ಗೂ ಸಂಬಂಧವೂ ಅಷ್ಟೆನೂ ಚೆನ್ನಾಗಿರಲಿಲ್ಲ.

ರಾಕ್ಷಸ ರೂಪವೇ 'ಐರಾವನ್‌';ಅರ್ಜುನನ ಮಗನಾಗಿ ಜೆಕೆ ಹೊಸ ಅವತಾರ! 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?