ಅಮಿತಾಭ್ ಮೊಮ್ಮಗಳ ಜೊತೆ 'ಗಲ್ಲಿ ಬಾಯ್' ನಟನ ಲವ್ವಿ-ಡವ್ವಿ: ನವ್ಯಾ-ಸಿದ್ಧಾಂತ್ ಫೋಟೋ ವೈರಲ್

Published : Jun 13, 2022, 11:11 AM IST
ಅಮಿತಾಭ್ ಮೊಮ್ಮಗಳ ಜೊತೆ  'ಗಲ್ಲಿ ಬಾಯ್' ನಟನ ಲವ್ವಿ-ಡವ್ವಿ:  ನವ್ಯಾ-ಸಿದ್ಧಾಂತ್ ಫೋಟೋ ವೈರಲ್

ಸಾರಾಂಶ

ಬಾಲಿವುಡ್‌ನಲ್ಲಿ ಹೊಸ ಲವ್ ಸ್ಟೋರಿ ಸದ್ದು ಮಾಡುತ್ತಿದೆ. ಸಿನಿಮಾರಂಗದಲ್ಲಿ ಲವ್, ಡೇಟಿಂಗ್, ಬ್ರೇಕಪ್ ಎಲ್ಲಾ ಸಾಮಾನ್ಯವಾಗಿದೆ. ಆದರೀಗ ಅಮಿತಾಬ್ ಬಚ್ಚನ್(Amitabh Bachchan) ಮೊಮ್ಮಗಳ ಪ್ರೀತಿ ವಿಚಾರ ಎಲ್ಲರ ಗಮನ ಸೆಳೆಯುತ್ತಿದೆ. ಗಲ್ಲಿ ಬಾಯ್ ಖ್ಯಾತಿಯ ಬಲಿವುಡ್  ನಟ ಸಿದ್ಧಾಂತ್ ಚತುರ್ವೇದಿ(Siddhant Chaturvedi) ಜೊತೆ ಅಮಿತಾಬ್ ಮೊಮ್ಮಗಳು ನವ್ಯಾ ನವೇಲಿ ನಂದ(Navya Naveli Nanda) ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಹೊಸ ವಿಚಾರ ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 

ಬಾಲಿವುಡ್‌ನಲ್ಲಿ ಹೊಸ ಲವ್ ಸ್ಟೋರಿ ಸದ್ದು ಮಾಡುತ್ತಿದೆ. ಸಿನಿಮಾರಂಗದಲ್ಲಿ ಲವ್, ಡೇಟಿಂಗ್, ಬ್ರೇಕಪ್ ಎಲ್ಲಾ ಸಾಮಾನ್ಯವಾಗಿದೆ. ಆದರೀಗ ಅಮಿತಾಬ್ ಬಚ್ಚನ್(Amitabh Bachchan) ಮೊಮ್ಮಗಳ ಪ್ರೀತಿ ವಿಚಾರ ಎಲ್ಲರ ಗಮನ ಸೆಳೆಯುತ್ತಿದೆ. ಗಲ್ಲಿ ಬಾಯ್ ಖ್ಯಾತಿಯ ಬಲಿವುಡ್  ನಟ ಸಿದ್ಧಾಂತ್ ಚತುರ್ವೇದಿ(Siddhant Chaturvedi) ಜೊತೆ ಅಮಿತಾಬ್ ಮೊಮ್ಮಗಳು ನವ್ಯಾ ನವೇಲಿ ನಂದ(Navya Naveli Nanda) ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಹೊಸ ವಿಚಾರ ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸಿದ್ಧಾಂತ್ ಇತ್ತೀಚಿಗಷ್ಟೆ ದೀಪಿಕಾ ಪಡುಕೋಣೆ ನಟನೆಯ ಗೆಹರಿಯಾನ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಅನೇಕ ವಿಚಾರಗಳಿಗೆ ಸುದ್ದಿಯಾಗಿತ್ತು, ಅಲ್ಲದೇ ಅನೇಕರು ಈ ಸಿನಿಮಾ ವಿರುದ್ಧ ಆಕ್ರೋಶ ಹೊರಹಾಕಿದ್ದರು. 

ಸಿದ್ಧಾಂತ್ ಸದ್ಯ ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಪ್ರೀತಿ ವಿಚಾರ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಸಿದ್ಧಾಂತ್ ಆಗಾಗ ಸಿನಿಮಾ ಮತ್ತು ವೈಯಕ್ತಿಕ ಜೀವನದ ಬಗ್ಗೆ ಪೋಸ್ಟ್ ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಸಿದ್ಧಾಂತ್ ಶೇರ್ ಮಾಡಿರುವ ಫೋಟೋ ನವ್ಯಾ ಜೊತೆಗಿನ ಪ್ರೀತಿ ವಿಚಾರಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿದೆ. ಸಿದ್ಧಾಂತ್ ಶೇರ್ ಮಾಡಿರುವ ಫೋಟೋದಲ್ಲಿ ನವ್ಯಾಗೆ ಲಿಂಕ್ ಇದೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 

ಅಷ್ಟಕ್ಕೂ ಸಿದ್ಧಾಂತ್ ಚತುರ್ವೇದಿ ಶೇರ್ ಮಾಡಿರುವ ಫೋಟೋದಲ್ಲಿ ವ್ಯಾನಿಟಿ ವ್ಯಾನ್‌ನಲ್ಲಿ ಕುಳಿತಿದ್ದಾರೆ. ಆಗ ಸಿದ್ಧಾಂತ್‌ಗೆ ವ್ಯಕ್ತಿಯೊಬ್ಬರು ಕತ್ತಿಗೆ ಚೈನ್ ಹಾಕಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿ ಸಿದ್ಧಾಂತ್, ಹರ್ ನೂಡಲ್ಸ್ ಎಂದು ಬರೆದುಕೊಂಡಿದ್ದಾರೆ. ಅದೇ ಸಮಯದಲ್ಲಿ ನವ್ಯಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದು ಅನುಮಾನ ಮೂಡಿಸಿದೆ. ನೂಡಲ್ಸ್ ಕ್ಯಾಷನ್ ನೊಂದಿಗೆ ನವ್ಯಾ ಕೂಡ ಫೋಟೋ ಶೇರ್ ಮಾಡಿದ್ದಾರೆ. ಸಿದ್ಧಾಂತ್ ಫೋಟೋ ಶೇರ್ ಮಾಡುವ ಮೊದಲೆ ನವ್ಯಾ ನೂಡಲ್ಸ್ ಜೊತೆ ಫೋಟೋ ಹಂಚಿಕೊಂಡಿದ್ದರು. 

ನೂಡಲ್ಸ್ ಕುಪ್ಪಾ ಜೊತೆ ನಿಂತಿರುವ ಫೋಟೋ ಶೇರ್ ಮಾಡಿ, ಇವತ್ತು ನೂಡಲ್ಸ್ ಮಾಡಿದೆ ಎಂದು ಕ್ಯಾಪ್ಷನ್ ನೀಡಿದ್ದಾರೆ. ಸಿದ್ಧಾಂತ್ ಫೋಟೋ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಇಬ್ಬರ ನಡುವೆ ಏನೋ ಇದೇ ಎನ್ನುವುದನ್ನು ಲಿಂಕ್ ಮಾಡುತ್ತಿದ್ದಾರೆ. ಇಬ್ಬರು ಪರಸ್ಪರರ ಬಗ್ಗೆ ಮಾತನಾಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸಿದ್ಧಾಂತ್ ಪೋಸ್ಟ್‌ಗೆ ಅಭಿಮಾನಿಗಳು, ನೀವು ನವ್ಯಾ ಬಗ್ಗೆಹೇಳುತ್ತಿದ್ದೀರಾ?, ನವ್ಯಾ ಕೂಡ ಮೂಡಲ್ಸ್ ಬಗ್ಗೆ ಮಾಡಿದ್ದಾರೆ ಎಂದು ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.


ದೀಪಿಕಾ ಜೊತೆ ರೊಮ್ಯಾನ್ಸ್, ಇಷ್ಟೊಂದು ಬೋಲ್ಡ್ ಸೀನ್ಸ್‌ ಇದೆ ಎನ್ನೋದು ಗೊತ್ತಿರಲೇ ಇಲ್ಲ!

 

ಇನ್ನು ವಿಶೇಷ ಎಂದರೆ ಅಭಿಮಾನಿಗಳು ಮಾತ್ರವಲ್ಲದೇ ಬಾಲಿವುಡ್ ನಟರು ಸಹ ಕಾಮೆಂಟ್ ಮಾಡಿ ಸಿದ್ಧಾಂತ್ ಕಾಲೆಳೆಯುತ್ತಿದ್ದಾರೆ. ನಟ ಇಶಾನ್ ಕಟ್ಟರ್ ಕಾಮೆಂಟ್ ಮಾಡಿ ಯಾರು ಅಂದು ಮಿಸ್ಟೀರಿಯಸ್ ಮಹಿಳೆ ಎಂದು ಕೇಳಿದ್ದಾರೆ. ಇಶಾನ್ ಕಮೆಂಟ್‌ಗೆ ಅಭಿಮಾನಿಗಳು ನವ್ಯಾ ಹೆಸರು ಹೇಳುತ್ತಿದ್ದಾರೆ. ಇಬ್ಬರ ಪ್ರೀತಿ ವಿಚಾರ ಈ ಪರಿ ವೈರಲ್ ಆಗಲು ಕಾರಣವಾಗಿದ್ದು ಕರಣ್ ಜೋಹರ್ 50ನೇ ವರ್ಷದ ಬರ್ತಡೇ ಪಾರ್ಟಿ. 

ನವ್ಯಾ ಮತ್ತು ಸಿದ್ಧಾಂತ್ ಇಬ್ಬರು ಪಾರ್ಟಿಗೆ ಒಟ್ಟಿಗೆ ಎಂಟ್ರಿ ಕೊಡದಿದ್ದರು ಒಳಗೆ ಇಬ್ಬರು ಒಟ್ಟಿಗೆ ಸಮಯ ಕಳೆದಿದ್ದರು. ಇಬ್ಬರು ಸಖತ್ ಡಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಅಲ್ಲಿಂದ ಸಿದ್ಧಾಂತ್ ಮತ್ತು ನವ್ಯಾ ನಡುವೆ ಏನೋ ನಡಿತಾ ಇದೆ ಎನ್ನುವ ಮಾತು ಕೇಲಿಬರುತ್ತಿತ್ತು. ಇದಾಗ ಇಬ್ಬರೂ ಶೇರ್ ಮಾಡಿರುವ ಫೋಟೋ ಪ್ರೀತಿ ವಿಚಾರಕ್ಕೆ ಮತ್ತಷ್ಟು ಪುಷ್ಟಿ ನೀಡುವಂತೆ ಆಗಿದೆ. 

Siddhant Chaturvedi ಜೊತೆ Amitabh ಮೊಮ್ಮಗಳು ಡೇಟಿಂಗ್?

ಇನ್ನು ಸಿದ್ಧಾಂತ್ ಸಿನಿಮಾ ವಿಚಾರಕ್ಕೆ ಬರುವುದಾರೆ ಸಿದ್ಧಾಂತ್ ಸದ್ಯ ಫೋನ್ ಭೂತ್‌ನಲ್ಲಿ ನಟಿಸುತ್ತಿದ್ದಾರೆ. ಕೊ ಗಯಿ ಹಮ್ ಕಹಾನ್ ಸಿನಿಮಾ ಕೂಡ ಸಿದ್ಧಾಂತ್ ಬಳಿ ಇದೆ. ಇನ್ನು ನವ್ಯಾ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?