ಅಮಿತಾಭ್ ಬಚ್ಚನ್ ಅವರು ನಡೆಸಿಕೊಡುವ ಪ್ರಸಿದ್ಧ ರಸಪ್ರಶ್ನೆ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ ಪತಿಯ ಹೊಸ ಸೀಸನ್‌ನ ಪ್ರಮೋಷನಲ್ ವಿಡಿಯೋ ಬಿಡುಗಡೆಯಾಗಿದೆ.
ಮುಂಬೈ (ಜೂ.13): ಅಮಿತಾಭ್ ಬಚ್ಚನ್ ಅವರು ನಡೆಸಿಕೊಡುವ ಪ್ರಸಿದ್ಧ ರಸಪ್ರಶ್ನೆ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ ಪತಿಯ ಹೊಸ ಸೀಸನ್‌ನ ಪ್ರಮೋಷನಲ್ ವಿಡಿಯೋ ಬಿಡುಗಡೆಯಾಗಿದೆ. ಇದರಲ್ಲಿ 2000 ರು. ನೋಟಿನಲ್ಲಿ ಜಿಪಿಎಸ್ ಟ್ರಾಕರ್ ಅಳವಡಿಸಲಾಗಿದೆ ಎಂಬ ಎಂಬ ಸುಳ್ಳು ಸುದ್ದಿಗೆ ಸಂಬಂಧಿಸಿದ ಚಿತ್ರಣವಿದ್ದು, ಅಮಿತಾಭ್ ‘ಯಾವುದೇ ಮೂಲದಿಂದ ಸುದ್ದಿಯನ್ನು ಸ್ವೀಕರಿಸುವಾಗ ಅದರ ಸತ್ಯಾ ಸತ್ಯತೆ ಪರಿಶೀಲಿಸಿ, ಸುಳ್ಳು ಸುದ್ದಿಯಿಂದ ಎಚ್ಚರವಾಗಿರಿ’ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವಿಡಿಯೋದಲ್ಲಿ ಅಮಿತಾಭ್ ಸ್ಪರ್ಧಿಯೊಬ್ಬರಿಗೆ ‘ಇವುಗಳಲ್ಲಿ ಯಾವುದು ಜಿಪಿಎಸ್ ತಂತ್ರಜ್ಞಾನ ಒಳಗೊಂಡಿದೆ?’ ಎಂದು ಪ್ರಶ್ನಿಸಿದ್ದಾರೆ. ‘ಟೈಪ್ ರೈಟರ್, ಟೀವಿ, ಉಪಗ್ರಹ ಹಾಗೂ 2000 ರು. ನೋಟು’ ಈ ನಾಲ್ಕು ಆಯ್ಕೆಗಳನ್ನು ನೀಡುತ್ತಾರೆ. ಆಗ ಸ್ಪರ್ಧಿಯು ಮುಗುಳ್ನಗುತ್ತ 2000 ರು. ನೋಟು ಎಂದು ಉತ್ತರಿಸುತ್ತಾರೆ. ಈ ಉತ್ತರದ ಸರಿ ಎಂದು ವಿಶ್ವಾಸವಿದೆಯೇ ಅಮಿತಾಭ್ ಎಂದು ಪ್ರಶ್ನಿಸಿದಾಗ ಆಕೆ ‘ನಾನೊಬ್ಬಳೇ ಅಲ್ಲ ಇಡೀ ದೇಶಕ್ಕೆ ಈ ಉತ್ತರ ಸರಿಯಾಗಿದೆ ಎಂದು ವಿಶ್ವಾಸವಿದೆ’ ಎಂದಿದ್ದಾಳೆ.
ಮಗಳ ಈ ಒಂದು ಮಾತಿನಿಂದ ನಟನೆಯಿಂದ ದೂರವುಳಿದ Jaya Bachchan
ಅಮಿತಾಭ್ ಸರಿಯಾದ ಉತ್ತರ ಉಪಗ್ರಹ ಎಂದಾಗಲೂ ಅದನ್ನು ನಂಬದ ಸ್ಪರ್ಧಿ ಅಮಿತಾಭ್ ಅವರಿಗೆ ‘ಸರ್, ನೀವು ತಮಾಷೆ ಮಾಡುತ್ತಿದ್ದೀರಾ. 2000 ರು. ನೋಟಿನಲ್ಲಿ ಜಿಪಿಎಸ್ ಅಳವಡಿಕೆ ಬಗ್ಗೆ ನಾನು ಸುದ್ದಿ ಕೇಳಿದ್ದೇನೆ’ ಎಂದು ವಾದಿಸುತ್ತಾಳೆ. ಈ ಹಿನ್ನೆಲೆಯಲ್ಲಿ ಅಮಿತಾಭ್ ಸುದ್ದಿಯ ಸತ್ಯಾ ಸತ್ಯತೆ ಪರಿಶೀಲಿಸದಿದ್ದರೆ, ನೀವು ಸ್ಪರ್ಧೆಯಲ್ಲಿ ಸೋಲುವ ಸಾಧ್ಯತೆಯಿದೆ ಎಂದು ಸ್ಪರ್ಧಿಗಳಿಗೆ ಎಚ್ಚರಿಸುತ್ತಾರೆ. ಸುಳ್ಳು ಸುದ್ದಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕುರಿತ ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಅಮಿತಾಬ್ ಬಚ್ಚನ್ ತದ್ರೂಪಿ ವಿಡಿಯೋ ವೈರಲ್
2016ರಲ್ಲಿ ನೋಟು ಅಮಾನ್ಯೀಕರಣ ಮಾಡಿ 2000 ರು. ಮುಖಬೆಲೆಯ ನೋಟನ್ನು ಸರ್ಕಾರ ಪರಿಚಯಿಸಿದಾಗ ಅವುಗಳಲ್ಲಿ ಜಿಪಿಎಸ್ ಟ್ರಾಕರ್ ಇರುವ ಚಿಪ್‌ಗಳನ್ನು ಅಳವಡಿಸಲಾಗಿದೆ ಎಂಬ ಸುಳ್ಳು ಸುದ್ದಿ ಹರಡಲಾಗಿತ್ತು. ಆದರೆ ಇಂತಹ ಯಾವುದೇ ತಂತ್ರಜ್ಞಾನ ನೋಟುಗಳಲ್ಲಿ ಅಳವಡಿಸಿಲ್ಲ ಎಂದು ಅಂದಿನ ಹಣಕಾಸು ಸಚಿವ ಅರುಣ ಜೇಟ್ಲಿ ಸ್ಪಷ್ಟಪಡಿಸಿದ್ದರು.
We all know that one person jo humein aisi unverified sansani khabrein sunata hai! Tag them in the comments and tell them that "Gyaan jahaan se mile bator lo, lekin pehle tatol lo." coming soon! Stay tuned! pic.twitter.com/Y2DgAyP3MH
— sonytv (@SonyTV)