Drugs Case: ನಟ ಶಕ್ತಿ ಕಪೂರ್ ಪುತ್ರ ಸಿದ್ದಾಂತ್ ಬೆಂಗಳೂರಿನಲ್ಲಿ ಅರೆಸ್ಟ್‌

Published : Jun 13, 2022, 10:19 AM ISTUpdated : Jun 13, 2022, 10:22 AM IST
Drugs Case: ನಟ ಶಕ್ತಿ ಕಪೂರ್ ಪುತ್ರ ಸಿದ್ದಾಂತ್ ಬೆಂಗಳೂರಿನಲ್ಲಿ ಅರೆಸ್ಟ್‌

ಸಾರಾಂಶ

ಬೆಂಗಳೂರಿನಲ್ಲಿ ಪಾರ್ಟಿ ಮಾಡುತ್ತಿದ್ದ ಬಾಲಿವುಡ್‌ ನಟ ಬಂಧನ. ಡ್ರಗ್ಸ್‌ ಸೇವಿಸಿದ್ದು ನಿಜವೇ?

ಬಾಲಿವುಡ್ ಖ್ಯಾತ ನಟ ಶಕ್ತಿ ಕಪೂರ್ ಪುತ್ರ ಸಿದ್ದಾಂತ್ ಕಪೂರ್ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಭಾನುವಾರ ಪಾರ್ಟಿ ಮಾಡುವಾಗ ಡ್ರಗ್ಸ್‌ ಸೇವಿಸುತ್ತಿದ್ದರು ಎಂದು ಪೊಲೀಸರು ಬಂಧಿಸಿದ್ದಾರೆ. 

ಎಂಜಿ ರಸ್ತೆಯ ಹೋಟೆಲ್‌ವೊಂದರಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿಯಲ್ಲಿ 50 ಮಂದಿ ಭಾಗಿಯಾಗಿದ್ದರು ಅವರಲ್ಲಿ 35 ವ್ಯಕ್ತಿಗಳ ಸ್ಯಾಂಪಲ್‌ನ ಲ್ಯಾಬ್‌ಗೆ ಕಳುಹಿಸಲಾಗಿತ್ತು. 35 ಸ್ಯಾಂಪಲ್‌ಗಳಲ್ಲಿ 6 ಸ್ಯಾಂಪಲ್ ಪಾಸಿಟಿವ್ ಬಂದಿದೆ ಅದರಲ್ಲಿ ನಟ ಸಿದ್ದಾಂತ್ ಕಪೂರ್ ಕೂಡ ಒಬ್ಬರು ಎನ್ನಲಾಗಿದೆ.  ಮೊದಲೇ ಡ್ರೆಗ್ಸ್‌ ಸೇವಿಸಿ ಪಾರ್ಟಿಗೆ ಬಂದಿರಬಹುದು ಇಲ್ಲವಾದರೆ ಪಾರ್ಟಿಗೆ ಬಂದು ಸೇವಿಸಿರಬೇಕು ಇದರ ಬಗ್ಗೆ ಸ್ಪಷನೆ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.  ಅಖೀಲ್ ಸೋನಿ, ಅಜೋದ್‌ ಸಿಂಗ್ ಪಂಜಾಬ್‌, ಅಖೀಲ್, ಅನಿ, ದರ್ಶನ ಸುರೇಶ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳೆಲ್ಲರು ಟೆಕ್ಕಿಗಳಾಗಿದ್ದು ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

2020ರಲ್ಲಿ ಬಿಡುಗಡೆಯಾದ ಬಕುಲ ವೆಬ್‌ ಸೀರಿಸ್‌ನಲ್ಲಿ ಚಿಂಟು ಪಾತ್ರದಲ್ಲಿ ಸಿದ್ಧಾರ್ಥ್‌ ಅಭಿನಯಿಸಿದ್ದಾರೆ. 'ಶೂಟೌಟ್ ಅಟ್ ವಡಾಲಾ', 'ಅಗ್ಲಿ, 'ಹಸೀನಾ ಪಾರ್ಕರ್', 'ಚೆಹ್ರೆ' ಸೇರಿದಂತೆ  7 ಸಿನಿಮಾಗಳಲ್ಲಿ ಸಿದ್ಧಾರ್ಥ್‌ ನಟಿಸಿದ್ದಾರೆ. 'ಭಾಗಂ ಭಾಗ್', 'ಚುಪ್ ಚುಪ್ ಕೆ', 'ಭೂಲ್ ಭುಲೈಯಾ', ಮತ್ತು 'ಧೋಲ್' ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. 

ನಿದ್ರಾಹೀನತೆಯಿಂದ ಹೊರಬರಲು ಗಾಂಜಾ ಸೇವನೆ ಕಲಿತಿದ್ದೆ: ಆರ್ಯನ್‌

ಸುಶಾಂತ್ ಸಿಂಗ್ ಆತ್ಮಹತ್ಯೆ ಬೆನ್ನಲೆ ಬಾಲಿವುಡ್‌ನಲ್ಲಿ ಡ್ರಗ್ಸ್ ಸೇವನೆ ಹೆಚ್ಚಿದೆ ಎಂದು ಮಾತುಗಳು ಕೇಳಿಬಂದಿತ್ತು. ಈ ವೇಳೆ ಅನೇಕ ಬಾಲಿವುಡ್‌ ಸೆಲೆಬ್ರಿಟಿಗಳನ್ನು ಪ್ರಶ್ನೆ ಮಾಡಲಾಗಿತ್ತು, ಸಿದ್ಧಾರ್ಥ್‌ ಸಹೋದರಿ ಶ್ರದ್ಧಾ ಕಪೂರ್‌ರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ವಿಚಾರಣೆ ಮಾಡಿತ್ತು. ಆದರೆ ಯಾವುದೂ ಗಣನೀಯವಾಗಿ ಸಾಬೀತಾಗಿಲ್ಲ.

ಶ್ರದ್ಧ ಕಪೂರ್‌, ಸಾರಾ ಅಲಿ ಖಾನ್, ದೀಪಿಕಾ ಪಡುಕೋಣೆರನ್ನು 2020ರ ಸೆಪ್ಟೆಂಬರ್‌ನಲ್ಲಿ ವಾಟ್ಸಪ್‌ ಚಾಟ್ ಆಧರಿತವಾಗಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ವಿಚಾರಣೆ ಮಾಡಿತ್ತು. ಡ್ರಗ್ಸ್‌ ಪ್ರಕರಣದಲ್ಲಿ ಸಿಲುಕಿಕೊಂಡಿದ್ದು ಮಾತ್ರ ಶಾರುಖ್‌ ಖಾನ್ ಪುತ್ರ ಆರ್ಯನ್ ಖಾನ್.

ಆರ್ಯನ್‌ ಖಾನ್‌ ಕ್ಲೀನ್‌ ಚಿಟ್:

ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್(Shah Rukh Khan) ಪುತ್ರ ಆರ್ಯನ್ ಖಾನ್(Aryan Khan) ಈ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಜೈನಿಂದ ಹೊರಬಂದ ಬಳಿಕವೂ ಆರ್ಯನ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇತ್ತೀಚಿಗಷ್ಟೆ ಈ ಪ್ರಕರಣದಿಂದ ಆರ್ಯನ್ ಖಾನ್‌ಗೆ ಎನ್ ಸಿ ಬಿ ಕ್ಲೀನ್ ಚಿಟ್ ಸಹ ನೀಡಿದೆ. 

ಇಂಡಿಯಾ ಟುಡೇ ಜೊತೆ ಮಾತನಾಡಿದ ಸಂಜಯ್ ಸಿಂಗ್, 'ಆರ್ಯನ್ ಖಾನ್ ನನ್ನ ಬಳಿ, ಏಜನ್ಸಿ ನನ್ನನ್ನು ಅಂತಾರಾಷ್ಟ್ರೀಯ ಡ್ರಗ್ ಡೀಲರ್ ಹಾಗೆ ನಡೆಸಿಕೊಳ್ಳುತ್ತಿದೆ ಎಂದು ಆರ್ಯನ್ ಕೇಳಿದ್ದರು' ಎಂದು ಬಹಿರಂಗ ಪಡಿಸಿದರು. 'ಸರ್, ನೀವು ನನ್ನನ್ನು ಅಂತಾರಾಷ್ಟ್ರೀಯ ಡ್ರಗ್ ಡೀಲರ್ ಹಾಗೆ ನಡೆಸಿಕೊಳ್ಳುತ್ತಿದ್ದೀರಾ, ಡ್ರಗ್ ಡೀಲ್‌ಗೆ ನಾನು ಹಣಕಾಸು ಒದಗಿಸುತ್ತೇನೆ ಎಂದು ಹೇಳುತ್ತಿದ್ದೀರಿ. ಈ ಎಲ್ಲಾ ಆರೋಪ ಅಸಂಬದ್ಧ ಅಲ್ಲವೇ?,  ನನ್ನನ್ನು ಬಂಧಿಸಿದ  ಆ ದಿನ ನನ್ನ ಬಳಿ ಯಾವುದೇ ಡ್ರಗ್ಸ್ ಇರಲಿಲ್ಲ' ಎಂದು ಆರ್ಯನ್ ಹೇಳಿದ್ದರು ಎಂದು ಸಂಜಯ್ ಸಿಂಗ್ ವಿವರಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?