ಶಾರುಖ್​ v/s ಪ್ರಭಾಸ್: ಮೇಲುಗೈ ಯಾರಿಗೆ? 'ಜವಾನ್'​ಗೆ 21 ದಿನಗಳ ಚಾಲೆಂಜ್​!

By Suvarna News  |  First Published Jul 13, 2023, 4:50 PM IST

ಶಾರುಖ್​ ಅವರ ಜವಾನ್​ ಮತ್ತು ಪ್ರಭಾಸ್​ ಅವರ ಸಲಾರ್ ಚಿತ್ರ ಬಿಡುಗಡೆಗೆ 21 ದಿನಗಳ ಅಂತರವಿದ್ದು, ಭಾರಿ ಪೈಪೋಟಿ ನಡೆಯಲಿದೆ. ಗೆಲುವು ಯಾರಿಗೆ ಎನ್ನುವುದು ಈಗಿರುವ ಪ್ರಶ್ನೆ.
 


ಶಾರುಖ್ ಖಾನ್ ಅಭಿನಯದ 'ಜವಾನ್' (Jawan) ಚಿತ್ರವು ಈ ಕ್ಷಣದಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ. ‘ಪಠಾಣ್’ ಚಿತ್ರದ ನಂತರ ಶಾರುಖ್ ಅವರ ಈ ವರ್ಷದ ಎರಡನೇ ಅತಿ ದೊಡ್ಡ ಚಿತ್ರ ಇದಾಗಿದೆ. ಈ ಚಿತ್ರವನ್ನು ದಕ್ಷಿಣದ ಹಿಟ್ ನಿರ್ದೇಶಕ ಅಟ್ಲಿ ನಿರ್ದೇಶಿಸಿದ್ದಾರೆ ಮತ್ತು ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ, ಯೋಗಿ ಬಾಬು ನಟಿಸಿದ್ದಾರೆ. ಚಿತ್ರದ ಮುನ್ನೋಟ ಮತ್ತು ಟ್ರೇಲರ್​ ಇದಾಗಲೇ ಬಿಡುಗಡೆಯಾಗಿದ್ದು ಸಕತ್​ ಹಿಟ್​ ಆಗಿವೆ.  ಇಂತಹ ಪರಿಸ್ಥಿತಿಯಲ್ಲಿ ಸೆಪ್ಟೆಂಬರ್ 7 ಶಾರುಖ್‌ಗೆ ತುಂಬಾ ವಿಶೇಷವಾಗಲಿದೆ. ಏಕೆಂದರೆ ಅದು ಜವಾನ್​ ಚಿತ್ರ ಬಿಡುಗಡೆಯಾಗಲಿದ್ದು,  ಚಿತ್ರ ಆರಂಭದ ದಿನವೇ ಬಂಪರ್ ಗಳಿಸುವ ನಿರೀಕ್ಷೆ ಹೊಂದಲಾಗಿದೆ.  ಆದರೆ ಶಾರುಖ್ ಅಭಿನಯದ ‘ಜವಾನ್’ ಚಿತ್ರ ಕಲೆಕ್ಷನ್ ದಾಖಲೆ ಮಾಡಲು ಕೇವಲ 21 ದಿನ ಮಾತ್ರ ಸಿಗಲಿದೆ ಎನ್ನುವುದು ನಿಮಗೆ ಗೊತ್ತಾ? ಅರ್ಥಾತ್​ 'ಜವಾನ್'​ಗೆ ಇರೋದು 21 ದಿನಗಳ ಚಾಲೆಂಜ್​. ಈ 21 ದಿನಗಳಲ್ಲಿ ಎಷ್ಟು ಕಲೆಕ್ಷನ್​ ಆಗುತ್ತೋ ಅಷ್ಟನ್ನೂ ಕಲೆಕ್ಟ್​ ಮಾಡಬೇಕಾದ ಅನಿವಾರ್ಯತೆಯೂ ಇದೆ.

ಹೌದು! ಅಟ್ಲಿ ಕುಮಾರ್ (Atly Kumar) ನಿರ್ದೇಶನದ 'ಜವಾನ್' ಚಿತ್ರಕ್ಕೆ ಆರಂಭಿಕವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಾರುಖ್ ಅವರ ವಿಭಿನ್ನ ಅವತಾರವನ್ನು ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. ಚಿತ್ರದ ಸ್ಟಾರ್‌ಕಾಸ್ಟ್ ಕೂಡ ತುಂಬಾ ಪ್ರಭಾವಶಾಲಿಯಾಗಿದೆ. ಹೀಗಿರುವಾಗ ಶಾರುಖ್ ಅಭಿನಯದ ‘ಜವಾನ್’ ಸಿನಿಮಾ ಹಿರಿತೆರೆಯಲ್ಲಿ ಅವರ ‘ಪಠಾಣ್’ ಚಿತ್ರಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಲಿದೆ ಎಂಬ ನಂಬಿಕೆ ಇದೆ. ಮೊದಲ ದಿನದ ಕಲೆಕ್ಷನ್ 100 ಕೋಟಿ ದಾಟುವ ಮಾತುಗಳು ಕೇಳಿ ಬರುತ್ತಿವೆ. ಅದೇ ಸಮಯದಲ್ಲಿ, ಬಿಡುಗಡೆಯಾದ ಮೊದಲ ವಾರದಲ್ಲಿ, ಹೊಸ ದಾಖಲೆಗಳನ್ನು ಸೃಷ್ಟಿಸಲು ಚಿತ್ರದ ಪರವಾಗಿ ಹಕ್ಕುಗಳನ್ನು ಪಡೆಯಲಾಗುತ್ತಿದೆ. ಇದೆಲ್ಲದರ ನಡುವೆ ದಕ್ಷಿಣದ ದೊಡ್ಡ ನಟರೂ ಶಾರುಖ್‌ಗೆ ಪೈಪೋಟಿ ನೀಡಲು ಸರದಿಯಲ್ಲಿದ್ದಾರೆ.

Tap to resize

Latest Videos

JAWAN ಪ್ರಿವ್ಯೂ ಬೆನ್ನಲ್ಲೇ ನಯನತಾರಾ ಪತಿಗೆ ಶಾರುಖ್​ ಖಾನ್​ ಖಡಕ್​ ವಾರ್ನಿಂಗ್​!

ಇದಕ್ಕೆ ಕಾರಣ, ಸೆಪ್ಟೆಂಬರ್  7ರಂದು 'ಜವಾನ್' ಮೂಲಕ ಶಾರುಖ್ ಖಾನ್ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದ್ದರೆ,  ಅದೇ ಹೊತ್ತಿಗೆ ತಿಂಗಳಾಂತ್ಯಕ್ಕೆ ಅಂದರೆ ಸೆಪ್ಟೆಂಬರ್ 28ಕ್ಕೆ ಪ್ರಭಾಸ್ ನಟನೆಯ ‘ಸಲಾರ್’ (Saalar) ಚಿತ್ರ ಬಿಡುಗಡೆಯಾಗಲಿದೆ.  ಇದು ಕೂಡ ಭರ್ಜರಿ ಚಿತ್ರವಾಗಿದ್ದು ಬ್ಲಾಕ್​ಬಸ್ಟರ್​ ಆಗುವ ಎಲ್ಲಾ ಮುನ್ಸೂಚನೆಯನ್ನು ಇದಾಗಲೇ ಪಡೆದುಕೊಂಡಿದೆ. ಸಾಲಾರ್​ಗೆ ಸಕತ್​ ರೆಸ್​ಪಾನ್ಸ್​ ಸಿಗುತ್ತಿದೆ. ಸಲಾರ್ ಚಿತ್ರದ ಇತ್ತೀಚಿನ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಜುಲೈ 7 ರಂದು 5.12 ನಿಮಿಷಕ್ಕೆ ಟೀಸರ್ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕ್ಷಣದಿಂದಲೇ ಟೀಸರ್ ವೈರಲ್ ಆಗಿದೆ. ಇದು ಹೆಚ್ಚು ವೀಕ್ಷಕರು ನೋಡಿದ ಹೊಸ ದಾಖಲೆಯನ್ನು ಮಾಡಿದೆ. ಹೀಗಾಗಿ ಶಾರುಖ್ ಅಭಿನಯದ 'ಜವಾನ್' ಚಿತ್ರ ಗಳಿಕೆಗೆ ಕೇವಲ 21 ದಿನಗಳು ಮಾತ್ರ. ಪ್ರಶಾಂತ್ ನೀಲ್ ಅಭಿನಯದ 'ಸಲಾರ್' ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ಕ್ರೇಜ್ ಇದೆ. ಈಗಾಗಲೇ ಚಿತ್ರದ ಹಕ್ಕುಗಳು ಕೋಟಿಗಟ್ಟಲೆ ಮಾರಾಟವಾದ ಬಗ್ಗೆ ವರದಿಯಾಗಿದೆ. ಅಲ್ಲದೇ ಈ ಚಿತ್ರವನ್ನು ಪ್ರಭಾಸ್ ಅವರ ಕಮ್ ಬ್ಯಾಕ್ ಸಿನಿಮಾ ಎಂದು ಪರಿಗಣಿಸಲಾಗುತ್ತಿದೆ.

'ಆದಿಪುರುಷ' ನಂತರ ಪ್ರಭಾಸ್‌ನ ಎಲ್ಲಾ ನಿರೀಕ್ಷೆಗಳು 'ಸಲಾರ್' ಮೇಲೆ ನಿಂತಿದೆ. ಚಿತ್ರದಲ್ಲಿ ಅವರೊಂದಿಗೆ ಶೃತಿ ಹಾಸನ್, ಪೃಥ್ವಿರಾಜ್ ಸುಕುಮಾರನ್ ಮತ್ತು ಜಗಪತಿ ಬಾಬು (Jagapathi Babu) ಕಾಣಿಸಿಕೊಳ್ಳಲಿದ್ದಾರೆ. ಆದ್ದರಿಂದ ಸೆಪ್ಟೆಂಬರ್​ನತ್ತ ಸಿನಿ ಪ್ರಿಯರ ದೃಷ್ಟಿ ನೆಟ್ಟಿದೆ. ಶಾರುಖ್​ ಮತ್ತು ಪ್ರಭಾಸ್​ ಫ್ಯಾನ್ಸ್​ ತಮ್ಮ ನೆಚ್ಚಿನ ನಾಯಕನ ಚಿತ್ರವೇ ದಾಖಲೆಯಾಗಲಿ ಎಂದು ಹಾರೈಸುತ್ತಿದ್ದಾರೆ. ಆದ್ದರಿಂದ ಯಾರು ಮೇಲುಗೈ ಸಾಧಿಸುತ್ತಾರೋ ಕಾದು ನೋಡಬೇಕಿದೆ. 

ಭರ್ಜರಿ ವೀಕ್ಷಣೆಕಂಡ 'ಸಲಾರ್' ಟೀಸರ್: ಇದೇ ಖುಷಿಗೆ ಮತ್ತೊಂದು ಅಪ್‌ಡೇಟ್ ನೀಡಿದ ಹೊಂಬಾಳೆ ಫಿಲ್ಮ್ಸ್

click me!