ವಿಜಯ್​ ದೇವರಕೊಂಡ ಮದ್ವೆಯಾದ್ಮೇಲೆ ಪ್ರೀತಿ, ಪ್ರೇಮ, ರೊಮ್ಯಾನ್ಸ್​ ಹೀಗಿರತ್ತಂತೆ!

By Suvarna News  |  First Published Jul 13, 2023, 4:38 PM IST

ನಟ ವಿಜಯ್​ ದೇವರಕೊಂಡ ಖುಷಿ ಚಿತ್ರದ ಹಾಡಿನ ಬಿಡುಗಡೆ ಸಂದರ್ಭದಲ್ಲಿ ತಮ್ಮ ವೈವಾಹಿಕ ಜೀವನದ ಪ್ರೀತಿ-ಪ್ರೇಮದ ಕುರಿತು ಮಾತನಾಡಿದ್ದಾರೆ. ಅವರು ಹೇಳಿದ್ದೇನು?
 


ದಕ್ಷಿಣ ಭಾರತ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್​ ಎನಿಸಿರುವ ವಿಜಯ್​ ದೇವರಕೊಂಡ (Vijay Deverakonda) ಅವರು ಈಗ‘ಖುಷಿ’ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.  ಈ ಚಿತ್ರದ ಮೊದಲ ಹಾಡು ಕಳೆದ ಮೇ 9ರಂದು ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಿತ್ತು. ಹುಟ್ಟುಹಬ್ಬಕ್ಕೆ ಗಿಫ್ಟ್​ ಆಗಿ ನೀಡಲಾಗಿತ್ತು. ಅದಾದ ಬಳಿಕ ಒಂದೊಂದೇ ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. 'ಲೈಗರ್‌' ಸಿನಿಮಾ ಸೋಲಿನಿಂದ ನಟ ವಿಜಯ್ ದೇವರಕೊಂಡ ಇನ್ನು ಹೊರಬಂದಿಲ್ಲ. ಇದರ ಬೆನ್ನಲ್ಲೇ ಬಹು ನಿರೀಕ್ಷಿತ ಖುಷಿ (Khushi) ಹಾಡುಗಳನ್ನು ರಿಲೀಸ್​ ಮಾಡಲಾಗುತ್ತಿದೆ. ಈ ಸಮಯದಲ್ಲಿ ವಿಜಯ್ ದೇವರಕೊಂಡ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಲೈಗರ್ ಸಿನಿಮಾ ಸೋಲಿನ ಬಳಿಕ ಸಮಂತಾ ಜೊತೆ ಖುಷಿ ಸಿನಿಮಾದಲ್ಲಿ ಬ್ಯುಸಿ ಆಗಿರುವ ನಟ ವಿಜಯ್ ದೇವರಕೊಂಡ ತಮ್ಮ ಮದುವೆ ಬಗ್ಗೆ ಮಾತಾಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಜೊತೆ  ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದ್ದರೂ, ಈ ಜೋಡಿ ಮಾತ್ರ ತುಟಿಕ್​ ಪಿಟಿಕ್​ ಅನ್ನಲಿಲ್ಲ. ಆದರೆ ಇದರ ನಡುವೆಯೇ ವಿಜಯ್ ದೇವರಕೊಂಡ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಒಂದೊಮ್ಮೆ ನಾನು ಮದುವೆಯಾದರೆ ನನ್ನ ವೈವಾಹಿಕ ಜೀವನ ಹೀಗಿರಬೇಕೆಂದು ಉದಾಹರಣೆಯೊಂದನ್ನು ಸಹ ನೀಡಿದ್ದಾರೆ.

ಶಿವ ನಿರ್ವಾಣ್ ನಿರ್ದೇಶನದ ಖುಷಿ ಚಿತ್ರಕ್ಕೆ ಹೇಶಮ್ ಅಬ್ದುಲ್ ವಹಾಬ್ (Hesham Abdul Vahab) ಮ್ಯೂಸಿಕ್ ನೀಡಿದ್ದಾರೆ. ಖುಷಿ ಸಿನಿಮಾದ ಮೇಲೆ ವಿಜಯ್ ಹಾಗೂ ಸಮಂತಾ ಅಭಿಮಾನಿಗಳಿಗೆ ತುಂಬಾ ಭರವಸೆ ಇದೆ. ಎರಡನೇ ಹಾಡು ಯೂಟ್ಯೂಬ್​ನಲ್ಲಿ ಬಿಡುಗಡೆ ಆಗಿದೆ. ‘ಆರಾಧ್ಯ’ ಎಂದು ಪ್ರಾರಂಭವಾಗುವ ಹಾಡು ಮಧುರವಾಗಿದೆ.  ಸದ್ಯಕ್ಕೆ ವಿಡಿಯೋ ಸಹಿತ ಹಾಡಿನ ಬದಲಿಗೆ ಲಿರಿಕ್ಸ್ ಸಹಿತ ಕೆಲವಷ್ಟೆ ವಿಡಿಯೋ ತುಣುಕುಗಳನ್ನು ಒಳಗೊಂಡ ಹಾಡನ್ನು ಬಿಡುಗಡೆ ಮಾಡಲಾಗಿದೆ. ಸದ್ಯ ಸಿದ್ದ್ ಶ್ರೀರಾಮ್ ಹಾಗೂ ಚಿನ್ಮಯಿ ಶ್ರೀಪಾದ ಹಿನ್ನೆಲೆ ಗಾಯಕರಾಗಿದ್ದಾರೆ.  ಹೊಸದಾಗಿ ಮದುವೆಯಾದ ನವಜೋಡಿಯ ಪ್ರೀತಿ, ಪ್ರೇಮ, ಸರಸ ಸಲ್ಲಾಪವನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರು ಲಿರಿಕ್ಸ್ ಬರೆದಿದ್ದಾರೆ. 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಖುಷಿ' ಸಿನಿಮಾ ರಿಲೀಸ್ ಆಗ್ತಿದೆ. ಕನ್ನಡದಲ್ಲಿ ಈ ಹಾಡಿಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.

Tap to resize

Latest Videos

JAWAN ಪ್ರಿವ್ಯೂ ಬೆನ್ನಲ್ಲೇ ನಯನತಾರಾ ಪತಿಗೆ ಶಾರುಖ್​ ಖಾನ್​ ಖಡಕ್​ ವಾರ್ನಿಂಗ್​!

ಈ ಹಾಡಿನ ಕುರಿತು ಮಾತನಾಡುವ ಸಂದರ್ಭದಲ್ಲಿ ವಿಜಯ್​ ಅವರು ತಮ್ಮ ಮದುವೆಯ ಬಗ್ಗೆಯೂ ವಿವರಿಸಿದ್ದಾರೆ. ಈ ಹಾಡಿನಲ್ಲಿ ಹೊಸದಾಗಿ ಮದುವೆಯಾಗಿರುವ ಜೋಡಿಯ ಮೊದಲ ಒಂದು ವರ್ಷದ ಸಮಯದಲ್ಲಿ ನಡೆಯುವ ಸರಸ, ತುಂಟಾಟ, ರೊಮ್ಯಾನ್ಸ್ (Romance) ಅನ್ನು   ತೋರಿಸಲಾಗಿದೆ. ಇದನ್ನೇ ಉದಾಹರಣೆಯಾಗಿ ನೀಡಿರುವ ವಿಜಯ್​, ಒಂದೊಮ್ಮೆ ನಾನು ಮದುವೆ ಆದರೆ ನನ್ನ ವೈವಾಹಿಕ ಜೀವನ ಹೀಗೆಯೇ ಇರಬೇಕು ಅಂದುಕೊಳ್ಳುತ್ತೇನೆ ಎಂದಿದ್ದಾರೆ. ನನಗೆ ಮದುವೆ ಆಗಿಲ್ಲ, ನನಗೆ ಮದುವೆ ಆಗದೇ ಇರಬಹುದು ಆದರೆ ಆ ಹಾಡಿನಲ್ಲಿ ತೋರಿಸಲಾಗಿರುವ ಹಲವು ದೃಶ್ಯಗಳು ನನ್ನ ನಿಜ ಜೀವನದಲ್ಲಿ ನಡೆದಿರುವಂಥಹದ್ದು. ನಾನು ಅನುಭವಿಸಿರುವ ದೃಶ್ಯಗಳನ್ನೇ ಸೇರಿಸಿ ಆ ಹಾಡು ಮಾಡಲಾಗಿದೆ ಎಂದಿದ್ದಾರೆ. ಈ ಎನ್ನುವ ಮೂಲಕ ರಿಯಲ್ ಲವ್ ಸ್ಟೋರಿ ಬಗ್ಗೆ ಸುಳಿವು ನೀಡಿದ್ದಾರೆ.  ವಿಜಯ್ ದೇವರಕೊಂಡ ಮಾತು ಕೇಳಿದ ಅಭಿಮಾನಿಗಳು ನಟ ಶೀಘ್ರದಲ್ಲೇ ಹಸೆಮಣೆ ಏರುವುದು ಪಕ್ಕಾ ಅಂತಿದ್ದಾರೆ.

‘ಖುಷಿ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆಗೆ ಸಮಂತಾ (Samanta) ನಾಯಕಿಯಾಗಿ ನಟಿಸಿದ್ದಾರೆ. ಬಹಳ ಪ್ರೀತಿಸುವ ಇಬ್ಬರು ಪರಸ್ಪರ ಮದುವೆಯಾಗಿ ಸುಖ ಸಂಸಾರ ಸಾಗಿಸುವ ಆ ಬಳಿಕ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ಅದನ್ನು ಆ ಜೋಡಿ ಹೇಗೆ ಹ್ಯಾಂಡಲ್ ಎಂಬುದರ ಕುರಿತಾದ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಮಂತಾ ಅನಾರೋಗ್ಯದ ಕಾರಣ ಸಿನಿಮಾದ ಚಿತ್ರೀಕರಣ ತಡವಾಗಿದೆ. ಆದರೆ ಇದೀಗ ಚಿತ್ರೀಕರಣ ಮುಗಿದಿದ್ದು ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ರಾತ್ರೋರಾತ್ರಿ ದಳಪತಿ ವಿಜಯ್​ ರಹಸ್ಯ ಮೀಟಿಂಗ್​: ರಾಜಕೀಯ ಎಂಟ್ರಿ ಫಿಕ್ಸ್? ನಟನೆಗೆ ಬ್ರೇಕ್​​?

click me!