ನಾನು ಗಂಡಸರ ಜತೆ ಕಾಲ ಕಳೆಯುವುದಿಲ್ಲ; ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್

By Shriram Bhat  |  First Published Dec 2, 2023, 6:27 PM IST

ಶಾರುಖ್ ಖಾನ್ ಮಾತಿಗೆ ಅಲ್ಲಿದ್ದ ಪ್ರೇಕ್ಷಕರು, ನಿರೂಪಕಿ ಎಲ್ಲರೂ ನಗೆಗಡಲಿನಲ್ಲಿ ತೇಲಿದ್ದಾರೆ. ಅಂದಹಾಗೆ, ನಟ ಶಾರುಖ್ ಖಾನ್ ಈ ವರ್ಷ, 2023ರಲ್ಲಿ ಪಠಾನ್ ಮತ್ತು ಜವಾನ್ ಸಿನಿಮಾಗಳು ಸೂಪರ್ ಹಿಟ್ ಆದ ಹಿನ್ನೆಲೆಯಲ್ಲಿ ಬಾಲಿವುಡ್‌ನ ಸೂಪರ್ ಸ್ಟಾರ್ ಪಟ್ಟದಲ್ಲಿ ಕುಳಿತಿದ್ದಾರೆ.


ಬಾಲಿವುಡ್ ನಟ ಶಾರುಖ್ ಖಾನ್ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ನಿರೂಪಕಿ 'ನೀವು ಮಹಿಳೆಯರ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದೀರಿ' ಎಂದು ಕೇಳುತ್ತಾಳೆ. ಆ ವೇಳೆ ಸ್ವಲ್ಪ ಗಲಿಬಿಲಿಗೊಂಡಂತೆ ಕಂಡುಬಂದ ನಟ ಶಾರುಖ್, 'ನಾನು ನಾನು ಪುರುಷರೊಂದಿಗೆ ಕಾಲ ಕಳೆಯುವುದಿಲ್ಲ' ಎಂದಿದ್ದಾರೆ. ಶಾರುಖ್ ಉತ್ತರ ಕೇಳಿ ಅಲ್ಲಿ ನೆರೆದಿದ್ದವರ ಜತೆ ನಿರೂಪಕಿ ಕೂಡ ಅಚ್ಚರಿಗೊಂಡರು. ಜತೆಗೆ, 'ಇಂದು ನೀವು ಪುರುಷರೊಂದಿಗೇ ಕಾಲ ಕಳೆದಿದ್ದೀರಿ' ಎಂದೂ ಕಾಲೆಳೆದಿದ್ದಾರೆ. 

ಬಳಿಕ ನಟ ಶಾರುಖ್ ಖಾನ್ ತಾವು ಹೇಳಿದ ಮಾತಿಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ. 'ನಾನು ಯಾಕೆ ಹಾಗೆ ಹೇಳಿದೆ ಎಂದರೆ 'ನಾನು 14 ವರ್ಷ ವಯಸ್ಸಿನ ಹುಡುಗನಾಗಿದ್ದಾಗಲೇ ನನ್ನ ತಂದೆ ತೀರಿಕೊಂಡರು. ಬಳಿಕ ನಾನು ನನ್ನ ಅಜ್ಜಿ, ಹಾಗೂ ಅಮ್ಮನ ಆಸರೆಯಲ್ಲಿ ಬೆಳೆದೆ. ನನ್ನ ಅಮ್ಮನಿಗೆ ಸಹೋದರರು ಇರಲಿಲ್ಲ. ಅಲ್ಲಿಯೂ ನನಗೆ ಹತ್ತಿರದ ಗಂಡಸರು ಎಂಬ ಸಂಬಂಧಿಕರು ಇರಲಿಲ್ಲ. ನನ್ನ ಸಹೋದರಿಗೆ ಮದುವೆಯಾಗಿಲ್ಲ, ಅವಳು ನಮ್ಮೊಟ್ಟಿಗೇ ಇರುತ್ತಾಳೆ. 

Tap to resize

Latest Videos

ಲಂಡನ್‌ನಲ್ಲಿ ಸ್ನೇಹಿತೆಯರನ್ನು ಭೇಟಿಯಾದ ದೀಪಿಕಾ ಪಡುಕೋಣೆ; ಕ್ಯಾಮೆರಾಗೆ ಬಿಂದಾಸ್ ನಗೆ ಬೀರಿದ ಸುಂದರಿ!

ನನ್ನಜ್ಜಿ ತೀರಿಕೊಂಡ ಮೇಲೆ ನನ್ನಮ್ಮನೇ ನನಗೆ ಸರ್ವಸ್ವ ಆಗಿದ್ದರು. ಬಳಿಕ ಹೆಂಡತಿ, ಮಗಳೊಂದಿಗೆ ನನ್ನ ಆತ್ಮೀಯತೆ ಬೆಳೆಯಿತು. ಈ ಎಲ್ಲ ಕಾರಣಗಳಿಂದ ನನಗೆ ಗಂಡಸರ ಜತೆ ಹೆಚ್ಚು ಆತ್ಮೀಯತೆ ಬೆಳೆಯಲೇ ಇಲ್ಲ. ನಾನು ನನ್ನ ಜೀವನದ ಬಹುಪಾಲು ವೇಳೆ ಮಹಿಳೆಯರೊಂದಿಗೇ ಕಳೆದಿದ್ದೇನೆ. ನಾನು ನಟನಾದಮೇಲೆ ಸಹಜವಾಗಿಯೂ ನನ್ನ ಸಿನಿಮಾಗಳನ್ನು ವೀಕ್ಷಿಸುವವರು ಮಹಿಳೆಯರೇ ಆಗಿದ್ದಾರೆ. ಆದ್ದರಿಂದ ನಾನು ಈ ಪ್ರಶ್ನೆಗೆ ಉತ್ತರ ಹೇಳಬೇಕು ಎಂದರೆ, 'ನಾನು ಪುರುಷರೊಟ್ಟಿಗೆ ಕಾಲ ಕಳೆದೇ ಇಲ್ಲ' ಎಂದಿದ್ದಾರೆ. 

ಮೈಸೂರಿನಲ್ಲಿ ಪುಷ್ಪಾ 2 ಶೂಟಿಂಗ್ ಕ್ಯಾನ್ಸಲ್; ಇದಕ್ಕೆಲ್ಲಾ ಕಾರಣ ಅಲ್ಲು ಅರ್ಜುನ್!

ಶಾರುಖ್ ಖಾನ್ ಮಾತಿಗೆ ಅಲ್ಲಿದ್ದ ಪ್ರೇಕ್ಷಕರು, ನಿರೂಪಕಿ ಎಲ್ಲರೂ ನಗೆಗಡಲಿನಲ್ಲಿ ತೇಲಿದ್ದಾರೆ. ಅಂದಹಾಗೆ, ನಟ ಶಾರುಖ್ ಖಾನ್ ಈ ವರ್ಷ, 2023ರಲ್ಲಿ ಪಠಾನ್ ಮತ್ತು ಜವಾನ್ ಸಿನಿಮಾಗಳು ಸೂಪರ್ ಹಿಟ್ ಆದ ಹಿನ್ನೆಲೆಯಲ್ಲಿ ಬಾಲಿವುಡ್‌ನ ಸೂಪರ್ ಸ್ಟಾರ್ ಪಟ್ಟದಲ್ಲಿ ಕುಳಿತಿದ್ದಾರೆ. ಹಲವು ವರ್ಷಗಳ ಕೆಟ್ಟಕಾಲಗಳನ್ನು ಕಳೆದ ಬಳಿಕ ಶಾರುಖ್ ವೃತ್ತಿ ಬದುಕಿನಲ್ಲಿ ಮತ್ತೆ ಬೆಳಕು ಮಾಡಿದೆ. ಕಳೆದ 4-5 ವರ್ಷಗಳಿಂದ ನಟ ಶಾರುಖ್ ಖಾನ್ ನಟಿಸಿದ್ದ  ಚಿತ್ರಗಳೆಲ್ಲವೂ ತೋಪೆದ್ದು ಹೋಗಿದ್ದವು. ತಾವು ಇನ್ನು ನಟನೆಯಿಂದಲೇ ದೂರ ಸರಿಯುವುದಾಗಿ ಕೂಡ ಶಾರುಖ್ ಹೇಳಿಕೊಂಡಿದ್ದರು. ಈಗ ಜೀವನದಲ್ಲಿ ಮತ್ತೆ ನೆಮ್ಮದಿ ಕಾಣತೊಡಗಿದ್ದಾರೆ. 

click me!