
ಬಾಲಿವುಡ್ ನಟ ಸಲ್ಮಾನ್ ಖಾನ್ ನಟಿ ಐಶ್ವರ್ಯಾ ರೈ ಅವರನ್ನು ಇನ್ನೂ ಮರೆತಿಲ್ಲ, ಈಗಲೂ ಅವರನ್ನು ಮನಸ್ಸಿನಲ್ಲಿ ಲವ್ ಮಾಡುತ್ತಿದ್ದಾರೆ ಎಂಬುದು ಎಷ್ಟೋ ವೇಳೆ ಸ್ಪಷ್ಟವಾಗಿ ಗೋಚರಿಸುತ್ತದೆ. ಸಲ್ಮಾನ್ ಖಾನ್ ವೇದಿಕೆಯಲ್ಲಿ ಇರುವಾಗ ಎಲ್ಲವನ್ನೂ ಮರೆತು ಚೆನ್ನಾಗಿ ಡಾನ್ಸ್ ಮಾಡುತ್ತಾರೆ, ಕ್ಯಾಮೆರಾ ಮುಂದೆ ಅದ್ಭುತವಾಗಿ ನಟಿಸುತ್ತಾರೆ. ಆದರೆ, ಐಶ್ವರ್ಯಾ ರೈ ವಿಷಯವನ್ನು ಯಾರಾದರೂ ಸಂದರ್ಶನದಲ್ಲಿ ಕೆದಕಿದಾಗ ಸಲ್ಲೂ ಕಕ್ಕಾಬಿಕ್ಕಿಯಾಗುತ್ತಾರೆ. ಕಾರಣ, ಅವರಿನ್ನೂ ಐಶ್ವರ್ಯಾ ರೈ ಅನ್ನು ಮರೆತಿಲ್ಲ.
ಸಲ್ಲೂ ಭಾಯ್ ಅಂದ್ರೆ ಅವರು ಬಾಲಿವುಡ್ ಸೂಪರ್ ಸ್ಟಾರ್‌ಗಳಲ್ಲಿ ಒಬ್ಬರು ಎಂಬುದು ಜಗತ್ತಿಗೇ ಗೊತ್ತು. ಆದರೆ, ಅವರಿನ್ನೂ ಮದುವೆಯಾಗಿಲ್ಲ. ಕಾರಣ, ಅವರು ವೃತ್ತಿಜೀವನದಲ್ಲಿ ಸಹನಟಿಯರಾಗಿ ಬಂದ ಅನೇಕ ನಟಿಯರನ್ನು ಲವ್ ಮಾಡಿದ್ದಾರೆ. ಆದರೆ ಯಾವುದೂ ವರ್ಕೌಟ್ ಆಗಿಲ್ಲ. ಅದರಲ್ಲೂ ನಟಿ ಐಶ್ವರ್ಯಾ ರೈ ಮೇಲೆ ಸಲ್ಲೂ ತಮ್ಮ ಪ್ರಾಣವನ್ನೇ ಇಟ್ಟುಕೊಂಡಿದ್ದರು. ಅನೇಕ ವರ್ಷಗಳಷ್ಟು ಕಾಲ ಸಲ್ಲೂ ಐಶ್ವರ್ಯಾ ರೈ ಅವರನ್ನು ಲವ್ ಮಾಡುತ್ತಾ ಇದ್ದರು.
ಅಪ್ಪನಿಂದ ದೂರವಿರಲು ಮನೆ ಬಿಟ್ಟು ಮುಂಬೈ ಸೇರಿಕೊಂಡಿದ್ದೆ, ಈಗ ಮಗನನ್ನು ಬಿಟ್ಟಿರಲು ನನ್ನಿಂದ ಸಾಧ್ಯವಿಲ್ಲ: ವಿನಯ್ ಗೌಡ
ಆದರೆ, ಅದೇನಾಯಿತೋ ಏನೋ1 ನಟಿ ಐಶ್ವರ್ಯಾ ರೈಗೆ ಓಡಾಡಲೂ ತೊಂದರೆ ಕೊಡುವಷ್ಟರ ಮಟ್ಟಿಗೆ ಸಲ್ಲು ಲವ್ ಮಾಡತೊಡಗಿದ್ದರು ಎನ್ನಲಾಗಿದೆ. ಏಕೆಂದರೆ, ಸ್ವತಃ ಐಶ್ವರ್ಯಾ ರೈ ಸಲ್ಮಾನ್ ವಿರುದ್ಧ ತಿರುಗಿ ಬಿದ್ದರು. ನಟ ಸಲ್ಮಾನ್ ಖಾನ್ ತಮಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ಒಮ್ಮೆ ಐಶೂ ಪೊಲೀಸ್ ಕಂಪ್ಲೇಂಟ್ ಸಹ ಕೊಟ್ಟಿದ್ದರು. ಆ ಬಳಿಕ ಸಲ್ಲು-ಐಶ್ ಸಂಬಂಧ ನಿಧಾನವಾಗಿ ಹದಗೆಡುತ್ತಾ ಬಂತು. ಕೊನೆಗೆ ಒಮ್ಮೆ ಅವರಿಬ್ಬರ ಸಂಬಂಧ ಕೊನೆಯಾಯಿತು.
ಬಾಲಿವುಡ್ ತಾರೆಯರ ಜೊತೆ ನವರಾತ್ರಿ ಪೂಜೆಯಲ್ಲಿ ಭಾಗಿಯಾದ ನಟಿ ಪ್ರಣೀತಾ ಸುಭಾಷ್
ಸಲ್ಲೂ ಬಿಟ್ಟು ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾದ ಮಾಜಿ ವಿಶ್ದವ ಸುಂದರಿ, ನಟಿ ಐಶ್ವರ್ಯಾ ರೈ ಈಗ ಸುಂದರ ಸಂಸಾರ ನಡೆಸುತ್ತಿದ್ದಾರೆ. ಆರಾಧ್ಯಾ ಹೆಸರಿನ ಹೆಣ್ಣು ಮಗು ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಮುದ್ದಿನ ಮಗಳಾಗಿ ಬೆಳೆಯುತ್ತಿದ್ದಾಳೆ. ಆದರೆ ಸಲ್ಮಾನ್ ಖಾನ್ ಐಶೂ ಬಿಟ್ಟಮೇಲೆ ನಟಿ ಕತ್ರಿನಾ ಕೈಫ್ ಜತೆ ಲವ್-ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗುತ್ತಿತ್ತು. ಆದರೆ, ಅದೂ ಕೂಡ ಕೈಕೊಟ್ಟು, ಕತ್ರಿನಾ ವಿಕ್ಕಿ ಕೌಶಲ್ ಅವರನ್ನು ಮದುವೆಯಾಗಿದ್ದಾರೆ. ಆದರೆ, ಸಲ್ಮಾನ್ ಖಾನ್ ಮಾತ್ರ 50 ವರ್ಷ ದಾಟಿದ್ದರೂ ಇನ್ನೂ ಮದುವೆಯಾಗಿಲ್ಲ. ಕಾರಣವೇನು ಎಂಬುದು ಅವರಿಗೇ ಗೊತ್ತು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.