ಮುಂಬೈನಲ್ಲಿ ಈ ಬಾರಿ ಕೂಡ ನವರಾತ್ರಿ ಹಬ್ಬವನ್ನು ಸ್ಪೆಷಲ್ ಆಗಿ ಅಲ್ಲಿ ಆಚರಿಸಲಾಗಿದ್ದು, ನಟಿ ಪ್ರಣೀತಾ ಅಲ್ಲಿ ಅಜಯ್ ದೇವಗನ್ ಸೇರಿದಂತೆ ಹಲವು ಸ್ಟಾರ್ ನಟನಟಿಯರ ಜತೆ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ನವರಾತ್ರಿ ಸಂಭ್ರಮದಲ್ಲಿ ಖುಷಿಖುಷಿಯಾಗಿ ಎಂಜಾಯ್ ಮಾಡಿದ ನಟಿ ಪ್ರಣೀತಾ ಅದನ್ನು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ.
ಕನ್ನಡವೂ ಸೇರಿದಂತೆ ಹಲವು ಸೌತ್ ಇಂಡಿಯನ್ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ನಟಿ ಪ್ರಣೀತಾ ಸುಭಾಷ್, ಇದೀಗ ಬಾಲಿವುಡ್ ತಲುಪಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಅಂತೇನಿಲ್ಲ, ಬದಲು ನವರಾತ್ರಿ ಪೂಜೆಯಲ್ಲಿ ಬಾಲಿವುಡ್ ತಾರೆಗಳ ಜತೆ ಸೇರಿಕೊಂಡು ಹಬ್ಬವನ್ನು ಆಚರಿಸಿದ್ದಾರೆ. ಬಾಲಿವುಡ್ ತಾರೆಗಳು ನವರಾತ್ರಿ ಹಾಗೂ ಗಣೇಶನ ಹಬ್ಬವನ್ನು ತುಂಬಾ ಗ್ರಾಂಡ್ ಆಗಿ ಆಚರಿಸುವುದು ಗೊತ್ತೇ ಇದೆ.
ಮುಂಬೈನಲ್ಲಿ ಈ ಬಾರಿ ಕೂಡ ನವರಾತ್ರಿ ಹಬ್ಬವನ್ನು ಸ್ಪೆಷಲ್ ಆಗಿ ಅಲ್ಲಿ ಆಚರಿಸಲಾಗಿದ್ದು, ನಟಿ ಪ್ರಣೀತಾ ಅಲ್ಲಿ ಅಜಯ್ ದೇವಗನ್ ಸೇರಿದಂತೆ ಹಲವು ಸ್ಟಾರ್ ನಟನಟಿಯರ ಜತೆ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ನವರಾತ್ರಿ ಸಂಭ್ರಮದಲ್ಲಿ ಖುಷಿಖುಷಿಯಾಗಿ ಎಂಜಾಯ್ ಮಾಡಿದ ನಟಿ ಪ್ರಣೀತಾ ಅದನ್ನು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ. ಬಾಲಿವುಡ್ ತಾರೆಗಳ ಜತೆ ತಮ್ಮ ನೆಚ್ಚಿನ ನಟಿ ಪ್ರಣೀತಾ ಫೋಟೋ ನೋಡಿ ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ನೆನಪಿರಲಿ ಸಮಂತಾ, ನಿಮ್ಮನ್ನು ನೋಡಿ ಸ್ವತಃ ಸೂರ್ಯನೇ ಶಾಕ್ ಆಗಿದ್ದಾನೆ!
ನಟಿ ಪ್ರಣೀತಾ ಒಂದು ಕಾಲದಲ್ಲಿ ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಎಂಬ ಬೇಧವಿಲ್ಲದೇ ಎಲ್ಲಾ ಕಡೆ ಸಲ್ಲುವ ನಟಿ ಎನಿಸಿಕೊಂಡಿದ್ದರು. ತಾವು ಎಣಿಸಿದಂತೆ ಬಾಲಿವುಡ್‌ನಲ್ಲಿ ತಮಗೆ ಹೆಚ್ಚಿನ ಅವಕಾಶ ಅರಸಿ ಬಾರದಿರಲು ನಟಿ ಪ್ರಣೀತಾ ಸೌತ್ ಇಂಡಸ್ಟ್ರಿ ಕಡೆ ಮುಖ ಮಾಡಿ ಇಲ್ಲಿ ಹಲವು ಅವಕಾಶ ಗಿಟ್ಟಸಿಕೊಂಡರು. ಆದರೆ ಅವರಿಗೆ ಅವಕಾಶಗಳ ಕೊರತೆ ಎದುರಾದಾಗ ಧೈರ್ಯಗೆಡದೇ ಬಿಸಿನೆಸ್ ಕಡೆ ಕೂಡ ಮುಖ ಮಾಡಿದ್ದರು. ಕಳೆದ ವರ್ಷ ಮದುವೆಯಾಗಿ ಇದೀಗ ಒಂದು ಮಗುವಿಗೆ ತಾಯಿಯೂ ಆಗಿರುವ ಪ್ರಣೀತಾ ಈಗ ಸಾಂಸಾರಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಸಖತ್ ಮಿಂಚುತ್ತಲೇ ಇರುತ್ತಾರೆ.
ನನ್ನ ಮಗನ ಜತೆ ನಾನಿರುವಾಗ ನನಗೆ ಆಗುವ ಸಂತೋಷ ನನ್ನ ಅಪ್ಪನಿಗೆ ನಾನು ಕೊಡಲಿಲ್ಲ; ವಿನಯ್ ಗೌಡ
ಅಂದಹಾಗೆ, ನಟಿ ಪ್ರಣೀತಾ ಕನ್ನಡದಲ್ಲಿ ಸ್ನೇಹಿತರು, ಭೀಮಾ ತೀರದಲ್ಲಿ ಹಾಗೂ ಮಿಸ್ಟರ್ 420 ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಪ್ರಿನ್ಸ್ ಮಹೇಶ್ ಬಾಬು ಹಾಗೂ ಕನ್ನಡದಲ್ಲಿ ದರ್ಶನ್ ಅವರಂಥ ಘಟಾನುಘಟಿ ನಟರ ಜತೆ ತೆರೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಮಗುವಿನ ತಾಯಿಯೂ ಆಗಿರುವ ಪ್ರಣೀತಾ, ಅಮ್ಮನಾಗಿದ್ದರೂ ತಮ್ಮ ಫಿಟ್‌ನೆಸ್ ಕಾಪಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಈಗ ಬಾಲಿವುಡ್ ತಾರೆಗಳ ಜತೆ ನವರಾತ್ರಿ ಹಬ್ಬವನ್ನು ಆಚರಿಸಿ ಖುಷಿಯಿಂದ ಅದರ ಫೋಟೋಗಳನ್ನು ತಮ್ಮ ಫ್ಯಾನ್ಸ್‌ಗಳಿಗೆ ಶೇರ್ ಮಾಡಿದ್ದಾರೆ.