ಆಕ್ಟರ್‌ಗಿದೆ ಅಮ್ಮನ ಜೊತೆ ಸಂಬಂಧ ! ಸತ್ಯ ಬಾಯ್ಬಿಟ್ಟ ನಟ

By Roopa Hegde  |  First Published Nov 13, 2024, 2:10 PM IST

ಈಗಿನ ಕಾಲದಲ್ಲಿ ಸಂಬಂಧದ ಮೇಲಿನ ನಂಬಿಕೆ ಕಡಿಮೆ ಆಗಿದೆ. ಇಬ್ಬರು ಕೈ ಹಿಡಿದು ನಡೆಯುತ್ತಿದ್ರೆ ಅವರನ್ನು ಜನರು ನೋಡುವ ದೃಷ್ಟಿಯೇ ಬೇರೆ. ಬಾಲಿವುಡ್ ನಟನಿಗೂ ಇದ್ರ ಅನುಭವವಾಗಿದೆ. 
 


ಇದು ಮಾಡರ್ನ್ (Modern) ಯುಗ. ಇಲ್ಲಿ ಯಾರು ಯಾರ್ ಜೊತೆ ಅಫೇರ್ ಹೊಂದಿರ್ತಾರೆ ಹೇಳೋದು ಕಷ್ಟ. ಶುಗರ್ ಡ್ಯಾಡಿ (Sugar daddy), ಶುಗರ್ ಮಮ್ಮಿ ಎನ್ನುವ ಕಾನ್ಸೆಪ್ಟ್ ಗಳು ಹೆಚ್ಚಾಗಿವೆ. ತಮಗಿಂತ 20 -30 ವರ್ಷ ದೊಡ್ಡ ವ್ಯಕ್ತಿಗಳ ಜೊತೆ ಡೇಟ್ ಮಾಡೋದು, ಅವರನ್ನು ಮದುವೆಯಾಗೋದು ಕಾಮನ್ ಆಗ್ತಿದೆ. ಕೆಲ ದಿನಗಳ ಹಿಂದೆ 30 ವರ್ಷದ ಧಾರಾವಾಹಿ ನಟಿ ದಿವ್ಯಾ ಶ್ರೀಧರ್, 49 ವರ್ಷದ ಕ್ರಿಸ್ ವೇಣುಗೋಪಾಲ್ ಅವರನ್ನು ಮದುವೆಯಾಗಿದ್ದಾರೆ. ಇದು ಟ್ರೋಲರ್ ಬಾಯಿಗೆ ಆಹಾರವಾಗಿದೆ.   ಸೆಲೆಬ್ರಿಟಿಗಳು ಏನು ಮಾಡಿದ್ರೂ, ಮಾಡ್ದೆ ಹೋದ್ರೂ ಟ್ರೋಲ್ ಆಗ್ತಾರೆ. ಈ ಪಟ್ಟಿಯಲ್ಲಿ ಬಾಲಿವುಡ್ ನಟ ರಾಹುಲ್ ರಾಯ್ ಕೂಡ ಸೇರಿದ್ದಾರೆ. 

ಅಮ್ಮನ ಜೊತೆ ರಾಹುಲ್ ರಾಯ್ (Rahul Roy) ಅಫೇರ್! : ಆಶಿಕಿ ಚಿತ್ರದ ಮೂಲಕ ಪ್ರಸಿದ್ಧಿಗೆ ಬಂದವರು ರಾಹುಲ್ ರಾಯ್. ಈ ಹಿಂದೆ ಅವರು ಹಾಕಿದ ಒಂದು ವಿಡಿಯೋ ಟ್ರೋಲ್ (Video Troll) ಆಗಿತ್ತು. ರಾಹುಲ್ ರಾಯ್, ಒಂದು ಡಾನ್ಸ್ ವಿಡಿಯೋವನ್ನು ಹಂಚಿಕೊಂಡಿದ್ದರು. ಇದನ್ನು ನೋಡಿದ ಜನರು, ರಾಹುಲ್ ರಾಯ್, ವೃದ್ಧ ಮಹಿಳೆ ಜೊತೆ ಅಫೇರ್ ಇಟ್ಕೊಂಡಿದ್ದಾರೆ ಎಂದು ಸುದ್ದಿ ಮಾಡಿದ್ದರು. ಮಾಧ್ಯಮಗಳಲ್ಲಿ ಈ ಬಗ್ಗೆ ಗಂಭೀರ ಚರ್ಚೆಯಾಗಿತ್ತು. ಟ್ರೋಲರ್ ಬಾಯಿಗೆ ಬಂದಂತೆ ಕಮೆಂಟ್ ಮಾಡಿದ್ದರು. ಆದ್ರೆ ಕೊನೆಯಲ್ಲಿ ಸತ್ಯ ಗೊತ್ತಾಗ್ತಿದ್ದಂತೆ ಎಲ್ಲರ ಮಾತಿಗೆ ಬ್ರೇಕ್ ಬಿತ್ತಿತ್ತು. ಡಾನ್ಸ್ ವಿಡಿಯೋ ಟ್ರೋಲ್ ಆಗ್ತಿದ್ದಂತೆ ರಾಹುಲ್ ರಾಯ್ ಪ್ರತಿಕ್ರಿಯೆ ನೀಡಿದ್ದರು. ನಾನು ಅಮ್ಮನ ಜೊತೆ ವಿಡಿಯೋ ಮಾಡಿದ್ದೇನೆ. ಜನರು ಮನಸೋ ಇಚ್ಛೆ ಬರೆಯುವ ಮೊದಲು, ಸರಿಯಾದ ಮಾಹಿತಿ ತಿಳಿದುಕೊಳ್ಳಿ ಎಂದು ಛೀಮಾರಿ ಹಾಕಿದ್ದರು. 

Tap to resize

Latest Videos

undefined

ಒಂದು ದಿನದ ರಜೆಗಾಗಿ ಸೆಟ್‌ ನಲ್ಲಿ ಬಿಕ್ಕ ಬಿಕ್ಕಿ ಅತ್ತಿದ್ರು ಸಾಯಿ ಪಲ್ಲವಿ!

ನಡೆದಿದ್ದು ಏನು? : ರಾಹುಲ್ ರಾಯ್ ತಮ್ಮ ಕುಟುಂಬವನ್ನು ತುಂಬಾ ಪ್ರೀತಿಸ್ತಾರೆ. ಮಾಡರ್ನ್ ಫ್ಯಾಮಿಲಿ ಅವರದ್ದು. ಒಂದು ಬಾರಿ ಪಾರ್ಟಿಯೊಂದಕ್ಕೆ ರಾಹುಲ್ ರಾಯ್ ಹೋಗಿದ್ದರು. ಪಾರ್ಟಿಗೆ ಅವರ ತಾಯಿ ಇಂದ್ರಾ ರಾಯ್, ಸ್ನೇಹಿತರ ಜೊತೆ ಬಂದಿದ್ದರು. ಮಗನನ್ನು ನೋಡಿದ ಇಂದ್ರಾ ರಾಯ್, ತಮ್ಮ ಜೊತೆ ಡಾನ್ಸ್ ಮಾಡುವಂತೆ ಹೇಳಿದ್ರು. ಆದ್ರೆ ಮರುದಿನ ಪತ್ರಿಕೆಯಲ್ಲಿ, ರಾಹುಲ್ ರಾಯ್ ಅಫೇರ್ ಅಂತ ಬರೆಯಲಾಗಿತ್ತು. ಅಮ್ಮನ ಜೊತೆ ಡಾನ್ಸ್ ಮಾಡಿದ್ರೂ ರಾಹುಲ್ ಟ್ರೋಲ್ ಆಗಿದ್ದರು. 

ತೊಂಬತ್ತರ ದಶಕದಲ್ಲಿ ತಮ್ಮ ಮೊದಲ ಚಿತ್ರ ಆಶಿಕಿಯ ಮೂಲಕ ವೃತ್ತಿ ಬದುಕನ್ನು ರಾಹುಲ್ ರಾಯ್ ಶುರು ಮಾಡಿದ್ದರು. ಅವರ ಸೌಂದರ್ಯ, ಸ್ಟೈಲ್ ಗೆ ಹುಡುಗಿಯರು ಬೋಲ್ಡ್ ಆಗಿದ್ದರು. ಹಾಗಾಗಿ ಪ್ರಣಯ ರಾಜ ಎಂದೇ ಹೆಸರು ಪಡೆದ ರಾಹುಲ್ ರಾಯ್, ಒಂದಲ್ಲ ಎರಡಲ್ಲ ಬರೋಬ್ಬರಿ 47 ಚಿತ್ರಗಳಿಗೆ ಸಹಿ ಹಾಕುವಷ್ಟು ಸೂಪರ್‌ಹಿಟ್ ಆದ್ರು. 11 ದಿನದಲ್ಲಿ 47 ಚಿತ್ರಗಳಿಗೆ ಸಹಿ ಹಾಕಿದ್ರೂ ಇಂಡಸ್ಟ್ರಿ ಅವರನ್ನು ಕೈ ಹಿಡಿಯಲಿಲ್ಲ. 

ಭಾವಿ ಪತ್ನಿ ಹೆಸರು ಹೇಳುವಾಗ ನಾಚಿ ನೀರಾದ ಡಾಲಿ ಧನಂಜಯ್

ಆಶಿಕಿ ನಂತ್ರ ರಾಹುಲ್ ರಾಯ್, ಗಜಬ್ ತಮಾಶಾ, ಸಪ್ನೆ ಸಾಜನ್ ಕೆ, ಫಿರ್ ತೇರಿ ಕಹಾನಿ ಯಾದ್ ಆಯಿ ಸೇರಿ ಅನೇಕ ಚಿತ್ರ ಮಾಡಿದ್ರೂ ಯಾವುದೂ ಗಲ್ಲಾಪೆಟ್ಟಿಗೆಯಲ್ಲಿ ಅದ್ಭುತ ಪ್ರದರ್ಶನ ನೀಡಲಿಲ್ಲ. ಚಲನಚಿತ್ರ ಪ್ಲಾಪ್ ಆಗ್ತಿದ್ದಂತೆ ಟಿವಿಗೆ ಬಂದ ರಾಹುಲ್ ರಾಯ್, ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 2006ರಲ್ಲಿ ಬಿಗ್ ಬಾಸ್ ಟ್ರೋಫಿ ಗೆದ್ದುಕೊಂಡಿದ್ದಾರೆ. ವೈಯಕ್ತಿಕ ಜೀವನದಲ್ಲೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ ರಾಹುಲ್. ಅವರ ಮದುವೆ ಹೆಚ್ಚು ದಿನ ನಿಲ್ಲಲಿಲ್ಲ. ಆಸ್ಟ್ರೇಲಿಯಾದಲ್ಲಿ ಕಷ್ಟಪಟ್ಟ ನಂತ್ರ ಭಾರತಕ್ಕೆ ಬಂದ ಅವರಿಗೆ ಆಸ್ಪತ್ರೆ ಖರ್ಚು ಭರಿಸಲು ಹಣವಿರಲಿಲ್ಲ. 

click me!