ಒಂದು ದಿನದ ರಜೆಗಾಗಿ ಸೆಟ್‌ ನಲ್ಲಿ ಬಿಕ್ಕ ಬಿಕ್ಕಿ ಅತ್ತಿದ್ರು ಸಾಯಿ ಪಲ್ಲವಿ!

By Roopa Hegde  |  First Published Nov 12, 2024, 12:02 PM IST

ದಕ್ಷಿಣ ಭಾರತದ ಪ್ರಸಿದ್ಧ ನಟಿ ಸಾಯಿ ಪಲ್ಲವಿ ತಮ್ಮ ಸ್ವಭಾವದಿಂದಲೇ ಕೋಟ್ಯಾಂತರ ಅಭಿಮಾನಿಗಳ ಮನದಲ್ಲಿದ್ದಾರೆ. ತಂಟೆ ತಕರಾರಿಲ್ಲದೆ ಶೂಟಿಂಗ್ ಮಾಡುವ ಅವರ ತಾಳ್ಮೆ ಒಮ್ಮೆ ಒಡೆದಿತ್ತು. ಸೆಟ್ನಲ್ಲಿ ಏನಾಗಿತ್ತು ಎಂಬುದನ್ನು ಸಾಯಿ ಪಲ್ಲವಿ ಹೇಳಿದ್ದಾರೆ. 
 


ಸಿಂಪ್ಲಿಸಿಟಿಗೆ ಹೆಸರಾಗಿರುವ, ನೋ ಮೇಕಪ್ ಗರ್ಲ್, ದಕ್ಷಿಣ ಭಾರತದ ಪ್ರಸಿದ್ಧ ನಟಿ ಸಾಯಿ ಪಲ್ಲವಿ (South Indian famous actress Sai Pallavi). ಶೀಘ್ರವೇ ಸಾಯಿ ಪಲ್ಲವಿ ಬಾಲಿವುಡ್ಗೆ ಎಂಟ್ರಿ ಆಗಲಿದ್ದಾರೆ. ಸಾಯಿ ಪಲ್ಲವಿ, ರಣಬೀರ್ ಕಪೂರ್ (Ranbir Kapoor) ಜೊತೆ ರಾಮಾಯಣ (Ramayana) ದಲ್ಲಿ ಸೀತೆಯ ಪಾತ್ರದಲ್ಲಿ ಮಿಂಚಲಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂನ ಅನೇಕ ಚಿತ್ರಗಳಲ್ಲಿ ನಟಿಸಿರುವ ಸಾಯಿಪಲ್ಲವಿ, ತಮ್ಮ ನಟನೆ, ನೃತ್ಯದಿಂದ ಲಕ್ಷಾಂತರ ಅಭಿಮಾನಿಗಳನ್ನು ಪಡೆದಿದ್ದಾರೆ. 

ಸಾಯಿ ಪಲ್ಲವಿ ಅವರನ್ನು ಅತ್ಯಂತ ಸಮರ್ಪಿತ ನಟಿ ಎಂದು ಗುರುತಿಸಲಾಗಿದೆ. ಯಾವುದೇ ದೂರು ನೀಡದೆ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡ್ತಾರೆ ಸಾಯಿ ಪಲ್ಲವಿ. ಆದ್ರೆ ಶ್ಯಾಮ್ ಸಿಂಗ್ ರಾಯ್ (Shyam Singh Roy) ಸಿನಿಮಾ ಶೂಟಿಂಗ್ ವೇಳೆ, ಸಾಯಿಪಲ್ಲವಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯ್ತು. ಎಲ್ಲವನ್ನು ನುಂಗಿಕೊಂಡು ಕೆಲಸ ಮಾಡ್ತಿದ್ದ ಸಾಯಿಪಲ್ಲವಿ ತಾಳ್ಮೆ ಒಂದು ದಿನ ದುಃಖವಾಗಿ ಹೊರಗೆ ಬಂದಿತ್ತು. ಸೆಟ್ನಲ್ಲಿ ಸಾಯಿ ಪಲ್ಲವಿ ಅಳ್ತಿದ್ದಾರೆ ಎಂಬ ವಿಷ್ಯ ಗೊತ್ತಾಗ್ತಿದ್ದಂತೆ ನಿರ್ಮಾಪಕರು ರಜೆ ಘೋಷಣೆ ಮಾಡಿದ್ರು. ಈ ವಿಷ್ಯವನ್ನು ಸ್ವತಃ ಸಾಯಿ ಪಲ್ಲವಿ ಹೇಳಿಕೊಂಡಿದ್ದಾರೆ. 

Tap to resize

Latest Videos

undefined

ಭಾವಿ ಪತ್ನಿ ಹೆಸರು ಹೇಳುವಾಗ ನಾಚಿ ನೀರಾದ ಡಾಲಿ ಧನಂಜಯ್

ಭಾವನಾತ್ಮಕವಾಗಿ ಕುಸಿದಿದ್ದ ಸಾಯಿ ಪಲ್ಲವಿ :  ಶ್ಯಾಮ್ ಸಿಂಗ್ ರಾಯ್ ಸಿನಿಮಾ ಶೂಟಿಂಗ್ ಸುಲಭವಾಗಿರಲಿಲ್ಲ. ಇದು ಅವರ ಮನಸ್ಸು ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು. ಸುಮಾರು 30 ದಿನಗಳ ಕಾಲ ಸಿನಿಮಾ ಶೂಟಿಂಗ್ ರಾತ್ರಿ ನಡೆದಿತ್ತು. ಇದ್ರಿಂದ ಸಾಯಿ ಪಲ್ಲವಿಗೆ ಸರಿಯಾಗಿ ನಿದ್ರೆ ಆಗ್ತಿರಲಿಲ್ಲ. ಹಗಲಿನಲ್ಲಿ ಶೂಟಿಂಗ್ ಇದ್ರೆ ಸಾಯಿ ಪಲ್ಲವಿ ಖುಷಿಯಾಗ್ತಿದ್ದರು. ಆದ್ರೆ ಇದು ಸಾಧ್ಯವಿರಲಿಲ್ಲ. ಅವರಿಗೆ ಹಗಲಿನಲ್ಲಿ ನಿದ್ರೆ ಬರ್ತಿರಲಿಲ್ಲ. ರಾತ್ರಿ ಶೂಟಿಂಗ್ ಇರುವ ಕಾರಣ ನಿದ್ರೆಗೆ ಅವಕಾಶವಿರಲಿಲ್ಲ. ರಾತ್ರಿ ಶೂಟಿಂಗ್ ಮಾಡಿ, ಹಗಲು ನಿದ್ರೆ ಮಾಡದೆ ಮತ್ತೆ ಮರುದಿನ ರಾತ್ರಿ ಶೂಟಿಂಗ್ ಗೆ ಸಿದ್ಧವಾಗ್ತಿದ್ದರು ಸಾಯಿ ಪಲ್ಲವಿ. ಇದು ಒಂದೋ ಎರಡೋ ದಿನವಲ್ಲ 30 ದಿನಗಳ ಕಾಲ ನಡೆದಿತ್ತು.

ಒಂದು ದಿನ ಸಾಯಿ ಪಲ್ಲವಿ ತಮ್ಮನ್ನು ತಾವು ಸಂಭಾಳಿಸೋದು ಕಷ್ಟವಾಯ್ತು. ಮೇಕಪ್ ರೂಮಿನಲ್ಲಿ ಅವರು ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದ್ದರು. ಒಂದು ದಿನದ ರಜೆಯನ್ನು ಸಾಯಿ ಪಲ್ಲವಿ ಬಯಸಿದ್ದರು. ಆದ್ರೆ ಅವರು ಇದನ್ನು ಯಾರಿಗೂ ಹೇಳಿರಲಿಲ್ಲ. ಸಾಯಿ ಪಲ್ಲವಿ ಸಹೋದರಿ, ಮೇಕಪ್ ರೂಮಿನಲ್ಲಿ ಸಾಯಿ ಅಳೋದನ್ನು ನೋಡಿದ್ದರು. ತಕ್ಷಣ ನಿರ್ಮಾಪಕರ ಬಳಿ ಹೋಗಿ, ಅವರು ಅಳ್ತಿದ್ದಾರೆ, ಅವರಿಗೆ ಒಂದು ದಿನ ರಜೆ ನೀಡಿ ಎಂದು ಕೇಳಿದ್ದರು.

ರೀಲ್ಸ್‌ ಮಾಡಿ ಐಶ್‌ಗೆ ಟಾಂಟ್‌ ನೀಡಿದ್ರಾ ನಿಮ್ರತಾ ಕೌರ್‌?

ನಿರ್ಮಾಪಕ ವೆಂಕಟ್ ಬೋಯನಪಲ್ಲಿ ರಿಯಾಕ್ಷನ್ ನೋಡಿ ಸಾಯಿ ಪಲ್ಲವಿ ಶಾಕ್ ಆಗಿದ್ದರು. ಸಾಯಿ ಪಲ್ಲವಿ ಎಷ್ಟು ಭಾವುಕರಾಗಿದ್ದರು ಎಂಬುದನ್ನು ತಿಳಿದು ತುಂಬಾ ಬೇಸರಗೊಂಡ ನಿರ್ಮಾಪಕರು, ಹತ್ತು ದಿನಗಳ ರಜೆ ಘೋಷಣೆ ಮಾಡಿದ್ದರು. ಒಂದಲ್ಲ, ಹತ್ತು ದಿನ ರಜೆ ತೆಗೆದುಕೊಳ್ಳಿ. ನೀವು ಏನು ಬೇಕಾದರೂ ಮಾಡಿ. ಶೂಟಿಂಗ್ ಗೆ ಸಿದ್ಧವಾದ್ಮೇಲೆ ಮತ್ತೆ ಬನ್ನಿ ಎಂದಿದ್ದರು. 

ಶೂಟಿಂಗ್ ದಿನಗಳನ್ನು ನೆನಪು ಮಾಡಿಕೊಂಡ ಸಾಯಿ ಪಲ್ಲವಿ, ಇಡೀ ಚಿತ್ರತಂಡ ನನ್ನನ್ನು ತುಂಬಾ ಇಷ್ಟಪಟ್ಟಿತ್ತು. ನನ್ನನ್ನು ಮಗುವಿನಂತೆ ನೋಡುತ್ತಿದ್ದರು. ಹಾಗಾಗಿ ಯಾವುದೇ ತೊಂದ್ರೆ ಇಲ್ದೆ ರಾತ್ರಿ ಶೆಡ್ಯೂಲ್ ನಲ್ಲಿಯೂ ಕೆಲಸ ಮಾಡ್ತೇನೆ ಎಂದು ಅವರೆಲ್ಲ ಭಾವಿಸಿದ್ದರು ಎಂದು ಸಾಯಿ ಪಲ್ಲವಿ ಹೇಳಿದ್ದಾರೆ. ಸಾಯಿ ಪಲ್ಲವಿ ರಾಮಾಯಣದ ಜೊತೆ ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಜೊತೆ ಸಿನಿಮಾ ಮಾಡಲಿದ್ದಾರೆ. ಇದರ ಶೂಟಿಂಗ್ ಜಪಾನ್ ನಲ್ಲಿ ನಡೆಯುತ್ತಿದೆ.
 

click me!