ಅಲ್ಲು ಅರ್ಜುನ್, ಕುಟುಂಬ ಟಾರ್ಗೆಟ್ ಮಾಡಿದ ಯೂಟ್ಯೂಬ್ ಚಾನೆಲ್‌ಗೆ ನುಗ್ಗಿದ ಫ್ಯಾನ್ಸ್!

By Chethan Kumar  |  First Published Nov 12, 2024, 7:37 PM IST

ಅಲ್ಲು ಅರ್ಜುನ್, ನಟನ ಪತ್ನಿ ಹಾಗೂ ಕುಟುಂಬಸ್ಥರ ಕುರಿತು ತಪ್ಪು ಮಾಹಿತಿ, ಇಲ್ಲ ಸಲ್ಲದ ಮಾಹಿತಿಗಳನ್ನು ಬಿತ್ತರಿಸುತ್ತಿದ್ದ ಯೂಟ್ಯೂಬ್ ಚಾನೆಲ್‌ಗೆ ಅಭಿಮಾನಿಗಳು ನುಗ್ಗಿ ಎಲ್ಲಾ ವಿಡಿಯೋ ಡಿಲೀಟ್ ಮಾಡಿಸಿದ ಘಟನೆ ನಡೆದಿದೆ.


ಹೈದರಾಬಾದ್(ನ.12) ಕಳೆದ ಕೆಲ ತಿಂಗಳುಗಳಿಂದ ನಟ ಅಲ್ಲು ಅರ್ಜುನ್ ಹಾಗೂ ನಟನ ಕುಟುಂಬದ ವಿರುದ್ದ ಸುಳ್ಳು ಮಾಹಿತಿ, ಮಿತಿಗಳನ್ನು ಉಲ್ಲಂಘಿಸಿದ ಯೂಟ್ಯೂಬ್ ಚಾನೆಲ್ ವಿರುದ್ದ ಅಲ್ಲು ಅರ್ಜುನ್ ಅಭಿಮಾನಿಗಳು ಗರಂ ಆಗಿದ್ದಾರೆ.ಕಳೆದ ಕೆಲ ತಿಂಗಳುಗಳಿಂದ ಅಲ್ಲು ಅರ್ಜುನ್ ಹಾಗೂ ಕುಟುಂಬವನ್ನು ಟಾರ್ಗೆಟ್ ಮಾಡಿ ಸುಳ್ಳು ಮಾಹಿತಿ ಬಿತ್ತರಿಸುತ್ತಿದ್ದ ಯೂಟ್ಯೂಬ್ ಚಾನೆಲ್‌ ಕಚೇರಿಗೆ ನುಗ್ಗಿದ ಅಲ್ಲು ಅರ್ಜುನ್ ಅಭಿಮಾನಿಗಳು ಅಕ್ಷರಶಃ ನಡುಗಿಸಿದ್ದಾರೆ. ಈ ಸುಳ್ಳು ಆರೋಪ, ಸುಳ್ಳು ಮಾಹಿತಿಗಳ ವಿಡಿಯೋಗಳನ್ನು ಡಿಲೀಟ್ ಮಾಡಿಸಿದ ಅಭಿಮಾನಿಗಳು, ಕ್ಷಮೆ ಕೇಳುವಂತೆ ಒತ್ತಾಯಿಸಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಖಾಸಗಿ ಯೂಟ್ಯೂಬ್ ಚಾನೆಲ್ ಕಳೆದ ಕೆಲ ತಿಂಗಳಿನಿಂದ ಅಲ್ಲು ಅರ್ಜುನ್ ಹಾಗೂ ಕುಟುಂಬ ವಿರುದ್ಧ ನೆಗಟೀವ್ ಕ್ಯಾಂಪೇನ್ ಮಾಡುತ್ತಿದೆ. ಈ ಕುರಿತು ಹಲವು ಬಾರಿ ಸೋಶಿಯಲ್ ಮೀಡಿಯಾ ಮೂಲಕ ಎಚ್ಚರಿಕೆ ನೀಡುವ ಪ್ರಯತ್ನ ಮಾಡಿದ್ದರು. ಆದರೆ ಯೂಟ್ಯೂಬ್ ಚಾನೆಲ್ ಮತ್ತಷ್ಟು ವಿಡಿಯೋಗಳನ್ನು ಪೋಸ್ಟ್ ಮಾಡಿತ್ತು. ಅಲ್ಲು ಅರ್ಜುನ್ ಹಾಗೂ ಕುಟುಂಬದ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಸುಳ್ಳು ಮಾಹಿತಿಗಳನ್ನು ಹರಿಬಿಟ್ಟಿದ್ದಾರೆ. ಎಚ್ಚರಿಕೆ ನೀಡಿದರೂ ಯೂಟ್ಯೂಬ್ ಚಾನೆಲ್ ಎಚ್ಚೆತ್ತುಕೊಳ್ಳದ ಕಾರಣ ಅಲ್ಲು ಅರ್ಜುನ್ ಫ್ಯಾನ್ಸ್ ಹಾಗೂ ವೆಲ್‌ಫೇರ್ ಅಸೋಸಿಯೇಶನ್ ಸದಸ್ಯರು ನೇರವಾಗಿ ಯೂಟ್ಯೂಬ್ ಚಾನೆಲ್‌ ಕಚೇರಿಗೆ ನುಗ್ಗಿದ್ದಾರೆ.

Tap to resize

Latest Videos

undefined

ಪುಷ್ಪ 2 ಸಿನೆಮಾದ ಒಂದೇ ಹಾಡಿಗೆ 1 ಕೋಟಿ ಪಡೆದ ಕನ್ನಡತಿ ಶ್ರೀಲೀಲಾ!

50ಕ್ಕೂ ಹೆಚ್ಚು ಅಭಿಮಾನಿಗಳು ಯೂಟ್ಯೂಬ್ ಚಾನೆಲ್ ಕಚೇರಿಗೆ ನುಗ್ಗಿದ್ದಾರೆ. ಚಾನೆಲ್ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಕ್ಷಣವೇ ಈ ಸುಳ್ಳು ಸುದ್ದಿ ಹರಡಿದ ವಿಡಿಯೋಗಳನ್ನು ಡಿಲೀಟ್ ಮಾಡಿಸಿದ್ದಾರೆ. ಇಷ್ಟೇ ಅಲ್ಲ ನಟ ಅಲ್ಲು ಅರ್ಜುನ್, ಕುಟುಂಬ ಹಾಗೂ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.  ಅಲ್ಲು ಅರ್ಜುನ್ ಅಭಿಮಾನಿಗಳು ಚಾನೆಲ್ ಕಚೇರಿಗೆ ನುಗ್ಗಿದ, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ, ವಿಡಿಯೋ ಡಿಲೀಟ್ ಮಾಡಿದ ಹಾಗೂ ಸಿಬ್ಬಂದಿಗಳು ಕ್ಷಮೆ ಕೇಳಿದ ವಿಡಿಯೋವನ್ನು ಫ್ಯಾನ್ಸ್ ಗ್ರೂಪ್ ಹಂಚಿಕೊಂಡಿದೆ.

ಅಲ್ಲು ಅರ್ಜುನ್ ಅಭಿಮಾನಿಗಳ ಮೊಬೈಲ್ ಕ್ಯಾಮೆರಾ ಮುಂದೆ ಬಂದು ಯೂಟ್ಯೂಬ್ ಚಾನೆಲ್ ಮಾಲೀಕರು ಹಾಗೂ ಸಿಬ್ಬಂದಿಗಳು ಕ್ಷಮೆ ಕೇಳಿದ್ದಾರೆ. ತಪ್ಪಿನಿಂದ ಈ ರೀತಿ ಆಗಿದೆ. ಇದು ನಮ್ಮ ತಪ್ಪು. ಈ ರೀತಿಯ ವಿಡಿಯೋಗಳಿಂದ ಅಲ್ಲು ಅರ್ಜುನ್, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನೋವಾಗಿದೆ. ಇದಕ್ಕಾಗಿ ಕ್ಷಮೆ ಕೇಳುತ್ತಿದ್ದೇನೆ. ಮುಂದೆ ಈ ರೀತಿಯ ಯಾವುದೇ ತಪ್ಪಗಳನ್ನು ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. 

 

We have been following RED TV closely for the past few months and monitoring the way they are running a negative campaign against garu.

Recently, they crossed all boundaries by involving his wife Sneha Reddy garu, and his children, and even posting thumbnails… pic.twitter.com/gB37dVfCxS

— All India Allu Arjun Fans & Welfare Association (@AIAFAOnline)

 

ಇದೇ ವೇಳೆ ಅಂತಿಮ ಎಚ್ಚರಿಕೆ ನೀಡಿದ ಅಭಿಮಾನಿ ಸಂಘದ ಸದಸ್ಯರು, ನೀವು ಸತ್ಯವನ್ನು ಹೇಳಿ, ಸತ್ಯ ಮಾಹಿತಿಗಳು, ನಿಖರ ಮಾಹಿತಿಗಳನ್ನು ಪ್ರಸಾರ ಮಾಡಿ. ನಾವು ಬೆಂಬಲಿಸುತ್ತೇವೆ. ಆದರೆ ಇಲ್ಲಸಲ್ಲದ ಆರೋಪ, ಸುಳ್ಳು ಮಾಹಿತಿ ಹರಡಬೇಡಿ. ಇನ್ನೊಂದು ಬಾರಿ ಈ ರೀತಿಯ ಯಾವುದೇ ವಿಡಿಯೋ ಪೋಸ್ಟ್ ಮಾಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇತ್ತ ಅಲ್ಲು ಅರ್ಜುನ್ ಅಭಿಮಾನಿಗಳ ನಡೆಯನ್ನು ಹಲವರು ಮೆಚ್ಚಿಕೊಂಡಿದ್ದಾರೆ. ಖಾಸಗಿ ಯೂಟ್ಯೂಬ್ ಚಾನೆಲ್ ಅಲ್ಲು ಅರ್ಜುನ್ ವಿರುದ್ದ ಸುಳ್ಳು ಸುದ್ದಿ ಪ್ರಸಾರ ಮಾಡಿದೆ. ಅಲ್ಲು ಅರ್ಜುನ್ ಮಕ್ಕಳು ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಫೋಟೋಗಳನ್ನು ಎಡಿಟ್ ಮಾಡಿ ಸುಳ್ಳು ಮಾಹಿತಿಯನ್ನು ಬಿತ್ತರಿಸಿದೆ. ಈ ರೀತಿ ಸುಳ್ಳು ಮಾಹಿತಿ ಹರಡುವವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಈ ಚಾನೆಲ್ ಎಲ್ಲಾ ಮಿತಿಗಳನ್ನು ಮೀರಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಟ ಅಲ್ಲು ಅರ್ಜುನ್, ಕನ್ನಡತಿ ಪೂಜಾ ಹೆಗ್ಡೆ ರಹಸ್ಯ ಬಿಚ್ಚಿಟ್ಟ ನಂದಮೂರಿ ಬಾಲಕೃಷ್ಣ!
 

click me!