ಸೌತ್ ಸಿನಿಮಾಗಳ ಆಫರ್ ರಿಜೆಕ್ಟ್ ಮಾಡಿದ ಬಾಲಿವುಡ್ ಖ್ಯಾತ ನಟ ಪಂಕಜ್ ತ್ರಿಪಾಠಿ: ಕಾರಣವೇನು?

Published : Nov 23, 2022, 01:59 PM IST
ಸೌತ್ ಸಿನಿಮಾಗಳ ಆಫರ್ ರಿಜೆಕ್ಟ್ ಮಾಡಿದ ಬಾಲಿವುಡ್ ಖ್ಯಾತ ನಟ ಪಂಕಜ್ ತ್ರಿಪಾಠಿ: ಕಾರಣವೇನು?

ಸಾರಾಂಶ

ಬಾಲಿವುಡ್ ಖ್ಯಾತ ನಟ ಪಂಕಜ್ ತ್ರಿಪಾಠಿ ಹಿಂದಿ ಬಿಟ್ಟು ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಲ್ಲ ಎಂದು ಹೇಳಿದ್ದಾರೆ. 

ದಕ್ಷಿಣ ಭಾರತದ ಸಿನಿಮಾಗಳು ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿವೆ. ಸೌತ್ ಸಿನಿಮಾಗಳ ಅಬ್ಬರ  ಬಾಲಿವುಡ್ ಮಂದಿಯ ನಿದ್ದೆ ಗೆಡಿಸಿದೆ. ದಕ್ಷಿಣ ಭಾರತದ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಹಿಟ್ ಆಗುತ್ತಿದ್ದಂತೆ ಬಾಲಿವುಡ್ ಮಂದಿ ದಕ್ಷಿಣ ಭಾರತದ ಸಿನಿಮಾರಂಗದ ಕಡೆ ಒಲವು ತೋರುತ್ತಿದ್ದಾರೆ. ಈ ಮೊದಲು ಬಾಲಿವುಡ್ ಸ್ಟಾರ್ಸ್ ಸೌತ್ ಕಡೆ ಮುಖ ಮಾಡುತ್ತಿರಲಿಲ್ಲ. ಆದರೀಗ ಕಾಲ ಬದಲಾಗಿದೆ. ಸೌತ್ ಸಿನಿಮಾಗಳಲ್ಲಿ ನಟಿಸಲು ಬಾಲಿವುಡ್ ಸ್ಟಾರ್ಸ್ ಕೂಡ ಆಸಕ್ತಿ ತೋರುತ್ತಿದ್ದಾರೆ. ಸಲ್ಮಾನ್ ಖಾನ್, ಶಾರುಖ್ ಖಾನ್ ಅಂತಹ ಸ್ಟಾರ್ ಕಲಾವಿದರೇ ಸೌತ್ ಸಿನಿ ಮಂದಿ ಜೊತೆ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಬಾಲಿವುಡ್‌ನ ಖ್ಯಾತ ನಟ ಪಂಕಜ್ ತ್ರಿಪಾಠಿ ಸೌತ್ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಪಂಕಜ್ ಅವರೇ ಬಹಿರಂಗ ಪಡಿಸಿದ್ದಾರೆ. ಹಿಂದಿ ಬಿಟ್ಟು ಬೇರೆ ಭಾಷೆಯಲ್ಲಿ ನಟಿಸಲ್ಲ ಎಂದು ಪಂಕಜ್ ಹೇಳಿದ್ದಾರೆ. 

ಈಗಾಗಲೇ ತೆಲುಗು ಮತ್ತು ಮಲಯಾಳಂ ಸಿನಿಮಾರಂಗದಿಂದ ಆಫರ್ ಬಂದಿದೆ ಆದರೂ ಮಾಡಲ್ಲ ಎಂದು ಹೇಳಿದ್ದಾರೆ. ಕಾರಣ ಕೂಡ ರಿವೀಲ್ ಮಾಡಿದ್ದಾರೆ. 'ಭಾಷೆ ನನಗೆ ಅಡ್ಡಿ ಆಗಲ್ಲ ಆದರೂ ನಾನು ಹಿಂದಿ ಸಿನಿಮಾಗಳಿಗೆ ಹೆಚ್ಚು ಆದ್ಯತೆ ನೀಡುತ್ತೇನೆ. ನಾನು ಹಿಂದಿಯಲ್ಲಿ ತುಂಬಾ ಆರಾಮದಾಯಕವಾಗಿದ್ದೇನೆ. ನಾನು ಭಾಷೆಯನ್ನು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ. ಭಾವನೆಯನ್ನು ಅರ್ಥಮಾಡಿಕೊಳ್ಳುತೇನೆ. ಹಾಲಿವುಡ್ ಸಿನಿಮಾರಂಗ ಇರಲಿ ನನಗೆ ತೆಲುಗು ಮತ್ತು ಮಲಯಾಳಂ ಸಿನಿಮಾರಂಗದಿಂದ ಆಫರ್ ಗಳು ಬರುತ್ತಿವೆ. ಆದರೆ ನನಗೆ ಆ ಸಿನಿಮಾಗಳಿಗೆ ನಾನು ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ. ಯಾಕೆಂದರೆ ನನಗೆ ಆ ಭಾಷೆ ಮಾತಾಡಲು ಸಾಧ್ಯವಾಗುವುದಿಲ್ಲ' ಎಂದು ಹೇಳಿದ್ದಾರೆ.  

Boycott Trend ವಿರುದ್ಧ ಬಾಲಿವುಡ್‌ನಲ್ಲಿ ಒಗ್ಗಟ್ಟಿಲ್ಲ ಕಿಡಿಕಾರಿದ ಸೈಫ್‌ ಆಲಿ ಖಾನ್‌

'ಬೇರೆ ಭಾಷೆಯಲ್ಲಿ ನನಗೆ ಭಾವನೆಯನ್ನು ಹೊರತರಲು ಸಾಧ್ಯವಾಗುವುದಿಲ್ಲ. ಯಾರಾದರೂ ನನಗೆ ಹಿಂದಿ ಮಾತನಾಡುವ ಪಾತ್ರವನ್ನು ನೀಡಿದರೆ ನಾನು ಯಾವುದೇ ಭಾಷೆಯ ಸಿನಿಮಾದಲ್ಲಾದರೂ ಕೆಲಸ ಮಾಡಲು ಸಿದ್ಧನಿದ್ದೇನೆ. ಆದರೆ ಹಿಂದಿಯಲ್ಲಿ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೀನಿ. ಹಾಲಿವುಡ್ ಅಥವಾ ಇತರ ಭಾಷೆಯ ಚಲನಚಿತ್ರಗಳನ್ನು ಮಾಡಲು ಸಮಯವಿಲ್ಲ' ಎಂದು ಹೇಳಿದರು. 

'ದೃಶ್ಯಂ-2' ಸಕ್ಸಸ್ ಬಳಿಕ ಮತ್ತೊಂದು ಸೌತ್ ಸೂಪರ್ ಹಿಟ್ ಸಿನಿಮಾದ ರಿಮೇಕ್‌ನಲ್ಲಿ ಅಜಯ್ ದೇವನ್; ಟೀಸರ್ ವೈರಲ್

ಪಂಕಜ್ ತ್ರಿಪಾಠಿ ಇತ್ತೀಚೆಗೆ ಶ್ರೀಜಿತ್ ಮುಖರ್ಜಿಯವರ ಶೇರ್ದಿಲ್: ದಿ ಪಿಲಿಭಿಟ್ ಸಾಗಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಅಕ್ಷಯ್ ಕುಮಾರ್ ಅವರ ಓ ಮೈ  ಗಾಡ್ 2 ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಸಿನಿಮಾ ಜೊತೆಗೆ ವೆಬ್ ಸೀರಿಸ್ ನಲ್ಲೂ ಬ್ಯುಸಿಯಾಗಿದ್ದಾರೆ. ಸೂಪಹ್ ಹಿಟ್ ಮಿರ್ಜಾಪುರ್ 3ನೇ ಸರಣಿಯಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿದ್ದು ರಿಲೀಸ್ಗೆ ತಯಾರಿ ನಡೆಯುತ್ತಿದೆ. ಅಂದಹಾಗೆ ಈ ಸೀರಿಸ್ ಅಮೆಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. 

  
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!