
ಬಹುಭಾಷಾ ನಟ ಕಿಶೋರ್ (Kishore)ಹಾಗೂ ಕಿಸ್ಮಾತ್ ಖ್ಯಾತಿಯ ಶೃತಿ ಮೆನನ್ (Shruthi Menon)ನಟಿಸಿರುವ ವಡಕ್ಕನ್ (Vadakkan)ಸಿನಿಮಾ ಬ್ರಸೆಲ್ಸ್ ಇಂಟರ್ ನ್ಯಾಷನಲ್ ಫೆಂಟಾಸ್ಟಿಕ್ ಫಿಲ್ಮ ಫೆಸ್ಟಿವಲ್-BIFFFಗೆ ಆಯ್ಕೆಯಾಗಿದೆ. ಪ್ರಾಚೀನ ಉತ್ತರ ಮಲಬಾರ್ ಜಾನಪದದ ಹಿನ್ನೆಲೆಯಲ್ಲಿಯುಳ್ಳ ಸೂಪರ್ ನ್ಯಾಚುರಲ್ ಥ್ರಿಲ್ಲರ್ ಕಥಾಹಂದರದ ಈ ಚಿತ್ರಕ್ಕೆ ಸಜೀದ್ ಎ ಆಕ್ಷನ್ ಕಟ್ ಹೇಳಿದ್ದಾರೆ.
ಮಲಯಾಳಂ ಚಿತ್ರರಂಗದಲ್ಲಿ ಮೊದಲ ಬಾರಿಗೆ BIFFFಗೆ ಆಯ್ಕೆಯಾದ ಸಿನಿಮಾ ಎಂಬ ಖ್ಯಾತಿಯೂ ವಡಕ್ಕನ್ ಗೆ ತೆಕ್ಕೆ ಸೇರ್ಪಡೆಯಾಗಿದೆ. ಮುನ್ನರಿಯಿಪ್ಪು ಸೇರಿದಂತೆ ಹಲವು ಚಿತ್ರಗಳಿಗೆ ಕಥೆ ಬರೆದಿರುವ ರಾಜ್ಯ ಪ್ರಶಸ್ತಿ ವಿಜೇತ ಕಥೆಗಾರ ಉನ್ನಿ ಆರ್ ಈ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ.
ಇಂಥ ನೋವಿನ ಘಳಿಗೆಯಲ್ಲೂ ಅಪರಾಧಿ ಹಿಂದುವೋ, ಮುಸ್ಲಿಂಮನೋ ಎಂಬ ಭೇದ ಸರಿಯಲ್ಲ; ನಟ ಕಿಶೋರ್
ಆಫ್‌ಬೀಟ್ ಮೀಡಿಯಾ ಗ್ರೂಪ್‌ನ ಅಂಗಸಂಸ್ಥೆಯಾದ ಆಫ್‌ಬೀಟ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸಲಾಗಿದೆ. ಚಿತ್ರಕ್ಕೆ ಬಿಜಿಬಾಲ್ ಅವರ ಸಂಗೀತ, ಕೀಕೊ ನಕಹರಾ ಅವರ ಛಾಯಾಗ್ರಹಣ ಮತ್ತು ಅಕಾಡೆಮಿ ಪ್ರಶಸ್ತಿ ವಿಜೇತ ರೆಸುಲ್ ಪೂಕುಟ್ಟಿ ಅವರ ಧ್ವನಿ ವಿನ್ಯಾಸವಿದೆ.
'ರಿಲೇಶನ್‌ಶಿಪ್'ನಲ್ಲಿ ಇದೀನಿ, ಒಪ್ಪಿಕೊಂಡ ನಟ ವಿಜಯ್ ದೇವರಕೊಂಡ; ಫ್ಯಾನ್ಸ್ ಫುಲ್ ಶಾಕ್!
ವೈವಿಧ್ಯಮಯ ಪ್ರೇಕ್ಷಕರನ್ನು ತಲುಪುವ ಸಂಘಟಿತ ಪ್ರಯತ್ನದಲ್ಲಿ, ವಡಕ್ಕನ್ ಅನ್ನು ಈ ವರ್ಷದ ಕ್ಯಾನ್ಸ್‌ನಲ್ಲಿ ಮೇ ತಿಂಗಳಲ್ಲಿ ಮಾರ್ಚ್ ಡು ಫಿಲ್ಮ್‌ನಲ್ಲಿ ಪ್ರಸ್ತುತಪಡಿಸಲಾಗುತ್ತದೆ, ಇದು ವಾರ್ಷಿಕವಾಗಿ ನಡೆಯುವ ಫೆಸ್ಟಿವಲ್ ಡಿ ಕ್ಯಾನ್ಸ್‌ನ ಆಶ್ರಯದಲ್ಲಿ ನಡೆಯುವ ಚಲನಚಿತ್ರ ಮಾರುಕಟ್ಟೆಯಾಗಿದೆ. ವಡಕ್ಕನ್ ಸಿನಿಮಾವನ್ನು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಿಗೆ ಡಬ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಪ್ರೇಕ್ಷಕರಿಗೆ ಮೋಸ ಮಾಡ್ಬಿಟ್ಟೆ, 'ಆಫ್ರಿಕಾದಲ್ಲಿ ಶೀಲಾ'ನ ಬಂಡೀಪುರಕ್ಕೂ ತಂದ್ಬಿಟ್ಟೆ ಅಂದಿದ್ಯಾಕೆ ದ್ವಾರಕೀಶ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.