Mouni Roy Wedding: ಬಾಲಿವುಡ್ ಚೆಲುವೆ ಇನ್ನು ಬೆಂಗಳೂರಿನ ಸೊಸೆ, ನಂಬಿಯಾರ್ ಮಲಯಾಳಿಯಾ?

Published : Jan 16, 2022, 02:17 PM ISTUpdated : Jan 16, 2022, 02:26 PM IST
Mouni Roy Wedding: ಬಾಲಿವುಡ್ ಚೆಲುವೆ ಇನ್ನು ಬೆಂಗಳೂರಿನ ಸೊಸೆ, ನಂಬಿಯಾರ್ ಮಲಯಾಳಿಯಾ?

ಸಾರಾಂಶ

ಬಾಲಿವುಡ್ ನಟಿಯ ಮದುವೆ ಸಂಭ್ರಮ ಶುರು, ಗೋವಾದಲ್ಲಿ ಬೀಚ್ ವೆಡ್ಡಿಂಗ್ ಹುಡುಗ ಬೆಂಗಳೂರಿನವ ಅನ್ನೋದು ಗೊತ್ತಾ ? ಸೂರಜ್ ನಂಬಿಯಾರ್ ಮಲಯಾಳಿಯಾ ?

ಬಾಲಿವುಡ್‌ ನಟಿ, ಕೆಜಿಎಫ್ ಬೆಡಗಿ ಮೌನಿ ರಾಯ್ ಗೋವಾದಲ್ಲಿ ಬೀಚ್ ವೆಡ್ಡಿಂಗ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ನಾಗಿನ್ ಸೀರಿಯಲ್ ಮೂಲಕ ಹಿಟ್ ಆದ ಮೌನಿ ರಾಯ್ ಅವರ ಬಾಯ್‌ಫ್ರೆಂಡ್ ಹೆಸರು ಸೂರಜ್ ನಂಬಿಯಾರ್. ಹೆಸರು ಕೇಳಿ ಅಪ್ಪಟ ಮಲಯಾಳಿ ಹುಡುಗ ಎಂದೇ ಎಲ್ಲರೂ ಅಂದುಕೊಂಡಿದ್ದರು. ದುಬೈ ಉದ್ಯಮಿಯ ಕೈ ಹಿಡಿಯುತ್ತಿರುವ ನಟಿ ಜನವರಿ 27ರಂದು ಮದುವೆಯಾಗುತ್ತಿದ್ದಾರೆ. ಬೀಚ್ ಬ್ಯೂಟಿ ಮೌನಿ ರಾಯ್ ಮದುವೆಗೂ ಬೀಚ್ ಲೊಕೇಷನ್ ಆರಿಸಿಕೊಂಡಿದ್ದಾರೆ.

ದುಬೈ ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ಮೌನಿ ರಾಯ್ ಮದುವೆಯಾಗುತ್ತಿರೋ ಸುದ್ದಿ ಈಗಾಗಲೇ ವೈರಲ್ ಆಗಿದೆ. ಲಾಕ್‌ಡೌನ್ ಸಮಯದಲ್ಲಿ, ವೆಕೇಷನ್‌ಗಳನ್ನೂ ಸೂರಜ್ ಜೊತೆ ಎಂಜಾಯ್ ಮಾಡಿದ್ದ ಮೌನಿ ಇದೀಗ ಲಾಂಗ್‌ಟೈಂ ಬಾಯ್‌ಫ್ರೆಂಡ್‌ನ ಪತ್ನಿಯಾಗುತ್ತಿದ್ದಾರೆ. ಜನವರಿ 27ರಂದು ಮದುವೆ ನಿಗದಿಯಾಗಿದೆ. ಫೈವ್ ಸ್ಟಾರ್ ರೆಸಾರ್ಟ್ ಮದುವೆಗಾಗಿ ಬುಕ್ ಮಾಡಲಾಗಿದ್ದು, ಆತ್ಮೀಯ ಕುಟುಂಬಸ್ಥರು ಹಾಗೂ ಸ್ನೇಹಿತರಷ್ಟೇ ಮದುವೆಯಲ್ಲಿ ಭಾಗಿಯಾಗಲಿದ್ದಾರೆ. ಅತಿಥಿಗಳಲ್ಲಿ ಕೊರೋನಾ ಲಸಿಕೆ ಪಡೆದ ಸರ್ಟಿಫಿಕೇಟ್ ಇರುವುದು ಕಡ್ಡಾಯವಾಗಿದೆ.

ಇದೇ ತಿಂಗಳು KGF ಬೆಡಗಿಯ ಮದುವೆ!

ಈ ಜೋಡಿ 2019ರಿಂದ ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಮೌನಿ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಎಲ್ಲವೂ ಸೀಕ್ರೆಟ್ ಆಗಿತ್ತು. ನಟಿಗೆ ಕಳೆದ ವರ್ಷ ಯುಎಇ ಗೋಲ್ಡನ್ ವೀಸಾ ನೀಡಿತ್ತು. ನಟಿ ವೆಕೇಷನ್‌ಗೆ ದುಬೈಗೆ ಹೋಗುತ್ತಿದ್ದರು. ಲಾಕ್‌ಡೌನ್ ಸಮಯವನ್ನೂ ಪೂರ್ತಿಯಾಗಿ ನಟಿ ಅಲ್ಲಿಯೇ ಕಳೆದಿದ್ದರು. ಈ ನಡುವೆ ಬಾಯ್‌ಫ್ರೆಂಡ್ ಜೊತೆಗೆ ನಟಿಯ ಫೋಟೋ ವೈರಲ್ ಆಗಿತ್ತು. ಕ್ಯೂ ಕಿ ಸಾಸ್ ಭೀ ಕಭೀ ಬಹು ಥೀ ಸೀರಿಯಲ್ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಮೌನಿ ರಾಜ್ ದೇವೋಂಕೆ ದೇವ್ ಮಹಾದೇವ್ ಹಾಗೂ ನಾಗಿನ್ ಮೂಲಕ ಮನೆ ಮಾತಾದರು. ನಾಗಿನ್ ಸೀರಿಯಲ್ ಮೌನಿಗೆ ದೊಡ್ಡ ಖ್ಯಾತಿ ತಂದುಕೊಟ್ಟಿತು.

ಅಕ್ಷಯ್ ಕುಮಾರ್ ಅಭಿನಯದ ಗೋಲ್ಡ್ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ಮೇಡ್ ಇನ್ ಚೀನಾ ಹಾಗೂ ರೋಮಿಯೋ ಅಕ್ಬರ್ ವಾಲ್ಟರ್ ಮೂಲಕ ಬಾಲಿವುಡ್‌ನಲ್ಲಿ ಮಿಂಚಿದ್ದಾರೆ. ನಟಿ ಆಯನ್ ಮುಖರ್ಜಿ ಅವರ ಬ್ರಹ್ಮಾಸ್ತ್ರದಲ್ಲಿ ನಟಿ ಅಮಿತಾಭ್ ಬಚ್ಚನ್, ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್, ನಾಗರ್ಜುನ ಅಕ್ಕಿನೇನಿ ಜೊತೆ ಕಾಣಿಸಿಕೊಳ್ಳಲಿದ್ದಾರೆ.

ಯಾರೀತ ಸೂರಜ್ ನಂಬಿಯಾರ್?

ವೃತ್ತಿಯಲ್ಲಿ ಇನ್ವೆಸ್ಟ್‌ಮೆಂಟ್ ಬ್ಯಾಂಕರ್ ಆಗಿರುವ ಸೂರಜ್ ನಂಬಿಯಾರ್ ದುಬೈನಲ್ಲಿ ನೆಲೆಸಿದ್ದಾರೆ. ಆದರೆ ಅವರು ಬೆಂಗಳೂರಿನ ಮೂಲದವರು. ಬೆಂಗಳೂರಿನ ಆರ್‌ವಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಸಿವಿಲ್ ಎಂಜಿನಿಯರಿಂಗ್ ಬಿಟೆಕ್ ಮಾಡಿದ ನಂತರ ಸೂರಜ್ ಸ್ಟಾನ್ಫರ್ಡ್ ಯುನಿವರ್ಸಿಟಿಯಲ್ಲಿ ಇನ್ವೆಸ್ಟ್‌ಮೆಂಟ್ ಸೈನ್ಸ್‌ & ಇಂಟರ್‌ನ್ಯಾಷನಲ್ ಮ್ಯಾನೆಜ್‌ಮೆಂಟ್‌ ವ್ಯಾಸಂಗ ಮಾಡಿದ್ದಾರೆ.

ಸೂರಜ್ ಅವರು ಜೈನ್ ಕುಟುಂಬದಿಂದ ಬಂದವರು ಎನ್ನಲಾಗಿದೆ. ಆದರೆ ಮಲಯಾಳಿ ಸರ್ ನೇಮ್ ನಂಬಿಯಾರ್ ಅವರ ಹೆಸರಿನ ಜೊತೆ ಹೇಗೆ ಸೇರಿತು ಎನ್ನುವುದರ ಬಗ್ಗೆ ಯವುದೇ ಐಡಿಯಾ ಇಲ್ಲ. ಸೂರಜ್ ಅವರು ಮೂಲತಃ ಕೇರಳದವರಾ ಎಂಬುದರ ಬಗ್ಗೆಯೂ ಮಾಹಿತಿ ಇಲ್ಲ. ಅಶೋಕಾ ಇಂಡಿಯಾದಲ್ಲಿ ಇಂಟರ್ನ್ ಆಗಿ ಸೇರಿಕೊಂಡ ಸೂರಜ್ ನಂತರ ಯುಎಇಯ ಕ್ಯಾಪಿಟಲ್ ಮಾರ್ಕೆಟ್‌ನ ನಿರ್ದೇಶಕರಾಗಿ ನೇಮಕವಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?