
ಕೊರೋನಾ (Covid19) ಆರ್ಭಟ ಮತ್ತು ಟಿಕೆಟ್ ದರ (Film Ticket Hike) ಏರಿಕೆ ನಡುವೆಯೂ ಅದ್ಧೂರಿ ಪ್ರದರ್ಶನ ಕಾಣುತ್ತಿರುವ ಬಂಗಾರರಾಜು (Bangararaju) ಸಿನಿಮಾದ ಬಗ್ಗೆ ನಾಗ ಚೈತನ್ಯ (Naga Chaitanya) ಮತ್ತು ನಾಗಾರ್ಜುನ (Nagarjuna) ಮಾತನಾಡಿದ್ದಾರೆ. ಪ್ರಚಾರದ ವೇಳೆ ತಂದೆ -ಮಗನನ್ನು ಎಲ್ಲರೂ ಸಮಂತಾಗೆ ನೀಡಿರುವ ಡಿವೋರ್ಸ್ (Divorce) ಬಗ್ಗೆಯೇ ಪ್ರಶ್ನೆ ಮಾಡುತ್ತಿದ್ದಾರೆ. ಹಾಗೇ ಚೈತನ್ಯಾಗೆ ಟ್ರಿಕಿ ಪ್ರಶ್ನೆಗಳನ್ನು ಕೇಳಿ, ಬೇಕು ಬೇಕೆಂದು ಕಾಲೆಳೆಯಲು ಪ್ರಯತ್ನಿಸುತ್ತಿದ್ದಾರೆ.
ವಿಚ್ಛೇದನದ ಬಗ್ಗೆ ನೇರವಾಗಿ ಪ್ರಶ್ನೆ ಕೇಳುವುದು ಹೇಗೆಂದು ಸಣ್ಣ Rapid ಫಯರ್ ಗೇಮ್ (Rapid Fire) ಆಟವಾಡಿಸಿ, ಆನಂತರ ಪ್ರಶ್ನಿಸಿದ್ದಾರೆ. ಮಾಧ್ಯಮ ಸ್ನೇಹಿತರು 'ಇದುವರೆಗೂ ತೆರೆ ಮೇಲೆ ಯಾವ ಹೀರೋಯಿನ್ ಜೊತೆ ನೀವು ಲವ್ಲಿ ಕೆಮಿಸ್ಟ್ರಿ (Lovely Chemistry) ಹಂಚಿಕೊಂಡಿದ್ದೀರಿ?' ಎಂದು ಪ್ರಶ್ನೆ ಮಾಡಿದ್ದಾರೆ. ಅಗ ಒಂದು ನಿಮಿಷವೂ ಯೋಚನೆ ಮಾಡದೆ 'ಖಂಡಿತ ಸಮಂತಾನೇ' ಎಂದು ನಾಗ ಚೈತನ್ಯ ಉತ್ತರಿಸಿದ್ದಾರೆ. ಅಲ್ಲಿದ ಅನೇಕರು ಸಮಂತಾ ಹೆಸರು ಹೊರತುಪಡಿಸಿ ಬೇರೆ ಅವರು ಹೆಸರು ಹೇಳುತ್ತಾರೆ ಅಂದುಕೊಂಡಿದ್ದರು. ಆದರೆ ಸಮಂತಾ ಹೆಸರು ಕೇಳಿ ಶಾಕ್ ಆಗಿದ್ದಾರೆ. ಹಾಗೇ ಸಂತೋಷ ಪಟ್ಟುಕೊಂಡಿದ್ದಾರೆ.
ಈ ವೇಳೆ ಡಿವೋರ್ಸ್ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಮೊದಲ ಬಾರಿ ಮೌನ ಮುರಿದು ಮಾತನಾಡಿದ್ದರು. 'ಸಪರೇಟ್ (Seperation) ಅಗುವುದು ಓಕೆ. ನಮ್ಮ ವೈಯಕ್ತಿಕ ಸಂತೋಷಕ್ಕೆ ನಾವು ಒಬ್ಬರಿಗೊಬ್ಬರು ತೆಗೆದುಕೊಂಡಿರುವ ನಿರ್ಧಾರವಿದು. ಸಮಂತಾ ಸಂತೋಷವಾಗಿದ್ದಾಳೆ, ಅಂದ್ರೆ ನಾನೂ ಸಂತೋಷವಾಗಿರುವೆ. ಇಂತಹ ಸಂದರ್ಭಗಳಲ್ಲಿ ವಿಚ್ಚೇದನ ಪಡೆದುಕೊಳ್ಳುವುದೇ ಬೆಸ್ಟ್ ನಿರ್ಧಾರ,' ಎಂದು ನಾಗ ಚೈತನ್ಯ ಹೇಳಿದ್ದಾರೆ.
ಈ ವೇಳೆ ನಾಗಾರ್ಜುನರನ್ನು ಕೂಡ ಪ್ರಶ್ನೆ ಮಾಡಲಾಗಿತ್ತು. 'ತುಂಬಾ ಭಾರವಾದ ಮನಸ್ಸಿನಿಂದ ಈ ಮಾತುಗಳನ್ನು ಹೇಳುತ್ತಿರುವೆ. ಸ್ಯಾಮ್ (Samantha) ಮತ್ತು ಚೈತನ್ಯ ನಡುವೆ ಈ ರೀತಿ ನಡೆಯಬಾರದಿತ್ತು. ಆದರೂ ನಡೆದಿದೆ. ಗಂಡ ಹೆಂಡತಿ ನಡುವೆ ಏನೇ ನಡೆದರೂ ಅದು ತುಂಬಾನೇ ಪರ್ಸನಲ್ (Personal). ಸ್ಯಾಮ್ ಮತ್ತು ಚೈತನ್ಯ ಇಬ್ಬರೂ ನನ್ನ ಮನಸ್ಸಿಗೆ ತುಂಬಾನೇ ಹತ್ತಿರವಾಗಿರುವ ವ್ಯಕ್ತಿಗಳು. ಸಮಂತಾ ಜೊತೆ ಕಳೆದಿರುವ ಪ್ರತಿಯೊಂದೂ ಕ್ಷಣಗಳನ್ನು ನಾವು ಎಂಜಾಯ್ ಮಾಡಿ ನೆನಪಿಸಿಕೊಳ್ಳುತ್ತೇವೆ. ದೇವರು ಅವರಿಗೆ ಶಕ್ತಿ ಕೊಟ್ಟು ಕಾಪಾಡಲಿ,' ಎಂದು ನಾಗಾರ್ಜುನ ಮಾತನಾಡಿದ್ದಾರೆ.
ಹಾಗೆಯೇ, 'ಈ ಸಂದರ್ಭದಲ್ಲಿ ಚೈತನ್ಯ ಎಷ್ಟು ಶಾಂತವಾಗಿದ್ದರು ಅಂದ್ರೆ ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಯಾವ ಕ್ಷಣದಲ್ಲೂ ಅವನು ಪ್ರವೋಕ್ (Provoke) ಅಗಿ.ಲ್ಲ ಒಂದು ಪದವನ್ನು ಮಾತನಾಡಿಲ್ಲ. ನನ್ನ ತಂದೆ ರೀತಿ ನಾನು ಕೂಡ ಚೈತನ್ಯ ಬಗ್ಗೆ ತಲೆ ಕೆಡಿಸಿಕೊಂಡಿದ್ದೆ. ಆದರೆ ನಾನು ಅವನ ಬಗ್ಗೆ ಚಿಂತಿಸುವುದಕ್ಕಿಂತ ಅವನು ನನ್ನ ಬಗ್ಗೆ ಚಿಂತಿಸುತ್ತಿದ್ದಾನೆ. ಅವನು ಬಂದು ಅಪ್ಪಾ ನೀವು ಓಕೆ ನಾ? ಎಂದು ಕೇಳುತ್ತಿದ್ದ. ನಾನು ಅವನಿಗೆ ಹೇಳಿದೆ, ಇದು ನೀನು ಕೇಳುವುದಲ್ಲ, ನಾನು ಕೇಳಬೇಕು' ಎಂದು ಖಾಸಗಿ ಸಂದರ್ಶನದಲ್ಲಿ ನಾಗಾರ್ಜುನ್ ಮಾತನಾಡಿದ್ದಾರೆ.
ಬಂಗಾರರಾಜು ಸಿನಿಮಾದಲ್ಲಿ ರಮ್ಯಾ ಕೃಷ್ಣ (Ramya Krishn) ಮತ್ತು ಕೃತಿ ಶೆಟ್ಟಿ (Kriti shetty) ನಟಿಸಿದ್ದಾರೆ. 'ಬಂಗಾರರಾಜು ಸೂಪರ್ ಹಿಟ್ ಸಿನಿಮಾ. ಸಂಕ್ರಾಂತಿ ಹಬ್ಬದ ದಿನ ನಿಮ್ಮ ಮುಂದೆ ನಾವು ಬರುತ್ತೇವೆ ಎಂದು ಮಾತು ಕೊಟ್ಟಿದ್ದೆ. ಅದರಂತೆ ನಾವು ಬಂದಿದ್ದೀವಿ. ನಾಗ ಚೈತನ್ಯಗೆ ಪ್ರಮುಖ ಪಾತ್ರ ಕೊಡಲು ಕಾರಣವಿದೆ. ಇಬ್ಬರು ಸ್ಟಾರ್ ನಟರು ಯಾರು ನಿಜ ಜೀವನದಲ್ಲಿ ತಂದೆ ಮಗ ಆಗಿರುತ್ತಾರೆ? ಅವರನ್ನು ಆನ್‌ಸ್ಕ್ರೀನ್‌ನಲ್ಲಿ ಡಿಫರೆಂಟ್ ಆಗಿ ತೋರಿಸಲಾಗುತ್ತದೆ. ಇದು ತಮಿಳು ಸಿನಿಮಾಗಳಲ್ಲಿ ವರ್ಕೌಟ್ ಆಗುತ್ತದೆ. ರಮ್ಯಾ ಕೃಷ್ಣ ಜೊತೆ ಕೆಲಸ ಮಾಡುವುದಕ್ಕೆ ನಾನು ತುಂಬಾನೇ ಎಂಜಾಯ್ ಮಾಡುತ್ತೇನೆ,' ಎಂದಿದ್ದಾರೆ ನಾಗಾರ್ಜುನ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.