ಪ್ರಚಾರದ ಗಿಮಿಕ್ ಅಲ್ಲ, ನಾವು ಮನುಷ್ಯರೇ; ಸಾರಾ ಜೊತೆಗಿನ ಲಿಂಕ್‌ಅಪ್ ಬಗ್ಗೆ ಕಾರ್ತಿಕ್ ಆರ್ಯನ್ ಪ್ರತಿಕ್ರಿಯೆ

Published : May 20, 2022, 05:01 PM IST
ಪ್ರಚಾರದ ಗಿಮಿಕ್ ಅಲ್ಲ, ನಾವು ಮನುಷ್ಯರೇ; ಸಾರಾ ಜೊತೆಗಿನ ಲಿಂಕ್‌ಅಪ್ ಬಗ್ಗೆ ಕಾರ್ತಿಕ್ ಆರ್ಯನ್ ಪ್ರತಿಕ್ರಿಯೆ

ಸಾರಾಂಶ

ಕಾರ್ತಿಕ್ ಆರ್ಯನ್ ಸಿನಿಮಾ ವಿಚಾರಗಳ ಜೊತೆಗೆ ವೈಯಕ್ತಿಕ ವಿಚಾರವಾಗಿಯೂ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಆಗಾಗ ಲಿಂಕ್ ಅಪ್, ಲವ್, ಬ್ರೇಕಪ್ ವಿಚಾರವಾಗಿ ಸದ್ದು ಮಾಡುತ್ತಿರುತ್ತಾರೆ. ಸಾರಾ ಮತ್ತು ಕಾರ್ತಿಕ್ ಇಬ್ಬರು ಪ್ರೀತಿಯಲ್ಲಿದ್ದಾರೆ ಎನ್ನುವ ವದಂತಿ ಬಾಲಿವುಡ್ ನಲ್ಲಿ ವೈರಲ್ ಆಗಿತ್ತು. ಇದೀಗ ಮೊದಲ ಬಾರಿಗೆ ಕಾರ್ತಿಕ್ ಆರ್ಯನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.  

ಬಾಲಿವುಡ್‌ನ ಖ್ಯಾತ ನಟ ಕಾರ್ತಿಕ್ ಆರ್ಯನ್(Kartik Aaryan) ಸದ್ಯ ಭೂಲ್ ಭೂಲೈಯಾ-2 (Bhool Bhulaiyaa 2)ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಕಾರ್ತಿಕ್ ಆರ್ಯನ್ ಸಿನಿಮಾ ಬಿಡುಗಡೆಯಾಗದೇ ಎರಡು ವರಷಗಳೇ ಆಗಿತ್ತು. ಕೊರೊನಾ ಬಳಿಕ ಮೊದಲ ಬಾರಿಗೆ ಕಾರ್ತಿಕ್ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಮೇ 20ರಂದು ಸಿನಿಮಾ ಬಿಡುಗಡೆಯಾಗಿದ್ದು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾರ್ತಿಕ್ ಆರ್ಯನ್ ಬಾಲಿವುಡ್ ನ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗಿದ್ದಾರೆ. ಭೂಲ್ ಭೂಲೈಯಾ 2 ಸಿನಿಮಾದ ಮೇಲು ನಿರೀಕ್ಷೆ ಹೆಚ್ಚಾಗಿತ್ತು. ಅದರಂತೆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಅಂದಹಾಗೆ ಕಾರ್ತಿಕ್ ಆರ್ಯನ್ ಸಿನಿಮಾ ವಿಚಾರಗಳ ಜೊತೆಗೆ ವೈಯಕ್ತಿಕ ವಿಚಾರವಾಗಿಯೂ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಆಗಾಗ ಲಿಂಕ್ ಅಪ್, ಲವ್, ಬ್ರೇಕಪ್ ವಿಚಾರವಾಗಿ ಸದ್ದು ಮಾಡುತ್ತಿರುತ್ತಾರೆ. ಅಂದಹಾಗೆ ಕಾರ್ತಿಕ್ ಹೆಸರು ಕಳೆದ ಎರಡು ವರ್ಷಗಳ ಹಿಂದೆ ನಟಿ ಸಾರಾ ಅಲಿ ಖಾನ್(Sara Ali Khan) ಜೊತೆ ಥಳಕುಹಾಕಿಕೊಂಡಿತ್ತು. ಸಾರಾ ಮತ್ತು ಕಾರ್ತಿಕ್ ಇಬ್ಬರು ಪ್ರೀತಿಯಲ್ಲಿದ್ದಾರೆ ಎನ್ನುವ ವದಂತಿ ಬಾಲಿವುಡ್ ನಲ್ಲಿ ವೈರಲ್ ಆಗಿತ್ತು. ಬಳಿಕ ಇಬ್ಬರು ದೂರ ದೂರ ಆದರು. ಈ ಬಗ್ಗೆ ಕಾರ್ತಿಕ್ ಆಗಲಿ ಅಥವ ಸಾರಾ ಆಗಲಿ ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಇದೀಗ ಮೊದಲ ಬಾರಿಗೆ ಕಾರ್ತಿಕ್ ಆರ್ಯನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅಂದಹಾಗೆ ಕಾರ್ತಿಕ್ ಆರ್ಯನ್ ಮತ್ತು ಸಾರಾ ಅಲಿ ಖಾನ್ ಇಮ್ತಿಯಾಜ್ ಅಲಿ ಅವರ ಲವ್ ಆಜ್ ಕಲ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಇದೇ ಸಮಯದಲ್ಲಿ ಇಬ್ಬರ ಡೇಟಿಂಗ್ ವಿಚಾರ ವೈರಲ್ ಆಗಿತ್ತು. ಆದರೆ ಇಬ್ಬರೂ ಡೇಟಿಂಗ್ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸಿನಿಮಾ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಇಬ್ಬರು ಇನ್ಸ್ಟಾಗ್ರಾಮ್ ನಲ್ಲಿ ಅನ್ ಫಾಲೋ ಮಾಡಿಕೊಳ್ಳುವ ಮೂಲಕ ದೂರ ದೂರ ಆದರು. ಇಬ್ಬರು ಬ್ರೇಕಪ್ ಸುದ್ದಿಯೂ ವೈರಲ್ ಆಗಿತ್ತು. ಆ ಬಗ್ಗೆ ಈಗ ಕಾರ್ತಿಕ್ ಮಾತನಾಡಿದ್ದಾರೆ.

Kartik Aryan: ಬಾಲಿವುಡ್‌ ನಟನಿಗೆ ಆಫರ್ ಕೊಟ್ಟ ಮಹಿಳಾ ಅಭಿಮಾನಿ!

ಲಿಂಕ್ ಅಪ್, ಡೇಟಿಂಗ್ ವಿಚಾರಗಳು ಸಹ ಸಿನಿಮಾ ಪ್ರಚಾರದ ಒಂದು ಭಾಗವಾಗಿರುತ್ತಾ ಎಂದು ಕೇಳಿದ ಪ್ರಶ್ನೆಗೆ ಕಾರ್ತಿಕ್ ಉತ್ತರಿಸಿದ್ದಾರೆ. ನವಭಾರತ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಾರ್ತಿಕ್, 'ಇಲ್ಲ ಇಲ್ಲಾ..ಆ ರೀತಿಯ ಪ್ರಚಾರ ಏನು ಇರಲ್ಲ. ನಾನು ಇದನ್ನ ಹೇಗೆ ವಿವರಿಸಲಿ..ಅಂದರೆ ನಾವು ಮನುಷ್ಯರೆ ತಾನೆ, ಎಲ್ಲವೂ ಪ್ರಚಾರ ಹೇಗೆ ಸಾಧ್ಯವಾಗುತ್ತದೆ. ಈ ವಿಷಯದ ಬಗ್ಗೆ ನಾನು ಹೇಳುವುದು ಇಷ್ಟೆ' ಎಂದಿದ್ದಾರೆ.

ಲವ್ ಆಜ್ ಕಲ್ ಸಿನಿಮಾದಲ್ಲಿ ಕಾರ್ತಿಕ್ ಮತ್ತು ಸಾರಾ ಅಲಿ ಖಾನ್ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ್ದರು. ಶೂಟಿಂಗ್ ಮಾತ್ರವಲ್ಲದೇ ಅದರ ಹೊರತಾಗಿಯೂ ಇಬ್ಬರೂ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಹಾಗಾಗಿ ಇಬ್ಬರ ನಡುವೆ ಡೇಟಿಂಗ್ ವದಂತಿ ಇತ್ತು. ಅಲ್ಲದೇ ಕರಣ್ ಜೋಹರ್(Karan Johar) ಅವರ ಕಾಫಿ ವಿತ್ ಕರಣ್ ಶೋನಲ್ಲಿ ಕಾರ್ತಿಕ್ ಆರ್ಯನ್ ಮೇಲೆ ಕ್ರಶ್ ಆಗಿದೆ ಎಂದು ಸಾರಾ ಹೇಳಿದ್ದರು.

20 ಕೋಟಿ ಕೊಡ್ತೀನಿ ನನ್ನ ಮದುವೆಯಾಗು ಎಂದ ಮಹಿಳಾ ಅಭಿಮಾನಿಗೆ ನಟ ಕಾರ್ತಿಕ್‌ ಕೊಟ್ಟ ಉತ್ತರ ವೈರಲ್!

ಲವ್ ಆಜ್ ಕಲ್ ಸಿನಿಮಾ ಬಳಿಕ ಸಾರಾ ಮತ್ತು ಕಾರ್ತಿಕ್ ಇಬ್ಬರು ಅವಾರ್ಡ್ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಣಿಸಿಕೊಂಡಿದ್ದರು. ಆಗ ಇಬ್ಬರು ಮಾತನಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಅಭಿಮಾನಿಗಳು ಮತ್ತೆ ಒಟ್ಟಿಗೆ ಸಿನಿಮಾ ಮಾಡಿ ಎಂದು ಹಾರೈಸಿದ್ದರು. ಆದರೆ ಮತ್ತೆ ಒಟ್ಟಿಗೆ ತೆರೆಮೇಲೆ ಮಿಂಚಿಲ್ಲ. ಅಂದಹಾಗೆ ಕಾರ್ತಿಕ್ ಹೆಸರು ಬಾಲಿವುಡ್ ನಟಿ ಕೃತಿ ಸನೂನ್ ಜೊತೆ ಕೇಳಿಬರುತ್ತಿದೆ. ಇಬ್ಬರ ಡೇಟಿಂಗ್ ವಿಚಾರ ವೈರಲ್ ಆಗಿದೆ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ನಟ ಜಗ್ಗೇಶ್​: ಮಾತು ನಿಜವಾಗೋಯ್ತು- ವಿಡಿಯೋ ವೈರಲ್​
ಅಮಿತಾಭ್ ಮಾತ್ರವಲ್ಲ, ಇವರೆಲ್ಲರೂ ಶೂಟಿಂಗ್ ಸೆಟ್‌ನಿಂದ ಜೀವ ಉಳಿಸಿಕೊಂಡು ಬಂದವರೇ