Cannes 2022; ದೀಪಿಕಾ ಬದಲು ಪ್ರಿಯಾಂಕಾ ಇರಬೇಕಿತ್ತು, ಹಿಗ್ಗಾಮುಗ್ಗಾ ಟ್ರೋಲ್ ಆಗ್ತಿರೋದೇಕೆ ನಟಿ?

Published : May 20, 2022, 04:17 PM IST
Cannes 2022; ದೀಪಿಕಾ ಬದಲು ಪ್ರಿಯಾಂಕಾ ಇರಬೇಕಿತ್ತು, ಹಿಗ್ಗಾಮುಗ್ಗಾ ಟ್ರೋಲ್ ಆಗ್ತಿರೋದೇಕೆ ನಟಿ?

ಸಾರಾಂಶ

ಕಾನ್ 2022, ಚಿತ್ರೋತ್ಸವದ ತೀರ್ಪುಗಾರರಲ್ಲಿ ಒಬ್ಬರಾಗಿರುವ ದೀಪಿಕಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಗೊಂದಲದಲ್ಲಿ ಪ್ರತಿಕ್ರಿಯೆ ನೀಡಿದ ರೀತಿಗೆ ದೀಪಿಕಾರನ್ನು ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ದೀಪಿಕಾ ಬದಲಿಗೆ ಪ್ರಿಯಾಂಕಾ ಚೋಪ್ರಾ ಇರಬೇಕಿತ್ತು,

ಪ್ರತಿಷ್ಠಿತ ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾರತೀಯ ಕಲಾವಿದರು ಮಿಂಚುತ್ತಿದ್ದಾರೆ. ಈ ಬಾರಿ ಭಾರತದ ಅನೇಕ ಕಲಾವಿದರು ಕಾನ್ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ. ಮೇ 17ರಂದು 75ನೇ ಕಾನ್ ಚಲನ ಚಿತ್ರೋತ್ಸವ ಅದ್ದೂರಿಯಾಗಿ ಪ್ರಾರಂಭವಾಗಿದೆೆ. ಈ ಬಾರಿಯ ಫೆಸ್ಟಿವಲ್ ನಲ್ಲಿ ಭಾರತದ ನಟಿ ದೀಪಿಕಾ ಪಡುಕೋಣೆ ಜ್ಯೂರಿಯಾಗಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಉದ್ಘಾಟನಾ ಸಮಾರಂಭದಲ್ಲಿ ದೇಸಿ ಉಡುಗೆ ಸೀರೆ ಧರಿಸಿ ಗಮನ ಸೆಳೆದಿದ್ದರು. ತರಹೇವಾರಿ ಧಿರಿಸಿನಲ್ಲಿ ದೀಪಿಕಾ ಅಭಿಮಾನಿಗಳ ಹೃದಯ ಗೆಲ್ಲುತ್ತಿದ್ದಾರೆ. ಈ ನಡುವೆ ಮತ್ತೊಂದು ಕಾರಣಕ್ಕೆ ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ.

ತೀರ್ಪುಗಾರರಲ್ಲಿ ಒಬ್ಬರಾಗಿರುವ ದೀಪಿಕಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಗೊಂದಲದಲ್ಲಿ ಪ್ರತಿಕ್ರಿಯೆ ನೀಡಿದ ರೀತಿಗೆ ದೀಪಿಕಾರನ್ನು ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ದೀಪಿಕಾ ಬದಲಿಗೆ ಪ್ರಿಯಾಂಕಾ ಚೋಪ್ರಾ ಇರಬೇಕಿತ್ತು, ಸರಿಯಾದ ಉತ್ತರ ನೀಡುತ್ತಿದ್ದರು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಅಷ್ಟಕ್ಕೂ ದೀಪಿಕಾಗೆ ಯಾವ ಪ್ರಶ್ನೆ ಎದುರಾಗಿತ್ತು, ದೀಪಿಕಾ ಹೇಳಿದ್ದೇನು ಎಂದರೆ, ನಟಿಗೆ ಜ್ಯೂರಿಯಾಗಿ ನಿಮ್ಮ ಪಾತ್ರವೇನು ಮತ್ತು ಸಿನಿಮಾಗಳನ್ನು ಹೇಗೆ ಜಡ್ಜ್ ಮಾಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ ದೀಪಿಕಾ, ಇದೊಂದು ದೊಡ್ಡ ಜವಾಬ್ದಾರಿ ಎನ್ನುವ ಸತ್ಯ ನಮಗೆಲ್ಲ ಗೊತ್ತಿದೆ. ಆದರೆ ಈ ಜವಾಬ್ದಾರಿ ಹೊರೆಯಾಗುವುದಿಲ್ಲ ಎಂದು ನಾವು ಪರಸ್ಪರ ಭರವಸೆ ನೀಡಿದ್ದೇವೆ ಎಂದರು.

Cannes 2022; ಪ್ರತಿಷ್ಠಿತ ಕಾನ್ ಚಿತ್ರೋತ್ಸವದಲ್ಲಿ ಸೀರೆಯಲ್ಲಿ ಮಿಂಚಿದ ದೀಪಿಕಾ

ಬಳಿಕ ಮಾತು ಮುಂದುವರೆಸಿದ ದೀಪಿಕಾ, ಸಿನಿಮಾ ಎನ್ನುವುದು ಶಕ್ತಿಶಾಲಿ ಸಾಧನ, ಅಂತಹ ಶಕ್ತಿಯುತ ಮಾಧ್ಯಮ ಜನರ ಜೀವನದ ಮೇಲೆ ಪ್ರಭಾವ ಬೀರುತ್ತದೆ ಮತ್ತು ಜನರ ಜೀವನ ಸ್ಪರ್ಶಿಸುವ ಸಾಮರ್ಥ್ಯ ಹೊಂದಿದೆ ಎಂದು ಭಾವಿಸುತ್ತೇನೆ. ಹಾಗಾಗಿ ಮುಂದಿನ ಎರಡು ವಾರ ನಾವು ಈ ಹೊರೆ ಮತ್ತು ಜವಾಬ್ದಾರಿ ಹೊಂದಿದ್ದೇವೆ. ಆದರೆ ಇದನ್ನು ಆನಂದಿಸುತ್ತೇವೆ. ನಾವೆಲ್ಲರೂ ಕ್ರಿಯೇಟಿವ್ ಜನರು ಎಂದು ಹೇಳಿದರು.

ಓವರ್ ಡಯಟ್‌ನಿಂದ ಅಜ್ಜಿ ರೀತಿ ಕಾಣಿಸುತ್ತಿರುವ ಐಶ್ವರ್ಯ ರೈ; ಮತ್ತೆ ಟ್ರೋಲ್?

ಈ ಪ್ರಶ್ನೆಗೆ ದೀಪಿಕಾ ಸರಿಯಾಗಿ ಉತ್ತರ ನೀಡಲ್ಲ, ಗೊಂದಲಕ್ಕೆ ಒಳಗಾಗಿದ್ದಾರೆ ಎನ್ನುವುದು ನೆಟ್ಟಿಗರ ಆಕ್ರೋಶ. ದೀಪಿಕಾ ಪ್ರತಿಕ್ರಿಯೆ ಇದೀಗ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಅನೇಕರು ಆ ಸ್ಥಾನದಲ್ಲಿ ಪ್ರಿಯಾಂಕಾ ಚೋಪ್ರಾ ಇರಬೇಕಿತ್ತು. ಪ್ರಿಯಾಂಕಾ ಪ್ರತಿಭಾವಂತ ನಟಿ, ತೀರ್ಪುಗಾರರನ್ನಾಗಿ ಪ್ರಿಯಾಂಕಾ ಅವರನ್ನು ಆಯ್ಕೆ ಮಾಡಬೇಕಿತ್ತು ಎಂದು ಟ್ವೀಟ್ ಮಾಡುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ತೀರ್ಪುಗಾರರಿಗೆ ಸುಂದರ ಮುಖಕ್ಕಿಂತ ಅಗತ್ಯವಾದುದು ಇನ್ನು ಇದೆ ಎಂದು ಹೇಳುತ್ತಿದ್ದಾರೆ.

2017ರಿಂದ ದೀಪಿಕಾ ಪುಡುಕೋಣೆ ಕಾನ್ ಸಿನಿಮೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ನಾನಾತರಹದ ಕಾಸ್ಟ್ಯೂಮ್ ನಲ್ಲಿ ದೀಪಿಕಾ ಮಿಂಚಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿರುವ ದೀಪಿಕಾ ಫೋಟೋಗಳು ಪ್ರತಿವರ್ಷವೂ ವೈರಲ್ ಆಗುತ್ತವೆ. ಈ ಬಾರಿ ಕೂಡ ದೀಪಿಕಾ ವಿಭಿನ್ನ ಉಡುಪು ಧರಿಸಿ ಮಿಂಚುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

15 ವರ್ಷಗಳಿಂದ ನಾಗಾರ್ಜುನರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆ ಯಾವುದು? ಯಾಕೆ ಕಡಿಮೆಯಾಗಿಲ್ಲ?
ಆತ ನನ್ನ ಕ್ಲಾಸ್‌ಮೇಟ್.. ಗೆಳೆಯ ಶ್ರೀನಿವಾಸನ್ ನಿಧನ ಆಘಾತ ತಂದಿದೆ: ಭಾವುಕರಾದ ರಜನಿಕಾಂತ್