ಗಟ್ಟಿಮೇಳ ಧಾರಾವಾಹಿಯ ನಟಿ ಮಹತಿ ವೈಷ್ಣವಿ ಭಟ್ (Mahati Vaishnavi Bhat) SSLC ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಮಹತಿ ಸಾಧನೆಗೆ ತಂದೆ-ತಾಯಿ, ಕುಟುಂಬದವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಮಹತಿಗೆ ಸ್ನೇಹಿತರು ಮತ್ತು ವಾಹಿನಿ ಕಡೆಯಿಂದ ಅಭಿನಂದನೆ ತಿಳಿಸುತ್ತಿದ್ದಾರೆ.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2022 (SSLC Results 2022) ಪ್ರಕಟವಾಗಿದೆ. ಈ ಬಾರಿ ಶೇಕಡ 85.63 ರಷ್ಟು ಫಲಿತಾಂಶ ಬಂದಿದ್ದು, ಇದು ಕಳೆದ ಹತ್ತು ವರ್ಷಗಳಲ್ಲಿಯೇ ದಾಖಲೆಯ ರಿಸಲ್ಟ್ ಆಗಿದೆ. ಅಂದಹಾಗೆ ಈ ವರ್ಷ 625ಕ್ಕೆ 625 ಅಂಕಗಳನ್ನು ಒಟ್ಟು 145 ವಿದ್ಯಾರ್ಥಿಗಳು ಪಡೆದಿದ್ದಾರೆ. ಈ ಬಾರಿ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಗಟ್ಟಿಮೇಳ(Gattimela) ಧಾರಾವಾಹಿಯ ನಟಿ ಮಹತಿ ವೈಷ್ಣವಿ ಭಟ್ (Mahati Vaishnavi Bhat) SSLC ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಮಹತಿ ಸಾಧನೆಗೆ ತಂದೆ-ತಾಯಿ ಮತ್ತು ಕುಟುಂಬದವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ನಟಿ ಮಹತಿ ವೈಷ್ಣವಿ ಭಟ್ SSLCಯಲ್ಲಿ 625ಕ್ಕೆ 619 ಅಂಕಗಳನ್ನು ಪಡೆದಿದ್ದಾರೆ. ಕನ್ನಡದಲ್ಲಿ ಮಹತಿ 125ಕ್ಕೆ 124 ಅಂಕ ಪಡೆದಿದ್ದಾರೆ. ಇಂಗ್ಲಿಷ್ ನಲ್ಲಿ 100, ಹಿಂದಿಯಲ್ಲಿ 99, ಗಣಿತದಲ್ಲಿ 100, ವಿಜ್ಞಾನದಲ್ಲಿ 97 ಮತ್ತು ಸಮಾಜ ವಿಜ್ಞಾನದಲ್ಲಿ 99 ಅಂಕಗಳನ್ನು ಗಳಿಸಿದ್ದಾರೆ. ಅಂದಹಾಗೆ ಈ ಬಗ್ಗೆ ನಟಿ ಮಹತಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಂದೆ-ತಾಯಿ, ವಾಹಿನಿ ಮತ್ತು ಶಿಕ್ಷಕರಿಗೆ ಮಹತಿ ಧನ್ಯವಾದ ತಿಳಿಸಿದ್ದಾರೆ.
Gattimela Serial: ಗಟ್ಟಿಮೇಳ ಸೀರಿಯಲ್‌ನಲ್ಲಿ ಕೋರ್ಟ್ ಸೀನ್, ಹೀರೋನೇ ಲಾಯರ್!
undefined
'ಫಲಿತಾಂಶ ಬಂದಿದೆ. ನಿಜವಾಗಿಯೂ ಸಂತೋಷವಾಯಿತು. ಶೇ 99.04 ಆಗಿದೆ. ಅಪ್ಪ, ಅಮ್ಮ, ಅಮ್ಮಮ್ಮ, ಅಣ್ಣಯ್ಯ, ತಾತಯ್ಯ ಮತ್ತು ನನ್ನ ಶಿಕ್ಷಕರು, ಶಾಲೆ ಅಧ್ಯಯನ ಹಾಗೂ ನಟನೆಯಲ್ಲಿ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ಗಟ್ಟಿಮೇಳ ತಂಡ ಮತ್ತು ಜೀ ವಾಹಿನಿ ಬೆಂಬಲ. ನೀವಿಲ್ಲದೆ ಇದು ಸಾದ್ಯವಿಲ್ಲ' ಎಂದು ಬರೆದುಕೊಂಡಿದ್ದಾರೆ. ಮಹತಿ ಸಾಧನೆಗೆ ಅನೇಕರು ಕಾಮೆಂಟ್ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಹಾಗೂ ಗಟ್ಟಿಮೇಳ ಧಾರಾವಾಹಿ ತಂಡದ ಅನೇಕರು ಕೂಡ ವಿಶ್ ಮಾಡಿದೆ.
Jothe Jotheyali : ಆರ್ಯವರ್ಧನ್ ಆಸ್ತಿಯೆಲ್ಲ ಹರ್ಷವರ್ಧನ್ ಪಾಲಾಗುತ್ತಾ? ಅನು ರೂಪದ ರಾಜನಂದಿನಿ ಮಹಿಮೆ ಇದು!
ನಟಿ ಮಹತಿ ವೈಷ್ಣವಿ ಭಟ್ ಧಾರಾವಾಹಿಗೂ ಎಂಟ್ರಿ ಕೊಡುವ ಮೊದಲು ಜೀ ನ್ನಡದಲ್ಲಿ ಪ್ರಸಾರವಾಗುತ್ತಿದ್ದ ಡ್ರಾಮ ಜೂನಿಯರ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಈ ಶೋನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮಹತಿ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದರು. ಈ ಶೋಗಳಿಕ ಧಾರಾವಾಹಿಗೆ ಎಂಟ್ರಿ ಕೊಟ್ಟ ಮಹತಿ ಮತ್ತಷ್ಟು ಖ್ಯಾತಿಗಸಿದರು. ಓದು, ನಟನೆ ಎರಡನ್ನು ಬ್ಯಾಲೆನ್ಸ್ ಮಾಡಕೊಂಡು ಸಾಗುತ್ತಿರುವ ಮಹತಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.