ಬಾಲಿವುಡ್‌ನ ಖ್ಯಾತ ನಟನ ತಾಯಿ ಮತ್ತು ತಂದೆ ಎರೆಡರಡು ಮದುವೆಯಾಗಿದ್ದಾರೆ. ಇನ್ನು ಈ ನಟನ ಸೋದರನ ಹೆಸರು ಸಹ ಹಲವು ನಟಿಯರ ಜೊತೆ ಕೇಳಿ ಬಂದಿತ್ತು. ಇದೀಗ ಈ ನಟ ಮದುವೆ ಬಗ್ಗೆ ವಿಚಿತ್ರ ಆಸೆ ಹೊರ ಹಾಕಿದ್ದಾನೆ.
ಮುಂಬೈ: ಬಾಲಿವುಡ್ ಅಂಗಳದ ಸ್ಟಾರ್ ಕುಟುಂಬದ ಕುಡಿಯಾಗಿರುವ ಧಡಕ್ ಸಿನಿಮಾ ಖ್ಯಾತಿಯ ನಟ ಇಶಾನ್ ಖಟ್ಟರ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಇಶಾನ್ ಖಟ್ಟರ್ ನಟನೆಯ ದಿ ಪರ್ಫೆಕ್ಟ್ ಕಪಲ್ ಸಿರೀಸ್ ಬಿಡುಗಡೆಯಾಗಿದೆ. ಮಾಧ್ಯಮಗೋಷ್ಠಿಯಲ್ಲಿ ನಾಚಿಕೊಳ್ಳುತ್ತಲೇ ಭವಿಷ್ಯ ಹಾಗೂ ಸಂಗಾತಿಯ ಬಗ್ಗೆ ಇಶಾನ್ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ತಮ್ಮದೇ ಆದ ಫ್ಯಾಮಿಲಿ ಇರಬೇಕು ಎಂದು ನಾನು ಬಯಸುತ್ತೇನೆ. ಏಕಪತ್ನಿ ವ್ರತಸ್ತನಾಗಿರಬೇಕು ಅನ್ನೋದು ನನ್ನಾಸೆ ಎಂದು ಇಶಾನ್ ಹೇಳಿಕೊಂಡಿದ್ದಾರೆ.
ಸಂದರ್ಶನದಲ್ಲಿ ಇಶಾನ್ ಖಟ್ಟರ್‌ಗೆ ಲವ್ ಲೈಫ್ ಮತ್ತು ಮುಂದಿನ ಜೀವನದ ಪ್ಲಾನ್ ಹೇಗಿರಬೇಕೆಂದು ಬಯಸುತ್ತೀರಿ ಎಂದು ಕೇಳಲಾಗಿತ್ತು. ಮನೆ ಮತ್ತು ಮಕ್ಕಳ ಸುಂದರ ಕುಟುಂಬ ಇರಬೇಕೆಂದು ಬಯಸುತ್ತೇನೆ. ನಾನು ಸಿಂಪಲ್, ಜೀವನದಲ್ಲಿ ಒಮ್ಮೆ ಮದುವೆಯಾಗಬೇಕು ಅನ್ನೋದು ನಿರ್ಧಾರ. ನೀವೆಲ್ಲರೂ ಓರ್ವ ಸಂಗಾತಿಯನ್ನು ಹೊಂದಿದ್ದೀರಿ ಎಂದು ತಿಳಿದುಕೊಳ್ಳುತ್ತೇನೆ. ಏಕಪತ್ನಿ ವ್ರತಸ್ಥನಾಗಿರಬೇಕು ಎಂಬುವುದು ನನ್ನ ಆಸೆ. ನಾನು ಒಳ್ಳೆಯ ರಿಲೇಶನ್‌ಶಿಪ್‌ನಲ್ಲಿದ್ದು, ಒಳ್ಳೆಯ ಅನುಭವಗಳನ್ನು ಪಡೆದುಕೊಂಡಿದ್ದೇನೆ ಎಂದು ಹೇಳುವ ಮೂಲಕ ರಿಲೇಶನ್‌ಶಿಪ್ ಬಗ್ಗೆ ಮಾತನಾಡಿದ್ದಾರೆ.
GOAT ಸಿನಿಮಾದ ವಿಶೇಷ ಹಾಡಿಗೆ ತ್ರಿಷಾ ಪಡೆದ ಸಂಭಾವನೆ ಎಷ್ಟು?
ಕಳೆದ ಕೆಲವು ದಿನಗಳಿಂದ ಇಶಾನ್ ಖಟ್ಟರ್ ರಿಲೇಶನ್‌ಶಿಪ್ ಹೊಂದಿದ್ದಾರೆ ಎಂಬ ಸುದ್ದಿಗಳು ಪ್ರಕಟವಾಗಿದ್ದವು. ಗೆಳತಿ ಜೊತೆ ಇಶಾನ್ ಖಟ್ಟರ್ ಸುತ್ತಾಡಿದ ಕೆಲ ಫೋಟೋಗಳು ವೈರಲ್ ಆಗಿದ್ದವು. ಈ ಬಗ್ಗೆಯೂ ಮಾತನಾಡಿರುವ ಇಶಾನ್ ಖಟ್ಟರ್, ಪಾಪರಾಜಿಗಳನ್ನು ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ಪಾಪರಾಜಿಗಳೇ ಅವರೇ ತಮ್ಮನ್ನು ನಿಯಂತ್ರಿಸಕೊಳ್ಳಬೇಕಿದೆ. ಬೇರೆಯವರ ಪರ್ಸನಲ್ ಲೈಫ್ ಗೌರವಿಸಬೇಕು ಎಂದು ಗೆಳತಿಯ ಫೋಟೋ ಕ್ಲಿಕ್ಕಿಸದಂತೆ ಮನವಿ ಮಾಡಿಕೊಂಡರು.
ಇಶಾನ್ ಏಕಪತ್ನಿ ವ್ರತಸ್ಥ ಹೇಳಿಕೆಗೆ ಫ್ಯಾನ್ಸ್ ತರೇಹಾರಿ ಕಮೆಂಟ್ ಮಾಡಿದ್ದಾರೆ. ನಿಮ್ಮ ತಂದೆ ರಾಜೇಶ್ ಖಟ್ಟರ್ ಮತ್ತು ತಾಯಿ ನಿಲಿಮಾ ಅಜೀಮ್ ಎರಡು ಮದುವೆಯಾಗಿದ್ದಾರೆ. ನಿಮ್ಮ ನಿರ್ಧಾರ ಒಳ್ಳೆಯದು ಎಂದು ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ. ನೀಲಿಮಾ ಅಜೀಮ್ ಮೊದಲ ಪತಿ ಪಂಕಜ್ ಕಪೂರ್ ಜೊತೆ ಡಿವೋರ್ಸ್ ನಂತರ ರಾಜೇಶ್ ಖಟ್ಟರ್ ಅವರನ್ನು ಮದುವೆಯಾಗಿದ್ದಾರೆ. ವಂದನಾ ಸಜ್ನಾನಿ ಎಂಬವರನ್ನು ಸಹ ರಾಜೇಶ್ ಖಟ್ಟರ್ ಮದುವೆಯಾಗಿದ್ದಾರೆ. ಪಂಕಜ್ ಕಪೂರ್-ನೀಲಿಮಾ ಅಜೀಮ್ ದಂಪತಿಯ ಪುತ್ರ ನಟ ಶಾಹಿದ್ ಕಪೂರ್.
ವಿಜಯ್ ವರ್ಮಾ ಜೊತೆ ಬ್ರೇಕಪ್ ಆಯ್ತಾ? ಮೊದಲ ಇಬ್ಬರು ಮಾಜಿಗಳ ಬಗ್ಗೆ ಮಿಲ್ಕಿ ಬ್ಯುಟಿಯ ಮನದಾಳದ ಮಾತು