ಸೋಷಿಯಲ್ ಮೀಡಿಯಾದಲ್ಲಿ ಡಿವೋರ್ಸ್ ಪೋಸ್ಟ್ ಹಾಕಿದ್ದಕ್ಕೆ ಆರತಿ ಗರಂ. ಹಾಗಿದ್ರೆ ಇಲ್ಲಿ ಮೋಸ್ ಮಾಡುತ್ತಿರುವುದು ಯಾರು?
ತಮಿಳು ಚಿತ್ರರಂಗದ ಖ್ಯಾತ ನಟ ಜಯಂ ರವಿ ಮತ್ತು ಪತ್ನಿ ಆರತಿ 15 ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದಾರೆ. ಇವರಿಬ್ಬರ ಡಿವೋರ್ಸ್ ದೊಡ್ಡ ಸುದ್ದಿ ಮಾಡುತ್ತಿದೆ. ಡಿವೋರ್ಸ್ ಬಗ್ಗೆ ಮೊದಲು ಪೋಸ್ಟ್ ಹಾಕಿದ್ದು ಜಯಂ ರವಿ, ಇದಾದ ಮೇಲೆ ಆರತಿ ವಿರುದ್ಧ ಸಾಕಷ್ಟು ನೆಗೆಟಿವ್ ಕಾಮೆಂಟ್ ಮತ್ತು ಪೋಸ್ಟ್ ಹರಿದಾಡುತ್ತಿದೆ. ಇದರಿಂದ ಬೇಸರಗೊಂಡ ಆರತಿ ಮೊದಲ ಪೋಸ್ಟ್ ಹಂಚಿಕೊಂಡಿದ್ದಾರೆ.
'ನನ್ನ ಮದುವೆ ವಿಚ್ಛೇದನ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಕ್ಕೆ ತುಂಬಾ ಬೇಸರ ಮತ್ತು ನೋವಾಗುತ್ತಿದೆ, ಇದನ್ನು ಮಾಡಲು ನನ್ನ ಅನುಮತಿ ಪಡೆದಿರಲಿಲ್ಲ. 18 ವರ್ಷಗಳ ಕಾಲ ಜೊತೆಗಿದ್ದ ವ್ಯಕ್ತಿಯ ಬಗ್ಗೆ ಏನೇ ಪೋಸ್ಟ್ ಮಾಡಿದ್ದರು ಅವರ ಗೌರವ ಮತ್ತು ಪ್ರೈವಸಿಗೆ ದಕ್ಕೆ ಬಾರದಂತೆ ನೋಡಿಕೊಳ್ಳುವುದು ಉತ್ತಮ' ಎಂದು ಪತ್ರದಲ್ಲಿ ಆರತಿ ಬರೆದುಕೊಂಡಿದ್ದಾರೆ.
ಶೂಟಿಂಗ್ ಮನೆ ಮಾಡಲು ಹೋಗಿ 70 ಲಕ್ಷ ಲಾಸ್, ಕೊನೆಗೂ ಸತ್ಯ ಬಿಚ್ಚಿಟ್ಟ ಅನುಪಮಾ ಗೌಡ!
ನಾನು ಹಲವು ಸಲ ನನ್ನ ಪತಿ ಜೊತೆ ನೇರವಾಗಿ ಮಾತನಾಡಲು ಪ್ರಯತ್ನ ಪಟ್ಟಿದ್ದೀನಿ ಏಕೆಂದರೆ ನಾವು ನಮಗೆ ನಾವು ಕೊಟ್ಟ ಮಾತು ಮತ್ತು ಕುಟುಂಬಸ್ಥರ ಗೌರವ ಮುಖ್ಯವಾಗುತ್ತದೆ. ಆದರೆ ನನಗೆ ಅವಕಾಶ ಕೊಡಲಿಲ್ಲ. ಮಕ್ಕಳು ಮತ್ತು ನನ್ನ ಬಗ್ಗೆ ಯೋಚನೆ ಮಾಡದೆ ಅನೌನ್ಸ್ ಮಾಡಿರುವುದಕ್ಕೆ ಬೇಸರವಾಗುತ್ತಿದೆ. ಇಬ್ಬರೂ ನಿರ್ಧಾರ ತೆಗೆದುಕೊಂಡು ಮದುವೆಯನ್ನು ಅಂತ್ಯ ಮಾಡಿಲ್ಲ ಇದು ಸಂಪೂರ್ಣವಾಗಿ ಒಂದು ಸೈಡ್ ಆಗಿತ್ತು ಇದರಿಂದ ನನ್ನ ಕುಟುಂಬಕ್ಕೆ ಏನೂ ದೊರಕಿಲ್ಲ.' ಎಂದು ಆರತಿ ಹೇಳಿದ್ದಾರೆ.
ಇಷ್ಟೇಲಾ ನೋವಾಗುತ್ತಿದ್ದರು ಪಬ್ಲಿಕ್‌ನಲ್ಲಿ ಯಾವುದೇ ಕಾಮೆಂಟ್ ಮಾಡದಂತೆ ದೂರ ಉಳಿದಿರುವೆ. ಅನೌನ್ಸ್‌ಮೆಂಟ್ ನಂತರ ನನ್ನ ವಿರುದ್ಧ ಸಾಕಷ್ಟು ಕಥೆಗಳನ್ನು ಕಟ್ಟಲಾಗಿದೆ ಅಲ್ಲದೆ ನನ್ನ ವ್ಯಕ್ತಿತ್ವದ ಮೇಲೆ ಅನೇಕರು ಅಟ್ಯಾಕ್ ಮಾಡಿದ್ದಾರೆ. ತಾಯಿಯಾಗಿ ನನ್ನ ಮೊದಲ ಪ್ರಾಮುಖ್ಯತೆ ಏನೇ ಇದ್ದರೂ ನನ್ನ ಮಕ್ಕಳಿಗೆ. ಮಕ್ಕಳು ಮರ್ಯಾದೆ ಹೋಗುವ ಪರಿಸ್ಥಿತಿ ಎದುರಾಗುತ್ತಿರುವ ಕಾರಣ ನಾನು ಸುಮ್ಮನಿರಲಾರೆ ಅಲ್ಲದೆ ನಮ್ಮ ಮೇಲೆ ಬಂದರುವ ಆರೋಪಗಳನ್ನು ಸಾಭೀತು ಮಾಡಲಿ. ಈ ಸಮಯದಲ್ಲಿ ಮಕ್ಕಳಿಗೋಸ್ಕರ ನಾನು ಧೈರ್ಯವಾಗಿ ನಿಂತು ಎದುರಿಸಲು ಸಜ್ಜಾಗಿರುವೆ. ಸಮಯ ಕಳೆಯುತ್ತಿದ್ದಂತೆ ನಮ್ಮ ಪರಿಸ್ಥಿತಿ ಏನೂ ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ ಎಂದಿದ್ದಾರೆ ಆರತಿ.
ನನ್ನ ಯೋಗ್ಯತೆ ಇವಾಗ ಗೊತ್ತಾಗಲಿ; ರಂಗಿತರಂಗ ಚಿತ್ರಕ್ಕೆ ಬಂದ ಸಂಭಾವನೆ ಹಿಂದಿನ ಸತ್ಯ ಬಿಚ್ಚಿಟ್ಟ ಪ್ರಮೋದ್ ಶೆಟ್ಟಿ!
ಇಷ್ಟು ವರ್ಷಗಳಿಂದ ನಮಗೆ ಸಪೋರ್ಟ್ ಮಾಡಿಕೊಂಡು ಬಂದಿರುವ ಸ್ನೇಹಿತರು, ಅಭಿಮಾನಿಗಳು ಮತ್ತು ಮಾಧ್ಯಮದವರಿಗೆ ಧನ್ಯವಾದಗಳು. ನಿಮ್ಮ ಪ್ರೀತಿ ಮತ್ತು ಆಶೀರ್ವಾದದಿಂದ ನಾವು ಇಷ್ಟು ವರ್ಷ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗಿದ್ದು ಆದರೆ ಈ ಪರಿಸ್ಥಿತಿಯಲ್ಲಿ ನಮಗೆ ಪ್ರೈವಸಿ ಕೊಡಿ ಎಂದು ಆರತಿ ಮನವಿ ಮಾಡಿಕೊಂಡಿದ್ದಾರೆ.