ಬಾಲಿವುಡ್​ ನಟಿ ಮಲೈಕಾ ಅರೋರಾ ತಂದೆ ಆತ್ಮಹತ್ಯೆಗೆ ಶರಣು? ಮಗಳ ರಹಸ್ಯ ಪೋಸ್ಟ್​ ಬೆನ್ನಲ್ಲೇ ಘಟನೆ!

Published : Sep 11, 2024, 12:29 PM ISTUpdated : Sep 11, 2024, 03:26 PM IST
ಬಾಲಿವುಡ್​ ನಟಿ ಮಲೈಕಾ ಅರೋರಾ ತಂದೆ ಆತ್ಮಹತ್ಯೆಗೆ ಶರಣು? ಮಗಳ ರಹಸ್ಯ ಪೋಸ್ಟ್​ ಬೆನ್ನಲ್ಲೇ ಘಟನೆ!

ಸಾರಾಂಶ

ಬಾಲಿವುಡ್​ ನಟಿ- ಮಾಡೆಲ್ ಮಲೈಕಾ ಅರೋರಾ ತಂದೆ ಆತ್ಮಹತ್ಯೆಗೆ ಶರಣಾಗಿರುವುದಾಗಿ ವರದಿಯಾಗಿದೆ. ಮಲೈಕಾ ನಿನ್ನೆಯಷ್ಟೇ ರಹಸ್ಯ ಪೋಸ್ಟ್​ ಹಂಚಿಕೊಂಡಿದ್ದು, ಅದರ ಬೆನ್ನಲ್ಲೇ ಈ ಘಟನೆ ನಡೆದಿದೆ.   

ಬಾಲಿವುಡ್​ ಖ್ಯಾತ ನಟಿ ಮಲೈಕಾ ಅರೋರಾ ಅವರ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಎಎನ್​ಐ ಸುದ್ದಿ ಸಂಸ್ಥೆ ಈ ಬಗ್ಗೆ ಮಾಹಿತಿ ನೀಡಿದೆ. ಅನಿಲ್​ ಅರೋರಾ ಅವರು ಟೆರೇಸ್​ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದ್ದು, ಇನ್ನಷ್ಟೇ ಸಂಪೂರ್ಣ ವಿವರ ಹೊರಬರಬೇಕಿದೆ. ಸದ್ಯ ಪೊಲೀಸ್​ ತಂಡ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದೆ. 
ಮಲೈಕಾ ಮತ್ತು ಅವರ ದಶಕಗಳ ಲಿವ್​ ಇನ್​ ಪಾರ್ಟನಲ್​  ಅರ್ಜುನ್​ ಕಪೂರ್​ ಸಂಬಂಧ ಕೊನೆಗೊಳಿಸಿದ್ದಾರೆ ಎಂದು ವರದಿಯಾದ ಬೆನ್ನಲ್ಲೇ ಇಂಥದ್ದೊಂದು ಶಾಕಿಂಗ್​ ನ್ಯೂಸ್​ ಬಂದಿದೆ. ನಿನ್ನೆಯಷ್ಟೇ ಮಲೈಕಾ ಅವರು, ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ರಹಸ್ಯ ಸಂದೇಶವೊಂದನ್ನು ಶೇರ್​ ಮಾಡಿಕೊಂಡಿದ್ದರು.  ಇದು ಅವರ ಬ್ರೇಕಪ್ ಬಗೆಗಿನ ಸುದ್ದಿಗಳಿಗೆ ಪುಷ್ಟಿಕೊಡುವಂತಿದೆ.  

ನಿಮ್ಮ ಸಂತೋಷಕ್ಕಾಗಿ ಸಂತೋಷವಾಗಿರುವ ಮತ್ತು ನಿಮ್ಮ ದುಃಖಕ್ಕಾಗಿ ದುಃಖಿಸುವ ಜನರನ್ನು ಯಾವಾಗಲೂ ಗಮನಿಸಿ. ಅವರು ನಿಮ್ಮ ಹೃದಯದಲ್ಲಿ ವಿಶೇಷ ಸ್ಥಾನಕ್ಕೆ ಅರ್ಹರು ಎಂದು ಈ ಪೋಸ್ಟ್​ನಲ್ಲಿ ನಟಿ ಹೇಳಿದ್ದಾರೆ. ಇದರ ಮಧ್ಯೆಯೇ ಶಾಕಿಂಗ್​ ನ್ಯೂಸ್​ ಬಂದಿದ್ದು, ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಅಚಾನಕ್​ ಆಗಿ ನಡೆದ  ಘಟನೆಯೋ ಎಂಬ ಬಗ್ಗೆ ಇನ್ನಷ್ಟೇ  ಮಾಹಿತಿ ಬೇಕಿದೆ. ಘಟನೆ ಬಗ್ಗೆ ತಿಳಿಯುತ್ತಲೇ ಮಲೈಕಾ ಅವರ ಮೊದಲ ಪತಿ ಅರ್ಬಾಜ್​ ಖಾನ್​ ಮಲೈಕಾ ಮನೆಗೆ ಧಾವಿಸಿದ್ದಾರೆ. 

ಪ್ರೀತಿಗಾಗಿ ಸಾಯುವತನಕವೂ ಹೋರಾಡ್ತಾರಂತೆ ಮಲೈಕಾ! 1,2,3... ಯಾರ ಜೊತೆ ಕೇಳ್ತಿದ್ದಾರೆ ನೆಟ್ಟಿಗರು!

ಮಲೈಕಾ ಅರೋರಾ 11 ವರ್ಷ ವಯಸ್ಸಿನವನಾಗಿದ್ದಾಗ ಆಕೆಯ ಅಪ್ಪ-ಅಮ್ಮ  ಬೇರ್ಪಟ್ಟಿದ್ದಾರೆ.  ಅವರು ಮತ್ತು ಆ ಸಮಯದಲ್ಲಿ 6 ವರ್ಷ ವಯಸ್ಸಿನ ಸಹೋದರಿ ಅಮೃತಾ ರಾವ್ ಅವರನ್ನು ಅವರ ತಾಯಿ ಜೋಯ್ಸ್ ಪಾಲಿಕಾರ್ಪ್ ಬೆಳೆಸಿದ್ದಾರೆ.  ಈ ಕುರಿತು ಹಿಂದೊಮ್ಮೆ  ಮಾತನಾಡಿದ್ದ ನಟಿ,  ನನ್ನ ಹೆತ್ತವರು  ಪ್ರತ್ಯೇಕವಾದ ಕಾರಣ, ನನ್ನ ಅಮ್ಮನನ್ನು ಹೊಸ ವಿಧದಲ್ಲಿ ತಿಳಿಯುವ ಅವಕಾಶ ನನಗೆ ಸಿಕ್ಕಿತು ಎಂದು ಹೇಳಿದ್ದರು. ತಾಯಿಯಿಂದ ಪ್ರತ್ಯೇಕಗೊಂಡ ಬಳಿಕವೂ ಮಗಳ ವಿಷಯದಲ್ಲಿ ಅನಿಲ್​ ಅವರು ಸದಾ ಸಪೋರ್ಟಿವ್​ ಆಗಿದ್ದರು. ಮಲೈಕಾ ತಮ್ಮ ಮೊದಲ ಪತಿ ಅರ್ಬಾಜ್​ ಖಾನ್​ ಅವರಿಂದ ಡಿವೋರ್ಸ್​ ಪಡೆದ ಬಳಿಕ, ತಮಗಿಂತ ಚಿಕ್ಕವರಾಗಿರುವ ಅರ್ಜುನ್ ಕಪೂರ್​ ಜೊತೆ ದಶಕದಿಂದ ಲಿವ್​ ಇನ್​ ರಿಲೇಷನ್​ನಲ್ಲಿ ಇದ್ದರೂ, ಅದನ್ನು ಕೂಡ ಅವರು ಬೆಂಬಲಿಸಿದ್ದರು ಎನ್ನಲಾಗಿದೆ. ಅಷ್ಟಕ್ಕೂ ಅರ್ಜುನ್​ ಕಪೂರ್​ ಮತ್ತು ಮಲೈಕಾ ನಡುವೆ ಬಿರುಕು ಬಿಟ್ಟಿದೆ ಎಂಬ ಸುದ್ದಿ ಕಳೆದೊಂದು ವರ್ಷದಿಂದ ಬಿ-ಟೌನ್​ನಲ್ಲಿ ಸದ್ದು ಮಾಡುತ್ತಲೇ ಇದೆ. ಈ ರೀತಿ ಸುದ್ದಿಯಾದಾಗಲೆಲ್ಲಾ ಈ ಜೋಡಿ ಒಟ್ಟಿಗೇ ಕಾಣಿಸಿಕೊಂಡು ಎಲ್ಲರ ಬಾಯಿ ಮುಚ್ಚಿಸುತ್ತಿತ್ತು. ಆದರೆ ನಿನ್ನೆ ಮಲೈಕಾ ಶೇರ್​ ಮಾಡಿರುವ ಪೋಸ್ಟ್​ನಿಂದ ತಮ್ಮ ಸುದೀರ್ಘ ಸಂಬಂಧಕ್ಕೆ ಅಂತ್ಯ ಹಾಡಿದ್ದಾರೆ ಎಂದೇ ಹೇಳಲಾಗುತ್ತಿದೆ. ಆದರೆ ತಂದೆ ಅವರು ಅನಿಲ್ ಅವರ ಆತ್ಮಹತ್ಯೆ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. 

ಕೆಲ ದಿನಗಳ ಹಿಂದೆ ಮಲೈಕಾ, ತಾನು ಸಾಯುವವರೆಗೂ ಪ್ರೀತಿಗಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದರು. ಇವರು ಹೀಗೆ ಯಾಕೆ ಹೇಳುತ್ತಿದ್ದಾರೆ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಅಂದ್ರೆ ಬ್ರೇಕಪ್​ ಆಯ್ತಾ ಅಥ್ವಾ ಅರ್ಜುನ್​ ಕಪೂರ್​ನನ್ನು ಇನ್ನೂ ಪ್ರೀತಿಸ್ತಾ ಇದ್ದಾರೋ ಅಥ್ವಾ ಬೇರೊಬ್ಬನ ಎಂಟ್ರಿ ಆಯ್ತಾ ಎಂಬೆಲ್ಲಾ ಗೊಂದಲ ಅಭಿಮಾನಿಗಳನ್ನು ಕಾಡುತ್ತಿದೆ. ಮೊನ್ನೆಯಷ್ಟೇ, ತಮ್ಮ ಬಾಯ್​ಫ್ರೆಂಡ್​ ಅರ್ಜುನ್​ ಕಪೂರ್​ ಅವರ ಹುಟ್ಟುಹಬ್ಬವನ್ನೇ ಮರೆತು ನಂತರ ತೇಪೆ ಹಚ್ಚುವ ಕೆಲಸ ಮಾಡಿ ಮಲೈಕಾ ಟ್ರೋಲ್​ಗೆ ಒಳಗಾಗಿದ್ದರು. ಬ್ರೇಕಪ್​ ಸುದ್ದಿ ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ಬಾಯ್​ಫ್ರೆಂಡ್​ ಹುಟ್ಟುಹಬ್ಬ ಮಿಸ್​ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಮೊನ್ನೆ ಅಂದರೆ ಜೂನ್​ 26ರಂದು ಅರ್ಜುನ್​ ಕಪೂರ್​ 39ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 50 ವರ್ಷದ ಮಲೈಕಾ ಅದನ್ನು ಮರೆತಿದ್ದರು. ಆಮೇಲೆ ಈ ರೀತಿ ಪೋಸ್ಟ್​ ಹಾಕಿದ್ದರು. ಆದರೆ ಈಗ ತಂದೆಯ ಸಾವಿನ ಹಿನ್ನೆಲೆಯಲ್ಲಿ, ಒಂದೊಂದೇ ವಿಷಯಗಳು ಮುನ್ನೆಲೆಗೆ ಬರುತ್ತಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?