ನಾನೀಗ ಸಿಂಗಲ್, ಮಲೈಕಾ ಹೆಸರು ಕೇಳ್ತಿದ್ದಂತೆ ಬ್ರೇಕ್ ಅಪ್ ಗುಟ್ಟು ಬಿಚ್ಚಿಟ್ಟ ಅರ್ಜುನ್ ಕಪೂರ್

Published : Oct 29, 2024, 12:27 PM IST
ನಾನೀಗ ಸಿಂಗಲ್, ಮಲೈಕಾ ಹೆಸರು ಕೇಳ್ತಿದ್ದಂತೆ ಬ್ರೇಕ್ ಅಪ್ ಗುಟ್ಟು ಬಿಚ್ಚಿಟ್ಟ ಅರ್ಜುನ್ ಕಪೂರ್

ಸಾರಾಂಶ

ಬಾಲಿವುಡ್ ನಟ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಬೇರೆಯಾಗಿರೋದು ಕನ್ಫರ್ಮ್ ಆಗಿದೆ. ಸ್ವತಃ ಅರ್ಜುನ್ ಕಪೂರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಿಂಗಲ್ ಎನ್ನುವ ಮೂಲಕ ಫ್ಯಾನ್ಸ್ ಕನಸನ್ನು ಮತ್ತೆ ಚಿಗುರಿಸಿದ್ದಾರೆ.   

ಬಾಲಿವುಡ್ ಹಾಟ್ ಲವ್ವರ್ಸ್ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ (Bollywood hot lovers Malaika Arora and Arjun Kapoor) ಬ್ರೇಕ್ ಅಪ್ ಮಾಡ್ಕೊಂಡಿದ್ದಾರೆ ಎನ್ನುವ ಸುದ್ದಿ ವರ್ಷದ ಆರಂಭದಿಂದ್ಲೇ ಹರಿದಾಡ್ತಾ ಇತ್ತು. ಆದ್ರೆ ಮಲೈಕಾ ತಂದೆ ಸಾವಿನ ಸಮಯದಲ್ಲಿ ನಟಿಗೆ ಆಸರೆಯಾಗಿದ್ದವರು ಅರ್ಜುನ್. ಹಾಗಾಗಿ ಮತ್ತೆ ಇಬ್ಬರು ಸರಿ ಹೋಗಿದ್ದಾರೆ ಅಂದ್ಕೊಂಡಿದ್ದ ಫ್ಯಾನ್ಸ್ ಗೆ ಈಗ ಸ್ಪಷ್ಟನೆ ಸಿಕ್ಕಿದೆ. ಅರ್ಜುನ್ ಕಪೂರ್, ಮಲೈಕಾ ವಿಷ್ಯದಲ್ಲಿ ಮೌನ ಮುರಿದಿದ್ದಾರೆ. ಇಬ್ಬರ ಮಧ್ಯೆ ಬ್ರೇಕ್ ಅಪ್ (broke up) ಆಗಿದೆ ಎಂಬುದು ರೂಮರ್ಸ್ (rumours) ಅಲ್ಲ ಸತ್ಯ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. 

ರಾಜ್ ಠಾಕ್ರೆಯವರ ದೀಪಾವಳಿ ಪಾರ್ಟಿ (Diwali Party)ಯಲ್ಲಿ ಕಾಣಿಸಿಕೊಂಡಿದ್ದ ನಟ ಅರ್ಜುನ್ ಕಪೂರ್ ಮೈಕ್ ಹಿಡಿತಾ ಇದ್ದಂತೆ ಮಲೈಕಾ, ಮಲೈಕಾ ಎನ್ನುವ ಧ್ವನಿ ಕೇಳಿ ಬಂತು. ಇಲ್ಲ, ನಾನೀಗ ಸಿಂಗಲ್ ಆಗಿದ್ದೇನೆ. ರಿಲ್ಯಾಕ್ಸ್ ಎನ್ನುತ್ತ ಅರ್ಜುನ್ ಕಪೂರ್, ತಮ್ಮಿಬ್ಬರ ಮಧ್ಯೆ ಬ್ರೇಕ್ ಅಪ್ ಆಗಿದೆ, ಮಲೈಕಾರಿಂದ ದೂರವಾಗಿದ್ದೇನೆ ಎಂಬ ಸ್ಪಷ್ಟನೆ ನೀಡಿದ್ರು.

ನಿಮ್ಮಂತೆ ನಿಮ್ಮ ಫ್ಯಾಮಿಲಿಯಲ್ಲೂ ಯಾರೂ ಇಲ್ಲ; ಅಪ್ಪು ನೆನೆದು ದೊಡ್ಡಮನೆ ಸೊಸೆ ಶ್ರೀದೇವಿ ಭಾವುಕ

ಅರ್ಜುನ್ ಕಪೂರ್ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಳಕೆದಾರರು, ಮಲೈಕಾರನ್ನು ಯಾಕೆ ಬಿಟ್ರಿ ಅಂತ ಪ್ರಶ್ನೆ ಮಾಡ್ತಿದ್ದಾರೆ. ಮಲೈಕಾಗೆ ಗುಡ್ ಬೈ ಹೇಳಿ ಇನ್ನೊಬ್ಬರ ಜೊತೆ ಅರ್ಜುನ್ ಕಪೂರ್ ಮದುವೆ ಆಗ್ತಾರೆ, ಸಂಸಾರ ಮಾಡೋ ಪ್ಲಾನ್ ಇರಲಿಲ್ಲ ಅಂದ್ರೆ ಲವ್ ಯಾಕೆ ಮಾಡ್ಬೇಕಿತ್ತು, ಇವರಿಗೆ ಮದುವೆ ಒಂದು ಆಟ.. ಹೀಗೆ ನಾನಾ ಕಮೆಂಟ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡ್ಬಹುದು.

ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಬೇರೆಯಾಗಿದ್ದಾರೆ ಅನ್ನೋದು ಹಳೆ ಸುದ್ದಿಯಾದ್ರೂ, ಅರ್ಜುನ್ ಮತ್ತು ಮಲೈಕಾ ಈ ಬಗ್ಗೆ ಈವರೆಗೂ ಸ್ಪಷ್ಟನೆ ನೀಡಿರಲಿಲ್ಲ. ಕಳೆದ ಆರು ತಿಂಗಳಿಂದ ಯಾವುದೇ ಇವೆಂಟ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಅರ್ಜುನ್ ಕಪೂರ್ ಬರ್ತ್ ಡೇಗೆ ಬಾಲಿವುಡ್ ದಂಡೇ ಬಂದಿದ್ರೂ ಮಲೈಕಾ ಬಂದಿರಲಿಲ್ಲ. ಇನ್ನು ಮಲೈಕಾ ಬರ್ತ್ ಡೇಯಲ್ಲಿ ಕೂಡ ಅರ್ಜುನ್ ಗೈರಾಗಿದ್ದರು. ಇದೆಲ್ಲವನ್ನು ನೋಡಿದ ಫ್ಯಾನ್ಸ್ ಇಬ್ಬರು ಬೇರೆಯಾಗಿದ್ದಾರೆಂಬ ಅನುಮಾನ ವ್ಯಕ್ತಪಡಿಸಿದ್ದರು. ಅದೀಗ ಅಧಿಕೃತವಾಗಿದೆ.

5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ, ಅವರ ಹಾದಿಗಳು ಈಗ ಬೇರೆಯಾದವು ಎಂಬುದು ಸ್ಪಷ್ಟವಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ, ಮಲೈಕಾ ಅರ್ಜುನ್ ಕುಟುಂಬವನ್ನು ಸಾಮಾಜಿಕ ಮಾಧ್ಯಮದಲ್ಲಿ ಅನ್‌ಫಾಲೋ ಮಾಡಿದ್ದರು, ಅಂದಿನಿಂದ ಅವರ ಬ್ರೇಕಪ್ ಸುದ್ದಿ ವೈರಲ್ ಆಗಿತ್ತು.

ನೀವಿಲ್ಲದೆ ಅಭಿಮಾನಕ್ಕೆ ಬೆಲೆ ಇಲ್ಲ, ಬದುಕಿಗೆ ಕಳೆ ಇಲ್ಲ …. ಅಪ್ಪು ನೆನೆದು ಅನುಶ್ರೀ ಭಾವುಕ ಪೋಸ್ಟ್

ಮಲೈಕಾ ಅರೋರಾ, ಅರ್ಬಾಜ್ ಖಾನ್ ಗೆ ವಿಚ್ಛೇದನ ನೀಡಿದ ನಂತ್ರ 5 ವರ್ಷಗಳ ಕಾಲ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡಿದ್ದರು. ಎಲ್ಲ ಕಡೆ ಒಟ್ಟಿಗೆ ಕಾಣಿಸಿಕೊಳ್ತಿದ್ದ ಜೋಡಿಯ ರೋಮ್ಯಾನ್ಸ್ ಸಾಕಷ್ಟು ಸುದ್ದಿ ಮಾಡಿತ್ತು. ವರ್ಷಗಳ ಹಿಂದೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಲು ಶುರುವಾಗಿ, ಕೊನೆಗೆ ದೂರವಾಗಿದ್ದರು. ಇಬ್ಬರು ದೂರವಾಗಲು ಕಾರಣವೇನು ಎಂಬುದು ಸ್ಪಷ್ಟವಾಗದೆ ಹೋದ್ರೂ, ಮಾಧ್ಯಮಗಳು ಮದುವೆ ಇದಕ್ಕೆ ಕಾರಣ ಎನ್ನುತ್ತಿವೆ. ಮಲೈಕಾ ಅರೋರಾ, ಅರ್ಜುನ್ ಕಪೂರ್ ಅವರನ್ನು ಮದುವೆಯಾಗಲು ಬಯಸಿದ್ದರು. ಆದ್ರೆ ಅರ್ಜುನ್ ಮದುವೆಗೆ ಸಿದ್ಧವಿರಲಿಲ್ಲ. ಕರಣ್ ಜೋಹರ್ ಶೋನಲ್ಲಿ ಕೂಡ ಅರ್ಜುನ್ ಕಪೂರ್ ಈ ಬಗ್ಗೆ ಮಾತನಾಡಿದ್ದರು. ಯಾವಾಗ ಮದುವೆ ಎನ್ನುವ ಪ್ರಶ್ನೆಗೆ ಇದು ಮದುವೆ ಬಗ್ಗೆ ಮಾತನಾಡುವ ಸಮಯವಲ್ಲ. ಮಲೈಕಾ ಜೊತೆ ಬಂದಾಗ ಈ ಬಗ್ಗೆ ಮಾತನಾಡ್ತೇನೆ ಎಂದಿದ್ದರು. ಬೇರೆಯಾದ್ಮೇಲೂ ಇಬ್ಬರ ಮಧ್ಯೆ ಸ್ನೇಹ ಹಾಗೆ ಉಳಿದಂತಿದೆ. ಮಲೈಕಾ ಅವರ ಮಲತಂದೆ ಅನಿಲ್ ಮೆಹ್ತಾ ನಿಧನರಾದ ಸಮಯದಲ್ಲಿ ಅರ್ಜುನ್, ಮಲೈಕಾ ಕುಟುಂಬದ ಜೊತೆಗಿದ್ದರು.    

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?