ಚೆನ್ನಾಗಿದ್ದ ಶಿಲ್ಪಾ ಶೆಟ್ಟಿಗೆ ಇದೇನಾಗೋಯ್ತು? ಲಕ ಲಕ ಲಕ ಲಕ ಲಕ ಅನ್ನುತ್ತ ವಿಚಿತ್ರವಾಗಿ ನರ್ತಿಸಿದ ನಟಿ!

By Suchethana DFirst Published Oct 28, 2024, 6:44 PM IST
Highlights

ನಟಿ ಶಿಲ್ಪಾ ಶೆಟ್ಟಿ ಲಕ ಲಕ ಲಕ ಲಕ ಲಕ ಎನ್ನುತ್ತಾ ವಿಚಿತ್ರ ಹೆಜ್ಜೆ ಹಾಕುತ್ತಾ ಬಂದ್ರೆ, ಟ್ರೋಲಿಗರು ಹೀಗೆಲ್ಲಾ ಕೇಳೋದಾ?
 

ಬಾಲಿವುಡ್​ ಬೆಡಗಿ, ಮಂಗಳೂರಿನ ಶಿಲ್ಪಾ ಶೆಟ್ಟಿ ಸದ್ಯ ಕನ್ನಡದ ಕೆಡಿ ಸಿನಿಮಾದಲ್ಲಿ ಬಿಜಿಯಾಗಿದ್ದರು. ಇತ್ತೀಚಿಗಷ್ಟೇ ಶೂಟಿಂಗ್​ ಮುಗಿಸಿರೋ ನಟಿ, ತಮ್ಮ 49ನೇ ವಯಸ್ಸಿನಲ್ಲಿ ಸ್ಯಾಂಡಲ್​ವುಡ್​ನಲ್ಲಿ ಲಕ್​ ಟ್ರೈ ಮಾಡುತ್ತಿದ್ದರು ಚಿತ್ರೀಕರಣದ ಸೆಟ್​ನಿಂದಲೇ ಹೊಸ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾಗೆ ಪ್ರೇಮ್​ ನಿರ್ದೇಶನ ಮಾಡುತ್ತಿದ್ದರು. ‘ಕೆವಿಎನ್​ ಪ್ರೊಡಕ್ಷನ್ಸ್​’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಧ್ರುವ ಸರ್ಜಾ ಅವರು ‘ಕೆಡಿ’ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ.  ಪಾತ್ರವರ್ಗದ ಕಾರಣದಿಂದ ಈ ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ. ಬಾಲಿವುಡ್​ ಕಲಾವಿದರಾದ ಸಂಜಯ್​ ದತ್​ ಹಾಗೂ ಶಿಲ್ಪಾ ಶೆಟ್ಟಿ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಶಿಲ್ಪಾ ಶೆಟ್ಟಿ ಅವರ ಪಾತ್ರದ ಹೆಸರು ಸತ್ಯವತಿ. ಇದು ತಮ್ಮ ಫೇವರಿಟ್​ ಪಾತ್ರಗಳಲ್ಲಿ ಒಂದು ಎಂದು ಅವರು ಹೇಳಿದ್ದಾರೆ. 

ಇದರ ನಡುವೆಯೇ ನಟಿ ಲಕ ಲಕ ಲಕ ಲಕ ಹಾಡಿಗೆ ಡಾನ್ಸ್​ ಮಾಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಚಿತ್ರ-ವಿಚಿತ್ರ ರೀತಿಯಲ್ಲಿ ನಟಿ ಇದಕ್ಕೆ ಸ್ಪೆಪ್​ ಹಾಕಿದ್ದಾರೆ. ಆದರೆ ಜೋಕ್​  ಮಾಡುವಲ್ಲಿ ಶಿಲ್ಪಾ ಅವರದ್ದು ಎತ್ತಿದ ಕೈ. ವಯಸ್ಸು 49 ಆದರೂ ಇನ್ನೂ ಚಿಕ್ಕಮಕ್ಕಳಂತೆಯೇ ಡಾನ್ಸ್ ಮಾಡುತ್ತಾರೆ, ಯುವತಿಯರಂತೆಯೇ ಬಳಕುವ ಮೈಯಿಂದ ಎಲ್ಲರ ಹುಬ್ಬೇರಿಸುತ್ತಾರೆ. ಇಲ್ಲಿ ಕೂಡ ನಟಿ ಅದೇ ರೀತಿ ಮಾಡಿದ್ದಾರೆ. ಇದನ್ನು ನೋಡಿ ಹಲವರು ಸೋ ಬ್ಯೂಟಿಫುಲ್​ ಎಂದು ಹೇಳಿದ್ರೆ, ಮತ್ತೆ ಕೆಲವರು, ಪತಿ ರಾಜ್​ ಕುಂದ್ರಾ ಮತ್ತೆ ಅರೆಸ್ಟ್​ ಆದ್ರಾ ಎಂದು ನಟಿಯ ಕಾಲೆಳೆಯುತ್ತಿದ್ದಾರೆ.  ಅಷ್ಟಕ್ಕೂ ಶಿಲ್ಪಾ  ಶೆಟ್ಟಿ ಎಂದರೆ, ಯೋಗ, ಫಿಟ್​ನೆಸ್​ ನೆನಪಿಗೆ ಬರುತ್ತದೆ. ವಯಸ್ಸು 49 ಆದರೂ ತಮ್ಮ ದೇಹವನ್ನು ಸಕತ್​ ಫಿಟ್​ ಆಗಿಟ್ಟುಕೊಂಡಿದ್ದರು ನಟಿ. ಇದೀಗ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗಿದ್ದು, ಅವುಗಳಿಗೆ ನಟಿ ಫಟಾಫಟ್​ ಉತ್ತರ ಕೊಟ್ಟಿದ್ದರು. ಅದರ ಸಾರ ಇಲ್ಲಿದೆ: ದಿನವನ್ನು ಶುರು ಮಾಡುವುದು ಹೇಗೆ ಎನ್ನುವ ಪ್ರಶ್ನೆಗೆ ನಟಿ ತುಪ್ಪ, ಅರಿಶಿಣ ಮತ್ತು ಕರಿಮೆಣಸು ಎಂದಿದ್ದರು. ಒಂದು ಸೂಪರ್​ ಪವರ್​ ಬೇಕು ಎಂದ್ರೆ ನೀವು ಏನನ್ನು ಕೇಳಿಕೊಳ್ಳುತ್ತೀರಿ ಎನ್ನುವ ಪ್ರಶ್ನೆಗೆ ನಟಿ, ಮಾಯ ಆಗುವುದು ಎಂದಿದ್ದರು. ಯಾವುದಾದರೂ ಒಂದು ದೇಶದಲ್ಲಿ ಇರಬೇಕು ಎಂದುಕೊಂಡರೆ ಯಾವ ದೇಶವನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎನ್ನುವ ಪ್ರಶ್ನೆಗೆ ಶಿಲ್ಪಾ ಶೆಟ್ಟಿ ಭಾರತ, ಐ ಲವ್​ ಮೈ ಇಂಡಿಯಾ ಎಂದಿದ್ದರು. 

Latest Videos

ಮಾಜಿ ಪತ್ನಿ ಹುಟ್ಟುಹಬ್ಬಕ್ಕೆ ಗರ್ಲ್​ಫ್ರೆಂಡ್​ ಜೊತೆ ಹೃತಿಕ್​ ಪ್ರತ್ಯಕ್ಷ! ಹೊಟ್ಟೆ ಉರಿಸಿಕೊಂಡದ್ದು ಅವಳಾ, ಇವಳಾ ಕೇಳಿದ ಫ್ಯಾನ್

ಅದೇ ರೀತಿ, ನಿಮ್ಮ ಮಧ್ಯರಾತ್ರಿ ಮೂರು ಗಂಟೆಯ ಸ್ನೇಹಿತ ಯಾರು ಎಂದು ಕೇಳಿದಾಗ ಶಿಲ್ಪಾ ಶೆಟ್ಟಿ ಕೂಡಲೇ ನಗುತ್ತಾ ನನ್ನ ಗಂಡ ಎಂದಿದ್ದರು. ನಿಮ್ಮ ಫ್ಲಾಪ್​ ಆಗಿರೋ ಚಿತ್ರ ಯಾವುದು ಕೇಳಿದಾಗ ನಟಿ ರಿಷ್ತೆ ಎಂದಿದ್ದರು. ಈ ಚಿತ್ರ ನನಗೆ ತುಂಬಾ ಇಷ್ಟವಾಗಿತ್ತು, ಆದರೆ ಫ್ಲಾಪ್​ ಆಯಿತು ಎಂದಿದ್ದರು. ಫನ್​ ಶೂಟಿಂಗ್​ ಮೂವಿ ಯಾವುದು ಕೇಳಿದಾಗ ಸುಖಿ ಎಂದಿದ್ದರು. ನಿಮಗೆ  ಲೆಹಂಗಾ ಇಷ್ಟನೋ, ಸಾರಿನೋ ಎಂದಾಗ ಸಾರಿ ಎಂದಿದ್ದರು ಶಿಲ್ಪಾ ಶೆಟ್ಟಿ. ಯೋಗ ಮತ್ತು ಜಿಮ್​ನಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದಿದ್ದರೆ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾ ಯೋಗ ಎಂದಿದ್ದರು. ನಿಮ್ಮ ಫೆವರೆಟ್​ ಯೋಗ ಆಸನ ಯಾವುದು ಕೇಳಿದಾಗ ನಟಿ ಸುಖಾಸನ ಎಂದಿದ್ದರು. 

ಅಂದಹಾಗೆ, ಅಷ್ಟಕ್ಕೂ ಎಲ್ಲರಿಗೂ ತಿಳಿದಿರುವಂತೆ, ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್​ ಕುಂದ್ರಾ ಪೋರ್ನ್​ ಕೇಸ್​ನಲ್ಲಿ ಸಿಲುಕಿದ್ದು, ಅದರ ಪ್ರಕರಣ ಇನ್ನೂ ನಡೆಯುತ್ತಿದೆ.  2021ರಲ್ಲಿ ಶಿಲ್ಪಾ ಬಾಳಲ್ಲಿ ಬಿರುಗಾಳಿ ಬಂದಿತ್ತು. ಇವರ ಪತಿ,  ರಾಜ್​ ಕುಂದ್ರಾ ನೀಲಿ ಚಿತ್ರ (porn film) ಕೇಸ್​ನಲ್ಲಿ ಸಿಲುಕಿ ಬಿದ್ದಿದ್ದರು. ನಟಿಯರನ್ನು ಮತ್ತು ಮಾಡೆಲ್​ಗಳನ್ನು ಬಳಸಿಕೊಂಡು ರಾಜ್​ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರು ಹಲವು ಸಾಕ್ಷ್ಯಗಳನ್ನು ಒದಗಿಸಿದ್ದರು.  ಬ್ಲೂ ಫಿಲ್ಮ್​ ಆರೋಪದ ಮೇಲೆ ಅವರು 63 ದಿನಗಳವರೆಗೆ ಜೈಲಿನಲ್ಲಿ ಇದ್ದರು. ನೀಲಿ ಚಿತ್ರಗಳ  ನಿರ್ಮಾಣ ದಂಧೆಯಲ್ಲಿ ತೊಡಗಿದ್ದ ಆರೋಪವನ್ನು ಇಂದಿಗೂ ರಾಜ್​ ಕುಂದ್ರಾ ಇಂದಿಗೂ ಎದುರಿಸುತ್ತಿದ್ದರು.   ‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’ ಎಂದು ರಾಜ್​ ಕುಂದ್ರಾ ಹೇಳಿಕೆ ನೀಡಿದ್ದರು. ತಾವು ಬ್ಲೂಫಿಲ್ಮ್​ ಮಾಡುವುದನ್ನು ಅವರು ಒಪ್ಪಿಕೊಂಡಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಹಲವು ನಟಿಯರ ಜೊತೆ ಖುದ್ದು ಶಿಲ್ಪಾ ಶೆಟ್ಟಿಯವರ (Shilpa Shetty) ಹೆಸರೂ ಥಳಕು ಹಾಕಿಕೊಂಡಿತ್ತು.  

ಒಂದು ವರ್ಷ ಬೇರೆಯವರ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದೆ: ಬಿಗ್​ಬಾಸ್​ನಲ್ಲಿ ಚೈತ್ರಾ ಕುಂದಾಪುರ ಕಣ್ಣೀರು

click me!