ಮಾಜಿ ಪತ್ನಿ ಸುಸ್ಸಾನೇ ಖಾನ್ ಹುಟ್ಟುಹಬ್ಬಕ್ಕೆ ಗರ್ಲ್ಫ್ರೆಂಡ್ ಸಾಬಾ ಜೊತೆ ಬಂದ ಹೃತಿಕ್ ರೋಷನ್: ನೆಟ್ಟಿಗರಿಂದ ಥಹರೇವಾರಿ ಪ್ರಶ್ನೆ .
ಸಿನಿಮಾ ರಂಗದಲ್ಲಿ ಅಕ್ರಮ ಸಂಬಂಧ, ವಿಚ್ಛೇದನ, ಡೇಟಿಂಗ್, ಮದುವೆಯಾಗಿರುವಾಗಲೇ ಇನ್ನೊಬ್ಬಳ ಜೊತೆ ಇರುವುದು ಎಲ್ಲವೂ ಮಾಮೂಲೇ. ತಾರಾ ಜೋಡಿಗಳು ಹಲವು ವರ್ಷ ದಾಂಪತ್ಯ ಜೀವನ ನಡೆಸಿರುವುದು ಬಹಳ ಕಡಿಮೆ ಎಂದೇ ಹೇಳಬಹುದು. ಆದರೂ ಒಂದು ಕುತೂಹಲದ ವಿಷಯವೆಂದರೆ, ಹಲವರು ವರ್ಷ ಡೇಟಿಂಗ್ ಮಾಡುತ್ತಾ ಸಂಬಂಧದಲ್ಲಿ ಇರುವ ಈ ಜೋಡಿಗಳ ಮಧ್ಯೆ ಮದುವೆಯಾಗುತ್ತಿದ್ದಂತೆಯೇ ಬಿರುಕು ಮೂಡಿ ವಿಚ್ಛೇದನ ಪಡೆಯುವುದು ಮಾಮೂಲು. ಆದರೆ ಅದೇ ವೇಳೆ ವಿಚ್ಛೇದನ ಪಡೆದು ಇನ್ನೊಬ್ಬರ ಜೊತೆ ಸಂಬಂಧದಲ್ಲಿ ಇರುವಾಗಲೇ ಮಾಜಿ ಪತಿ-ಪತ್ನಿಯ ಮೇಲೆ ಪ್ರೀತಿ ಮೂಡುವುದು ಕೂಡ ಮಾಮೂಲು ಎನಿಸಿದೆ. ಮಲೈಕಾ ಅರೋರಾ, ಅರ್ಜುನ್ ಕಪೂರ್ ಜೊತೆ ಸಂಬಂಧದಲ್ಲಿದ್ದರೂ ಮಾಜಿ ಪತಿ ಅರ್ಬಾಜ್ ಖಾನ್ಗೆ ಹೀಗೆ ಮಾಡುವುದು ಇದೆ. ಆಮೀರ್ ಖಾನ್ ಮಗಳ ಮದುವೆಯಲ್ಲಿ ತಮ್ಮ ಇಬ್ಬರೂ ಮಾಜಿ ಪತ್ನಿಯರ ಮೇಲೆ ಪ್ರೀತಿಯನ್ನೇ ಹರಿಸಿದ್ದರು. ಹೀಗೆ ಹಲವು ಜೋಡಿಗಳಿದ್ದು, ಇದೀಗ ಈ ಪೈಕಿ ಹೃತಿಕ್ ರೋಷನ್ ಮತ್ತು ಸುಸ್ಸಾನೇ ಖಾನ್ ಸೇರಿದ್ದಾರೆ.
ಹೃತಿಕ್ ರೋಷನ್ ಮತ್ತು ಸುಸ್ಸಾನೇ ಖಾನ್ ವಿಚ್ಛೇದನ ಪಡೆದು ವರ್ಷಗಳೇ ಕಳೆದಿವೆ. ಮದ್ವೆಯಾಗಿರುವಾಗಲೇ ಕಂಗನಾ ರಣಾವತ್ ಜೊತೆ ಅಫೇರ್ ಇಟ್ಟುಕೊಂಡಿದ್ದ ಹೃತಿಕ್ ಕೊನೆಗೂ ಅವರಿಗೂ ಕೈಕೊಟ್ಟು, ಸುಸ್ಸಾನೇ ಖಾನ್ಗೂ ಡಿವೋರ್ಸ್ ಕೊಟ್ಟು, ಸದ್ಯ ಗಾಯಕಿ ಸಬಾ ಅಜಾದ್ ಜೊತೆ ಸಂಬಂಧದಲ್ಲಿದ್ದಾರೆ. ಆದರೆ ವಿಚಿತ್ರ ಎಂದರೆ ಡಿವೋರ್ಸ್ ಆದ ಮೇಲೂ ಪಕ್ಕದಲ್ಲಿಯೇ ಗರ್ಲ್ಫ್ರೆಂಡ್ ಇದ್ದರೂ ಮಾಜಿ ಪತ್ನಿಯ ಮೇಲೆ ಹೃತಿಕ್ ರೋಷನ್ಗೆ ಪ್ರೀತಿ ಉಕ್ಕುವುದು ಇದೆ. ಇದಕ್ಕೆ ಇದಾಗಲೇ ಹಲವಾರು ಉದಾಹರಣೆಗಳು ಆಗಿವೆ. ಇದೀಗ ಸುಸ್ಸಾನೆ ಖಾನ್ ಅವರ ಹುಟ್ಟುಹಬ್ಬಕ್ಕೆ ಗರ್ಲ್ಫ್ರೆಂಡ್ ಜೊತೆ ಹೃತಿಕ್ ರೋಷನ್ ಹೋಗಿದ್ದು, ಇದೀಗ ಭಾರಿ ವೈರಲ್ ಆಗುತ್ತಿದೆ. ಮಾಜಿ ಪತ್ನಿಯ ಹೊಟ್ಟೆ ಉರಿಸಲು ಹೋಗಿದ್ದಾ, ಅಥ್ವಾ ಗರ್ಲ್ಫ್ರೆಂಡ್ಗೆ ಹೊಟ್ಟೆ ಉರಿಸಲಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ನಿನ್ನೆ ಅಂದ್ರೆ ಭಾನುವಾರ ಸುಸ್ಸಾನೇ ಅವರು 49ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಹಲವು ಸೆಲೆಬ್ರಿಟಿಗಳು ಬಂದಿದ್ದರು. ಹೃತಿಕ್ ಮತ್ತು ಸಬಾ ಹೋಗಿ ವಿಷ್ ಮಾಡಿದ್ದಾರೆ.
ಟಬು ಮದ್ವೆಯಾಗದೇ ಇರೋದಕ್ಕೆ ಅಜಯ್ ದೇವಗನ್ ಕಾರಣನಾ? ಸಂದರ್ಶನದಲ್ಲಿ ಇಬ್ಬರೂ ಹೇಳಿದ್ದೇನು?
ಅಷ್ಟಕ್ಕೂ, ಇವರಿಬ್ಬರ ವಿಚಾರ ಗುಟ್ಟಾಗಿಯೇನು ಉಳಿದಿಲ್ಲ. ಕೆಲ ತಿಂಗಳ ಸಾರ್ವಜನಿಕ ಸ್ಥಳದಲ್ಲಿ ಸಬಾ- ಹೃತಿಕ್ ಇಬ್ಬರು ಲಿಪ್ ಕಿಸ್ ಮಾಡಿ ತಮ್ಮ ಸಂಬಂಧದ ಕುರಿತು ಪರೋಕ್ಷವಾಗಿ ತಿಳಿಸಿದ್ದರು. ಇದರ ವಿಡಿಯೋ ಭಾರಿ ಸದ್ದು ಮಾಡಿತ್ತು. ಸಬಾ ಜೊತೆ ಡೇಟಿಂಗ್ ಮಾಡುತ್ತಾ ಕೆಲ ವರ್ಷಗಳೇ ಆಗಿವೆ. ಕಳೆದ ವರ್ಷ ನವೆಂಬರ್‌ನಲ್ಲಿ ಹೃತಿಕ್ ರೋಷನ್- ಸಬಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಆದರೆ ಈ ಜೋಡಿ ಮಾತ್ರ ತುಟಿಕ್ ಪಿಟಿಕ್ ಅಂದಿರಲಿಲ್ಲ. ಆದರೆ ಈಗ ಅವರಿಬ್ಬರು ಯಾವುದೇ ಹಿಂಜರಿಕೆ ಇಲ್ಲದೇ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾ ಕೆಲಸಗಳಿಂದ ಸಣ್ಣ ಬ್ರೇಕ್ ತೆಗೆದುಕೊಂಡಿರೋ ನಟ, ಅರ್ಜೆಂಟೀನಾದಲ್ಲಿ ಗರ್ಲ್ಫ್ರೆಂಡ್ ಜೊತೆ ಮೋಜು ಮಸ್ತಿಯಲ್ಲಿ ತೊಡಗಿದ್ದು, ಅದರ ಫೋಟೋಗಳನ್ನು ಕೆಲ ತಿಂಗಳ ಹಿಂದೆ ಖುಲ್ಲಂ ಖುಲ್ಲಾ ಆಗಿ ಶೇರ್ ಮಾಡಿಕೊಂಡಿದ್ದರು. ಮದುವೆಯ ಬಗ್ಗೆ ಏನೂ ಹೇಳದ ಈ ಜೋಡಿ ಮಾತ್ರ ಟೂರ್ ಎಂಜಾಯ್ ಮಾಡುತ್ತಿದ್ದು, ಅವರ ಫೋಟೋ ವೈರಲ್ ಆಗುತ್ತಿವೆ.
ಕೆಲ ತಿಂಗಳ ಹಿಂದೆ, ಹೃತಿಕ್ ರೋಷನ್ ಅವರು ತಮ್ಮ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದರು. ಅಲ್ಲಿ ಅವರ ಮಾಜಿ ಪತ್ನಿ ಸುಸ್ಸಾನೇ ಖಾನ್ ಕೂಡ ಇದ್ದರು. ಈ ವಿಡಿಯೋದಲ್ಲಿ ಹೃತಿಕ್ ರೋಷನ್ ಮತ್ತು ಸುಸ್ಸಾನೇ ಖಾನ್ ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು. ಈ ಕಾರ್ಯಕ್ರಮದಲ್ಲಿ ಸುಸ್ಸಾನೇ ಬಂದದ್ದು ಏಕೆ ಏಕೆ ಎನ್ನುವ ಪ್ರಶ್ನೆ ನೆಟ್ಟಿಗರನ್ನು ಕಾಡುತ್ತು. ಅದೂ ಅಲ್ಲದೇ, ಹೃತಿಕ್ ರೋಷನ್ ಕಾರ್ಯಕ್ರಮಕ್ಕೆ ಬಂದ ತಕ್ಷಣ, ಅವರು ಸುಸ್ಸಾನೇ ಖಾನ್ ಅವರನ್ನು ತಬ್ಬಿಕೊಂಡಿದ್ದರು. ಇಬ್ಬರೂ ಪರಸ್ಪರ ಪ್ರೀತಿಯಿಂದ ಇರುವುದನ್ನು ವಿಡಿಯೋದಲ್ಲಿ ನೋಡಬಹುದು. ಸಿನಿಮಾ ತಾರೆಯರಿಗೆ ಡಿವೋರ್ಸ್ ಆದ್ಮೇಲೆ ಲವ್ ಜಾಸ್ತಿಯಾಗೋದ್ಯಾಕೆ ಎಂದು ಹಲವರು ಪ್ರಶ್ನಿಸಿದ್ದರು.
ಬೋಟಾಕ್ಸ್ ಸರ್ಜರಿಯಿಂದ ಆಲಿಯಾಗೆ ಪಾರ್ಶ್ವವಾಯು- ಮುಖ ಸೊಟ್ಟಗೆ? ನಟಿ ಹೇಳಿದ್ದೇನು?