ಸುದೀಪ್ 'ವಿಕ್ರಾಂತ್ ರೋಣ' ಬಗ್ಗೆ ಬಿಗ್ ಬಿ ಅಮಿತಾಭ್ ಬಚ್ಚನ್ ಹೇಳಿದ್ದೇನು?

By Shruiti G Krishna  |  First Published Jun 27, 2022, 1:17 PM IST

ಸುದೀಪ್ ವಿಕ್ರಾಂತ್ ರೋಣನನ್ನು ನೋಡಿ ಅಭಿಮಾನಿಗಳು ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಸಿನಿ ಗಣ್ಯರು ಸಹ ಹಾಡಿಹೊಗಳುತ್ತಿದ್ದಾರೆ. ಇದೀಗ ಕಿಚ್ಚನ ವಿಕ್ರಾಂತ್ ರೋಣಗೆ ಬಾಲಿವುಡ್ ಲೆಜೆಂಡ್, ಬಿಗ್ ಬಿ ಸಾಥ್ ಸಿಕ್ಕಿದೆ. ಹೌದು ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ಅನ್ನು ಮೆಚ್ಚಿರುವ ಅಮಿತಾಬ್ ಬಚ್ಚನ್ (Amitabh Bachchan) ಸಾಮಾಜಿಕ ಜಾಲತಾಣದಲ್ಲಿ ಟ್ರೈಲರ್ ಶೇರ್ ಮಾಡಿದ್ದಾರೆ. 


ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಸದ್ಯ ವಿಕ್ರಾಂತ್ ರೋಣ (Vikrant Rona) ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಪ್ರಮೋಷನ್‌ನಲ್ಲಿ ಭಾಗಿಯಾಗಿದ್ದು ದೇಶದ ವಿವಿಧ ರಾಜ್ಯಗಳಲ್ಲಿ ಪ್ರಮೋಷನ್ ಕಾರ್ಯ ಭರ್ಜರಿಯಾಗಿ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ (Pan India) ಮಟ್ಟದಲ್ಲಿ ತೆರೆಗೆ ಬರುತ್ತಿರುವ ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ (Trailer) ಇತ್ತೀಚಿಗಷ್ಟೆ ರಿಲೀಸ್ ಆಗಿದ್ದು ಎಲ್ಲಾ ಕಡೆಯಿಂದನೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಕ್ರಾಂತ್ ರೋಣ ದಕ್ಷಿಣ ಭಾರತದ ಎಲ್ಲಾ ಭಾಷೆ ಜೊತೆಗೆ ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಎಲ್ಲಾ ಭಾಷೆಯಲ್ಲೂ ಸಿನಿಮಾದ ಟ್ರೈಲರ್‌ಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. 

ಸುದೀಪ್ ವಿಕ್ರಾಂತ್ ರೋಣನನ್ನು ನೋಡಿ ಅಭಿಮಾನಿಗಳು ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಸಿನಿ ಗಣ್ಯರು ಸಹ ಹಾಡಿಹೊಗಳುತ್ತಿದ್ದಾರೆ. ಇದೀಗ ಕಿಚ್ಚನ ವಿಕ್ರಾಂತ್ ರೋಣಗೆ ಬಾಲಿವುಡ್ ಲೆಜೆಂಡ್, ಬಿಗ್ ಬಿ ಸಾಥ್ ಸಿಕ್ಕಿದೆ. ಹೌದು ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ಅನ್ನು ಮೆಚ್ಚಿರುವ ಅಮಿತಾಬ್ ಬಚ್ಚನ್ (Amitabh Bachchan) ಸಾಮಾಜಿಕ ಜಾಲತಾಣದಲ್ಲಿ ಟ್ರೈಲರ್ ಶೇರ್ ಮಾಡಿದ್ದಾರೆ. ವಿಕ್ರಾಂತ್ ಟ್ರೈಲರ್ ಶೇರ್ ಮಾಡಿರುವ ಅಮಿತಾಭ್, 'ಕನ್ನಡದ ಸ್ಟಾರ್ ಸುದೀಪ್, ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ 3ಡಿ ಸಿನಿಮಾ 5 ಭಾಷೆಯಲ್ಲಿ ತೆರೆಗೆ ಬರುತ್ತಿದೆ' ಎಂದು ಹೇಳಿದ್ದಾರೆ. 

Tap to resize

Latest Videos

ಅಮಿತಾಬ್ ಟ್ವೀಟ್ ನೋಡಿ ಕಿಚ್ಚನ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬಿಗ್ ಬಿಗೆ ಧನ್ಯವಾದ ತಿಳಿಸುತ್ತಿದ್ದಾರೆ. ಸಾಮಾನ್ಯವಾಗಿ ಅಮಿತಾಬ್ ಬಚ್ಚನ್ ಬೇರೆ ಭಾಷೆಯ ಸ್ಟಾರ್ ಗಳ ಸಿನಿಮಾದ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ವಿಶ್ ಮಾಡಿರುವುದು ತೀರಾ ಕಡಿಮೆ. ಇದೀಗ ಕಿಚ್ಚನ ಸಿನಿಮಾಗೆ ವಿಶ್ ಮಾಡಿರುವುದು ಕಿಚ್ಚ ಅಂಡ ಟೀಂಗೆ ಸಂತಸ ತಂದಿದೆ.

T 4331 - Kannada star SUDEEP .. a pan india film VIKRANT RONA in 3 D .. releasing in 5 languages on July 28 th https://t.co/fWdBFkmjT7

— Amitabh Bachchan (@SrBachchan)

ಅಂದಹಾಗೆ ಅಮಿತಾಬ್ ಮತ್ತು ಕಿಚ್ಚ ಸುದೀಪ್ ನಡುವೆ ಉತ್ತಮ ಬಾಂಧವ್ಯವಿದೆ. ಅಮಿತಾಭ್ ಜೊತೆ ಸುದೀಪ್ ತೆರೆಹಂಚಿಕೊಂಡಿದ್ದರು. 2010ರಲ್ಲಿ ರಿಲೀಸ್ ಆಗಿದ್ದ ರಣ್ (Rann) ಸಿನಿಮಾದಲ್ಲಿ ಅಮಿತಾಬ್ ಜೊತೆ ಕಿಚ್ಚ ನಟಿಸಿದ್ದರು. ಈ ಸಿನಿಮಾ ಬಳಿಕ ಇಬ್ಬರ ನಡುವಿನ ಬಾಂಧವ್ಯ ಹಾಗೆ ಇದೆ. ರಾಮ್ ಗೋಪಾಲ್ ವರ್ಮಾ (Ram Gopal Varma) ಸಾರಥ್ಯದಲ್ಲಿ ಬಂದ ಸಿನಿಮಾದಲ್ಲಿ ಅಮಿತಾಭ್, ಸುದೀಪ್ ಜೊತೆಗೆ ರಿತೇಶ್ ದೇಶಮುಖ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಇದೀಗ ಅನೇಕ ವರ್ಷಗಳ ಬಳಿಕ ಕಿಚ್ಚನ ಸಿನಿಮಾಗೆ ವಿಶ್ ಮಾಡುವ ಮೂಲಕ ಸುದೀಪ್ ಅವರನ್ನು ನೆನಪಿಸಿಕೊಂಡಿದ್ದಾರೆ. 

ರವಿಯಣ್ಣ ಅಂದ್ರೆ ಭಯ; ರಮೇಶ್ ಅರವಿಂದ್ ಸಲ್ಮಾನ್ ಆರ್‌ಜಿವಿ ಮಾತ್ರ ಸಿನಿಮಾ ನೋಡಿದ್ದಾರೆ ಎಂದ ಸುದೀಪ್

ವಿಕ್ರಾಂತ್ ರೋಣ 3ಡಿ ಸಿನಿಮಾ ಮುಂದಿನ ತಿಂಗಳು ತೆರೆಗೆ ಬರುತ್ತಿದೆ. ಜುಲೈ 28ರಂದು ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಅನುೂಪ್ ಭಂಡಾರಿ ನಿರ್ದೇಶನದ ಈ ಸಿನಿಮಾಗೆ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ಸುದೀಪ್ ಜೊತೆ ಈ ಸಿನಿಮಾದಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಇನ್ನು ವಿಶೇಷ ಎಂದರೆ ಕಿಚ್ಚನ ಜೊತೆ ಬಾಲಿವುಡ್ ಸುಂದರಿ ಜಾಕ್ವೆಲಿನ್ ಮಿಂಚಿದ್ದಾರೆ. ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಿರುವ ಜಾಕ್ವೆಲಿನ್ ಸಿನಿಮಾದ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ. 

ವಿಕ್ರಾಂತ್ ರೋಣದಲ್ಲಿ 'ಗರಗರ ಗಗ್ಗರ' ಸಾಲಿಗೆ ಅರ್ಥನೇ ಬೇರೆ, ತಾಯಿ ತುಳುನಾಡಿವರು: ಸುದೀಪ್

ಈಗಾಗಲೇ ಜಾಕ್ವೆಲಿನ್ ಮತ್ತು ಸುದೀಪ್ ಹೆಜ್ಜೆ ಹಾಕಿರುವ ರಾ ರಾ...ರಕ್ಕಮ್ಮ ಹಾಡು ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಎಲ್ಲಾ ಕಡೆಯೂ ರಕ್ಕಮ್ಮ ಹಾಡು ಹೇಳುತ್ತಿದೆ. ಪ್ರಮೋಷನ್ ವೇಳೆಯೂ ಕಿಚ್ಚ ಮತ್ತು ಕಾಜ್ವೆಲಿನ್ ಇಬ್ಬರು ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ವಿಕ್ರಾಂತ್ ರೋಣನನ್ನು ನೋಡಲು ಅಭಿಮಾನಿಗಳು ಜುಲೈ 28ರ ವರೆಗೂ ಕಾಯಲೇ ಬೇಕು.  

click me!