
ಬಾಲಿವುಡ್ ಖ್ಯಾತ ನಟಿ ಅಲಿಯಾ ಭಟ್ (Ala Bhatt) ತಾಯಿಯಾಗುತ್ತಿರುವ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ. ಮದುವೆಯಾಗಿ 2 ತಿಂಗಳ ಬಳಿಕ ಅಲಿಯಾ ಭಟ್ ಗುಡ್ ನ್ಯೂಸ್ ನೀಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ (Ranbir Kapoor) ಜೋಡಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.
ಏಪ್ರಿಲ್ 14ರಂದು ಖ್ಯಾತ ನಟ ರಣಬೀರ್ ಜೊತೆ ಹಸೆಮಣೆ ಏರಿದ್ದ ನಟಿ ಅಲಿಯಾ ಭಟ್ ಗರ್ಭಣಿ ಆಗಿರುವ ಸಿಹಿ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪತಿ ರಣಬೀರ್ ಜೊತೆ ಆಸ್ಪತ್ರೆಯಲ್ಲಿರುವ ಫೋಟೋವನ್ನು ಶೇರ್ ಮಾಡಿ 'ನಮ್ಮ ಮಗು ಶೀಘ್ರದಲ್ಲೇ ಬರ್ತಿದೆ' ಎಂದು ಹೇಳಿದ್ದಾರೆ. ಅಲಿಯಾ ಭಟ್ ಗುಡ್ ನ್ಯೂಸ್ ಶೇರ್ ಮಾಡುತ್ತಿದ್ದಂತೆ ಅಭಿನಂದೆನಗಳ ಮಳೆಯೆ ಬರುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೇ ಸಿನಿ ಗಣ್ಯರಾದ ಟೈಗರ್ ಶ್ರಾಫ್, ರಾಶಿ ಖನ್ನಾ ಸೇರಿದಂತೆ ಅನೇಕರು ಅಭಿನಂದನೆ ತಿಳಿಸುತ್ತಿದ್ದಾರೆ.
ಚಿತ್ರರಂಗದ ಉತ್ತುಂಗದಲ್ಲಿರುವ ನಟಿ ಅಲಿಯಾ ಭಟ್ ತಾಯಿಯಾಗುತ್ತಿರುವ ವಿಚಾರ ಅನೇಕರಿಗೆ ಅಚ್ಚರಿ ಮೂಡಿಸಿದೆ. ನಟಿಮಣಿಯರು ಹೆಚ್ಚಾಗಿ ವೃತ್ತಿ ಜೀವನದ ಕಡೆ ಗಮನಹರಿಸುತ್ತಾರೆ. ಅದರಲ್ಲೂ ಅಲಿಯಾ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯರ ಸಾಲಿನಲ್ಲಿದ್ದು ಬಹುಬೇಡಿಕೆ ಇರುವಾಗಲೇ ತಾಯಿಯಾಗುವ ನಿರ್ಧಾರ ಮಾಡಿದ್ದಾರೆ. ಈಗಾಗಲೇ ಅನೇಕ ಅದ್ಭುತ ಸಿನಿಮಾಗಳನ್ನು ನೀಡಿರುವ ಅಲಿಯಾ ಕೊನೆಯದಾಗಿ ಆರ್ ಆರ್ ಆರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಅಲಿಯಾ ಬಳಿ ಡಾರ್ಲಿಂಗ್ ಮತ್ತು ಬ್ರಹ್ಮಾಸ್ತ್ರ ಚಿತ್ರೀಕರಣ ಮುಗಿಸಿದ್ದಾರೆ. ಇನ್ನು ಎರಡು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಮತ್ತು ಹಾರ್ಟ್ ಅಫ್ ಸ್ಟೋನ್ ಸಿನಿಮಾ ಅಲಿಯಾ ಕೈಯಲ್ಲಿದೆ. ಮಗುವಿಗೆ ಜನ್ಮ ನೀಡಿದ ಬಳಿಕ ಮತ್ತೆ ಸಿನಿಮಾ ಮುಂದುವರೆಸಲಿದ್ದಾರೆ.
Ranbir Alia wedding: ಸುಂದರ ಕ್ಷಣಗಳ unseen ಫೋಟೋಗಳು!
ಸಂಘರ್ಷ್ ಸಿನಿಮಾ ಮೂಲಕ ಅಲಿಯಾ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಬಾಲ ನಟಿಯಾಗಿ ತೆರೆಮೇಲೆ ಮಿಂಚಿದ್ದರು. ಬಳಿಕ 2012ರಲ್ಲಿ ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾ ಮೂಲಕ ನಾಯಕಿಯಾಗಿ ಮೊದಲ ಬಾರಿಗೆ ಎಂಟ್ರಿ ಕೊಟ್ಟರು. ಬಳಿಕ ಅಲಿಯಾ ಹಿಂದೆ ತಿರುಗಿ ನೋಡಿದ್ದೆ ಇಲ್ಲ. 2 ಸ್ಟೇಟ್ಸ್, ಉಡ್ತಾ ಪಂಜಾಬ್, ಡಿಯರ್ ಜಿಂದಗಿ, ರಾಜಿ, ಗಲ್ಲಿ ಬಾಯ್ ಕಳಂಕ್ ಗಂಗೂಬಾಯಿ ಕಠಿಯಾವಾಡಿ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು.
Ranbir Kapoor-Alia Bhatt; ಮದುವೆ ಫೋಟೋ ಹಂಚಿಕೊಂಡ ನಟಿ ಅಲಿಯಾ
ಸಿನಿಮಾ ಜೀವನದ ಜೊತೆಗೆ ವೈಯಕ್ತಿಕ ಜೀವನದ ಕಡೆಯು ಹೆಚ್ಚು ಗಮನ ಹರಿಸಿದ್ದ ಅಲಿಯಾ ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಸುಮಾರು 5 ವರ್ಷಗಳಂದ ಪ್ರೀತಿಸುತ್ತಿದ್ದ ಈ ಸ್ಟಾರ್ ಜೋಡಿ 2022, ಏಪ್ರಿಲ್ 14ರಂದು ಹಸಮೆಣೆ ಏರಿದರು. ಮುಂಬೈ ಆರ್ ಕೆ ಅಪಾರ್ಟ್ಮೆಂಟ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ರಣಬೀರ್ ಕಪೂರ್ ಅಲಿಯಾಗೆ ಮಾಂಗಲ್ಯ ಧಾರಣೆ ಮಾಡಿದರು. ಈ ತಾರಾ ಜೋಡಿಯ ಮದುವೆಗೆ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಭಾಗಿಯಾಗಿದ್ದರು. ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ ಈ ಜೋಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.