ಹೊಸ ಲುಕ್‌ಲ್ಲಿ ಕಾಣಿಸಿಕೊಂಡ ಅಲ್ಲು ಅರ್ಜುನ್ ಹಿಗ್ಗಾಮುಗ್ಗಾ ಟ್ರೋಲ್: ವಡಾ ಪಾವ್ ಎಂದು ಕಾಲೆಳೆದ ನೆಟ್ಟಿಗರು

By Shruiti G KrishnaFirst Published Jun 26, 2022, 2:09 PM IST
Highlights

ಅಲ್ಲು ಅರ್ಜುನ್ (Allu Arjun) ಸದ್ಯ ಪುಷ್ಪ 2 (Pushpa 2) ಸಿನಿಮಾಗಾಗಿ ಸಜ್ಜಾಗಿದ್ದಾರೆ. ಪುಷ್ಪ-2 ಚಿತ್ರೀಕರಣಕ್ಕೆ ಸಿನಿಮಾತಂಡ ರೆಡಿಯಾಗುತ್ತಿದೆ. ಈ ನಡುವೆ ಅಲ್ಲು ಅರ್ಜುನ್ ಸಾವರ್ಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್ ಲುಕ್ ಇದೀಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಕಪ್ಪು ಪ್ಯಾಂಟ್ ಮತ್ತು ಟಿ ಶರ್ಟ್ ಧರಿಸಿ ಅಲ್ಲು ಅರ್ಜುನ್ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ.  

ಅಲ್ಲು ಅರ್ಜುನ್ (Allu Arjun) ಸದ್ಯ ಪುಷ್ಪ 2 (Pushpa 2) ಸಿನಿಮಾಗಾಗಿ ಸಜ್ಜಾಗಿದ್ದಾರೆ. ಪುಷ್ಪ-2 ಚಿತ್ರೀಕರಣಕ್ಕೆ ಸಿನಿಮಾತಂಡ ರೆಡಿಯಾಗುತ್ತಿದೆ. ಈ ನಡುವೆ ಅಲ್ಲು ಅರ್ಜುನ್ ಸಾವರ್ಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್ ಲುಕ್ ಇದೀಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಕಪ್ಪು ಪ್ಯಾಂಟ್ ಮತ್ತು ಟಿ ಶರ್ಟ್ ಧರಿಸಿ ಅಲ್ಲು ಅರ್ಜುನ್ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ.  ಫಿಟ್ ಅಂಡ್ ಫೈನ್ ಆಗಿದ್ದ   ಅಲ್ಲು ಅರ್ಜುನ್ ಕೊಂಚ ದಪ್ಪ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್ ಹೊಸ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. 

ಅಲ್ಲು ಅರ್ಜುನ್ ಹೊಸ ಲುಕ್ ನೋಡಿ ನೆಟ್ಟಿಗರು 'ವಡಾ ಪಾವ್' ಎಂದು ಕಾಮೆಂಟ್ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಅಲ್ಲು ಅರ್ಜುನ್ ಬುಡ್ಡಾ ಆಗುತ್ತಿದ್ದಾರೆ ಎಂದು ಕಾಲೆಳೆಯುತ್ತಿದ್ದಾರೆ. ಶ್ರೀಲಂಕಾದ ಕ್ರಿಕೆಟರ್ ಲತೀಫ್ ಮಾಲಿಂಗ ಹಾಗೆ ಕಾಣುತ್ತಿದ್ದಾರೆ ಎಂದು ಇನ್ನು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. 

ಅಲ್ಲು ಅರ್ಜುನ್ 'ಪುಷ್ಪ-2' ಸಿನಿಮಾದ ಕಥೆ ಲೀಕ್; ರಶ್ಮಿಕಾ ಪಾತ್ರ ಇಷ್ಟೇನಾ?

ಪುಷ್ಪ ಸಿನಿಮಾ ಬಳಿಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮುತ್ತಿದ್ದಾರೆ. ಬಾಲಿವುಡ್‌ನಲ್ಲಿ ಅಲ್ಲು ಅರ್ಜುನ್ ಸಿನಿಮಾ ಉತ್ತಮ ಕಮಾಯಿ ಮಾಡಿದೆ. ಭಾರತೀಯ ಸಿನಿ ಪ್ರಿಯರು ಪುಷ್ಪ-2ಗಾಗಿ ಕಾಯುತ್ತಿದ್ದಾರೆ. ಪುಷ್ಪ-2 ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿದೆ. ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಲೆ ಇರತ್ತದೆ. ಸದ್ಯ ಅಲ್ಲು ಅರ್ಜುನ್ ಕಾಣಿಸಿಕೊಂಡಿರುವುದು ಪುಷ್ಪ-2 ಲುಕ್‌ನಲ್ಲಿ. ಮೊದಲ ಭಾಗಕ್ಕಿಂತ ಎರಡನೇ ಭಾಗದಲ್ಲಿ ಅಲ್ಲು ಅರ್ಜುನ್ ಮತ್ತಷ್ಟು ದಪ್ಪಗೆ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ.

ಈಗಾಗಲೇ ಪುಷ್ಪ-2 ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗಿವೆ. ಪುಷ್ಪ-2 ಸಿನಿಮಾದ ಕಥೆ ಲೀಕ್ ಆಗಿದ್ದು ರಶ್ಮಿಕಾ ಮಂದಣ್ಣ (Rashmika Mandanna) ಪಾತ್ರ ಪ್ರಾರಂಭದಲ್ಲಿ ಅಂತ್ಯ ವಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ರಶ್ಮಿಕಾ ಶ್ರೀವಲ್ಲಿ ಪಾತ್ರ ಪುಷ್ಪ-2ನಲ್ಲಿ ಹೆಚ್ಚು ಇರಿವುದಿಲ್ಲವಂತೆ. ಶ್ರೀವಲ್ಲಿ ಸಾವಿನ ಬಳಿಕ ಹೀರೋ ಮತ್ತು ವಿಲನ್ ನಡುವಿನೆ ದೃಶ್ಯ ಹೆಚ್ಚಾಗಿ ಇರಲಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಅಲ್ಲದೆ ಪುಷ್ಪ-2ಗೆ ವಿದೇಶಿ ನಾಯಕಿ ಕೂಡ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. 

ಅಲ್ಲು ಅರ್ಜುನ್ 'ಪುಷ್ಪ-2'ನಲ್ಲಿ ಫಾರಿನ್ ಹಿರೋಯಿನ್; ರಶ್ಮಿಕಾ ಕಥೆಯೇನು?

ಅಂದಹಾಗೆ ಪುಷ್ಪ-2ನಲ್ಲಿ ವಿಲನ್ ಆಗಿ ದಕ್ಷಿಣ ಭಾರತದ ಖ್ಯಾತ ನಟ ಫಹಾದ್ ಫಾಸಿಲ್ (fahad fazil) ಕಾಣಿಸಿಕೊಂಡಿದ್ದಾರೆ. ಫಹಾದ್ ಪಾತ್ರ ಮೊದಲ ಭಾಗದ ಕೊನೆಯಲ್ಲಿ ತೋರಿಸಲಾಗಿದೆ. ಪೊಲೀಸ್ ಅಧಿಕಾರಿಯಾಗಿ ಫಹಾದ್ ಎಂಟ್ರಿ ಕೊಟ್ಟಿದ್ದಾರೆ. ಪಾರ್ಟ್-1 ರಲ್ಲಿ ಫಹಾದ್ ಮತ್ತು ಅಲ್ಲು ಅರ್ಜುನ್ ನಡುವಿನ ದೃಶ್ಯ ಪಾರ್ಟ್-2ನ ತೀವ್ರರತೆಯನ್ನು ತೋರುತ್ತಿತ್ತು. ಹಾಗಾಗಿ ಪಾರ್ಟ್-2ನಲ್ಲಿ ಫಹಾದ್ ಮತ್ತು ಅಲ್ಲು ಅರ್ಜುನ್ ನಡುವಿನ ಜಿದ್ದಾಜಿದ್ದಿಯ ದೃಶ್ಯಗಳೇ ಜಾಸ್ತಿ ಇರುವ ಸಾದ್ಯತೆ ಇದೆ. ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿರುವ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.     

click me!