ಸಹಜ ಸುಂದರಿ ಸಾಯಿ ಪಲ್ಲವಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಈಕೆಯ ಮೊಡವೆ ಬಿದ್ದ ಮುಖದ ಅಂದ, ಯಾವುದೇ ಬಾಲಿವುಡ್ ಅತಿಲೋಕ ಸುಂದರಿಗಿಂತಲೂ ಹೆಚ್ಚು ಚಂದ ಎಂದು ದಕ್ಷಿಣ ಭಾರತೀಯ ಸಿನಿಮಾ ರಸಿಕರು ಗಾಢವಾಗಿ ನಂಬಿದ್ದಾರೆ.
ಸಹಜ ಸುಂದರಿ ಸಾಯಿ ಪಲ್ಲವಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಈಕೆಯ ಮೊಡವೆ ಬಿದ್ದ ಮುಖದ ಅಂದ, ಯಾವುದೇ ಬಾಲಿವುಡ್ ಅತಿಲೋಕ ಸುಂದರಿಗಿಂತಲೂ ಹೆಚ್ಚು ಚಂದ ಎಂದು ದಕ್ಷಿಣ ಭಾರತೀಯ ಸಿನಿಮಾ ರಸಿಕರು ಗಾಢವಾಗಿ ನಂಬಿದ್ದಾರೆ.
ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ರಸಿಕರ ಹಾರ್ಟ್ ಥ್ರೋಬ್ ಅನಿಸಿರುವ ಈ ತೆಳ್ಳಗೆ, ಕೆಂಪಗಿನ ಸುಂದರಿಯು ನಾಗ ಚೈತನ್ಯ ಜೊತೆ 'ಲವ್ ಸ್ಟೋರಿ' ಎನ್ನುವ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಡ್ಯಾನ್ಸನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡಬಹುದಾಗಿದೆಯಂತೆ.
ಕೊರೋನಾ ಜಾಗೃತಿಗೆ ಸಿನಿಮಾ ಡೈಲಾಗ್, ಹಾಡಿನ ಮೊರೆ ಹೋದ ಖಾಕಿ ಟೀಂ
ಅಂತರ್ಜಾತಿ ಯುವಕ- ಯುವತಿಯ ಪ್ರೇಮಕಥೆಯುಳ್ಳ ಸಿನಿಮಾ ಇದಾಗಿದೆ. ಕೆಲ ದಿನಗಳ ಹಿಂದೆ ತೆಲುಗು ಮಾಧ್ಯಮಗಳಲ್ಲಿ ಸಾಯಿ ಪಲ್ಲವಿ ಜಾತಿ ವಿಚಾರ ಪ್ರಸ್ತಾಪವಾಯಿತು. ಒಂದು ಸಣ್ಣ ವಿಚಾರ ಸಿಕ್ಕರೆ ಸಾಕು ಅಭಿಮಾನಿಗಳು ಸಾಯಿ ಪಲ್ಲವಿ ಹಿಂದೆ ಬೀಳುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ಇದು ಸದ್ದು ಮಾಡಿತು.
ಸಾಯಿ ಪಲ್ಲವಿ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂಟಗಿರಿಯವರು. ಅಲ್ಲಿ ಕಂಡು ಬರುವ 'ಬಡಗ' ಎನ್ನುವ ಜನಾಂಗಕ್ಕೆ ಸೇರಿದವರು. ಇವರ ಭಾಷೆ ಕೂಡಾ ಬಡಗವಾಗಿದ್ದು ಇದಕ್ಕೆ ಲಿಪಿ ಇಲ್ಲ. ಸಾಂಸ್ಕೃತಿಕವಾಗಿ ಗಟ್ಟಿ ನೆಲೆ ಹೊಮದಿರುವ ಸಮುದಾಯ ಇದಾಗಿದೆ. ಅನೆಕ ಜನಪದ ಕತೆಗಳ ಜನಕ ಈ ಸಮುದಾಯ.