ನನ್ನ ಮದುವೆ ಬಗ್ಗೆ ಗಾಸಿಪ್ ಮಾಡುವ ಬದಲು ಕೋವಿಡ್ 19 ಬಗ್ಗೆ ಯೋಚಿಸಿ: ಕೀರ್ತಿ ಫುಲ್ ಗರಂ

By Suvarna News  |  First Published Apr 11, 2020, 12:38 PM IST

'ನನ್ನ ವೈಯಕ್ತಿಕ ಜೀವನದ ಬಗ್ಗೆ ಗಾಸಿಪ್‌ ಮಾಡುವ ಬದಲು ಬೇರೆ ಪ್ರಮುಖ ವಿಚಾರಗಳ ಬಗ್ಗೆ ಗಮನ ಹರಿಸಿ. ದೇಶದಲ್ಲಿ ಸದ್ಯಕ್ಕೆ ಕೊರೋನಾ ಆತಂಕವಿದೆ. ಕೋವಿಡ್ 19 ವಿರುದ್ಧ ಹೋರಾಡುವ ಬಗೆ ಹೇಗೆ ಎಂಬುದನ್ನು ಚಿಂತಿಸಿ' ಎಂದು ಕೀರ್ತಿ ಸುರೇಶ್ ಖಾರವಾಗಿ ಹೇಳಿದ್ದಾರೆ. 


'ಮಹಾನಟಿ' ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ. ಮನೆಯವರೇ ನೋಡಿ ಮಾಡುತ್ತಿರುವ ಅರೇಂಜ್ ಮ್ಯಾರೇಜ್ ಇದು ಎಂದೆಲ್ಲಾ ಗುಸುಗುಸು ಕೇಳಿ ಬಂದಿತ್ತು. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಕೀರ್ತಿ ಸುರೇಶ್, ಮದುವೆ ವದಂತಿಯನ್ನು ತಳ್ಳಿ ಹಾಕಿದ್ದಾರೆ. 

'ನನ್ನ ಮದುವೆ ವಿಚಾರ ಕೇಳಿ ನನಗೆ ಆಶ್ಚರ್ಯವಾಯಿತು. ಹೇಗೆ ಮದುವೆ ವಿಚಾರ ಶುರುವಾಯಿತೆಂದೇ ಅರ್ಥವಾಗುತ್ತಿಲ್ಲ. ಸದ್ಯಕ್ಕೆ ಮದುವೆಯಾಗುವ ಯೋಚನೆ ಇಲ್ಲ. ನಾನು ಮದುವೆ ಆಗುತ್ತಿಲ್ಲ' ಎಂದಿದ್ದಾರೆ. 

Tap to resize

Latest Videos

ಮಹಾನಟಿ ಕೀರ್ತಿಗೆ ಕೂಡಿ ಬಂದ ಕಂಕಣ ಭಾಗ್ಯ; ಮದುವೆ ಆಗ್ತಾ ಇರೋ ಹುಡುಗ ಯಾರು?

' ನನ್ನ ವೈಯಕ್ತಿಕ ಜೀವನದ ಬಗ್ಗೆ ಗಾಸಿಪ್‌ ಮಾಡುವ ಬದಲು ಬೇರೆ ಪ್ರಮುಖ ವಿಚಾರಗಳ ಬಗ್ಗೆ ಗಮನ ಹರಿಸಿ. ದೇಶದಲ್ಲಿ ಸದ್ಯಕ್ಕೆ ಕೊರೋನಾ ಆತಂಕವಿದೆ. ಕೋವಿಡ್ 19 ವಿರುದ್ಧ ಹೋರಾಡುವ ಬಗೆ ಹೇಗೆ ಎಂಬುದನ್ನು ಚಿಂತಿಸಿ' ಎಂದು ಖಾರವಾಗಿ ಹೇಳಿದ್ದಾರೆ. 

'ಲವ್‌ಸ್ಟೋರಿ' ಕೇಳಿ ಸಾಯಿ ಪಲ್ಲವಿ ಜಾತಿ ಹಿಂದೆ ಬಿದ್ದ ಸೋಷಿಯಲ್ ಮೀಡಿಯಾ

ಲಾಕ್‌ಡೌನ್ ಮುಂಚೆ ಕೀರ್ತಿ 'ಗುಡ್ ಲಕ್ ಸಖಿ' ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದರು. ಈ ಸಿನಿಮಾದಲ್ಲಿ ಶಾರ್ಪ್‌ ಶೂಟರ್ ಪಾತ್ರ ಮಾಡುತ್ತಿದ್ದಾರೆ. 2020 ರ ಮಧ್ಯದಲ್ಲಿ ಈ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ. 

 

click me!