ಮದುವೆಯಾದ 12 ವರ್ಷದ ನಂತ್ರ ದಾಂಪತ್ಯ ಜಗಳವನ್ನು ಕರೀನಾ ಕಪೂರ್ ಖಾನ್ ಬಿಚ್ಚಿಟ್ಟಿದ್ದಾರೆ. ಸೈಫ್ ಜೊತೆ ಜಗಳವಾಡೋದು ಏಕೆ ಹಾಗೆ ಕರಿಷ್ಮಾ ಮನೆಗೆ ಬಂದ್ರೆ ಏನಾಗುತ್ತೆ ಎಂಬುದನ್ನು ಹೇಳಿದ್ದಾರೆ.
ಸೆಲೆಬ್ರಿಟಿಗಳ ಡಿವೋರ್ಸ್ ಪಿರಿಯಡ್ (Celebrity Divorce Period) ನಡೆದಂತಿದೆ. ಒಬ್ಬರಾದ್ಮೇಲೆ ಒಬ್ಬರ ಡಿವೋರ್ಸ್ ಸುದ್ದಿ ಹೊರಗೆ ಬರ್ತಿದೆ. ಈ ಮಧ್ಯೆ ಬಾಲಿವುಡ್ ಸೂಪರ್ ಸ್ಟಾರ್ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಸುದ್ದಿಯಲ್ಲಿದ್ದಾರೆ. ಕರೀನಾ ಬದಲು ಕರೀಷ್ಮಾ, ಸೈಫ್ ಅಲಿ ಖಾನ್ ಮದುವೆಯಾಗಿದ್ರೆ ಇಬ್ಬರು ವಿಚ್ಛೇದನ ಪಡೆಯುವ ಸಾಧ್ಯತೆ ಇತ್ತು. ಅದ್ಯಾಕೆ ಅನ್ನೋದನ್ನು ಕರೀನಾ ಕಪೂರ್ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಸೈಫ್ ಅಲಿ ಖಾನ್ (Saif Ali Khan) ಐದು ವರ್ಷಗಳ ಡೇಟಿಂಗ್ ನಂತ್ರ ಕರೀನಾ ಕಪೂರ್ (Kareena Kapoor) ಖಾನ್ ರನ್ನು ಎರಡನೇ ಮದುವೆಯಾಗಿದ್ದಾರೆ. ಇಬ್ಬರಿಗೆ ಮುದ್ದಾದ ಇಬ್ಬರು ಮಕ್ಕಳಿವೆ. ಇನ್ನು ಕರೀನಾ ಸಹೋದರಿ ಹಾಗೂ ನಟಿ ಕರಿಷ್ಮಾ (Karisma), ಪತಿಯಿಂದ ವಿಚ್ಛೇದನ (Divorce) ಪಡೆದು ಒಂಟಿಯಾಗಿದ್ದಾರೆ. ಸೈಫ್ ಅಲಿ ಖಾನ್ ಜೊತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದ ನಟಿ, ಆಗಾಗ ಸಹೋದರಿ ಕರೀನಾ ಹಾಗೂ ಸೈಫ್ ಅಲಿ ಖಾನ್ ಜೊತೆ ಕಾಣಿಸಿಕೊಳ್ತಿರುತ್ತಾರೆ. ಸಂದರ್ಶನವೊಂದರಲ್ಲಿ ಸೈಫ್ ಅಲಿ ಖಾನ್ ಜೊತೆ ತಮ್ಮ ಜೀವನ ಹೇಗಿದೆ ಎನ್ನುವುದನ್ನು ಹೇಳಿದ ಕರೀನಾ ಕಪೂರ್ ಖಾನ್, ನನ್ನ ಸ್ಥಾನದಲ್ಲಿ ಸಹೋದರಿ ಇದ್ರೆ ವಿಚ್ಛೇದನ ಆಗ್ತಿತ್ತೇನೋ ಎಂದು ಸೈಫ್ ಹೇಳ್ತಿರುತ್ತಾರೆ ಎಂದಿದ್ದಾರೆ.
undefined
100 ಕೋಟಿ ಆಸ್ತಿ ಬೇಡ, ಒಬ್ಬ ತಂದೆಯಾಗಿ ನನಗಿದು ಖುಷಿಯಾದ ವಿಷಯ: ಚಂದನ್ ಶೆಟ್ಟಿ ತಂದೆ ರಿಯಾಕ್ಷನ್
ಸೈಫ್ ಅಲಿ ಖಾನ್ ಹಾಗೂ ಕರೀನಾ, ಬಾಲಿವುಡ್ ನ ಮಾದರಿ ಜೋಡಿಗಳಲ್ಲಿ ಒಂದು. ದಾಂಪತ್ಯ ಜೀವನಕ್ಕೆ ಕಾಲಿಟ್ಟು 12 ವರ್ಷಗಳ ನಂತ್ರ ಕರೀನಾ, ತಮ್ಮ ಜಗಳದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಎಲ್ಲ ದಂಪತಿಯಂತೆ ಕರೀನಾ ಹಾಗೂ ಸೈಫ್ ಕೂಡ ಮನೆಯಲ್ಲಿ ಜಗಳವಾಡ್ತಿರುತ್ತಾರೆ. ಅದ್ರಲ್ಲೂ ಕರೀನಾ ಸಹೋದರಿ ಕರಿಷ್ಮಾ ಕಪೂರ್ ಮನೆಗೆ ಬಂದಾಗ ವಾತಾವರಣ ಸ್ವಲ್ಪ ಭಿನ್ನವಾಗಿರುತ್ತೆ ಎನ್ನುತ್ತಾರೆ ಕರೀನಾ.
ಕರೀನಾ ಹಾಗೂ ಸೈಫ್ ಮಧ್ಯೆ ಎಸಿ ವಿಷ್ಯಕ್ಕೆ ಗಲಾಟೆ ನಡೆಯೋದು ಕಾಮನ್. ಸೈಫ್ ಅಲಿ ಖಾನ್ 16 ಡಿಗ್ರಿ ಸೆಲ್ಸಿಯಸ್‌ನಲ್ಲಿ ಎಸಿ ಇರಬೇಕೆಂದು ಬಯಸ್ತಾರೆ. ಕರೀನಾ, 20 ಡಿಗ್ರಿ ಸೆಲ್ಸಿಯಸ್ ಎಸಿಯನ್ನು ಬಯಸ್ತಾರೆ. ಇಬ್ಬರ ಮಧ್ಯೆ ಇದೇ ವಿಷ್ಯಕ್ಕೆ ಆಗಾಗ ಗಲಾಟೆ ನಡೆದ್ರೂ ಇಬ್ಬರು ಈಗ ಒಂದು ಒಪ್ಪಂದಕ್ಕೆ ಬಂದಿದ್ದಾರೆ. ಅವರಿಗೂ ಬೇಡ, ಇವರಿಗೂ ಬೇಡ ಅಂತ 20 ಡಿಗ್ರಿ ಸೆಲ್ಸಿಯನ್ಸ್ ಗೆ ಎಸಿ ಸೆಟ್ ಮಾಡಿದ್ದಾರೆ. ಹಾಗಾಗಿ ಇಬ್ಬರ ಮಧ್ಯೆ ಸದ್ಯ ಜಗಳವಿಲ್ಲ. ಆದ್ರೆ ಕರಿಷ್ಮಾ ಮನೆಗೆ ಬಂದಾಗ ಎಸಿ ತಾಪಮಾನ ಬದಲಾಗುತ್ತೆ ಎನ್ನುತ್ತಾರೆ ಕರೀನಾ.
ಕರಿಷ್ಮಾ ಮನೆಯಲ್ಲಿ ಎಸಿ 25 ಡಿಗ್ರಿ ಸೆಲ್ಸಿಯಸ್ ನಲ್ಲಿರುತ್ತೆ. ಕರಿಷ್ಮಾ, ಸಹೋದರಿ ಕರೀನಾ ಮನೆಗೆ ಬಂದಾಗ ಎಸಿಯನ್ನು ಬದಲಿಸ್ತಾರೆ. ತನ್ನ ಅನುಕೂಲಕ್ಕೆ ತಕ್ಕಂತೆ ಊಟ ಮಾಡುದ ವೇಳೆ ಮನೆಯ ಎಸಿ 25 ಡಿಗ್ರಿ ಸೆಲ್ಸಿಯಸ್ ಗೆ ಇಡ್ತಾರೆ. ಇದು ಸೈಫ್ ಅಲಿ ಖಾನ್ ಚಿಂತೆಗೆ ಕಾರಣವಾಗುತ್ತೆ. ಈ ಟೈಂನಲ್ಲಿ ಸೈಫ್ ಅಲಿ ಖಾನ್ ದೇವರಿಗೆ ಥ್ಯಾಂಕ್ಸ್ ಹೇಳ್ತಾರೆ. ಥ್ಯಾಂಕ್ಸ್ ಗಾಡ್. ನನ್ನ ಮದುವೆ ಬೇಬೋ ಜೊತೆಗಾಗಿದೆ. ಎಸಿ ತಾಪಮಾನವನ್ನು 20ಕ್ಕಿಡಲು ರಾಜಿ ಮಾಡಿಕೊಳ್ತಾಳೆ. ಇಂಥ ಸಣ್ಣ ವಿಷ್ಯಕ್ಕೆ ಈಗ ವಿಚ್ಛೇದನಗಳಾಗುತ್ತವೆ ಎಂದು ಸೈಫ್ ತಮಾಷೆ ಮಾಡ್ತಾರೆ ಎನ್ನುತ್ತಾರೆ ಕರೀನಾ.
ಇನ್ಸ್ಟಾ ಲೈವ್ನಲ್ಲಿ ನಟಿ ಶ್ರುತಿ: ಸೃಜನ್ ಲೋಕೇಶ್, ಅದಿತಿ ಪ್ರಭುದೇವ್, ರಿಯಾಲಿಟಿ ಷೋ ಕುರಿತು ಹೇಳಿದ್ದೇನು?
ಮದುವೆ ಸಂಬಂಧದ ಬಗ್ಗೆ ಮಾತನಾಡಿದ ಕರೀನಾ, ಮದುವೆ ನಂತ್ರ ಸೈಫ್ ಅಲಿ ಖಾನ್ ನನ್ನನ್ನು ಜವಾಬ್ದಾರಿಯುತ ಮಹಿಳೆಯನ್ನಾಗಿ ಮಾಡಿದ್ದಾರೆ ಎಂದಿದ್ದಾರೆ. ಯಾವುದೇ ವಿಷ್ಯವನ್ನು ಸ್ಪಷ್ಟವಾಗಿ ನೋಡುವ ಹಾಗೂ ಸಂಬಂಧವನ್ನು ಸಂಭಾಳಿಸುವ ಕಲೆ ಕಲಿತಿದ್ದೇನೆ ಎನ್ನುತ್ತಾರೆ ಕರೀನಾ.