
ಬಿಗ್‌ಬಾಸ್‌ನಿಂದ ಹೊರ ಹೋಗುತ್ತೀನಿ ಎಂದು ಅಭಿಮಾನಿಗಳಿಗೆ ಶಾಕ್ ನೀಡಿದ್ದ ಸಲ್ಮಾನ್ ಖಾನ್ ಇದೀಗ ಅಭಿಮಾನಿಗಳಿಗೆ ಖುಷ್ ಖಬರ್ ನೀಡಿದ್ದಾರೆ. ಇಡೀ ಎಪಿಸೋಡನ್ನು ನಾನೇ ಹೋಸ್ಟ್ ಮಾಡುತ್ತೇನೆ ಎಂದು ಹೇಳಿದ್ದಾರೆ.
ಬಿಗ್ಬಾಸ್ ಶೋವನ್ನು 5 ವಾರಗಳಿಗೆ ವಿಸ್ತರಿಸಿದಾಗ ನನ್ನ ಸಂಭಾವನೆಯನ್ನು ಹೆಚ್ಚಿಸಿರಲಿಲ್ಲ. ಸಂಭಾವನೆ ವಿಚಾರದಲ್ಲಿ ತುಸು ಬೇಸರವಿದೆ ಎಂದಿದ್ದರು. ಇದೀಗ ತಾವೇ ಹೋಸ್ಟ್ ಮಾಡಲು ಒಪ್ಪಿಕೊಂಡಿದ್ದಾರೆ.
ಯಶ್ ಮಾತು ಕೇಳಿ ಸೆಲ್ಫಿ ಕೇಳಲು ಬಂದ ಸೈನಿಕರಿಗೆ ಸರ್ಪ್ರೈಸ್!
ಸಲ್ಮಾನ್‌ಗೆ ಆರೋಗ್ಯ ಸಮಸ್ಯೆಯಿದೆ. ಹಾಗಾಗಿ ಶೋನಿಂದ ಹೊರ ಹೋಗುತ್ತಾರೆ ಎನ್ನಲಾಗಿತ್ತು. ಇದಕ್ಕೆ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್, ಪ್ರತಿಕ್ರಿಯಿಸುತ್ತಾ, ಸಲ್ಮಾನ್ ಆರೋಗ್ಯದಿಂದಿದ್ದಾನೆ. ಬಿಡುವಿಲ್ಲದ ಕೆಲಸಗಳಿಂದ ಸ್ವಲ್ಪ ದಣಿದಿದ್ದಾನೆ ಅಷ್ಟೇ. ಅವನ ಆರೋಗ್ಯಕ್ಕೂ, ಬಿಗ್‌ಬಾಸ್‌ಗೂ ಸಂಬಂಧವಿಲ್ಲ' ಎಂದಿದ್ದಾರೆ.
'ದಬಾಂಗ್ -3' ಬಿಟ್ಟು ಕ್ರಿಕೆಟ್ ಸ್ಟಾರ್‌ಗಳ ಕಾಣಿಸಿಕೊಂಡ ಸುದೀಪ್-ಸಲ್ಲುಭಾಯ್!
ಸಲ್ಮಾನ್ ಖಾನ್ 2011 ರಿಂದಲೂ ಬಿಗ್ ಬಾಸ್ ಹೋಸ್ಟ್ ಮಾಡ್ತಾ ಬಂದಿದ್ದಾರೆ. ಇದ್ದಕ್ಕಿದ್ದಂತೆ ಹೊರ ಹೋಗಿದ್ದು ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಇದೀಗ ಮತ್ತೆ ಮುಂದುವರೆಯುವುದಾಗಿ ಹೇಳಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.