
1989ರಲ್ಲಿ ಬಿಡುಗಡೆಯಾದ ಬಾಲಿವುಡ್ನ ಮೈನೇ ಪ್ಯಾರ್ ಕಿಯಾ ಚಿತ್ರ ನೋಡಿದವರಿಗೆ ಸಲ್ಮಾನ್ ಖಾನ್ ಜೊತೆಗೆ ನಟಿಸಿರುವ ಭಾಗ್ಯಶ್ರೀ ನೆನಪಿರಲೇ ಬೇಕು. 35 ವರ್ಷಗಳ ಹಿಂದೆ ಬಿಡುಗಡೆಯಾದ ಈ ಚಿತ್ರದ ಹಾಡುಗಳು ಎವರ್ಗ್ರೀನ್ ಆಗಿದೆ. ಈ ಚಿತ್ರವನ್ನು ಇಂದಿಗೂ ನೋಡುವವರು ಇದ್ದಾರೆ. ಮುದ್ದುಮುದ್ದಾದ ಮೊಗದ ಭಾಗ್ಯಶ್ರೀಗೆ ಆಗ 25ರ ಹರೆಯ. ಆಕರ್ಷಕ ನಗು, ಒಲವಿನ ಕಣ್ಣುಗಳಿಂದ ಅಪಾರ ಅಭಿಮಾನಿಗಳನ್ನು ಗಳಿಸಿರುವ ಭಾಗ್ಯಶ್ರೀ ಇದೀಗ 55ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರು ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದು, ವಯಸ್ಸೆನ್ನುವುದು ಕೇವಲ ಲೆಕ್ಕವಷ್ಟೇ ಎನ್ನುವ ಮಾತಿಗೆ ಸಾಕ್ಷಿಯಾದಂತೆ ಕಂಡು ಬಂದಿದ್ದಾರೆ. ಯುವತಿಯರನ್ನೂ ನಾಚಿಸುವ ಯೌವನಭರಿತರಾಗಿ ಕಂಡುಬಂದಿದ್ದು, ಅಭಿಮಾನಿಗಳು ಹಾರ್ಟ್ ಎಮೋಜಿಗಳಿಂದ ಕಮೆಂಟ್ ಬಾಕ್ಸ್ ತುಂಬಿಸಿದ್ದಾರೆ. ಕೇಕ್ ಕಟ್ ಮಾಡಿದ ನಟಿ ಅಲ್ಲಿಗೆ ಬಂದಿದ್ದ ಪಾಪರಾಜಿಗಳಿಗೆ ಕೇಕ್ ತಿನ್ನಿಸಿದ್ದಾರೆ.
51 ವರ್ಷದ ನಟಿ ಭಾಗ್ಯಶ್ರೀ ಮದುವೆ ನಂತರ ಬ್ರೇಕ್ ಪಡೆದಿದ್ದರು. ಆ ನಂತರ 2019ರಲ್ಲಿ ಮತ್ತೆ ಕನ್ನಡದ ಸೀತಾರಾಮ ಕಲ್ಯಾಣ ಸಿನಿಮಾ ಮೂಲಕ ವಾಪಸ್ ಆಗಿದ್ದಾರೆ. ನಂತರ ತೆಲುಗಿನ ಎರಡು ಸಿನಿಮಾಕ್ಕೆ ಸಹಿ ಮಾಡಿದ್ದಾರೆ. ಪ್ರಭಾಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೇನೇ, ಕೆಲ ತಿಂಗಳ ಹಿಂದಷ್ಟೇ ಭಾಗ್ಯಶ್ರೀ ಅವರ ಮಗಳು ಅವಂತಿಕಾ ದಾಸಾನಿ ಕನ್ನಡ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಮ್ಯೂಸಿಕಲ್ ಲವ್ ಸ್ಟೋರಿಗೆ ಹೆಸರಾಗಿರುವ ನಿರ್ದೇಶಕ ನಾಗಶೇಖರ್ ಅವರ ಹೊಸ ಸಿನಿಮಾದಲ್ಲಿ ಭಾಗ್ಯಶ್ರೀ ಪುತ್ರಿ ನಾಯಕಿಯಾಗಲಿದ್ದಾರೆ.
ದೆವ್ವದ ಜೊತೆ ಫಸ್ಟ್ ನೈಟ್ ಹೇಗಿತ್ತು? ಟೀಸರ್ನಲ್ಲಿದೆ ಇದರ ಗುಟ್ಟು: 'ಒಳ್ಳೆ ಹುಡುಗ' ಪ್ರಥಮ್ ಹೇಳಿದ್ದೇನು?
ಹಲವಾರು ವರ್ಷಗಳ ಬ್ರೇಕ್ ಬಳಿಕ ತಮ್ಮ ಚಿತ್ರರಂಗದ ಎಂಟ್ರಿ ಕುರಿತು ಭಾಗ್ಯಶ್ರೀ ಮಾತನಾಡಿದ್ದರು. ಮತ್ತೆ ಅಭಿನಯಿಸಲು ಪ್ರಾರಂಭಿಸಿದ್ದೇನೆ. ಇದು ತುಂಬಾ ಸಂತೋಷ ತರುತ್ತಿದೆ ಎಂದಿದ್ದರು. ಅಷ್ಟಕ್ಕೂ ಇವರು ಇಷ್ಟೆಲ್ಲಾ ಫೇಮಸ್ ಆಗಲು ಕಾರಣವೇ ಅವರ ಮೊದಲ ಚಿತ್ರ ಮೈನೆ ಪ್ಯಾರ್ ಕಿಯಾ. ಈ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟಿದ್ದ ಭಾಗ್ಯಶ್ರೀಗೆ ಮೊದಲ ಸಿನಿಮಾನೇ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತು. ಆ ನಂತರ ಕನ್ನಡದ ಅಮ್ಮವರ ಗಂಡ ಸಿನಿಮಾ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ತೆಲುಗು, ಭೋಜಪುರಿ, ಮರಾಠಿ ಸಿನಿಮಾಗಳು ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ಭಾಗ್ಯಶ್ರೀ ಪತಿ ಹಿಮಾಲಯ ದುಸ್ಸಾನಿ, ಅವರು ಈಚೆಗೆ ಜೂಜು ಪ್ರಕರಣದಲ್ಲಿ ಭಾಗವಾಗಿ ಮುಂಬೈ ಅಂಬೋಲಿ ಪೊಲೀಸರು ಅರೆಸ್ಟ್ ಮಾಡಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಪತಿಯ ಬಗ್ಗೆ ಮಾತನಾಡಿದ್ದ ಭಾಗ್ಯಶ್ರೀ, ಹಿಮಾಲಯ ನನ್ನ ಫಸ್ಟ್ ಲವ್. ಅವನನ್ನು ಮದುವೆಯಾದ ಮೇಲೆ ಅನಿವಾರ್ಯವಾಗಿ ಏನೋ ಕೆಟ್ಟ ಗಳಿಗೆಯಲ್ಲಿ ಬೇರ್ಪಟ್ಟೆವು. ಆಗ ನನಗೆ ಅರಿವಾಯಿತು, ಅವನು ನನ್ನ ಜೀವನದಲ್ಲಿ ಬರದಿದ್ದರೆ ಮತ್ತು ನಾನು ಬೇರೆಯವರೊಂದಿಗೆ ಮದುವೆಯಾಗಿದ್ದರೆ ಏನಾಗುತ್ತಿತ್ತು ಎಂದು. ಒಂದೂವರೆ ವರ್ಷ ನಾವು ಒಟ್ಟಿಗೆ ಇರದ ಕಾಲವೊಂದಿತ್ತು ಎಂದು ನಟಿ ಬಹಿರಂಗ ಪಡಿಸಿದ್ದರು.
ನಟರ ನೋಡಲು ಕಾಲ್ತುಳಿತ, ಚಪ್ಪಲಿ ಎಸೆತ! ಲಾಠಿಚಾರ್ಜ್: ಹೆಣ್ಣು ಮಕ್ಕಳ ಪಾಡು ಹರೋಹರ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.