ಆರ್ಟಿಕಲ್​ 370 ಭರ್ಜರಿ ಕಲೆಕ್ಷನ್​: ಸತ್ಯ ಅರಗಿಸಿಕೊಳ್ಳದ ಈ ದೇಶಗಳಲ್ಲಿ ಸಿನಿಮಾವೇ ಬ್ಯಾನ್​!

By Suvarna News  |  First Published Feb 27, 2024, 4:16 PM IST

ಯಾಮಿ ಗೌತಮ್​ ಅಭಿನಯದ ಆರ್ಟಿಕಲ್​ 370 ಚಿತ್ರವನ್ನು ಈ ದೇಶಗಳಲ್ಲಿ ಬ್ಯಾನ್​ ಮಾಡಲಾಗಿದೆ. ಇದಕ್ಕೆ ಕಾರಣ ಏನು? 
 


ಇದೇ 23ರಂದು ದೇಶಾದ್ಯಂತ ಬಿಡುಗಡೆಗೊಂಡಿರುವ ಆರ್ಟಿಕಲ್​ 370 ಚಿತ್ರಕ್ಕೆ ಭರ್ಜರಿ ಯಶಸ್ಸು ಸಿಗುತ್ತಿದೆ.  ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿಮರ್ಶಕರೂ ಕೂಡ ಸಿನಿಮಾದ ಬಗ್ಗೆ ಕೊಂಡಾಡಿದ್ದಾರೆ. ಬಾಕ್ಸ್ ಆಫೀಸ್ನಲ್ಲೂ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370 ನೇ ವಿಧಿಯನ್ನು ಕೇಂದ್ರವು ರದ್ದುಗೊಳಿಸಿದ ಕುರಿತಾದ ಈ ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರ ಬಿಡುಗಡೆಯಾದ ನಾಲ್ಕೇ ದಿನದಲ್ಲಿಯೇ ಇದರ ಬಾಕ್ಸ್​ ಆಫೀಸ್​ ಕಲೆಕ್ಷನ್​ 32 ಕೋಟಿ ರೂಪಾಯಿಗಳನ್ನು ದಾಟಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆಯ ಘಟನೆಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. 370 ನೇ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವುದರ ಸುತ್ತ ಈ ಸಿನಿಮಾದ ಕಥೆಯಿದೆ. ಯಾಮಿ ಗೌತಮ್​ ಈ ಸಿನಿಮಾದಲ್ಲಿ ಸೀಕ್ರೆಟ್ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾಮಿ ಇಲ್ಲಿ ಝೂನಿ ಹಕ್ಸರ್ ಎಂಬ ಗುಪ್ತಚರ ಅಧಿಕಾರಿಯಾಗಿ ನಟಿಸಿದ್ದಾರೆ.  ಚಿತ್ರದಲ್ಲಿ ಯಾಮಿ ಜೊತೆಗೆ ಪ್ರಿಯಾಮಣಿ, ಅರುಣ್ ಗೋವಿಲ್ ಮತ್ತು ಕಿರಣ್ ಕರ್ಮಾರ್ಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಅಂದಹಾಗೆ, ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರವನ್ನು ಹಲವು ವರ್ಷಗಳಿಂದ ದೇಶದಿಂದ ಬೇರ್ಪಡಿಸುವ 370 ನೇ ವಿಧಿಯನ್ನು ಆಗಸ್ಟ್ 5, 2019 ರಂದು ತೆಗೆದುಹಾಕಿತ್ತು. ಇದಲ್ಲದೆ, ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಸಂಸತ್ತಿನಲ್ಲಿ ಅಂಗೀಕರಿಸಿದ ನಂತರ ಎರಡು ಕೇಂದ್ರಾಡಳಿತ ಪ್ರದೇಶಗಳು 31 ಅಕ್ಟೋಬರ್ 2019 ರಂದು ಸರ್ಧಾರ್ ಪಟೇಲ್ ಜಯಂತಿಯಂದು ಜಾರಿಗೆ ಬಂದವು. ಅಲ್ಲಿಯವರೆಗೂ ಆ ಭಾಗದ ಜನ ಒಂದಿಲ್ಲೊಂದು ರೀತಿಯ ಸಂಘರ್ಷದಲ್ಲಿ ತೊಡಗುತ್ತಿದ್ದರು. ಯಾವಾಗ 370ನೇ ವಿಧಿ ರದ್ದತಿ ಆಯಿತು ಇದರ ನಂತರ ಆ ಪ್ರದೇಶದಲ್ಲಿ ಹಾಗೂ ಜನರಲ್ಲಿ ದೊಡ್ಡ ಬದಲಾವಣೆಗಳಾಗಿವೆ. ಇದನ್ನು ಆಧರಿಸಿ ಚಿತ್ರ ಮಾಡಲಾಗಿದೆ.

Latest Videos

undefined

45 ದಾಟಿದ್ರೂ ಮದ್ವೆಯಾಗಿಲ್ಲವೆಂದು ಕೆಟ್ಟದಾಗಿ ಟೀಕಿಸಿದವರಿಗೆ ಮುಟ್ಟಿಕೊಳ್ಳುವ ಉತ್ತರ ನೀಡಿದ ಶಮಿತಾ ಶೆಟ್ಟಿ!
 
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಟಿಕಲ್ 370 ಚಿತ್ರದ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ್ದರು. ಕಾಶ್ಮೀರದಲ್ಲಿ ನಡೆದ ಕಾರ್ಯಮಕ್ರದಲ್ಲಿ ಮೋದಿ, ‘ಆರ್ಟಿಕಲ್ 370 ಸಿನಿಮಾ ಜಮ್ಮು ಕಾಶ್ಮೀರದ ವಿಶೇಷ ಅಧಿಕಾರವನ್ನು ಯಾಕೆ ತೆಗೆಯಲಾಯಿತು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ದೇಶಗಳು ಈ ಚಿತ್ರದ ಪ್ರದರ್ಶನವನ್ನು ಬ್ಯಾನ್​ ಮಾಡಿವೆ.

ಅಷ್ಟಕ್ಕೂ ಬ್ಯಾನ್​ ಮಾಡಿರುವ ದೇಶವೆಂದರೆ, ಗಲ್ಫ್ ರಾಷ್ಟ್ರಗಳು.  ಈ ಹಿಂದೆ ಇಲ್ಲಿ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ನಟನೆಯ ಫೈಟರ್ ಸಿನಿಮಾವನ್ನೂ ಬ್ಯಾನ್ ಮಾಡಲಾಗಿತ್ತು.  ಒಂದು ಕಡೆ ಜಗತ್ತಿನಾದ್ಯಂತ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೆ ಮತ್ತೊಂದು ಕಡೆ  ಗಲ್ಫ್ ರಾಷ್ಟ್ರಗಳಲ್ಲಿ  ಮತ್ತೊಂದು ಭಾರತದ ಸಿನಿಮಾವನ್ನು ಬ್ಯಾನ್  ಮಾಡಲಾಗಿದೆ.  ಕಾಶ್ಮೀರದಲ್ಲಿ ಈ ಕಾಯ್ದೆ ನಿಷೇಧಿಸುವ ಅವಶ್ಯಕತೆ ಏಕೆ ಬಂತು ಇತ್ಯಾದಿ ವಿಚಾರಗಳ ಕುರಿತು ಸಿನಿಮಾ ಬೆಳಕು ಚೆಲ್ಲುತ್ತದೆ. ಆದರೆ,  ಗಲ್ಫ್ ರಾಷ್ಟ್ರಗಳಲ್ಲಿ ಈ ಸಿನಿಮಾಕ್ಕೆ ನಿಷೇಧ ಹೇರಲಾಗಿದೆ.  ಅಲ್ಲಿ ಪ್ರವಾಸೋದ್ಯಮಕ್ಕೆ ಭಾರತದ ಕೊಡುಗೆ ಸಾಕಷ್ಟಿದ್ದರೂ,  ಭಾರತದ ಸಿನಿಮಾಗಳ ಪ್ರವೇಶಕ್ಕೆ ತೊಂದರೆಗಳು ಮುಂದುವರೆದಿವೆ. ಸೆನ್ಸಾರ್‌ಷಿಪ್‌ ಮತ್ತು ಸೀಮಿತ ಸಾಂಸ್ಕೃತಿಕ ವಿನಿಮಯದ ಪ್ರವೃತ್ತಿಗಳು ಇದಕ್ಕೆ ಕಾರಣ ಎಂದು ವಿಶ್ಲೇಷಕರು ಹೇಳಿದ್ದಾರೆ.

ಬಾಲಿವುಡ್​ ಕ್ವೀನ್​ ನಿಗೂಢ ಸಾವಿಗೆ 6 ವರ್ಷ: ಶ್ರೀ ಅಮ್ಮ ಯಂಗೇರ್ ಅಯ್ಯಪ್ಪನ್, ಶ್ರೀದೇವಿ ಆಗಿದ್ದು ಹೇಗೆ?
 
 

click me!