ಶಾರ್ಟ್ ಫಿಲ್ಮ್ ಫೆಸ್ಟಿವಲ್: ಈ ಬಾರಿ ಎಲ್ಲವೂ ಡಿಜಿಟಲ್..! 38 ರಾಷ್ಟ್ರದ 200 ಸಿನಿಮಾ

By Suvarna NewsFirst Published Aug 12, 2020, 11:36 AM IST
Highlights

ಬೆಂಗಳೂರು ಅಂತಾರಾಷ್ಟ್ರೀಯ ಶಾರ್ಟ್ ಫಿಲ್ಮ್ ಫೆಸ್ಟಿವಲ್ ಈ ಬಾರಿ ಡಿಜಿಟಲ್ ರೂಪ ಪಡೆಯಲಿದೆ. ಸಂಪೂರ್ಣವಾಗಿ ಡಿಜಿಟಲ್ ವೇದಿಕೆ ಮೂಲಕ ಫಿಲ್ಮ್ ಫೆಸ್ಟಿವಲ್ ನಡೆಯುವುದು ವಿಶೇಷ.

ಬೆಂಗಳೂರು ಅಂತಾರಾಷ್ಟ್ರೀಯ ಶಾರ್ಟ್ ಫಿಲ್ಮ್ ಫೆಸ್ಟಿವಲ್ ಈ ಬಾರಿ ಡಿಜಿಟಲ್ ರೂಪ ಪಡೆಯಲಿದೆ. ಸಂಪೂರ್ಣವಾಗಿ ಡಿಜಿಟಲ್ ವೇದಿಕೆ ಮೂಲಕ ಫಿಲ್ಮ್ ಫೆಸ್ಟಿವಲ್ ನಡೆಯುವುದು ವಿಶೇಷ.

ಜನ ಈ ಬಾರಿ ಧಿಯೇಟರ್‌ಗೆ ಹೋಗಿ ಸಿನಿಮಾ ನೋಡುವ ಥ್ರಿಲ್ ಮಿಸ್ ಮಾಡಿಕೊಳ್ಳಲಿದ್ದಾರೆ. ಆದರೆ ಮನೆಯಲ್ಲಿಯೇ ಕುಳಿತು ಸೇಫ್ ಆಗಿ ಫೆಸ್ಟಿವಲ್ ಎಂಜಾಯ ಮಾಡಲಿದ್ದಾರೆ ಎಂದು ಫಿಲ್ಮ್ ಫೆಸ್ಟಿವಲ್ ನಿರ್ದೇಶಕ ಆನಂದ ವರದರಾಜ್ ಹೇಳಿದ್ದಾರೆ.

ಹ್ಯಾಪಿ ಬರ್ತ್‌ಡೇ ಸಾರಾ: ಫ್ಯಾಮಿಲಿ ಜೊತೆ ಸಾರಾ ಬಾಲ್ಯದ ಬ್ಯೂಟಿಫುಲ್ ಫೋಟೋಸ್

ಕಲಾವಿದರು ತಮ್ಮ ಮನೆಯಿಂದಲೇ ಟಾಕ್‌ ಶೋ ಮಾಡಲು ಸಮ್ಮತಿಸಿದ್ದಾರೆ. ಈಗಿನ ಕೊರೋನಾ ಸಂಕಷ್ಟದಲ್ಲಿ ಹಲವು ಸವಾಲುಗಳನ್ನೆದುರಿಸಿದರೂ, ಫಿಲ್ಮ್ ಫೆಸ್ಟಿವಲ್ ನಡೆಸುವಲ್ಲಿ ಉತ್ಸುಕರಾಗಿದ್ದೇವೆ ಎಂದಿದ್ದಾರೆ.

ಹಿಂದಿನ ವರ್ಷಗಳಿಗಳಿಂತಲೂ ಹೆಚ್ಚು ಸಕ್ಸಸ್‌ಫುಲ್ ಆಗಿಸ ಫಿಲ್ಮ್ ಫೆಸ್ಟಿವಲ್ ನಡೆಸುವ ಎಲ್ಲ ಪ್ರಯತ್ನವನ್ನೂ ಮಾಡುತ್ತೇವೆ. ಈ ಬಾರಿ ಪ್ರಪಂಚದ ಮೂಲೆ ಮೂಲೆಯಿಂದ ಈ ಫೆಸ್ಟಿವಲ್‌ನಲ್ಲಿ ಭಾಗಿಯಾಗಲು ಸಾಧ್ಯವಿದ್ದು, ಇದೊಂದು ದೊಡ್ಡ ಗೆಲುವಾಗಲಿದೆ ಎಂದು ಭಾವಿಸಿದ್ದೇವೆ ಎಂದಿದ್ದಾರೆ.

ಬಿಪಾಶಾ ಬಸು ದೆವ್ವ ನೋಡಿದ್ದು ನಿಜಾನಾ?

ಈ ಬಾರಿ 38 ರಾಷ್ಟ್ರಗಳ 200 ಸಿನಿಮಾಗಳು ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನವಾಗಲಿದೆ. ನೇಪಾಳದ ರಾಜನ್ ಕಥೆಟ್ ಅವರ 'ಬೇರ್‌ ಟ್ರೀಸ್ ಇನ್ ಮಿಸ್ಟ್', ಈಜಿಪ್ತಿಯನ್ ನಿರ್ದೇಶಕ ಮೊರಾದ್ ಮುಸ್ತಫಾ ಅವರ 'ಹೆನೆಟ್ ವಾರ್ಡ್', ಫ್ರಾನ್ಸ್‌ನ ಫವಲ್ ಗೋರಿನ್ ನಿರ್ದೇಶನ ಫ್ರೆಂಚ್‌ ಸಿನಿಮಾ ಪಿಯಾನಿಸ್ಟ್ ಸೇರಿ ಹಲವು ಸಿನಿಮಾ ಪ್ರದರ್ಶನವಾಗಲಿದೆ.

ಈ ವರ್ಷದ ಆರಂಭದಲ್ಲಿ ಬೆಂಗಳೂರು ಶಾರ್ಟ್ ಫಿಲ್ಮ್ ಫೆಸ್ಟಿವಲ್ ಸಂಸ್ಥೆ ಆಸ್ಕಾರ್ ಪಡೆಯುವ ಮೂಲಕ ದೇಶದ ಲೈವ್ ಆಕ್ಷನ್ ಕ್ಯಾಟಗರಿಯ ಏಕೈಕ ಫೆಸ್ಟಿವಲ್ ಎಂಬ ಬಿರುದು ಪಡೆದಿತ್ತು. ಇದಕ್ಕೆ ರಿಜಿಸ್ಟ್ರೇಷನ್ ಶುಲ್ಕವಿದ್ದು, ಆಗಸ್ಟ್ 13ರಿಂದ 16 ತನಕ ಫೆಸ್ಟಿವಲ್ ನಡೆಯಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ https://www.bisff.in/ ಕ್ಲಿಕ್ಕಿಸಿ

click me!